
ಪಂಚಾಂಗ
ರಾಹುಕಾಲ:8.16 ರಿಂದ 9.42
ಗುಳಿಕಕಾಲ:2.02 ರಿಂದ 3.28
ಯಮಗಂಡಕಾಲ:11.09 ರಿಂದ 12.35
ಸೋಮವಾರ, ದ್ವಾದಶಿ ತಿಥಿ, ಮೃಗಶಿರ ನಕ್ಷತ್ರ, ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ,
ಮೇಷ
ಮನೆಯವರೊಂದಿಗೆ ಗಹನವಾದ ವಿಚಾರ ವಿನಿಮಯವನ್ನು ನಡೆಸಿ ಒಮ್ಮತಕ್ಕೆ ಬರುವುದರ ಜೊತೆಗೆ ಎಲ್ಲರ ಸಹಕಾರ ಪಡೆದುಕೊಳ್ಳುವಿರಿ. ತಾಳ್ಮೆಯನ್ನು ರೂಢಿಸಿಕೊಳ್ಳುವ ಸಲುವಾಗಿ ಧ್ಯಾನದ ಮೊರೆಹೋಗುವ ಸಾಧ್ಯತೆ.
ವೃಷಭ
ಮನಸ್ಸಿನ ದುಗುಡವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಸಂಸಾರ ಸಮೇತ ವಿಹಾರಾರ್ಥ ಪ್ರವಾಸ ಕೈಗೊಳ್ಳುವಿರಿ. ದೇವತಾ ದರ್ಶನವನ್ನೂ ಮಾಡುವ ಸಾಧ್ಯತೆ. ಎಲ್ಲವನ್ನೂ ಮರೆತು ನೆಮ್ಮದಿ ಮೂಡಲಿದೆ.
ಮಿಥುನ
ರಾಜಕೀಯದಲ್ಲಿರುವ ಮಹಿಳೆಯರಿಗೆ ಸಂಕಷ್ಟಗಳು ಎದುರಾಗಲಿವೆ. ಗೆಳೆಯರ, ಸಂಬಂಧಿಕರ ಸಹಕಾರದಿಂದ ಕಾರ್ಯಸಿದ್ಧಿ. ವಿವಾಹಾಕಾಂಕ್ಷಿಗಳಿಗೆ ವಿವಾಹ ಸಂಬಂಧಗಳು ಕೂಡಿಬರುವ ಸಾಧ್ಯತೆ ಕಂಡುಬರುತ್ತಿದೆ.
ಕಟಕ
ಸಮಾಜದ ವಿಶ್ವಾಸಕ್ಕೆ ಪಾತ್ರರಾಗಲಿದ್ದೀರಿ. ಅತಿಯಾದ ಸಂತೋಷದಿಂದಾಗಿ ನಡೆ, ನುಡಿಯಲ್ಲಿ ಹಿಡಿತ ತಪ್ಪದಂತೆ ಎಚ್ಚರಿಕೆ ವಹಿಸುವುದು ಸೂಕ್ತ. ನಿಮ್ಮ ಬಹುದಿನದ ಬೇಡಿಕೆಯೊಂದು ನೆರವೇರಲಿದೆ.
ಸಿಂಹ
ನಿಮ್ಮ ಶ್ರಮದಿಂದಾಗಿ ಹೆಚ್ಚಿನ ಆದಾಯ ದೊರಕಿ ಸಂತಸ. ಎದುರಾದ ಸಂಕಷ್ಟ, ಭಯಗಳನ್ನು ಧೈರ್ಯವಾಗಿ ಎದುರಿಸಿ ಯಶಸ್ಸು. ಉನ್ನತ ಹುದ್ದೆಯಲ್ಲಿರುವವರು ಯಾವುದೇ ಆಮಿಷಗಳಿಗೆ ಒಳಗಾಗದೆ ಕಾರ್ಯನಿರ್ವಹಿಸಿ
ಕನ್ಯಾ
ಮನೆಯ ಅನುಕೂಲಕ್ಕಾಗಿ ಹೆಚ್ಚಿನ ವೆಚ್ಚ ಭರಿಸಲಿದ್ದೀರಿ. ಅಧಿಕಾರ ಲಾಲಸೆಯಿಂದ ಎಚ್ಚರ ತಪ್ಪಿ ನಡೆಯುವ ಸಾಧ್ಯತೆ. ಕೃಷಿ ಕಾರ್ಮಿಕರಿಗೆ ಅಡೆತಡೆಗಳು ಕಂಡುಬರುತ್ತಿದೆ. ಮಂಗಳಕಾರ್ಯದಲ್ಲಿ ಭಾಗವಹಿಸುವ ಸಾಧ್ಯತೆ.
ತುಲಾ
ನಿಮ್ಮ ಅದೃಷ್ಟ ಉತ್ತಮವಾಗಿದ್ದು ಮೇಲಧಿಕಾರಿಗಳ ವಿಶ್ವಾಸವನ್ನು ಗಳಿಸಲಿದ್ದೀರಿ. ಚಿನ್ನ ಖರೀದಿಗೆ ಮುಂದಾಗುವ ಸಾಧ್ಯತೆ ಕಂಡುಬರುತ್ತಿದೆ. ವ್ಯವಹಾರದಲ್ಲಿ ಉತ್ತಮ ಸಲಹೆ ಸಹಕಾರಗಳು ದೊರೆಯಲಿವೆ.
ವೃಶ್ಚಿಕ
ಬಂಧುಗಳ ನಡುವೆ ಇರುಸು–ಮುರುಸು ಉಂಟಾಗುವ ಸಾಧ್ಯತೆ. ನಿಮ್ಮ ಮಾತುಗಳಿಂದ ಇತರರನ್ನು ಆಕರ್ಷಿಸಿ ಛಾಪು ಮೂಡಿಸಲಿದ್ದೀರಿ. ಸಾಮರಸ್ಯವನ್ನು ಮೂಡಿಸುವಲ್ಲಿ ಯಶಸ್ಸನ್ನು ಸಾಧಿಸುವಿರಿ.
ಧನು
ಸುತ್ತಮುತ್ತಲಿನ ಜನರೊಂದಿಗೆ ಹೊಂದಾಣಿಕೆಯಿಂದ ಉತ್ತಮ ಬಾಂಧವ್ಯವನ್ನು ವೃದ್ಧಿಸಿಕೊಳ್ಳುವಿರಿ. ಸಮಾಧಾನದ ನಡೆಯಿಂದಾಗಿ ಗಮನ ಸೆಳೆಯಲಿದ್ದೀರಿ. ಹೊರಗಿನವರ ವದಂತಿಗಳಿಗೆ ಕಿವಿಕೊಡದಿರಿ.
ಮಕರ
ಉದ್ಯಮದಲ್ಲಿ ಹೂಡಿಕೆಯ ವಿಚಾರವಾಗಿ ಹೆಚ್ಚಿನ ಗಮನವಹಿಸಿ. ನಂಬಿ ಮೋಸ ಹೋಗುವ ಮುನ್ನ ಮತ್ತೊಮ್ಮೆ ಯೋಚಿಸಿ. ಸಾಮಾಜಿಕ ಕಾರ್ಯಕ್ಕೆ ಆಹ್ವಾನ ಸ್ವೀಕರಿಸುವಿರಿ. ಆರೋಗ್ಯದಲ್ಲಿ ತೊಂದರೆ.
ಕುಂಭ
ಆರ್ಥಿಕ ಏಳಿಗೆಗಾಗಿ ಸ್ನೇಹಿತರೊಂದಿಗೆ ಹೊಸದೊಂದು ಯೋಜನೆಯನ್ನು ಕೈಗೊಳ್ಳುವಿರಿ. ಅಪೇಕ್ಷಿತ ಯೋಜನೆಯಲ್ಲಿ ಯಶಸ್ಸನ್ನೂ ಕಾಣುವಿರಿ. ಹಿರಿಯರ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಏರುಪೇರು ಸಾಧ್ಯತೆ.
ಮೀನ
ನೌಕರಸ್ಥರಿಗೆ ಮೇಲಧಿಕಾರಿಗಳಿಂದ ಕಿರಿಕಿರಿ ಸಾಧ್ಯತೆ. ಸಹೋದ್ಯೋಗಿಗಳ ಮೇಲಾಟವನ್ನು ಎದುರಿಸುವ ಸಲುವಾಗಿ ತಾಳ್ಮೆ ವಹಿಸುವುದು ಒಳಿತು. ದಿನದ ಮಟ್ಟಿಗೆ ಪ್ರಯಾಣ ಮುಂದೂಡುವುದು ಸೂಕ್ತ.