
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ,
ಕೃಷ್ಣಪಕ್ಷ, ನವಮಿ, ಗುರುವಾರ,
ಚಿತ್ತಾ ನಕ್ಷತ್ರ / ಸ್ವಾತಿ ನಕ್ಷತ್ರ,
ರಾಹುಕಾಲ: 1 :55 ರಿಂದ 03:21
ಗುಳಿಕಕಾಲ: 9:30 ರಿಂದ 11:03
ಯಮಗಂಡಕಾಲ: 06:46 ರಿಂದ 08:11
ಮೇಷ
ಮಾಡುವ ಕೆಲಸವನ್ನು ಸರಿಯಾಗಿ ಯೋಚಿಸಿ ಮಾಡುವುದು ಉತ್ತಮ. ಉದ್ಯೋಗಸ್ಥರಿಗೆ ನಷ್ಟ ಸಂಭವ. ಸಂತಾನ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ. ವಾಹನ ಚಾಲನೆಯಲ್ಲಿ ಅತ್ಯಂತ ಜಾಗರೂಕರಾಗಿರುವುದು ಉತ್ತಮ.
ವೃಷಭ
ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡವರು ವಿರೋಧವನ್ನು ಎದುರಿಸಬೇಕಾದೀತು. ಕೆಟ್ಟ ಮಾತುಗಳಿಗೆ ಕಿವಿಗೊಡದೆ ಸಮಾಧಾನಚಿತ್ತರಾಗಿರಿ. ಸಂಗೀತ, ಧಾರ್ಮಿಕ ಗ್ರಂಥ ಪಠಣದಿಂದ ನೆಮ್ಮದಿ.
ಮಿಥುನ
ವಿದೇಶ ಪ್ರಯಾಣ ಯೋಗ ನಿಮ್ಮದಾಗುವ ಸಾಧ್ಯತೆ. ಅನುಚಿತ ಮಾರ್ಗದಿಂದ ಹಣ ಸಂಪಾದನೆಗೆ ಮನಸ್ಸು ಮಾಡದಿರುವುದು ಒಳಿತು. ಜನಪ್ರತಿನಿಧಿಗಳಿಗೆ ಆರೋಗ್ಯದಲ್ಲಿ ಹೆಚ್ಚಿನ ವ್ಯತ್ಯಯ.
ಕಟಕ
ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಸ್ವಲ್ಪಮಟ್ಟಿನ ಕಿರಿಕಿರಿಯಾದರೂ, ಸಹೋದ್ಯೋಗಿಗಳ ಸಕಾಲಿಕ ನೆರವಿನಿಂದ ನೆಮ್ಮದಿ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಸಿಂಹ
ಅತಿಯಾದ ಕೋಪದಿಂದಾಗಿ ಆರೋಗ್ಯ ಕೆಡುವ ಸಾಧ್ಯತೆ. ವಿವಾಹ ಸಂಬಂಧಗಳು ಕೂಡಿಬರಲಿದೆ. ಇಂದಿನ ಪ್ರಯಾಣವು ಸುಖ ನೆಮ್ಮದಿಯನ್ನು ನೀಡಲಿದೆ. ಕೌಟುಂಬಿಕ ಗೌರವಕ್ಕೆ ಪಾತ್ರರಾಗುವಿರಿ.
ಕನ್ಯಾ
ಉತ್ತಮ ಕೆಲಸಗಳನ್ನು ಕೈಗೊಳ್ಳುವಿರಿ. ಸಾಕಷ್ಟು ಯೋಚಿಸಿ ಮುಂದಡಿ ಇಡುವುದರಿಂದ ಹೆಚ್ಚಿನ ಪ್ರಗತಿ. ಚಿನ್ನ ವಜ್ರಾಭರಣಗಳ ವ್ಯಾಪಾರಿಗಳಿಗೆ ವಿಶೇಷ ಲಾಭದ ನಿರೀಕ್ಷೆ. ದೇವಾಲಯ ದರ್ಶನಕ್ಕಾಗಿ ಪ್ರಯಾಣ ಮಾಡಲಿದ್ದೀರಿ.
ತುಲಾ
ಸರ್ಕಾರಿ ನೌಕರರಿಗೆ ಸ್ವಲ್ಪಮಟ್ಟಿನ ಕಿರಿಕಿರಿ. ಬೇಡದ ಸಮಸ್ಯೆಯಿಂದಾಗಿ ದಿನವಿಡೀ ಚಿಂತೆ. ಬಟ್ಟೆ, ನೂಲು ವ್ಯಾಪಾರಸ್ಥರಿಗೆ ಹೆಚ್ಚಿನ ಆದಾಯ. ಸಂಗಾತಿಯಿಂದ ಧೈರ್ಯ ತುಂಬಿದ ನೆಮ್ಮದಿಯ ಮಾತುಗಳು.
ವೃಶ್ಚಿಕ
ಕಲಾವಿದರಿಗೆ ಉತ್ತಮವಾದ ದಿನವಾಗಿದ್ದು ಹೆಚ್ಚಿನ ಆದಾಯವನ್ನು ಗಳಿಸುವ ಸಾಧ್ಯತೆ. ಬಂಧುಗಳ ಸಹಕಾರದಿಂದ ಹೊಸ ಉದ್ಯಮವೊಂದಕ್ಕೆ ಯೋಜನೆ ಸಿದ್ಧಪಡಿಸಲಿದ್ದೀರಿ. ಹೊಸ ಮನೆ ಖರೀದಿಸುವ ಸಾಧ್ಯತೆ.
ಧನು
ಸಂತಾನ ಭಾಗ್ಯವು ನಿಮ್ಮದಾಗಲಿದೆ. ದೂರದ ಸಂಬಂಧಿಗಳ ನೆರವಿನಿಂದಾಗಿ ವಿವಾಹಾಕಾಂಕ್ಷಿಗಳಿಗೆ ವಿವಾಹ ಸಂಬಂಧ ಕೂಡಿಬರಲಿದೆ. ಹೊಸ ಯೋಜನೆಗೆ ನಾಂದಿ ಹಾಡಲಿದ್ದೀರಿ. ವಸ್ತ್ರಾಭರಣ ಖರೀದಿ ಸಾಧ್ಯತೆ.
ಮಕರ
ನಿಮ್ಮ ಸಾಮಾಜಿಕ ಕಾರ್ಯಗಳಿಗೆ ಹೆಚ್ಚಿನ ಬೆಂಬಲ ದೊರೆತು ಗೌರವಾದರಗಳನ್ನು ಸಂಪಾದಿಸುವ ಅವಕಾಶ ದೊರಕುತ್ತಿದೆ. ನೌಕರವರ್ಗದವರಿಗೆ ಸ್ಥಳ ಬದಲಾವಣೆಯ ಸೂಚನೆ.
ಕುಂಭ
ರೈತಾಪಿವರ್ಗದವರಿಗೆ ಬಿಡುವಿನ ದಿನ. ವಿಶೇಷವಾಗಿ ಮಕ್ಕಳ ನಡವಳಿಕೆಯ ಬಗ್ಗೆ ಗಮನ ವಹಿಸುವುದು ಸೂಕ್ತ. ವ್ಯವಹಾರದಲ್ಲಿ ಬಂಧುಗಳ ಅದರಲ್ಲೂ ಸೋದರ ಸಂಬಂಧಿಗಳಿಂದ ಉತ್ತಮ ಸಹಾಯ ಸಹಕಾರ.
ಮೀನ
ವಿದೇಶ ಪ್ರಯಾಣದ ಯೋಗ. ವ್ಯವಹಾರದಲ್ಲಿ ತೊಡಗಿದವರಿಗೆ ಮೋಸದ ಅನುಭವವಾದೀತು. ಎಚ್ಚರಿಕೆಯ ನಡೆಯಿಂದಾಗಿ ಕಾರ್ಯಸಿದ್ಧಿ. ಮಕ್ಕಳ ಪ್ರಗತಿ ನೆಮ್ಮದಿ ತರಲಿದೆ. ಸಂತೋಷದ ಸುದ್ದಿಯನ್ನು ಕೇಳಲಿದ್ದೀರಿ.