
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಹಿಮಂತ ಋತು, ಪುಷ್ಯಮಾಸ,
ಶುಕ್ಲಪಕ್ಷ, ಪ್ರಥಮಿ / ದ್ವಿತೀಯ,
ಗುರುವಾರ, ಶ್ರವಣ ನಕ್ಷತ್ರ.
ರಾಹುಕಾಲ 01:58 ರಿಂದ 03:24
ಗುಳಿಕಕಾಲ 9:45 ರಿಂದ 11:06
ಯಮಗಂಡಕಾಲ 06:48 ರಿಂದ 08:14
ಮೇಷ
ಹಿರಿಯರ ಆಶೀರ್ವಾದದಿಂದಾಗಿ ಬಯಸಿದ ಎಲ್ಲ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಲಿದ್ದೀರಿ. ಉನ್ನತ ವ್ಯಾಸಂಗಕ್ಕಾಗಿ ವಿದೇಶದಲ್ಲಿ ಅವಕಾಶ ದೊರಕಲಿದೆ. ಸ್ಪರ್ಧಾಳುಗಳಿಗೆ ಯಶಸ್ಸಿನ ಗರಿ ಮುಡಿಗೇರಲಿದೆ.
ವೃಷಭ
ದಿನವಿಡೀ ಉತ್ಸಾಹ, ಉಲ್ಲಾಸದಿಂದ ಕಾರ್ಯನಿರ್ವಹಿಸಲಿದ್ದೀರಿ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳ ಅಧಿಕಾರಿಗಳಿಗೆ ವರ್ಗಾವಣೆಯ ಸಾಧ್ಯತೆ. ಹವ್ಯಾಸಿ ಬರಹಗಾರರು, ಪತ್ರಕರ್ತರಿಗೆ ಶುಭ ಸಮಾಚಾರ ಕೇಳಿಬರಲಿದೆ.
ಮಿಥುನ
ರಾಜಕೀಯ ರಂಗಕ್ಕೆ ಇಳಿಯುವ ಸುದಿನ. ಸಾಮಾಜಿಕ ಸೇವೆಯಲ್ಲಿ ನಿಮಗಿದ್ದ ಕಾಳಜಿ ಹಾಗೂ ನಿಷ್ಠಯಿಂದ ಎಲ್ಲರ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಅದೃಷ್ಟ ಖುಲಾಯಿಸಿ ಉತ್ತಮ ಸ್ಥಾನವನ್ನು ಹೊಂದುವ ಎಲ್ಲ ಅವಕಾಶವಿದೆ.
ಕಟಕ
ಪ್ರತಿಭೆಗೆ ತಕ್ಕ ಪ್ರತಿಫಲ ಸಿಗಲಿದೆ. ಚಿನ್ನಾಭರಣ ಮಾರಾಟಗಾರರಿಗೆ ಶುಭದಿನ. ಮದುವೆ ವಿಷಯ ಪ್ರಸ್ತಾಪ ಮಾಡಲಿದ್ದೀರಿ. ಆಸ್ಪತ್ರೆ ಸಿಬ್ಬಂದಿಗೆ ಸೌಲಭ್ಯಗಳು ದೊರಕುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಗೊಂದಲದ ಮನಸ್ಥಿತಿ.
ಸಿಂಹ
ಹೊಸ ಮನೆ ಖರೀದಿಗೆ ಚಾಲನೆ ದೊರೆಯುವುದು. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ನೇಕಾರರು, ದರ್ಜಿಗಳಿಗೆ ಉತ್ತಮ ಆದಾಯ. ಹೊರಗುತ್ತಿಗೆ ಕೆಲಸಗಳಿಂದ ಉತ್ತಮ ಆದಾಯ ನಿರೀಕ್ಷೆ.
ಕನ್ಯಾ
ನಿಮ್ಮ ಕೈಬಿಟ್ಟು ಹೋಗಿದ್ದ ಆಸ್ತಿಯು ಇಂದು ಗುರುಹಿರಿಯರ ಆಶೀರ್ವಾದದಿಂದಾಗಿ ನಿಮ್ಮ ಕೈಸೇರಲಿದೆ. ಆರೋಗ್ಯ ಉತ್ತಮಗೊಳ್ಳಲಿದೆ. ಉದ್ವೇಗಕ್ಕೆ ಒಳಗಾಗುವ ಅವಶ್ಯಕತೆ ಇರುವುದಿಲ್ಲ.
ತುಲಾ
ಬಾಲ್ಯ ಸ್ನೇಹಿತರಿಂದಾಗುವ ಹೊಸ ವ್ಯಕ್ತಿಗಳ ಪರಿಯಚಯದಿಂದಾಗಿ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ. ತಾಂತ್ರಿಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಹುಡುಕಿಕೊಂಡು ಬರಲಿದೆ. ಜೀವನದಲ್ಲಿ ಸ್ಥಿರತೆ ಮೂಡಲಿದೆ.
ವೃಶ್ಚಿಕ
ನಿಮ್ಮ ಕನಸುಗಳು ನನಸಾಗುವ ದಿನ. ಅಧಿಕಾರಿಗಳು ಹಾಗೂ ಹಿರಿಯರಿಂದ ಸಹಾಯ ಸಹಕಾರ ದೊರಕಲಿದೆ. ದೂರದ ಊರಿಗೆ ಪ್ರಯಾಣ ಸಾಧ್ಯತೆ. ಶುಭಕಾರ್ಯಗಳಿಗಾಗಿ ಖರ್ಚು ಸಂಭವಿಸಲಿದೆ.
ಧನು
ಅಪರೂಪದ ವ್ಯಕ್ತಿಯೊಬ್ಬರ ಭೇಟಿಯಿಂದ ಮಹತ್ತರ ಬದಲಾವಣೆ ಸಾಧ್ಯವಾಗಲಿದೆ. ಪುತ್ರರ ಸಹಕಾರದಿಂದಾಗಿ ಮಂಗಳಕಾರ್ಯಗಳನ್ನು ನಡೆಸಲಿದ್ದೀರಿ. ವಾಹನ ವ್ಯಾಪಾರಿಗಳಿಗೆ ವಿಶೇಷ ಲಾಭದ ಸಾಧ್ಯತೆ.
ಮಕರ
ಮನೆಯಲ್ಲಿ ಪರಿಸ್ಥಿತಿ ತಿಳಿಗೊಳ್ಳುವುದು. ಎಂಜಿನಿಯರ್, ವಿನ್ಯಾಸಗಾರರಿಗೆ ಒಳ್ಳೆಯ ಸುದ್ದಿಯೊಂದು ಕೇಳಿಬರಲಿದೆ. ನಿಮ್ಮ ಮುಂದಿನ ನಡೆ ಸರಿಯಾದ ಮಾರ್ಗದಲ್ಲಿ ಸಾಗಿ ಯಶಸ್ಸನ್ನು ಕಂಡುಕೊಳ್ಳಲಿದ್ದೀರಿ.
ಕುಂಭ
ಉನ್ನತ ಪರೀಕ್ಷೆಗಳಲ್ಲಿ ನಿರೀಕ್ಷೆಯಂತೆ ಉತ್ತಮ ಫಲಿತಾಂಶ ಹೊಂದಲಿದ್ದೀರಿ. ಮಕ್ಕಳ ಮುಂದಿನ ವ್ಯಾಸಂಗಕ್ಕಾಗಿ ಹಣಕಾಸಿನ ಹೊಂದಾಣಿಕೆಯಾಗಲಿದೆ. ಮಕ್ಕಳ ಪ್ರಗತಿಯಿಂದಾಗಿ ಮನೆಯಲ್ಲಿ ಸಂಭ್ರಮದ ವಾತಾವರಣ.
ಮೀನ
ವಿದೇಶದಿಂದ ಬಂಧುಗಳ ಆಗಮನ. ಹೊಸ ವರಮಾನದ ಮಾರ್ಗವೊಂದು ಗೋಚರವಾಗಲಿದೆ. ಕೆಲಸದಲ್ಲಿ ಪ್ರಮುಖ ಬೆಳವಣಿಗೆ ನಿಮ್ಮ ಗಮನಕ್ಕೆ ಬರಲಿದೆ. ಮದುವೆ ಮುಂತಾದ ಶುಭಸಮಾರಂಭಕ್ಕೆ ಚಿಂತನೆ.