
8-1-2021 ಸೋಮವಾರ ಶಾರ್ವರಿ ಸಂ|ರದ ಮಕರ ಮಾಸ ದಿನ 4 ಸಲುವ ಪೌಷ ಶುದ್ಧ ಪಂಚಮಿ 5||| ಗಳಿಗೆದಿನ ವಿಶೇಷ :ಕೋಲ್ಪೆ ಸುಬ್ರಹ್ಮಣ್ಯ ಉತ್ಸವನಿತ್ಯ ನಕ್ಷತ್ರ :ಪೂರ್ವಾಭಾದ್ರಾ 2 ಗಳಿಗೆ ಮಹಾನಕ್ಷತ್ರ :ಉತ್ತರಾಷಾಢಾ ಋತು :ಹೇಮಂತರಾಹುಕಾಲ :7.30-9.00 ಗಂಟೆಗುಳಿಕ ಕಾಲ :1.30-3.00 ಗಂಟೆಸೂರ್ಯಾಸ್ತ :6.23 ಗಂಟೆಸೂರ್ಯೋದಯ :7.00 ಗಂಟೆ
ಮೇಷ
ರಾಜಕಾರಣಿಗಳಿಗೆ ಗೊಂದಲದ ವಾತಾವರಣ ಮೂಡಲಿದೆ. ಆಮಿಷಗಳಿಗೆ ಒಳಗಾಗಿ ಮೋಸಹೋಗುವ ಸಾಧ್ಯತೆ. ಗೆಳೆಯರೊಡನೆ ಚರ್ಚಿಸಿ ನಿರ್ಧಾರದ ನಡೆ ನಿಮ್ಮದಾಗಲಿ. ವಸ್ತ್ರ ವ್ಯಾಪಾರದಲ್ಲಿ ಲಾಭ.
ವೃಷಭ
ಇಂದು ನಿಮ್ಮ ಜವಾಬ್ದಾರಿಯು ಹೆಚ್ಚಾಗಿ ಒತ್ತಡ ಉಂಟಾದೀತು. ಯಾವುದಕ್ಕೂ ನಿಮ್ಮ ಯೋಚನಾ ಶಕ್ತಿಯನ್ನು ಉಪಯೋಗಿಸಿ ಸಮಾಧಾನ ಚಿತ್ತರಾಗಿರಿ, ಒತ್ತಡಗಳು ಕರಗಿಹೋಗುವವು. ನಿರಾಳ ಅನುಭವ.
ಮಿಥುನ
ಹೊಸ ವಿಚಾರವೊಂದನ್ನು ಕೈಗೊಳ್ಳುವ ಬಗ್ಗೆ ಚಿಂತಿಸಲಿದ್ದೀರಿ. ಆರ್ಥಿಕ ಮೂಲ ಕಂಡುಕೊಳ್ಳುವ ಸಾಧ್ಯತೆ. ಹಿರಿಯರ ಮಧ್ಯಸ್ಥಿಕೆಯಿಂದಾಗಿ ಗೊಂದಲ, ವಿವಾದಗಳು ಬಗೆಹರಿದು ನೆಮ್ಮದಿ ಮೂಡಲಿದೆ.
ಕಟಕ
ನಿಮ್ಮ ಸಾಮರ್ಥ್ಯದ ಬಗ್ಗೆ ಹಿಂಜರಿಕೆ ಸಲ್ಲದು. ಸ್ವಸಾಮರ್ಥ್ಯದಿಂದ ಮುನ್ನೆಡೆದಲ್ಲಿ ಯೋಜಿತ ಕಾರ್ಯಗಳು ಸಾಕಾರಗೊಂಡು ಸಂತಸವು ಮೂಡುವುದು. ನಿಮ್ಮ ಕುಲದೇವತಾ ದರ್ಶನ ಮಾಡುವ ಸಾಧ್ಯತೆ.
ಸಿಂಹ
ಯೋಜನೆ ವಾ ವ್ಯವಹಾರಗಳನ್ನು ಪ್ರಾರಂಭಿಸುವ ಮುನ್ನ ಸ್ನೇಹಿತರು, ಹಿತೈಷಿಗಳೊಂದಿಗೆ ಚರ್ಚಿಸಿ ದೃಢ ನಿರ್ಧಾರ ತೆಗೆದುಕೊಳ್ಳಿ. ಯಶಸ್ಸನ್ನು ಸಾಧಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭವನ್ನು ನಿರೀಕ್ಷಿಸಿ.
ಕನ್ಯಾ
ವಿವಾಹಾದಿ ಶುಭಕಾರ್ಯಗಳ ನಿಶ್ಚಯದಲ್ಲಿ ಭಾಗವಹಿಸಲಿದ್ದೀರಿ. ಸಂಶಯಾದಿಗಳು ದೂರವಾಗಿ ಕೌಟುಂಬಿಕ ಮೆಚ್ಚುಗೆಯನ್ನು ಹೊಂದಲಿದ್ದೀರಿ. ಕೈಗೊಂಡ ಎಲ್ಲ ಕಾರ್ಯಗಳಲ್ಲಿಯೂ ಯಶಸ್ಸು ನಿಮ್ಮದಾಗಲಿದೆ.
ತುಲಾ
ದುಡುಕು ಸ್ವಭಾವದಿಂದಾಗಿ ಕೆಲಸಗಳ ವಿಚಾರದಲ್ಲಿ ಗಮನ ಕಡಿಮೆಯಾದೀತು. ಸಮಾಧಾನ ರೂಢಿಸಿಕೊಳ್ಳಿ. ಆತ್ಮೀಯರ ಸಹಕಾರದಿಂದ ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು. ವಿದ್ಯಾರ್ಥಿಗಳಗೆ ಅಭ್ಯಾಸದಲ್ಲಿ ಯಶಸ್ಸು.
ವೃಶ್ಚಿಕ
ನಿಮ್ಮ ಪ್ರಾಮಾಣಿಕತೆಯಿಂದಾಗಿ ಜನಾದರಣೆಗೆ ಪಾತ್ರರಾಗುವಿರಿ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಕಂಡುಬರುತ್ತಿದೆ. ಸ್ವಲ್ಪಮಟ್ಟಿನ ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾದೀತು.
ಧನು
ಉತ್ತಮ ನಿರ್ಧಾರ ತೆಗೆದುಕೊಳ್ಳಲಿದ್ದೀರಿ. ಯಶಸ್ಸು ನಿಮ್ಮದಾಗಲಿದೆ. ಸಂಗಾತಿಯ ವಿಷಯದಲ್ಲಿ ಅನಾದರ ಸಲ್ಲದು. ಗೆಳೆಯರೊಂದಿಗೆ ದೂರದ ಪ್ರಯಾಣ ಕೈಗೊಳ್ಳುವ ಸಾಧ್ಯತೆ.
ಮಕರ
ನಿಮ್ಮ ಮನಸ್ಸಿನ ಭಾವನೆಗಳನ್ನು ಬಂಧು ಬಾಂಧವರಲ್ಲಿ ಹಂಚಿಕೊಂಡು ಸಂತಸಗೊಳ್ಳುವಿರಿ. ಬೇರೆಯವರೊಂದಿಗೆ ಸೇರಿ ಹೊಸ ಯೋಜನೆಯೊಂದನ್ನು ಆರಂಭಿಸಲು ಉದ್ಯುಕ್ತರಾಗುವಿರಿ.
ಕುಂಭ
ಆರ್ಥಿಕ ಅನುಕೂಲಕ್ಕೆ ಆತ್ಮೀಯರಿಂದ ಉತ್ತಮ ಸಲಹೆಗಳು ದೊರಕುವವು. ಉದ್ವೇಗಗೊಳ್ಳದೆ ಶಾಂತಚಿತ್ತದಿಂದ ವ್ಯವಹಾರದಲ್ಲಿ ಭಾಗಿಯಾಗಿ, ಸಾಧನೆ ನಿಮ್ಮದಾಗಲಿದೆ.
ಮೀನ
ಜನಾಕರ್ಷಣೆಯ ವ್ಯಕ್ತಿಯಾಗಿ ಕಾಣಲಿದ್ದೀರಿ. ಪಟ್ಟುಬಿಡದ ಹಠದಿಂದ ಕಾರ್ಯಸಾಧನೆ ಮಾಡುವ ಸಾಧ್ಯತೆ ಕಂಡುಬರುತ್ತಿದೆ. ದಿನದ ಮಟ್ಟಿಗೆ ಮನೆಯವರಿಂದ ದೂರ ಉಳಿಯುವ ಸಾಧ್ಯತೆ ಕಂಡುಬರುತ್ತಿದೆ.