
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ,
ಕೃಷ್ಣಪಕ್ಷ, ಶುಕ್ರವಾರ,
ಸ್ವಾತಿ ನಕ್ಷತ್ರ / ವಿಶಾಖ ನಕ್ಷತ್ರ
ರಾಹುಕಾಲ: 11:03 ರಿಂದ 12:29
ಗುಳಿಕಕಾಲ: 8:11 ರಿಂದ 09:37
ಯಮಗಂಡಕಾಲ: 3: 21ರಿಂದ 4.47
ಮೇಷ
ಬಹುದಿನಗಳಿಂದ ಬಾಕಿ ಇದ್ದು ಬರಬೇಕಾದ ಹಣ ನಿಮ್ಮ ಕೈ ಸೇರುವ ಲಕ್ಷಣಗಳು ಕಂಡುಬರುತ್ತಿದೆ. ಸಾಂಸಾರಿಕ ನೆಮ್ಮದಿ ನಿಮ್ಮದಾಗಲಿದೆ. ಜೊತೆಗೆ ಮಕ್ಕಳ ಪ್ರೀತಿ ವಿಶ್ವಾಸಗಳು ಹೆಚ್ಚಾಗಿ ಮನೆಯಲ್ಲಿ ಸಂತೋಷ ಮೂಡುವುದು.
ವೃಷಭ
ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಕಂಡುಬಂದರೂ ಹಾನಿ ಸಂಭವಿಸಲಾರದು. ನಿಮ್ಮ ಬಂಧು ಬಾಂಧವರಿಂದ ಒಳ್ಳೆಯ ಅನುಕೂಲ ದೊರೆಯಲಿದೆ. ಉತ್ತಮ ಆರ್ಥಿಕ ಬಲವನ್ನು ರೂಪಿಸಿಕೊಳ್ಳಿ.
ಮಿಥುನ
ಮಾನಸಿಕ ಗೊಂದಲ, ದುಗುಡಗಳಿಂದಾಗಿ ಭಯಪಡುವ ಸಾಧ್ಯತೆ ಕಂಡುಬರುತ್ತಿದ್ದು ಮನಸ್ಸಿಗೆ ಹಿತನೀಡುವ ಸಂಗೀತ, ಧ್ಯಾನಗಳಲ್ಲಿ ಆಸಕ್ತಿ ವಹಿಸಿ. ಸಂಗಾತಿಯ ಮಾತುಗಳಿಗೆ ಮನ್ನಣೆ ನೀಡಿ. ದೇವರ ದರ್ಶನದಿಂದ ನೆಮ್ಮದಿ.
ಕಟಕ
ಸಹನೆ ಕಳೆದುಕೊಂಡು ಮನಸ್ಸಿಗೆ ಕಿರಿಕಿರಿಯನ್ನು ಮಾಡಿಕೊಳ್ಳುವ ಸಾಧ್ಯತೆ. ಬೇರೆಯವರೊಂದಿಗೆ ವ್ಯವಹರಿಸುವಾಗ ವಿವೇಕವನ್ನು ಕಳೆದುಕೊಳ್ಳಬೇಡಿ. ಜಂಟಿ ವ್ಯವಹಾರದಿಂದ ದಿನದಮಟ್ಟಿಗೆ ದೂರವಿರಿ.
ಸಿಂಹ
ಕೆಲಸ–ಕಾರ್ಯಗಳಲ್ಲಿ ಯಶಸ್ಸು. ಆರ್ಥಿಕ ಸುಧಾರಣೆಯನ್ನು ಕಾಣುವಿರಿ. ಸ್ವಂತ ಉದ್ಯಮಿಗಳಿಗೆ ಹೆಚ್ಚಿನ ಆದಾಯ ಬರುವ ಲಕ್ಷಣಗಳು ಹೆಚ್ಚಾಗಿವೆ. ವಿವಾಹ ಮುಂತಾದ ಶುಭ ಸಮಾರಂಬದ ಬಗ್ಗೆ ಚರ್ಚಿಸಲಿದ್ದೀರಿ.
ಕನ್ಯಾ
ಸ್ವಲ್ಪಮಟ್ಟಿನ ಉದರ ಬಾಧೆ ಅಥವಾ ಉಸಿರಾಟದ ತೊಂದರೆ ಸಾಧ್ಯತೆ. ವಾಹನ ಖರೀದಿ ಮತ್ತು ಚಾಲನೆಯಲ್ಲಿ ಚಿಕ್ಕಪುಟ್ಟ ತೊಂದರೆ. ಹಣಕಾಸಿನ ಯಾವುದೇ ತೊಂದರೆ ಇಲ್ಲದೆ ಉಳಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು.
ತುಲಾ
ಇಂದು ನಿಮ್ಮ ಅದೃಷ್ಟವು ಚೆನ್ನಾಗಿದ್ದು ಉದ್ದೇಶಿತ ಕಾರ್ಯಗಳು ಸುಸೂತ್ರವಾಗಿ ನಡೆಯುವುದಲ್ಲದೇ ಉತ್ತಮ ಫಲಿತಾಂಶ ನೀಡಲಿವೆ. ಹೆಚ್ಚು ಮಾತನಾಡದೇ ಕೆಲವೇ ಹಿತಮಿತವಾದ ಮಾತುಗಳಿಂದ ಜನರ ಮನ ಗೆಲ್ಲುವಿರಿ.
ವೃಶ್ಚಿಕ
ಇಂದು ನಿಮಗೆ ಅತ್ಯಂತ ಲಾಭದಾಯಕ ದಿನ. ಹಣಕಾಸಿನ ವಿಚಾರದಲ್ಲಿ ಉತ್ತಮ ಸಂಪಾದನೆ ನಿಮ್ಮದಾಗಲಿದೆ. ಮಕ್ಕಳಿಂದ ಉತ್ತಮ ಪ್ರಗತಿಯನ್ನು ನಿರೀಕ್ಷಿಸಬಹುದು. ಕೌಟುಂಬಿಕ ಶಾಂತಿ ನೆಲೆಸಲಿದೆ.
ಧನು
ಇಂದು ಹೆಚ್ಚಿನ ಆದಾಯವನ್ನು ನಿರೀಕ್ಷಿಸುವುದರ ಜೊತೆಗೆ ಉತ್ತಮ ಆರೋಗ್ಯವನ್ನೂ ಹೊಂದುವಿರಿ. ಕೋರ್ಟ್ ಕಚೇರಿಗಳಲ್ಲಿನ ಕಟ್ಟಳೆಗಳು ನಿಮಗೆ ಉತ್ತಮ ಫಲಿತಾಂಶ ತಂದುಕೊಡಲಿವೆ.
ಮಕರ
ವಿವಿಧ ಮೂಲಗಳಿಂದ ಆರ್ಥಿಕ ಸಂಪನ್ಮೂಲಗಳು ಕೂಡಿಬಂದು ಉತ್ತಮ ಆದಾಯ ತರಲಿವೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತವಾಗುವ ಲಕ್ಷಣಗಳು ಕಂಡುಬರುತ್ತಿವೆ.
ಕುಂಭ
ಯಾವುದೇ ವೈಮನಸ್ಸುಗಳು ವಿಕೋಪಕ್ಕೆ ಹೋಗದಂತೆ ಎಚ್ಚರಿಕೆ ವಹಿಸಿ. ಬೇರೆಯವರ ವ್ಯವಹಾರಗಳಲ್ಲಿ ಆಸಕ್ತಿ ವಹಿಸದೇ ಇರುವುದು ಒಳ್ಳೆಯದು. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ.
ಮೀನ
ಬೇರೆಯವರ ಹಣಕಾಸಿನ ವಿಚಾರದಲ್ಲಿ ಜಾಮೀನು ಹಾಕುವುದು, ಮಧ್ಯಸ್ಥಿಕೆ ವಹಿಸುವುದು ಅಷ್ಟೊಂದು ಶ್ರೇಯಸ್ಸಲ್ಲ. ಕೆಲಸ–ಕಾರ್ಯಗಳಲ್ಲಿ ಅಡಚಣೆಗಳು ಕಂಡುಬಂದು ನಿಧಾನಗತಿಯಲ್ಲಿ ಸಾಗುವವು.