
ಪಂಚಾಂಗ :ಶನಿವಾರ , 16.01.2021
ಸೂರ್ಯ ಉದಯ ಬೆ.06.46/ ಸೂರ್ಯ ಅಸ್ತ ಸಂ.06.13
ಚಂದ್ರ ಉದಯ ರಾ.09.18/ ಚಂದ್ರ ಅಸ್ತ ಬೆ.09.13
ಶಾರ್ವರಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯಾ ಮಾಸ /
ಶುಕ್ಲ ಪಕ್ಷ /ತಿಥಿ: ತೃತೀಯಾ (ಬೆ.07.46) ನಕ್ಷತ್ರ: ಶತಭಿಷಾ (ನಾ.ಬೆ.06.09)
ಯೋಗ: ವ್ಯತೀಪಾತ (ರಾ.07.11) ಕರಣ: ಗರಜೆ-ವಣಿಜ್ (ಬೆ.07.46-ರಾ.07.52)
ಮಳೆ ನಕ್ಷತ್ರ: ಉತ್ತರಾಷಾಢ ಮಾಸ: ಮಕರ, ತೇದಿ: 03
ಮೇಷ
ಹೊಸ ವ್ಯವಹಾರವೊಂದಕ್ಕೆ ತೊಡಗಿಕೊಳ್ಳುವ ಸಾಧ್ಯತೆ. ಉದ್ಯೋಗದಲ್ಲಿ ಬದಲಾವಣೆಯನ್ನು ಕಾಣಬಹುದು. ರೈತಾಪಿ ವರ್ಗದವರಿಗೆ ಉತ್ತಮ ಬೆಲೆ ದೊರೆತು ಆರ್ಥಿಕ ಅನುಕೂಲ ಕಂಡುಬರುವುದು.
ವೃಷಭ
ವಿಶೇಷ ಅತಿಥಿಯಾಗಿ ಆಹ್ವಾನವನ್ನು ಸ್ವೀಕರಿಸಲಿದ್ದೀರಿ. ಗೌರವಾದರಗಳನ್ನು ಹೊಂದಲಿದ್ದೀರಿ. ವಿವಾಹ ಸಂಬಂಧಗಳು ಕೂಡಿಬರುವ ಸಾಧ್ಯತೆ. ನೆರೆಹೊರೆಯವರೊಡನೆ ವ್ಯವಹರಿಸುವಾಗ ಸಂಯಮದಿಂದ ವರ್ತಿಸಿ.
ಮಿಥುನ
ಮಕ್ಕಳ ಭವಿಷ್ಯದ ವಿಷಯವಾಗಿ ಅತಿಯಾದ ಚಿಂತನೆ ಮಾಡುವ ಸಾಧ್ಯತೆ ಇದ್ದು ಚಿಂತಿತರಾಗಬೇಕಾದುದಿಲ್ಲ. ಆರ್ಥಿಕ ಸುಧಾರಣೆಯನ್ನು ಕಾಣುವಿರಿ. ಸಂಗಾತಿಯನ್ನು ಕಡೆಗಣಿಸಿ ವ್ಯವಹರಿಸದಿರಿ.
ಕಟಕ
ಗೃಹ ವಾ ನಿವೇಶನ ಖರೀದಿಯ ಸಾಧ್ಯತೆ ಕಂಡುಬರುತ್ತಿದೆ. ಮನೆಯಲ್ಲಿ ಕಾರ್ಯಕ್ರಮವೊಂದನ್ನು ನಿಷ್ಕರ್ಷೆ ಮಾಡುವ ಸಾಧ್ಯತೆ ಕಂಡುಬರುತ್ತಿದೆ. ಆಹಾರ ಧಾನ್ಯ ವರ್ತಕರಿಗೆ ಸ್ವಲ್ಪನಷ್ಟ ಅಥವಾ ಕಿರಿಕಿರಿ.
ಸಿಂಹ
ವಿದ್ಯಾರ್ಥಿಗಳಿಗೆ ಅತ್ಯಂತ ಸಂತಸದ ದಿನವಾಗಲಿದೆ. ಹೊಸ ಸಾಧನೆಯ ಮೆಟ್ಟಿಲೇರಲಿದ್ದೀರಿ. ದ್ರವರೂಪದ ವಸ್ತುಗಳ ವ್ಯಾಪಾರ ವ್ಯವಹಾರಸ್ಥರಿಗೆ ಹೆಚ್ಚಿನ ಅನುಕೂಲತೆ ಕಂಡುಬರುತ್ತಿದೆ.
ಕನ್ಯಾ
ವಿಶೇಷ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಲವಲವಿಕೆಯನ್ನು ತೋರುವಿರಿ. ಸಮಾಜಕ್ಕೆ ಒಳಿತಾಗುವ ಕಾರ್ಯದ ಬಗ್ಗೆ ಚಿಂತಿಸಿ ಕಾರ್ಯರೂಪಕ್ಕೆ ತರುವ ಬಗ್ಗೆ ಆಲೋಚನೆ. ಆಹಾರ , ಆರೋಗ್ಯ ವಿಷಯದಲ್ಲಿ ಎಚ್ಚರಿಕೆ ಅಗತ್ಯ.
ತುಲಾ
ಉದ್ಯೋಗದಲ್ಲಿ ಬದಲಾವಣೆ ಕಂಡುಬರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ದೊರಕಲಿವೆ. ಬದುಕಿನಲ್ಲಿ ಹೊಸ ಅತಿಥಿಯ ಆಗಮನದಿಂದಾಗುವ ಬದಲಾವಣೆ. ಸಂತೋಷದ ದಿನವಾಗಲಿದೆ.
ವೃಶ್ಚಿಕ
ಹೆಣ್ಣುಮಕ್ಕಳಿಂದ ಕುಲಗೌರವ ಪ್ರಾಪ್ತಿಯಾಗುವುದು. ನೌಕರ ವರ್ಗದವರು ಕಛೇರಿ ಕೆಲಸದಲ್ಲಿ ಹೆಚ್ಚು ತಲ್ಲೀನರಾಗಿ ಪ್ರಶಂಸೆಗೆ ಪಾತ್ರರಾಗುವಿರಿ. ಕಾರ್ಯಸಾಧನೆಗಾಗಿ ಶ್ರಮ ವಹಿಸಿ ಯಶಸ್ಸನ್ನು ಸಾಧಿಸುವಿರಿ.
ಧನು
ಬಹುದಿನಗಳಿಂದ ಬರದೇ ಬಾಕಿ ಇದ್ದ ಹಣ ಮರುಪಾವತಿಯಾಗುವ ಸಾಧ್ಯತೆ. ವಿವಾಹ ಸಂಬಂಧ ಮಾತುಕತೆಗೆ ಮುಂದಾಗಲಿದ್ದೀರಿ. ಹೊಸ ಉದ್ಯಮ ವಾ ಯೋಜನೆಯೊಂದನ್ನು ಕಾರ್ಯರೂಪಕ್ಕೆ ತರಲಿದ್ದೀರಿ.
ಮಕರ
ಚಿನ್ನ ಬೆಳ್ಳಿ, ಲೋಹಗಳ ವ್ಯಾಪಾರದಲ್ಲಿ ತೊಡಗಿರುವವರಿಗೆ ಸ್ವಲ್ಪಮಟ್ಟಿನ ಹಿನ್ನಡೆ ಕಂಡುಬರಲಿದೆ. ಮನೆಯವ ರೊಂದಿಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆ. ವಿಶೇಷ ಅನುಭವವನ್ನು ದಿನಾಂತ್ಯದಲ್ಲಿ ಅನುಭವಿಸಲಿದ್ದೀರಿ.
ಕುಂಭ
ಮಹಿಳೆಯರು ಇತರರ ಬಗ್ಗೆ ಎಚ್ಚರಿಕೆಯಿಂದ ವ್ಯವಹರಿಸುವುದು ಒಳಿತು. ಮೋಸಹೋಗುವ ಸಾಧ್ಯತೆ ಕಂಡುಬರುತ್ತಿದೆ. ವಸ್ತ್ರಾಭರಣ ಖರೀದಿಯನ್ನು ದಿನದಮಟ್ಟಿಗೆ ಮುಂದೂಡುವುದು ಒಳಿತು.
ಮೀನ
ಹಿಂದಿನ ಕಹಿ ನೆನಪುಗಳು ಮಾಸಿ ಹೊಸ ಉತ್ಸಾಹದ ದಾರಿಯಲ್ಲಿ ಸಾಗುವಿರಿ. ದಾನ ಧರ್ಮಗಳಲ್ಲಿ ಆಸಕ್ತಿವಹಿಸಿ ಪೂಜಾ ಕಾರ್ಯಗಳಲಿ ಭಾಗವಹಿಸುವ ಸಾಧ್ಯತೆ ಕಂಡುಬರುತ್ತಿದೆ. ಮಕ್ಕಳ ಭವಿಷ್ಯಕ್ಕಾಗಿ ಭದ್ರ ಬುನಾದಿ