
ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು,
ಮಾರ್ಗಶಿರ ಮಾಸ, ಕೃಷ್ಣಪಕ್ಷ, ವಾರ : ಮಂಗಳವಾರ,
ತಿಥಿ : ಚತುರ್ದಶಿ, ನಕ್ಷತ್ರ : ಮೂಲ, ಯೋಗ : ವ್ಯಾಘಾತ,
ರಾಹುಕಾಲ: 3.23 ರಿಂದ 4.49
ಗುಳಿಕ ಕಾಲ: 12.31 ರಿಂದ 1.57
ಯಮಗಂಡಕಾಲ: 9.39 ರಿಂದ 11.05
ಮೇಷ
ಸಾಂಸಾರಿಕ ಸುಖವಿದ್ದು ಸಂತಸವನ್ನು ಹೊಂದಲಿದ್ದೀರಿ. ಸ್ನೇಹಿತರ ಸಹಕಾರದಿಂದ ಪ್ರಗತಿ. ವಾಹನ ಚಲಾವಣೆ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಿ. ನಿಮ್ಮ ನಿತ್ಯದ ಕೆಲಸ–ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುವಿರಿ.
ವೃಷಭ
ನಿಮ್ಮ ಗೆಳೆಯರಿಂದ ಸಕಾಲದಲ್ಲಿ ಅನುಕೂಲತೆಗಳು ಒದಗಿ ಬರಲಿವೆ. ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಂಡು ಮುನ್ನುಗ್ಗಿರಿ. ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ಆತಂಕಪಡುವ ಅವಶ್ಯಕತೆ ಇಲ್ಲ.
ಮಿಥುನ
ಶತ್ರುಪೀಡೆಗಳ ನಡುವೆಯೂ ವ್ಯವಹಾರದಲ್ಲಿ ಹೆಚ್ಚಿನ ಲಾಭ. ಮಕ್ಕಳೊಂದಿಗೆ ತಾಳ್ಮೆಯಿಂದ ಸೌಹಾರ್ದ ಕಾಪಾಡಿಕೊಳ್ಳುವುದು ಉತ್ತಮ. ದೇವತಾರಾಧನೆ ನೆಮ್ಮದಿ ನೀಡಲಿದೆ.
ಕಟಕ
ವಾದ–ವಿವಾದಗಳಿಂದ ದೂರ ಉಳಿಯುವುದು ಒಳಿತು. ಸರ್ಕಾರ ಅಥವಾ ಅಧಿಕಾರಿಗಳಿಂದ ಉತ್ತಮ ಸಹಕಾರ . ಹಣಕಾಸಿನ ವಿಚಾರದಲ್ಲಿ ಅನುಕೂಲವಾಗಿ ಕಂಡುಬರುತ್ತಿದೆ.
ಸಿಂಹ
ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸಂಗಾತಿಯಿಂದ ಪ್ರೀತಿ, ವಿಶ್ವಾಸ, ಸಹಕಾರ ಉತ್ತಮವಾಗಿ ದೊರಕಲಿದೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಗೌರವಾದರಗಳನ್ನು ಪಡೆದುಕೊಳ್ಳುವ ಸಾಧ್ಯತೆ.
ಕನ್ಯಾ
ಕೈಗೊಂಡ ಕಾರ್ಯಗಳು ಅಡೆತಡೆಗಳ ನಡುವೆಯೂ ಕೈಗೂಡಲಿವೆ. ಸಾಂಸಾರಿಕ ಸುಖವಿದ್ದರೂ ಕಿರಿಕಿರಿ. ಎಚ್ಚರಿಕೆ ನಡೆಯಿಂದ ಆರ್ಥಿಕ ಅನುಕೂಲತೆ. ಸಂತಸದ ದಿನವನ್ನಾಗಿಸಿಕೊಳ್ಳುವಿರಿ.
ತುಲಾ
ಬಂದುಮಿತ್ರರಲ್ಲಿ ಸ್ವಲ್ಪಮಟ್ಟಿನ ಮನಸ್ತಾಪಗಳು ಉಂಟಾಗುವ ಸಾಧ್ಯತೆ. ಮನೆಯವರಿಂದಲೂ ವಿರೋಧವನ್ನು ಎದುರಿಸಬೇಕಾದೀತು. ತಾಳ್ಮೆ ಸಮಾಧಾನ, ಚರ್ಚೆಯಿಂದ ಎಲ್ಲವನ್ನೂ ಬಗೆಹರಿಸಿಕೊಳ್ಳಿ.
ವೃಶ್ಚಿಕ
ಆರ್ಥಿಕ ಅಡಚಣೆಗಳು ಎದುರಾಗುವುದರ ಜೊತೆಗೆ ಸಮಾಜದಲ್ಲಿ ಗೌರವಾದರಗಳನ್ನು ಪಡೆಯಲಿದ್ದೀರಿ. ಮಂಗಳ ಕಾರ್ಯಗಳ ನಿಮಿತ್ತ ಓಡಾಟಗಳು ಹೆಚ್ಚಾಗಿ ಹೆಚ್ಚಿನ ಆಯಾಸ ಅನುಭವಿಸುವಿರಿ.
ಧನು
ಸ್ವಲ್ಪಮಟ್ಟಿಗೆ ಆರ್ಥಿಕ ಮುಗ್ಗಟ್ಟುಗಳ ಜೊತೆಗೆ ಸಾಂಸಾರಿಕ ತೊಂದರೆಗಳು ಎದುರಾಗುವ ಸಾಧ್ಯತೆ. ಸಂಗಾತಿಯ ಉತ್ತಮ ಸಹಕಾರದಿಂದಾಗಿ ನೆಮ್ಮದಿ.
ಮಕರ
ಉತ್ತಮ ಆದಾಯವನ್ನೂ ಮೀರಿದ ಖರ್ಚು ಆಗುವ ಸಾಧ್ಯತೆ. ಆರೋಗ್ಯದ ವಿಚಾರದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯ ಸಾಧ್ಯತೆ. ವಿದ್ಯಾರ್ಥಿಗಳಲ್ಲಿ ಪ್ರಗತಿಯನ್ನು ನಿರೀಕ್ಷಿಸಬಹುದು. ದೂರಪ್ರಯಾಣ ಅಷ್ಟು ಶ್ರೇಯಸ್ಕರವಲ್ಲ.
ಕುಂಭ
ವಿರೋಧಗಳು ದಮನವಾದರೂ ಮಾನಸಿಕ ನೆಮ್ಮದಿ ಕಡಿಮೆಯಾದೀತು. ದೇವತಾ ಕಾರ್ಯಗಳಿಗಾಗಿ ವಿಶೇಷ ವಿನಿಯೋಗ ಮಾಡುವ ಸಾಧ್ಯತೆ. ಮೋಸ ಹೋಗುವ ಸಾಧ್ಯತೆ ಇದ್ದು ಎಚ್ಚರಿಕೆ ಅಗತ್ಯ.
ಮೀನ
ಸಾಕಷ್ಟು ಮುಂಜಾಗೃತೆ ವಹಿಸಿದ್ದರೂ ಕೆಲಸ–ಕಾರ್ಯಗಳಲ್ಲಿ ಕೆಲವು ಸಣ್ಣಪುಟ್ಟ ಅಡಚಣೆಗಳು ತಲೆದೋರುವ ಸಾಧ್ಯತೆ. ನಿಮ್ಮ ಆಶಯಗಳು ಈಡೇರುವ ಮೂಲಕ ಸಾಂಸಾರಿಕ ಸಂತೃಪ್ತಿ ನಿಮ್ಮದಾಗಲಿದೆ. ಗೌರವಾದರಗಳು ಲಭಿಸುವುದು.