
ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣಪಕ್ಷ.
ತಿಥಿ- ತ್ರಯೋದಶಿ, ನಕ್ಷತ್ರ -ಜೇಷ್ಠ,
ವಾರ- ಸೋಮವಾರ
ರಾಹುಕಾಲ:8.13 ರಿಂದ 9.39
ಗುಳಿಕಕಾಲ:1.57 ರಿಂದ 3.23
ಯಮಗಂಡಕಾಲ:11.05 ರಿಂದ 12.31
ಮೇಷ
ರಾಜಕೀಯ ಕ್ಷೇತ್ರಗಳಲ್ಲಿರುವವರಿಗೆ ಅತ್ಯಂತ ಅನುಕೂಲಕರವಾಗಿ ತೋರುತ್ತಿದೆ. ಪ್ರಕೃತಿಯು ನಿಮ್ಮ ಅನುಕೂಲಕ್ಕೆ ತಕ್ಕಂತೆ ವರ್ತಿಸುವುದು. ಸಾಮಾಜಿಕ ಗೌರವಾದರಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ.
ವೃಷಭ
ಅತ್ಯಂತ ಶ್ರದ್ಧೆ ಹಾಗೂ ಉತ್ಸಾಹದಿಂದ ಕಾರ್ಯ ನಿರ್ವಹಿಸಿ. ಕುಟುಂಬವರ್ಗದವರಿಂದ ದೊರಕುವ ಗೌರವಾದರಗಳಿಂದಾಗಿ ಮಾನಸಿಕ ಸಂತೋಷ. ನಿಮ್ಮ ಆರೋಗ್ಯದಲ್ಲಿ ಕೊಂಚ ವ್ಯತ್ಯಯ ಉಂಟಾಗುವ ಸಾಧ್ಯತೆ ಕಂಡುಬರುತ್ತಿದೆ.
ಮಿಥುನ
ಸಾರ್ವಜನಿಕವಾಗಿ ಹೊರಗಡೆ ಮಾತನಾಡುವಾಗ ಮಾತಿನ ಮೇಲೆ ಹತೋಟಿ ಇಟ್ಟುಕೊಳ್ಳಿ. ಹಿತಶತ್ರುಗಳಿಂದ ನಿಮಗೆ ಇಲ್ಲಸಲ್ಲದ ತೊಂದರೆ ತಾಪತ್ರಯಗಳು ಬಂದೊದಗುವ ಸಾಧ್ಯತೆ. ಕುಲದೇವತಾ ಆರಾಧನೆ ಮಾಡಿ.
ಕಟಕ
ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡವರಿಗೆ ಕೈಗೊಂಡ ಯೋಜನೆಗಳು ನಿರ್ವಿಘ್ನವಾಗಿ ನೆರವೇರುವುದು. ಆಸ್ತಿ, ಮನೆ ಖರೀದಿ ಮಾಡುವ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ಸಿಂಹ
ಅತಿಯಾದ ಮಾತು ಹಾಗೂ ಸ್ವಯಂ ಹೊಗಳಿಕೆ ನಿಮ್ಮ ಘನತೆ, ಗೌರವಗಳಿಗೆ ಕುಂದು ಉಂಟು ಮಾಡುವ ಸಾಧ್ಯತೆ. ಸಮಾಜ ವಿರೋಧಿಯಾಗಿ ಸ್ವಾರ್ಥದಿಂದ ಕೈಗೊಂಡ ಕಾರ್ಯಗಳಿಂದಾಗಿ ಅಪಯಶಸ್ಸು ಉಂಟಾದೀತು.
ಕನ್ಯಾ
ಸಹನೆಯಿಂದ ನಿಮ್ಮ ಕೆಲಸ–ಕಾರ್ಯಗಳಲ್ಲಿ ಒಳಿತನ್ನು ಹೊಂದುವಿರಿ. ಬೇರೆಯವರ ಬಗ್ಗೆ ಅಸೂಯೆ ಪಡುವುದು ಉಚಿತವಾಗಲಾರದು. ಒಳ್ಳೆಯ ನಡೆ ನುಡಿಗಳಿಂದಾಗಿ ಕುಟುಂಬ ಗೌರವ ವೃದ್ಧಿಯಾಗುವುದು.
ತುಲಾ
ಆಡಳಿತಾತ್ಮಕ ಹುದ್ದೆಯಲ್ಲಿರುವವರಿಗೆ ನಿಮ್ಮ ಕಾರ್ಯದಕ್ಷತೆ ಮತ್ತು ಕಾರ್ಯಕ್ಷಮತೆಗೆ ತಕ್ಕ ಗೌರವಾದರಗಳು ದೊರೆಯುವುದು. ನಿಮ್ಮ ನಡೆನುಡಿಗಳಿಂದಾಗಿ ಆದರ್ಶ ವ್ಯಕ್ತಿಯಾಗಿ ಕಾಣಲಿದ್ದೀರಿ. ಅತಿಯಾದ ಸಂತೋಷ ಒಳಿತಲ್ಲ.
ವೃಶ್ಚಿಕ
ಮಕ್ಕಳಿಂದ ಸ್ವಲ್ಪಮಟ್ಟಿನ ಇಕ್ಕಟ್ಟಿನ ಪ್ರಸಂಗ ಉದ್ಭವವಾದೀತು. ಕೋಪ–ತಾಪಗಳನ್ನು ಬಿಟ್ಟು ಸಹನೆಯಿಂದ ತಿಳಿವಳಿಕೆ ನೀಡುವ ಮೂಲಕ ತಿದ್ದುವ ಕಾರ್ಯ ಮಾಡಿ. ಸಾಮರಸ್ಯವನ್ನು ಕಾಪಾಡಿಕೊಳ್ಳಿ.
ಧನು
ಕೈಗೊಂಡ ಕಾರ್ಯಗಳಲ್ಲಿ ಒಂದರ ಹಿಂದೊಂದು ವಿಘ್ನಗಳು ಉಂಟಾಗಿ ಕಿರಿಕಿರಿ ಉಂಟಾಗುವ ಸಾಧ್ಯತೆ. ತಾಳ್ಮೆಯಿಂದ ಅವುಗಳನ್ನು ಎದುರಿಸಿ. ಗೆಲುವು ನಿಮ್ಮದಾಗಲಿದೆ. ಧ್ಯಾನದ ಮೊರೆ ಹೋಗುವುದರಿಂದ ಸಂತಸ.
ಮಕರ
ಪ್ರೇಮ ಪ್ರಕರಣದಿಂದಾಗಿ ಮಾನಸಿಕ ಗೊಂದಲ ಉಂಟಾಗುವ ಸಾಧ್ಯತೆ. ಮನೆಯವರ ವಿರೋಧವನ್ನು ಕಟ್ಟಿಕೊಳ್ಳುವ ಸಂಭವ ಇರುವುದರಿಂದ ತಾಳ್ಮೆಯಿಂದ ವರ್ತಿಸಿ ಒಳಿತನ್ನು ಕಾಣಬಹುದು.
ಕುಂಭ
ಅನೇಕ ದಿನಗಳಿಂದ ವಿರೋಧದಿಂದಾಗಿ ತೊಡಕಾಗಿ ನಿಂತಿದ್ದ ಕಾರ್ಯಗಳ ವಿಚಾರದಲ್ಲಿ ವಿರೋಧಿಗಳೂ ನಿಮ್ಮನ್ನು ಬೆಂಬಲಿಸುವಂತಹ ವಿಚಿತ್ರ ಘಟನೆಯೊಂದು ನಡೆಯಲಿದೆ. ಕಾರ್ಯ ಸಾಧ್ಯವಾಗಿ ನೆಮ್ಮದಿ.
ಮೀನ
ಮೊದಲೇ ನಿರ್ಧಾರಿಕ ಕಾರ್ಯಗಳನ್ನು ಯಶಸ್ವಿಯಾಗಿ ಪೂರೈಸುವಿರಿ. ಕೆಲವೊಂದು ಅನಿರೀಕ್ಷಿತ ಘಟನೆಗಳ ಬಗ್ಗೆ ಗಮನವಿರಲಿ. ಖರ್ಚುವೆಚ್ಚದ ವಿಚಾರದಲ್ಲಿ ಸ್ವಲ್ಪ ಮಟ್ಟಿನ ಹಿಡಿತ ಇಟ್ಟುಕೊಳ್ಳುವುದು ಉತ್ತಮ.