ನವದೆಹಲಿ : ಗಡಿಯಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಚೀನಾಕ್ಕೆ ಭಾರತ ಮತ್ತೊಂದು ಬಿಗ್ ಶಾಕ್ ನೀಡಿದ್ದು, 59 ಚೀನೀ ಆಪ್ ಗಳನ್ನು ಸರ್ಕಾರ ಶಾಶ್ವತವಾಗಿ ನಿಷೇಧ ಹೇರಲು ಮೋದಿ ಸರ್ಕಾರ ಮುಂದಾಗಿದೆ.
ಬೈಟ್ ಡ್ಯಾನ್ಸ್ ನ ಟಿಕ್ ಟೋಕ್, ಬೈಡು, ವೀಚಾಟ್, ಅಲಿಬಾಬಾದ ಯುಸಿ ಬ್ರೌಸರ್, ಶಾಪಿಂಗ್ ಆಪ್ ಕ್ಲಬ್ ಫ್ಯಾಕ್ಟರಿ, ಮಿ ವೀಡಿಯೊ ಕಾಲ್ (Xiaomi) ಮತ್ತು BIGO Live ನಂತಹ ಟಾಪ್ ಆಪ್ ಗಳು ಸೇರಿದಂತೆ 59 ಚೀನಿ ಆ್ಯಪ್ ಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಟಿಕ್ ಟಾಕ್ ಸೇರಿ 59 ಶಾಶ್ವತ ನಿಷೇಧ ಹೇರಲು ನೋಟಿಸ್ ನೀಡಿದೆ. ವಿಶೇಷವಾಗಿ ಭಾರತೀಯ ನಾಗರಿಕರು ಮತ್ತು ವ್ಯವಹಾರಗಳ ದತ್ತಾಂಶವನ್ನು ಚೀನಾ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಭಾರತ ಕಳೆದ ವರ್ಷ ಜೂನ್ ಅಂತ್ಯದಿಂದ ಇಲ್ಲಿಯವರೆಗೆ ಒಟ್ಟು 267 ಆ್ಯಪ್ ಗಳನ್ನು ನಿಷೇಧಿಸಿತ್ತು.