
21-1-2021 ಗುರುವಾರ ಶಾರ್ವರಿ ಸಂ|ರದ ಮಕರ ಮಾಸ ದಿನ 7 ಸಲುವ ಪೌಷ ಶುದ್ಧ ಅಷ್ಟಮಿ 22| ಗಳಿಗೆದಿನ ವಿಶೇಷ :ಉಜಿರೆ, ಕದ್ರಿ, ವಿಟ್ಲ ಕಾಂತಾವರ ರಥನಿತ್ಯ ನಕ್ಷತ್ರ :ಅಶ್ವಿನಿ 21|| ಗಳಿಗೆಮಹಾ ನಕ್ಷತ್ರ :ಉತ್ತರಾಷಾಢಾಋತು :ಹೇಮಂತರಾಹುಕಾಲ :1.30-3.00 ಗಂಟೆಗುಳಿಕ ಕಾಲ :9.00-10.30 ಗಂಟೆಸೂರ್ಯಾಸ್ತ :6.24 ಗಂಟೆಸೂರ್ಯೋದಯ :7.00 ಗಂಟೆ
ಮೇಷ
ಕಟ್ಟಡ ಸಾಮಗ್ರಿಗಳನ್ನು ಖರೀದಿ ಮಾಡುವ ಸಾಧ್ಯತೆ. ಆಭರಣ ವ್ಯಾಪಾರದಿಂದ ಹೆಚ್ಚಿನ ಲಾಭ ನಿರೀಕ್ಷಿಸಬಹುದು. ಉದ್ಯೋಗರಂಗದಲ್ಲಿ ಅತ್ಯಂತ ಯಶಸ್ವಿ ದಿನವಾಗಿ ಪರಿಣಮಿಸಲಿದೆ.
ವೃಷಭ
ಅತಿಯಾದ ಮಾತುಗಳಿಂದ ದಿನದ ಮಟ್ಟಿಗೆ ಮೌನ ವಹಿಸುವುದೇ ಲೇಸು. ಆಸ್ತಿ ವಿಚಾರದಲ್ಲಿ ಅಭಿಪ್ರಾಯಗಳನ್ನು ನೀಡುವಾಗ ಅತ್ಯಂತ ಜಾಗರೂಕರಾಗಿರುವುದು ಉತ್ತಮ. ಆರ್ಥಿಕ ವಿಷಯದಲ್ಲಿ ಉತ್ತಮ ಅವಕಾಶ ಲಭಿಸಲಿದೆ.
ಮಿಥುನ
ನಿಶ್ಚಿತ ಗುರಿ ಸಾಧನೆಗಾಗಿ ಶ್ರಮ ವಹಿಸಬೇಕಾದೀತು. ಖಾದ್ಯತೈಲ ವ್ಯಾಪಾರಿಗಳಿಗೆ ಬೇಡಿಕೆ ಹೆಚ್ಚಳದಿಂದಾಗಿ ವಿಶೇಷ ಲಾಭ. ಮಿಶ್ರ ಭಾವನೆಯ ದಿನವಾಗಲಿದೆ. ಪತ್ನಿಯಿಂದ ಸಂಪೂರ್ಣ ಸಹಕಾರ ದೊರಕಿ ನೆಮ್ಮದಿ.
ಕಟಕ
ವೃತ್ತಿಯಲ್ಲಿ ಹೆಚ್ಚಿನ ಪೈಪೋಟಿಯನ್ನು ಎದುರಿಸಬೇಕಾದೀತು. ಪ್ರಬಲ ಪ್ರತಿಸ್ಪರ್ಧೆಯ ನಡುವೆಯೂ ಪ್ರಯತ್ನದಿಂದಾಗಿ ಗೆಲುವು ನಿಮ್ಮದಾಗಲಿದೆ. ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶ ದೊರೆಯುವ ಸಾಧ್ಯತೆ.
ಸಿಂಹ
ರಾಜಕೀಯ ವ್ಯಕ್ತಿಗಳೊಂದಿಗೆ ಬಿರುಸಿನ ಒಡನಾಟದಲ್ಲಿ ಭಾಗಿಯಾಗಬೇಕಾದೀತು. ಆಪ್ತ ವ್ಯಕ್ತಿಗಳ ಕೆಲಸವೊಂದನ್ನು ನೆರವೇರಿಸಲು ಜವಾಬ್ದಾರಿ ವಹಿಸಬೇಕಾದೀತು. ಮನೆಯವರ ಆಸೆಗಳ ಬಗ್ಗೆ ನಿರಾಸಕ್ತಿ ತೋರಿಸಬೇಡಿ.
ಕನ್ಯಾ
ಪ್ರಮುಖ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸಣ್ಣಪುಟ್ಟ ತೊಡಕುಗಳು ಎದುರಾಗಬಹುದು. ಸ್ವ ಪ್ರಯತ್ನದಿಂದ ತೊಡಕುಗಳು ನಿವಾರಣೆಯಾಗಿ ಕೆಲಸಗಳು ನೆರವೇರುವವು.
ತುಲಾ
ಇತರರಿಗೆ ನೆರವಾಗುವ ಮೂಲಕ ಅವ್ಯಕ್ತ ಆನಂದವನ್ನು ಅನುಭವಿಸುವಿರಿ. ಕೃಷಿ ಉತ್ಪನ್ನಗಳಿಂದ ಹೆಚ್ಚಿನ ಆದಾಯ. ಆರ್ಥಿಕ ಸಂಕಷ್ಟಗಳು ದೂರವಾಗಿ ನೆಮ್ಮದಿ. ವಿದ್ಯಾರ್ಥಿಗಳಿಗೆ ಸಾಧನೆಯ ದಿನ.
ವೃಶ್ಚಿಕ
ಕಚೇರಿಯ ಕೆಲಸಗಳನ್ನು ಮನೆಯಲ್ಲಿಯೇ ಕುಳಿತು ಯಶಸ್ವಿಯಾಗಿ ಮಾಡಿ ಪೂರೈಸುವ ಸುಯೋಗ. ಸಾರಿಗೆ ಉದ್ಯಮವನ್ನು ನಡೆಸುತ್ತಿರುವವರಿಗೆ ಹೆಚ್ಚಿನ ಆದಾಯ. ವಿಮಾ ಏಜೆಂಟರಿಂದ ಉಪಯುಕ್ತ ಸಲಹೆ ದೊರೆಯಲಿದೆ.
ಧನು
ವಿದೇಶದಿಂದ ಪಡೆದ ಮಾಹಿತಿ ಅನುಭವಗಳನ್ನು ಕಾರ್ಯರೂಪಕ್ಕೆ ತರುವ ಸಾಧ್ಯತೆ. ಪ್ರಪಂಚದ ಕಡೆಗಿನ ನಿಮ್ಮ ದೃಷ್ಟಿ ಬದಲಾಗಲಿದೆ. ಹೊಸ ಯೋಜನೆಗಳನ್ನು ರೂಪಿಸಲು ಅನುಕೂಲಕರ ವಾತಾವರಣ.
ಮಕರ
ವಾಣಿಜ್ಯ ವ್ಯವಹಾರಗಳು ಕೈಗೂಡಿ ಹೆಚ್ಚಿನ ಆದಾಯ. ಶುಭಸಮಾರಂಭಗಳಿಗಾಗಿ ವಿಶೇಷ ವೆಚ್ಚ ಭರಿಸಬೇಕಾದೀತು. ಮಕ್ಕಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಸರ್ಕಾರಿ ನೌಕರರಿಗೆ ಬಿಡುವಿಲ್ಲದ ದಿನವಾಗಲಿದೆ.
ಕುಂಭ
ಹೆಮ್ಮೆ ಪಡುವಂತಹ ಕೆಲಸಗಳನ್ನು ಯಶಸ್ವಿಯಾಗಿ ನೆರವೇರಿಸುವಿರಿ. ವಿದ್ಯಾರ್ಥಿಗಳಿಗೆ ಅಮೋಘ ಸಾಧನೆಯ ಸಂಭ್ರಮ. ಗೃಹ ಸೌಖ್ಯ. ಸಂಗಾತಿಯೊಂದಿಗೆ ಕುಶಲದಿಂದ ಮಾತನಾಡಿ ಮನ ಗೆಲ್ಲುವ ಅವಕಾಶ.
ಮೀನ
ರಾಸಾಯನಿಕ ವಸ್ತುಗಳ ಮಾರಾಟಗಾರರಿಗೆ ಹೆಚ್ಚಿನ ಲಾಭ. ಆಭರಣ ಖರೀದಿಸುವ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾಗುವುದು. ಹಿರಿಯರ ಆರೋಗ್ಯದಲ್ಲಿ ಸುಧಾರಣೆ.