
19-1-2021 ಮಂಗಳವಾರ ಶಾರ್ವರಿ ಸಂ|ರದ ಮಕರ ಮಾಸ ದಿನ 5 ಸಲುವ ಪೌಷ ಶುದ್ಧ ಷಷ್ಠಿ 10 ಗಳಿಗೆ. ದಿನ ವಿಶೇಷ :ಕಿರು ಷಷ್ಠಿ ಬೆಳ್ಳಿಪ್ಪಾಡಿ ಉತ್ಸವ ನಿತ್ಯ ನಕ್ಷತ್ರ :ಉತ್ತರಾಭಾದ್ರಾ 7||ಗಳಿಗೆ. ಮಹಾ ನಕ್ಷತ್ರ :ಉತ್ತರಾಷಾಢಾ. ಋತು :ಹೇಮಂತ ರಾಹುಕಾಲ :3.00-4.30 ಗಂಟೆಗುಳಿಕ ಕಾಲ :12.00-1.30 ಗಂಟೆಸೂರ್ಯಾಸ್ತ :6.23 ಗಂಟೆ ಸೂರ್ಯೋದಯ :7.00 ಗಂಟೆ
ಮೇಷ
ವಿಷಯಗಳನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ಮನೆಯವರ ವಿಶ್ವಾಸದ ದುರುಪಯೋಗ ಮಾಡಿಕೊಳ್ಳದಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣುವಿರಿ. ಸಂಜೆಯ ವೇಳೆಗೆ ಮಾನಸಿಕ ಕಿರಿ ಕಿರಿ ಎದುರಾದೀತು.
ವೃಷಭ
ಆದಾಯದ ಹೊಸ ಹೊಸ ಮೂಲಗಳನ್ನು ಕಂಡುಕೊಳ್ಳುವ ಸಾಧ್ಯತೆ ಇದ್ದು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ನಿಮ್ಮ ಎಲ್ಲ ಆಸೆ ಆಕಾಂಕ್ಷೆಗಳು ನೆರವೇರಲಿವೆ. ಬಹುದಿನಗಳಿಂದ ಕಂಡ ಕನಸುಗಳು ನನಸಾಗುವ ಸಾಧ್ಯತೆ ಕಂಡುಬರುತ್ತಿದೆ.
ಮಿಥುನ
ಉದ್ಯೋಗದಲ್ಲಿ ಚಾಣಾಕ್ಷತೆಯನ್ನು ಮೆರೆದು ಯಶಸ್ಸನ್ನು ನಿಮ್ಮದಾಗಿಸಿಕೊಳ್ಳುವಿರಿ. ಮುಂದಾಲೋಚನೆಯಿAದಾಗಿ ಕೈಗೊಂಡ ಕಾರ್ಯಗಳು ಸುಗಮವಾಗಲಿವೆ. ಸಮಸ್ಯೆಗಳಿಂದ ದೂರವಿರುವ ಪ್ರಯತ್ನದಲ್ಲಿ ಯಶಸ್ಸು. ಸಂತಸದ ದಿನ
ಕಟಕ
ಮಾನಸಿಕ ಕಿರಿಕಿರಿಗಳು ದೂರವಾಗಿ ನೆಮ್ಮದಿ ಯನ್ನು ಕಾಣಲಿದ್ದೀರಿ. ಆರ್ಥಿಕವಾದ ಚೇತರಿಕೆ ನಿಮ್ಮದಾಗಲಿದೆ. ಕನ್ಯಾಪಿತೃಗಳಿಗೆ ಸಂತಸದ ಸುದ್ದಿ ಕೇಳುವಿರಿ. ಆರ್ಥಿಕ ಸುಧಾರಣೆಯ ಹೊಸ ಮಾರ್ಗವನ್ನು ಕಂಡುಕೊಳ್ಳುವಿರಿ.
ಸಿಂಹ
ಕೋರ್ಟು ಕಛೇರಿಗಳಲ್ಲಿನ ಕಲಹಗಳು ಇತ್ಯಾರ್ಥವಾಗುವ ಸಾಧ್ಯತೆ. ಹಿರಿಯ ಅಧಿಕಾರಿಗಳಿಗೆ ಜವಾಬ್ದಾರಿಯಲ್ಲಿ ಹೆಚ್ಚಳವನ್ನು ನಿರೀಕ್ಷಿಸಿ. ದಿನವಿಡೀ ಲವಲವಿಕೆಯಿಂದ ಕಾರ್ಯ ನಿರ್ವಹಿಸಲಿದ್ದೀರಿ. ಸಂಗಾತಿಯೊAದಿಗೆ ಸಂತಸದ ಕ್ಷಣ.
ಕನ್ಯಾ
ಮುಂದಿನ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ಪೂರ್ವ ಸಿದ್ಧತೆಯನ್ನು ನಡೆಸುವಿರಿ. ವಯುಕ್ತಿಕ ಕಾರ್ಯಗಳಲ್ಲಿ ಯಶಸ್ಸನ್ನು ಕಾಣಲಿದ್ದೀರಿ. ಸರ್ಕಾರಿ ಸೇವೆಯಲ್ಲಿರುವವರಿಗೆ ಸ್ವಲ್ಪಮಟ್ಟಿನ ಅಡಚಣೆ ಕಂಡುಬರಲಿದೆ.
ತುಲಾ
ಹಿರಿಯ ಅಧಿಕಾರಿಗಳೊಂದಿಗೆ ದಿನವಿಡೀ ಕಾಲವ್ಯಾಪನ ಮಾಡುವ ಸಾಧ್ಯತೆ. ಉತ್ತಮ ಸೇವೆಯಿಂದಾಗಿ ಮೇಲಾಧಿಕಾರಿಗಳಿಂದ ಪ್ರಶಂಸೆಯನ್ನೂ ಪಡೆಯಲಿದ್ದೀರಿ. ತಡೆಯುಂಟಾಗಿದ್ದ ಕೆಲಸಗಳು ನೆರವೇರಿ ಸಂತಸ ನೀಡಲಿದೆ.
ವೃಶ್ಚಿಕ
ರಕ್ಷಣಾ ಕಾರ್ಯದಲ್ಲಿ ತೊಡಗಿರುವವರಿಗೆ ಕಾರ್ಯಬಾಹುಳ್ಯ ಹೆಚ್ಚಲಿದೆ. ವಿವೇಚನಾತ್ಮಕ ನಡೆಯಿಂದಾಗಿ ಎದುರಾಗಲಿದ್ದ ಗಂಡಾAತರ ದೂರವಾಗಲಿದೆ. ವಾಹನ ಚಾಲನೆಯಲ್ಲಿ ಸ್ವಲ್ಪಮಟ್ಟಿನ ಎಚ್ಚರಿಕೆ ಅಗತ್ಯ.
ಧನು
ಕೆಲಸಕಾರ್ಯಗಳಲ್ಲಿ ಅತಿಯಾದ ಆತುರತೆ ಸಲ್ಲದು. ಕಾರ್ಯದಲ್ಲಿನ ಯಶಸ್ಸಿನಿಂದಾಗಿ ಅತ್ಯಂತ ಸಂತೋಷವನ್ನು ಅನುಭವಿಸುವಿರಿ. ಶಿಕ್ಷಕ ವೃತ್ತಿಯಲ್ಲಿರುವವರು ಸಣ್ಣಪುಟ್ಟ ಅಪವಾದ ಎದುರಿಸುವ ಸಾಧ್ಯತೆ. ಎಚ್ಚರಿಕೆಯಿಂದ ವರ್ತಿಸುವುದು ಉತ್ತಮ.
ಮಕರ
ಉದ್ಯೋಗ, ವ್ಯವಹಾರಗಳ ಅವಕಾಶಗಳು ಹೆಚ್ಚಾಗಿ ದೊರೆತು ಯಶಸ್ಸನ್ನುಕಾಣಲಿದ್ದೀರಿ. ಅತಿಯಾದ ಕಾರ್ಯಬಾಹುಳ್ಯದಿಂದಾಗಿ ಆಯಾಸವನ್ನು ಅನುಭವಿಸುವಿರಿ. ಹಿತೈಷಿಗಳ ದರ್ಶನದಿಂದ ಸಾಂತ್ವನವನ್ನು ಹೊಂದುವಿರಿ.
ಕುಂಭ
ನಿಮ್ಮ ಕಾರ್ಯದಲ್ಲಿ ಅತ್ಯಂತ ಜವಾಬ್ದಾರಿ ಮತ್ತು ದಕ್ಷತೆಯನ್ನು ಮೆರೆಯುವಿರಿ. ಹಿರಿಯರ ಪ್ರಶಂಸೆಗೆ ಪಾತ್ರರಾಗುವಿರಿ. ಕಾರ್ಯಕ್ಷೇತ್ರದಲ್ಲಿ ಅನುಕೂಲಕರ ವಾತಾವರಣದಿಂದ ಉತ್ಸಾಹ ಇಮ್ಮಡಿಗೊಳ್ಳಲಿದೆ.
ಮೀನ
ಧಾರ್ಮಿಕ/ ಸಾಮಾಜಿಕ ಕೆಲಸಗಳಲ್ಲಿ ಒಲವನ್ನು ತೋರಿ ಸಕ್ರಿಯವಾಗಿ ಪಾಲ್ಗೊಳ್ಳುವ ಸಾಧ್ಯತೆ ಕಂಡುಬರುತ್ತಿದೆ. ಹೊಸ ಹೊಸ ವಿಷಯಗಳನ್ನು ಕಲೆಹಾಕಿ ಜ್ಞಾನ ಸಂಪಾದನೆ ನಿಮ್ಮದಾಗಲಿದೆ. ಜೀವನದ ಉತ್ಸಾಹವನ್ನು ಹೆಚ್ಚಿಸಿಕೊಳ್ಳುವಿರಿ.