
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರಮಾಸ,
ಕೃಷ್ಣಪಕ್ಷ, ಏಕಾದಶಿ, ಶನಿವಾರ,
ವಿಶಾಖ ನಕ್ಷತ್ರ/ಅನುರಾಧ ನಕ್ಷತ್ರ
ರಾಹುಕಾಲ: 09:38 ರಿಂದ 11:04
ಗುಳಿಕಕಾಲ: 06:46 ರಿಂದ 8 :12
ಯಮಗಂಡಕಾಲ: 01:56 ರಿಂದ 03:22
ಮೇಷ
ಉದ್ಯೋಗದಲ್ಲಿರುವವರಿಗೆ ಸಣ್ಣಪುಟ್ಟ ಅಡೆತಡೆಗಳು ಉಂಟಾಗುವ ಸಾಧ್ಯತೆ. ಅತಿಯಾದ ಖರ್ಚಿನಿಂದಾಗಿ ಆರ್ಥಿಕ ಸಮತೋಲನ ಕಾಪಾಡಿಕೊಳ್ಳುವ ಸಲುವಾಗಿ ಕಷ್ಟಪಡಬೇಕಾದೀತು. ಗುರು ಆರಾಧನೆ ಶ್ರೇಯಸ್ಸನ್ನು ತರಲಿದೆ.
ವೃಷಭ
ನವ ದಂಪತಿಗಳಿಗೆ ಸಂತಾನ ಭಾಗ್ಯ. ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಯಶಸ್ಸು ದೊರೆತು ಉತ್ತಮ ಫಲಿತಾಂಶ. ಹಣಕಾಸಿನ ವ್ಯವಹಾರ ನಡೆಸುವವರಿಗೆ ಸಣ್ಣ ಪುಟ್ಟ ಅಡೆತಡೆಗಳು ಕಂಡುಬರುತ್ತಿದೆ.
ಮಿಥುನ
ಅಲಂಕಾರಿಕ ವಸ್ತುಗಳನ್ನು ಖರೀದಿಸುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಸಾಧ್ಯತೆ. ಪುಣ್ಯಕ್ಷೇತ್ರಗಳ ಪ್ರವಾಸದಿಂದ ನೆಮ್ಮದಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಅವಶ್ಯ.
ಕಟಕ
ಉತ್ತಮ ಆದಾಯವನ್ನು ನಿರೀಕ್ಷಿಸಬಹುದು. ಹಾಗೆಯೇ ಮನೆಯ ಖರ್ಚುವೆಚ್ಚದಲ್ಲಿಯೂ ಹೆಚ್ಚಳವಾಗುವ ಸಾಧ್ಯತೆ. ಕುಲದೇವತಾರಾಧನೆಯಿಂದ ನೆಮ್ಮದಿ ನಿಮ್ಮದಾಗಲಿದೆ.
ಸಿಂಹ
ವಸ್ತ್ರಾಭರಣಗಳನ್ನು ಖರೀದಿಸುವ ಸಾಧ್ಯತೆ. ಮನೆಯವರೊಂದಿಗೆ ಸಂತಸದ ದಿನವನ್ನು ಅನುಭವಿಸಲಿದ್ದೀರಿ. ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಜವಾಬ್ದಾರಿಯ ಜೊತೆಗೆ ಮೆಚ್ಚುಗೆಯ ಮಾತುಗಳೂ ಲಭ್ಯವಾಗಲಿದೆ.
ಕನ್ಯಾ
ಬಹುದಿನಗಳಿಂದ ವಿಳಂಬವಾಗುತ್ತಿದ್ದ ಕೆಲಸ–ಕಾರ್ಯಗಳು ಅನುಕೂಲಕರವಾಗಿ ಪೂರ್ಣಗೊಳ್ಳಲಿದೆ. ವಾತಪಿತ್ತಗಳಿಂದಾಗಿ ಹಿರಿಯರ ಆರೋಗ್ಯದಲ್ಲಿ ವ್ಯತ್ಯಯ. ಬಂಧು–ಬಾಂಧವರ ಆಗಮನ ಸಾಧ್ಯತೆ.
ತುಲಾ
ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ತೆರೆಯುವ ಸಾಧ್ಯತೆ. ಉದ್ಯೋಗಿಗಳಿಗೆ ಬಡ್ತಿ ವಗೈರೆಯಿಂದಾಗಿ ಕಾರ್ಯಬಾಹುಳ್ಯ ಹೆಚ್ಚಾಗಲಿದೆ. ಕಲಾವಿದರಿಗೆ ಪ್ರತಿಭೆ ಮೆರೆಯುವ ಅವಕಾಶಗಳು ಹೆಚ್ಚಾಗಿವೆ.
ವೃಶ್ಚಿಕ
ಅನೇಕ ದಿನಗಳಿಂದ ಕಾಯ್ದುಕೊಂಡ ಬಂದ ಗುಪ್ತ ವಿಚಾರದಿಂದಾಗಿ ಸ್ವಲ್ಪಮಟ್ಟಿನ ತೊಂದರೆ. ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಾಧ್ಯತೆ. ತಾಳ್ಮೆ-ಸಹನೆಗಳಿಂದಾಗಿ ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು.
ಧನು
ಆಸ್ತಿಗೆ ಸಂಬಂಧಿಸಿದಂತಹ ವ್ಯವಹಾರಗಳ ಬಗ್ಗೆ ಜಾಗೃತೆ ವಹಿಸುವುದು ಉತ್ತಮ. ವಸ್ತು ಒಡವೆಗಳನ್ನು ಖರೀದಿಸುವ ಸಾಧ್ಯತೆ. ಸಾಂಸಾರಿಕ ಸುಖ, ಸಂತೋಷಗಳು ನಿಮ್ಮದಾಗಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮಕರ
ವ್ಯಾಪಾರ, ವ್ಯವಹಾರಗಳಲ್ಲಿ ತೊಡಗಿಕೊಂಡವರಿಗೆ ಉತ್ತಮ ಆದಾಯ. ಆಕಸ್ಮಿಕ ಧನಲಾಭವೂ ಸಾಧ್ಯತೆ. ಕೈಗೊಂಡ ಕಾರ್ಯಗಳ ಬಗ್ಗೆ ಎಚ್ಚರಿಕೆಯ ನಡೆ ಅವಶ್ಯ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ.
ಕುಂಭ
ನಿಮ್ಮ ಕಾರ್ಯ ಚಟುವಟಿಕೆಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಉಂಟಾದರೂ ಎದೆಗುಂದಬೇಕಿಲ್ಲ. ನಿಧಾನವಾದರೂ ಕಾರ್ಯ ಯಶ ಕಾಣಲಿದೆ. ವಿದ್ಯಾರ್ಥಿಗಳಲ್ಲಿ ಆಲಸ್ಯದ ಮನೋಭಾವ. ಕಾರ್ಮಿಕರು, ನೌಕರರಿಗೆ ಬಡ್ತಿ.
ಮೀನ
ಮಹಿಳೆಯರಲ್ಲಿ ವಿನಾಕಾರಣ ಚಿಂತೆಗಳು ತಲೆದೋರುವ ಸಾಧ್ಯತೆ. ಬೇಡದ ವಿಷಯಗಳ ಬಗ್ಗೆ ತಲೆ ಹಾಕದಿರುವುದು ಒಳಿತು. ಆರ್ಥಿಕ ವಿಚಾರದಲ್ಲಿ ಉತ್ತಮ ಪ್ರಗತಿಯನ್ನು ನಿರೀಕ್ಷಿಸಿ.