
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ,
ಕೃಷ್ಣಪಕ್ಷ.
ವಾರ: ಭಾನುವಾರ, ತಿಥಿ: ದ್ವಾದಶಿ,
ನಕ್ಷತ್ರ: ಅನುರಾಧ,
ರಾಹುಕಾಲ:4.48 ರಿಂದ 6.14
ಗುಳಿಕ ಕಾಲ:3.22 ರಿಂದ 4.48
ಯಮಗಂಡಕಾಲ:12.30 ರಿಂದ 1.56
ಮೇಷ
ವಿದೇಶ ಪ್ರಯಾಣದ ಅವಕಾಶವು ಕಂಡುಬರುತ್ತಿದೆ. ದೂರದಲ್ಲಿನ ಸಂಬಂಧಿಗಳಿಂದ ಸಂತಸದ ಸುದ್ದಿಯೊಂದನ್ನು ಕೇಳಲಿದ್ದೀರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಸಂಗಾತಿಯಿಂದ ಉತ್ತಮ ಸಹಕಾರ ದೊರಕಲಿದೆ. ಸಂತಸದ ದಿನವಾಗುವುದು.
ವೃಷಭ
ಸ್ನೇಹಿತರ ಬೆಂಬಲದಿಂದಾಗಿ ಎದುರಾದ ಸಂಕಷ್ಟ ಚಿಂತೆ ಪರಿಹಾರ ಕಾಣುವುದು. ಮನೆಯವರ ಸಹಕಾರವೂ ದೊರಕಲಿದೆ. ವಿಶೇಷವಾದ ಕಾರ್ಯವೊಂದಕ್ಕೆ ಮುನ್ನುಡಿ ಹಾಡಲಿದ್ದೀರಿ. ನೆರೆಹೊರೆಯವರೊಡನೆ ವಿವಾದಕ್ಕೆ ಆಸ್ಪದ ಮಾಡಿಕೊಳ್ಳಬೇಡಿ.
ಮಿಥುನ
ನಿಧಾನವಾಗಿ ಚಿಂತಿಸಿ ಕಾರ್ಯನಿರ್ವಹಿಸಿದಲ್ಲಿ ಯಶಸ್ಸು ಖಂಡಿತ. ಗಡಿಬಿಡಿಯಿಂದಾಗಿ ತೊಂದರೆ ಎದುರಿಸಬೇಕಾದೀತು. ಯೋಜನೆಯೊಂದನ್ನು ನಿರೂಪಿಸಿ ಕಾರ್ಯರೂಪಕ್ಕೆ ತರಲು ಉತ್ತಮ ದಿನವಾಗಿದೆ. ಹೊಸ ವಾಹನ ಖರೀದಿ ಸೂಕ್ತವಲ್ಲ.
ಕಟಕ
ಜನಪ್ರತಿನಿಧಿಗಳಿಗೆ ಅಚ್ಚರಿಯೊಂದು ಕಾದಿದೆ. ಅನಿರೀಕ್ಷಿತ ಬೆಳವಣಿಗೆಯಿಂದ ಉತ್ತಮ ಅವಕಾಶವೊಂದು ತೆರೆದುಕೊಳ್ಳಲಿದೆ. ಚಿನ್ನ ಬೆಳ್ಳಿ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ ಕಂಡುಬರುವುದು. ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆಗಳು ಕಾಣಿಸಿಕೊಳ್ಳಬಹುದು.
ಸಿಂಹ
ಸ್ನೇಹಿರತ ಸಹಕಾರದಿಂದ ಕಾರ್ಯದಲ್ಲಿ ಯಶಸ್ಸು. ಮನಸ್ಸಿನ ಅಭಿಲಾಷೆಗಳು ಪೂರ್ಣಗೊಂಡು ಸಂತಸದ ದಿನವಾಗಲಿದೆ. ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂತಸ ಹಂಚಿಕೊಳ್ಳುವಿರಿ. ಪ್ರವಾಸ ಕೈಗೊಳ್ಳುವ ಸಾಧ್ಯತೆಯೂ ಕಂಡುಬರುತ್ತಿದೆ.
ಕನ್ಯಾ
ಏಕಾಗ್ರತೆಯಿಂದ ಕಾರ್ಯ ಸಾಧನೆಯಾಗಲಿದೆ. ಅನ್ಯ ವಿಚಾರಗಳಿಗೆ ಆಸ್ಪದವಿಲ್ಲದಂತೆ ಕಾರ್ಯನಿರ್ವಹಿಸಿ ಯಶಸ್ಸು ನಿಮ್ಮದಾಗಲಿದೆ. ವಾಹನ ಚಾಲನೆ, ವಸ್ತುಗಳ ಸಾಗಾಣಿಕೆ ವ್ಯವಹಾರದಲ್ಲಿ ಲಾಭ ಗಳಿಸಲಿದ್ದೀರಿ. ಉತ್ತಮ ಆರೋಗ್ಯ ದೊರಕುವುದು.
ತುಲಾ
ನಿಮ್ಮ ಕೆಲಸಕಾರ್ಯಗಳು ಅತ್ಯಂತ ನಾಜೂಕಾಗಿ ಯೋಗ್ಯರೀತಿಯಲ್ಲಿ ನೆರವೇರಲಿವೆ. ವಂಚಕರ ಹಿತಶತೃಗಳ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ಉದ್ವೇಗಕ್ಕೆ ಆಸ್ಪದ ವಿಲ್ಲದ ನಡವಳಿಕೆ ಅವಶ್ಯ.
ವೃಶ್ಚಿಕ
ಬಹಳ ದಿನಗಳ ಕನಸೊಂದು ನನಸಾಗುವ ಸಾಧ್ಯತೆ ಕಂಡುಬರುತ್ತಿದೆ. ಹೊಸ ಉದ್ಯಮಕ್ಕೆ ಕೈ ಹಾಕುವ ಮುನ್ನ ಮತ್ತೊಮ್ಮೆ ಯೋಚಿಸುವುದು ಒಳಿತು. ಚಿನ್ನಾಭರಣ ಖರೀದಿ ಮಾಡುವ ಸಾಧ್ಯತೆ. ಹಣಕಾಸಿನ ಅನುಕೂಲ ಕೂಡಿಬರಲಿದೆ.
ಧನು
ಅನೇಕ ತೊಂದರೆಗಳ ನಡುವೆಯೂ ನಿಮ್ಮ ಕಾರ್ಯಕ್ಷಮತೆಯಿಂದ ಯಶಸ್ಸನ್ನು ಗಳಿಸುವಿರಿ. ಉತ್ಸಾಹ ಇಮ್ಮಡಿಗೊಂಡು ಕಾರ್ಯದಲ್ಲಿ ತೊಡಗುವಿರಿ. ನೌಕರರು ಮೇಲಾಧಿಕಾರಿಗಳು ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಪ್ರಶಂಸೆಗೆ ಪಾತ್ರರಾಗುವಿರಿ.
ಮಕರ
ಒತ್ತಡಗಳ ನಡುವೆಯೂ ಕಾರ್ಯಸಿದ್ಧಿಯಾಗುವುದು. ನಿಮ್ಮ ಉನ್ನತ ಚಿಂತನೆಯಿಂದಾಗಿ ಸಾಮಾಜಿಕ ಮನ್ನಣೆಗೆ ಪಾತ್ರವಾಗುವುದರೊಂದಿಗೆ ಪ್ರಭಾವಿಗಳೊಂದಿಗೆ ಸ್ನೇಹ ಸಂಬಂಧಗಳು ಕೂಡಿಬರಲಿದೆ. ಮನೆಯವರ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ.
ಕುಂಭ
ಹೊಸ ಉದ್ಯಮ/ ಕಾಮಗಾರಿಯನ್ನು ಕೈಗೊಳ್ಳಲು ಉತ್ತಮ ಕಾಲವಾಗಿದ್ದು, ಹಣಕಾಸಿನ ಅನುಕೂಲತೆಗಳು ಒದಗಿಬರುವವು. ಬಂಧು ಬಾಂಧವರಿಂದ ಸಕಾಲಿಕ ಸಲಹೆ ಸಹಕಾರಗಳು ದೊರಕಲಿದೆ. ನೌಕರರಿಗೆ ಅತಿಯಾದ ಕಾರ್ಯ ಬಾಹುಳ್ಯದಿಂದಾಗಿ ಆಯಾಸ ತಲೆದೋರೀತು.
ಮೀನ
ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮುನ್ನ ಸಾಕಷ್ಟು ಚರ್ಚೆ ಚಿಂತನೆ ನಡೆಸುವುದು ಉತ್ತಮ. ದುಡುಕುತನದಿಂದಾಗಿ ಕಾರ್ಯ ವಿಘ್ನ ತಲೆತೋರೀತು. ಸಕಾಲಿಕ ನೆರವು ದೊರೆಯದೇ ಕೆಲವು ಕಾರ್ಯಗಳನ್ನು ಮುಂದೂಡುವ ಸಾಧ್ಯತೆ.