Design a site like this with WordPress.com
Get started

ನಿಮ್ಮ ರಾಶಿಯ ಮೇಲೆ ಮಕರ ಸಂಕ್ರಾಂತಿ ಪ್ರಭಾವವೇನು?

ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಸುವುದನ್ನು ಮಕರ ಸಂಕ್ರಾಂತಿ ಎಂದು ಆಚರಿಸಲಾಗುವುದು. ಮಕರ ಸಂಕ್ರಾಂತಿ ಎಂಬುವುದು ಸೂರ್ಯನ ಪಥ ಬದಲಾವಣೆಯನ್ನು ಸೂಚಿಸುವುದು ಮಾತ್ರವಲ್ಲದೆ ಇದು ಉತ್ತರಾಯಣ ಪುಣ್ಯ ಕಾಲದ ಆರಂಭವೂ ಆಗಿದೆ.

ಮಕರ ಸಂಕ್ರಾಂತಿಯ ಅವಧಿಯಲ್ಲಿ ಸೂರ್ಯದೇವನು ತನ್ನ ಏಳು ಕುದುರೆಗಳಿಂದ ಎಳೆಯಲ್ಪಡುವ ಭವ್ಯ ರಥದಲ್ಲಿ ಮಕರ ರಾಶಿಗೆ ಪ್ರವೇಶಿಸುತ್ತಾನೆ ಎಂದು ಹೇಳಲಾಗುವುದು. ಮಕರ ರಾಶಿಯಲ್ಲಿ ಸೂರ್ಯನ ಪ್ರವೇಶಿಸಲೂ ಜ್ಯೋತಿಷ್ಯದ ದೃಷ್ಟಿಕೋನದಿಂದ ಬಹು ವಿಶೇಷವಾಗಿದೆ.

ವೈದಿಕ ಶಾಸ್ತ್ರದ ಪ್ರಕಾರ ಈ ಸಮಯವು ಮೋಕ್ಷವನ್ನು ಪಡೆಯಲು ಸೂಕ್ತ ಕಾಲವೆಂದು ಹೇಳಲಾಗುವುದು. ಆದುದರಿಂದಲೇ ಇದನ್ನು ಪುಣ್ಯ ಕಾಲವೆಂದು ಕರೆಯಲಾಗುತ್ತದೆ. ಈ ಕಾಲದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ, ಈ ಅವಧಿಯಲ್ಲಿ ಮರಣವೊಂದಿರುವವರು ಮೋಕ್ಷ ಪಡೆಯುತ್ತಾರೆ. ಮಹಾಭಾರತದಲ್ಲಿ ಭೀಷ್ಮನು ದೇಹ ತ್ಯಾಗ ಮಾಡಿದ್ದು ಕೂಡ ಇದೇ ಪುಣ್ಯ ಕಾಲದಲ್ಲಿ ಆಗಿದೆ. ಈ ಸಮಯದಲ್ಲಿ ಇರುಳು ಕಡಿಮೆ ಇದ್ದು ಹಗಲು ಹೆಚ್ಚಿರುತ್ತದೆ.

ಸೂರ್ಯನು ಮಕರ ರಾಶಿಯಲ್ಲಿ ಒಂದು ತಿಂಗಳವರೆಗೆ ಇರಲಿದ್ದು ವೇದ ಶಾಸ್ತ್ರದ ಪ್ರಕಾರ ಇದರ ಪ್ರಭಾವ ರಾಶಿಗಳ ಮೇಲಿರುತ್ತದೆ. ನಿಮ್ಮ ರಾಶಿಯ ಮೇಲೆ ಮಕರ ಸಂಕ್ರಾಂತಿ ಪ್ರಭಾವವೇನು ಎಂದು ನೋಡೋಣ:

ಮೇಷ ರಾಶಿ

ಹೊಸ ವ್ಯವಹಾರ ಪ್ರಾರಂಭಿಸಲು ಬಯಸಿದರೆ ಸಮಯ ಅನುಕೂಲಕರವಾಗಿದೆ, ಕಾಯಿಲೆಯಿಂದ ಬಳಲುತ್ತಿರುವವರಿಗೆ ಆರೋಗ್ಯ ಸುಧಾರಿಸುತ್ತದೆ. ಉದ್ಯೋಗದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಕಾಣುವಿರಿ. ನೀವು ರಾಜಕಾರಣಿಯಾಗಿದ್ದರೆ ರಾಜಕೀಯದಲ್ಲಿ ಯಶಸ್ಸನ್ನು ಪಡೆಯುತ್ತೀರಿ.

ಪ್ರತಿ ಭಾನುವಾರ ನಿರ್ಗತಿಕರಿಗೆ ಆಹಾರ ದಾನ ಮಾಡಿ. ಶ್ರೀ ಆದಿತ್ಯ ಹೃದಯ ಸ್ತೋತ್ರವನ್ನು ಓದಿ.

ಶುಭ ಬಣ್ಣ-ಕೆಂಪು

ವೃಷಭ ರಾಶಿ

ವೃಷಭ ರಾಶಿಯವರೇ ನಿಮ್ಮ ಸ್ಥಾನವು ಈಗ ಉತ್ತಮವಾಗಿದೆ. ನೀವು ವ್ಯವಹಾರವನ್ನು ಇನ್ನಷ್ಟು ಸುಧಾರಿಸಲು ವಯಸಿದಿರೆ ಅದು ಸಾಧ್ಯವಾಗುವುದು. ರಾಜಕಾರಣಿಗಳು ರಾಜಕೀಯದಲ್ಲಿ ದೊಡ್ಡ ಯಶಸ್ಸನ್ನು ಪಡೆಯುವ ಭರವಸೆ ಇಟ್ಟುಕೊಳ್ಳಬಹುದು. ನಿನಗೆ ಧಾರ್ಮಿಕ ವಿಚಾರಗಳತ್ತ ಒಲವು ಹೆಚ್ಚುವುದು.

ಪ್ರತಿ ಭಾನುವಾರ ಗೋಧಿ ದಾನ ಮಾಡಿ.

ಶುಭ ಬಣ್ಣ: ಹಸಿರು

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಮಕರ ಸಂಕ್ರಾಂತಿಯಲ್ಲಿ ಸೂರ್ಯನ ಸಾಗಣೆ ಬಹಳ ಶುಭವಾಗಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ಎಳ್ಳು ದಾನ ಮಾಡುವುದು ತುಂಬಾ ಶುಭ.

ಹಸುವಿಗೆ ಮೇವು ದಾನ ಮಾಡಿ

ಶುಭ ಬಣ್ಣ: ಹಸಿರು ಮತ್ತು ಕಿತ್ತಳೆ ಬಣ್ಣಗಳು

ಕರ್ಕ ರಾಶಿ

ರಾಜಕೀಯಕ್ಕೆ ಸಂಬಂಧಿಸಿದ ಸ್ಥಳೀಯರಿಗೆ ಯಶಸ್ಸಿನ ಸಮಯ. ನೀವು ಭೂಮಿ ಅಥವಾ ವಾಹನಗಳನ್ನು ಖರೀದಿಸಬಹುದು. ವ್ಯವಹಾರದಲ್ಲಿ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ.

ಶ್ರೀ ಆದಿತ್ಯ ಹೃದಯಸ್ತೋತ್ರವನ್ನು ಪ್ರತಿದಿನ ಓದಿ. ಎಳ್ಳು ದಾನ ಮಾಡಿ.

ಶುಭ ಬಣ್ಣ: ಹಳದಿ

ಸಿಂಹ ರಾಶಿ

ಕರ್ಕ ರಾಶಿಯ ಉದ್ಯೋಗಿಗಳಿಗೆ ಮತ್ತು ವ್ಯವಹಾರಸ್ಥರಿಗೆ ಇದು ಯಶಸ್ಸಿನ ಸಮಯ. ರಾಜಕಾರಣಿಗಳು ಯಶಸ್ವಿಯಾಗುತ್ತಾರೆ. ನಿಮ್ಮ ಹಣ ಮರಳಿ ಬಾರದೆ ಚಿಂತೆ ಮಾಡುತ್ತಿದ್ದರೆ ಈ ಅವಧಿಯಲ್ಲಿ ಆ ಹಣವನ್ನು ಪಡೆಯಬಹುದು. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

ಹಸುವಿಗೆ ಮೇವು ದಾನ ಮಾಡಿ.

ಶುಭ ಬಣ್ಣ: ಕಿತ್ತಳೆ

ಕನ್ಯಾ ರಾಶಿ

ಈ ಅಯನ ಸಂಕ್ರಾಂತಿ ನಿಮಗೆ ಬಹಳ ಮುಖ್ಯವಾಗಿದೆ. ಈ ಸಮಯದಲ್ಲಿ ನೀವು ಅನೇಕ ಪ್ರಮುಖ ಮತ್ತು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ.

ಉದ್ಯೋಗಿಗಳಿಗೆ ಹಾಗೂ ವ್ಯವಹಾರಸ್ಥರಿಗೆ ಸಮಯವು ಒಳ್ಳೆಯದಿದೆ.

ಶ್ರೀ ಆದಿತ್ಯ ಹೃದಯಸ್ತೋತ್ರವನ್ನು ಪ್ರತಿದಿನ ಓದಿ

ಶುಭ ಬಣ್ಣ: ಕೆಂಪು

ತುಲಾ ರಾಶಿ

ತುಲಾ ರಾಶಿಯವರಿಗೆ ಈ ಸಮಯವು ಕೆಲಸಕ್ಕೆ ಬಹಳ ಶುಭವಾಗಿದೆ. ಸ್ಥಗಿತಕೊಂಡ ನಿಮ್ಮ ಯೋಜನೆಗಳು ಪುನಃ ಪ್ರಾರಂಭಿಸುವಿರಿ. ಧಾರ್ಮಿಕ ಆಚರಣೆಗಳು ನಡೆಯಲಿವೆ.

ಶುಭ ಬಣ್ಣ: ನೀಲಿ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರೇ ನೀವು ಮನೆ ನಿರ್ಮಿಸಿಸುತ್ತಿದ್ದು ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಅನೇಕ ಕಾಮಗಾರಿಗಳು ಪೂರ್ಣಗೊಳ್ಳುತ್ತವೆ. ಹಣವು ಚೆನ್ನಾಗಿರುತ್ತದೆ. ಉದ್ಯೋಗದಲ್ಲಿ ನಿಮ್ಮ ಕೆಲಸ ಮೆಚ್ಚುಗೆ ಗಳಿಸುವುದು. ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ.

ಶುಭ ಬಣ್ಣ: ಕೆಂಪು

ಧನು ರಾಶಿ

ಧನು ರಾಶಿಯವರೇ ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ಹೊಸ ಕೆಲಸಕ್ಕೆ ಕೈ ಹಾಕುವಿರಿ. ಈ ತಿಂಗಳು ಎಳ್ಳು, ಬೆಲ್ಲ ಮತ್ತು ಧಾನ್ಯ ಇತ್ಯಾದಿಗಳನ್ನು ದಾನ ಮಾಡಿ. ಮಕ್ಕಳ ಪ್ರಗತಿಯು ನಿಮಗೆ ಸಂತೋಷ ತರುತ್ತದೆ.

ಶುಭ ಬಣ್ಣ:ಕಿತ್ತಳೆ

ಮಕರ ರಾಶಿ’

ನಿಮ್ಮ ಮೃದು ನಡವಳಿಕೆಯು ನಿಮಗೆ ತುಂಬಾ ಪ್ರಯೋಜನ ಉಂಟು ಮಾಡಲಿದೆ. ಉದ್ಯೋಗಗಳಲ್ಲಿ ವಿಶೇಷ ಯಶಸ್ಸು ಸಿಗಲಿದೆ. ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರದ ಬಗ್ಗೆ ನೀವು ಸಂತೋಷವಾಗಿರುತ್ತೀರಿ.ತೈಲವನ್ನು ದಾನ ಮಾಡುವುದನ್ನು ಮುಂದುವರಿಸಿ.

ಶುಭ ಬಣ್ಣ: ಬಿಳಿ ಮತ್ತು ನೀಲಿ

ಕುಂಭ ರಾಶಿ

ಈ ತಿಂಗಳು ರಾಜಕಾರಣಿಗಳಿಗೆ ರಾಜಕೀಯದಲ್ಲಿ ಅನಿರೀಕ್ಷಿತ ಯಶಸ್ಸು ಸಿಗಲಿದೆ. ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಸ್ಥಗಿತಗೊಂಡ ಯೋಜನೆಗಳು ಪ್ರಾರಂಭವಾಗುತ್ತವೆ. ಆರೋಗ್ಯ ಉತ್ತಮವಾಗುವುದು, ನಿಮ್ಮ ಸಮಸ್ಯೆಗಳು ದೂರವಾಗುವುದು.

ಭಾನುವಾರ ಸೂರ್ಯ ಬೀಜ ಮಂತ್ರ ಪಠಿಸಿ, ಬೆಲ್ಲ ದಾನ ಮಾಡಿ.

ಶುಭ ಬಣ್ಣ: ಹಸಿರು

ಮೀನ ರಾಶಿ

ಈ ತಿಂಗಳು ನೀವು ಪ್ರಮುಖ ಉದ್ಯೋಗ ಸಂಬಂಧಿತ ಕೆಲಸವನ್ನು ಮಾಡುವಿರಿ. ವ್ಯವಹಾರದಲ್ಲಿ ಸಾಧನೆಗೆ ಈ ಸಮಯ ಒಳ್ಳೆಯದಿದೆ. ಸೂರ್ಯನ ಈ ಸಾಗಣೆಯು ಕೆಲಸದ ದೃಷ್ಟಿಯಿಂದ ದೊಡ್ಡ ಅವಕಾಶವನ್ನು ನೀಡುತ್ತದೆ. ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸುತ್ತಾರೆ. ಬೆಲ್ಲ ದಾನ ಮಾಡಿ.

ಶುಭ ಬಣ್ಣ: ಕೆಂಪು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: