
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಹೇಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ.
ವಾರ: ಮಂಗಳವಾರ, ತಿಥಿ : ತ್ರಯೋದಶಿ,
ನಕ್ಷತ್ರ: ಆರಿದ್ರ, ಯೋಗ: ವೈದೃತಿ,
ಕರಣ : ಕೌಲವ,
ರಾಹುಕಾಲ: 3.30 ರಿಂದ 4.57
ಗುಳಿಕ ಕಾಲ: 12.36 ರಿಂದ 2.03
ಯಮಗಂಡಕಾಲ: 9.42 ರಿಂದ 11.09
ಮೇಷ
ಸಂಶೋಧನಾ ನಿರತರಿಗೆ ಹೊಸದೊಂದ ಅಚ್ಚರಿಯ ಫಲಿತಾಂಶ ದೊರಕಲಿದೆ. ಹೊಸ ಹುದ್ದೆಯೊಂದನ್ನು ಅಲಂಕರಿಸುವ ಸಾಧ್ಯತೆ. ಉನ್ನತ ಹುದ್ದೆಯಲ್ಲಿರುವವರು ದೇಶದ ಬಗ್ಗೆ ವಿಶೇಷ ಚಿಂತನೆ ನಡೆಸಲಿದ್ದೀರಿ. ಅನೇಕ ದಿನಗಳ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಉಣ್ಣುವ ಅವಕಾಶ ಒದಗಿಬರಲಿದೆ. ಗೃಹಾಲಂಕಾರ ಉದ್ಯಮದಲ್ಲಿ ತೊಡಗಿದವರಿಗೆ ಲಾಭದ ನಿರೀಕ್ಷೆ.
ವೃಷಭ
ಭೂಮಿಗೆ ಸಂಬAಧಿಸಿದ ವ್ಯವಹಾರಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ಭೂಮಿ ವಾ ನಿವೇಶನ ಖರೀದಿಯ ಸಾಧ್ಯತೆ ಕಂಡುಬರುವುದು. ಜನ ಸಮೂಹಕ್ಕೆ ಸಂದೇಶ ನೀಡಲಿದ್ದೀರಿ. ಭೂಮಿಯನ್ನು ಕೊಡುಕೊಳ್ಳುವ ವ್ಯವಹಾರದಿಂದ ಅಧಿಕ ಲಾಭ. ವಿದ್ಯಾರ್ಥಿಗಳಿಗೆ ಕಠಿಣ ಸಮಸ್ಯೆ ಯನ್ನು ಗೆಲ್ಲವ ಅವಕಾಶ.
ಮಿಥುನ
ಸ್ವತ್ತು ವಿವಾದಗಳಲ್ಲಿ ಬಂಧುಗಳೊಡನೆ ಸೌಹಾರ್ದ ಮಾತುಕತೆ ನಡೆಸುವುದ ರಿಂದ ಉತ್ತಮ ಫಲಿತಾಂಶ ಬರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿನ ಸಂದೇಶ. ದೇಶದ ರಕ್ಷಣೆಗೆ ಪಣತೊಡುವ ಕಾಲ ಎದುರಾಗಲಿದೆ. ಪದೋನ್ನತಿ ವಾ ಉದ್ಯೋಗದಲ್ಲಿನ ಬದಲಾವಣೆ ಸಾಧ್ಯತೆ ಕಂಡುಬರಲಿದೆ
ಕಟಕ
ಸತ್ಕಾರ್ಯಗಳಿಗೆ ಸಹಾಯ ಕೋರಿ ಬರುವವರಿಗೆ ಸಾಧ್ಯವಾದ ಸಹಾಯ ಮಾಡುವ ಅವಕಾಶ ದೊರಕಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಕಂಡುಬರಲಿದೆ. ಅಪೂರ್ವ ಕ್ಷಣವೊಂದನ್ನು ಕಾಣಲಿದ್ದೀರಿ. ಯಶಸ್ಸಿನ ಹೆಮ್ಮೆ ಅತಿಯಾಗದಿರಲಿ.
ಸಿಂಹ
ಸಂಗಾತಿಯ ಕಡೆಯ ಬಂಧುಗಳ ಆಗಮನದಿಂದಾಗಿ ಮನೆಯಲ್ಲಿ ಸಂತೋಷದ ವಾತಾವರಣ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದೀರಿ. ಮಕ್ಕಳ ವಿವಾಹ ವಿಷಯದಲ್ಲಿ ಹೊಸ ತಿರುವು ಕಂಡುಬAದು ಮಾನಸಿಕ ನೆಮ್ಮದಿ ದೊರೆಯಲಿದೆ. ಹಣಕಾಸಿನ ಸಮಸ್ಯೆಗಳೂ ಪರಿಹಾರವಾಗಲಿವೆ.
ಕನ್ಯಾ
ಪ್ರಮುಖ ಕಾರ್ಯವೊಂದಕ್ಕೆ ಬಂದ ಅಡಚಣೆಯನ್ನು ನಿವಾರಿಸುವ ಜವಾಬ್ದಾರಿ ನಿಮ್ಮಮೇಲಿದೆ. ಶುಭ ಕಾರ್ಯಮಾಡಿದ ಪುಣ್ಯಕ್ಕೆ ಭಾಜನರಾಗುವ ಯೋಗ. ಸಹೋದರಿಯರ ವಿಶ್ವಾಸಕ್ಕೆ ಪಾತ್ರರಾಗುವಿರಿ. ಮನೆಯವರೆಲ್ಲರ ಪ್ರಶಂಸೆಗೆ ಪಾತ್ರರಾಗುವಿರಿ.
ತುಲಾ
ಆಮದು ರಫ್ತು ವ್ಯವಹಾರದಲ್ಲಿನ ಕಾನೂನು ತೊಡಕುಗಳು ನಿವಾರಣೆಯಾಗಲಿದೆ. ವ್ಯವಹಾರದಲ್ಲಿ ಹೆಚ್ಚಳವುಂಟಾಗಿ ಲಾಭದತ್ತ ದಾಪುಗಾಲು. ರಕ್ಷಣಾ ಕಾರ್ಯದಲ್ಲಿರುವವರಿಗೆ ಎಲ್ಲಿಲ್ಲದ ತುರುಸು. ವಾಹನ ಖರೀದಿಗೆ ಕೆಲವು ದಿನಗಳ ಮುಂದೂಡಿಕೆ ಉತ್ತಮವಾಗಲಿದೆ. ದೇವತಾದರ್ಶನ ಸಾಧ್ಯತೆ.
ವೃಶ್ಚಿಕ
ನಿಮ್ಮ ಒಳ್ಳೆಯ ತನ ದುರುಪಯೋಗವಾಗುವ ಸಾಧ್ಯತೆ ಇದ್ದು ಎಚ್ಚರಿಕೆ ಅಗತ್ಯ. ಹಣ ಅಥವಾ ಸಂಪನ್ಮೂಲಗಳು ನಿಮ್ಮನ್ನು ಅರಸಿ ಬರುವ ಸಾಧ್ಯತೆ. ಗೌರವಾದರಗಳಿಗೆ ಪಾತ್ರರಾಗಲಿದ್ದೀರಿ. ಉತ್ತಮ ಆರೋಗ್ಯದೊಂದಿಗೆ ಸಾಂಸಾರಿಕ ನೆಮ್ಮದಿ. ಮನೆಯವರ ಮಾತಿಗೆ ಮನ್ನಣೆ ಇರಲಿ.
ಧನು
ವಿವಾಹ ಸಂಬAಧಿತ ಮಾತುಕತೆಗಳು ಒಂದು ನಿರ್ಧಿಷ್ಟ ಹಂತ ತಲುಪಿ ನಿರಾಳವಾಗಲಿದೆ. ಮಕ್ಕಳ ವಿದ್ಯಾಭ್ಯಾಸವು ಉತ್ತಮ ರೀತಿಯಲ್ಲಿ ಸಾಗಿ ಪ್ರಗತಿಯನ್ನು ಕಾಣುವುದು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿ. ನಿಮ್ಮ ಇಚ್ಛೆಗಳು ನೆರವೇರಿ ಮಾನಸಿಕ ನೆಮ್ಮದಿ ಮೂಡಲಿದೆ
ಮಕರ
ಹೊಸ ಮನೆ ನಿರ್ಮಾಣದ ವಿಷಯದಲ್ಲಿ ಆಗಮಿತ ಬಂಧುಗಳೊAದಿಗೆ ಸಮಾಲೋಚನೆ ನಡೆಸಲಿದ್ದೀರಿ. ದೂರದ ಪ್ರಯಾಣ ದಿನದ ಮಟ್ಟಿಗೆ ಬೇಡ. ಸಾರ್ವಜನಿಕವಾಗಿ ನಿಮ್ಮನ್ನು ಗುರುತಿಸಿಕೊಳ್ಳುವ ಅವಕಾಶ. ಉನ್ನತ ಶಿಕ್ಷಣಕ್ಕಾಗಿ ಹೆಚ್ಚಿನ ಮಾಹಿತಿಗಳನ್ನು ಕಲೆಹಾಕುವಿರಿ. ಆರೋಗ್ಯದ ಬಗ್ಗೆ ಗಮನವಿರಲಿ.
ಕುಂಭ
ಹೊಸ ಜೀವನಶೈಲಿಗೆ ಒಗ್ಗಿಕೊಳ್ಳುವಿರಿ. ಅನಿರೀಕ್ಷಿತ ಮೂಲಗಳಿಂದ ಧನಾಗಮನವಾಗಲಿದೆ. ಸಾರ್ವಜನಕ ಕಾರ್ಯಕ್ರಮದಲ್ಲಿ ಸಕ್ರಿಯ ಭಾಗಿಯಾಗುವ ಸಾಧ್ಯತೆ. ಬರಹಗಾರರಿಗೆ ಮುದ್ರಣ ಉದ್ಯಮಿಗಳಿಗೆ ಉತ್ತೇಜನ ದೊರಕಲಿದೆ. ರಾಜಕಾರಣಿಗಳಿಗೆ ಕಠಿಣ ಸವಾಲನ್ನು ಎದುರಿಸುವ ಸಾಧ್ಯತೆ ಕಂಡುಬರಲಿದೆ.
ಮೀನ
ಗುರುದೇವತಾರಾಧನೆಯಿಂದ ದಿನದಾರಂಭ ಮಾಡುವುದರಿಂದಾಗಿ ಆಯ್ದ ಕಾರ್ಯಗಳು ಸಫಲಗೊಳ್ಳುವವು. ರಾಜಕಾರಣಿಗಳಿಗೆ ಬಿಡುವಿಲ್ಲದ ಕಾರ್ಯಕ್ರಮಗಳು. ಜನಮನ್ನಣೆಗೆ ಪಾತ್ರರಾಗಲಿದ್ದೀರಿ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆಗಳು ಕಂಡುಬರುವವು. ಕಲಾವಿದರಿಗೆ ಉತ್ತಮ ಅವಕಾಶಗಳು ನಿಚ್ಚಳವಾಗಿವೆ.