Design a site like this with WordPress.com
Get started

ಜನವರಿ 06, ಬುಧವಾರ, 2021 ; ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಹೇಮಂತ ಋತು,
ಮಾರ್ಗಶಿರ ಮಾಸ, ಕೃಷ್ಣಪಕ್ಷ.
ವಾರ: ಬುಧವಾರ, ತಿಥಿ: ಅಷ್ಟಮಿ
ನಕ್ಷತ್ರ: ಹಸ್ತ
ರಾಹುಕಾಲ: 12.29 ರಿಂದ 1.54
ಗುಳಿಕ ಕಾಲ: 11.03 ರಿಂದ 12.29
ಯಮಗಂಡಕಾಲ: 8.11 ರಿಂದ 9.37

ಮೇಷ

ಸಾರ್ವಜನಿಕ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವ ಸಾಧ್ಯತೆ ಇದೆ. ವೈಯಕ್ತಿಕವಾದ ಕೆಲಸಗಳಲ್ಲಿ ಅನಾಸಕ್ತಿ ತೋರುವ ಸಾಧ್ಯತೆ. ಮನೆಯವರ ಅವಕೃಪೆಗೆ ಪಾತ್ರರಾಗುವ ಸಂಭವ. ದೂರ ಪ್ರಯಾಣ ಮಾಡಲಿದ್ದೀರಿ.

ವೃಷಭ

ಮಂಗಳಕಾರ್ಯದ ಬಗ್ಗೆ ಬಂಧುಗಳೊಂದಿಗೆ ಚರ್ಚಿಸಲಿದ್ದೀರಿ. ದ್ರವರೂಪದ ವಸ್ತುಗಳ ವ್ಯಾಪಾರಸ್ಥರಿಗೆ ಹೆಚ್ಚಿನ ಆದಾಯ. ಮಹಿಳೆಯರಿಗೆ ಸ್ವಲ್ಪಮಟ್ಟಿನ ಅನಾರೋಗ್ಯದ ಲಕ್ಷಣಗಳು ಕಾಣುತ್ತಿವೆ.

ಮಿಥುನ

ಸರ್ಕಾರಿ ನೌಕರರಿಗೆ ಬಿಡುವಿಲ್ಲದ ದಿನ. ಹೆಚ್ಚಿನ ವರಮಾನವನ್ನು ನಿರೀಕ್ಷಿಸಬಹುದಾಗಿದೆ. ಹೊಸ ಯೋಜನೆಯೊಂದನ್ನು ಕೈಗೊಳ್ಳುವ ಸಾಧ್ಯತೆ. ಮಕ್ಕಳ ಆರೋಗ್ಯದ ವಿಚಾರದಲ್ಲಿ ಕಾಳಜಿ ಇರಲಿ.

ಕಟಕ

ಹೊಸ ಸಂಬಂಧವೊಂದನ್ನು ಹೊಂದಿಸಿಕೊಳ್ಳುವ ಸಾಧ್ಯತೆ. ಮಕ್ಕಳ ವಿವಾಹದ ಚಿಂತೆ ನಿವಾರಣೆಯಾಗುವ ಸಾಧ್ಯತೆ. ಬಂಧುಗಳ ಸಹಕಾರದಿಂದ ಕಾರ್ಯಸಿದ್ಧಿಯನ್ನು ಕಾಣುವಿರಿ. ಆರೋಗ್ಯದ ಬಗ್ಗೆ ಸ್ವಲ್ಪಮಟ್ಟಿನ ಕಾಳಜಿ ಅಗತ್ಯ.

ಸಿಂಹ

ಸಂಭ್ರಮದ ದಿನವನ್ನಾಗಿ ಆಚರಿಸುವ ಸಾಧ್ಯತೆ. ವಿಶೇಷವಾಗಿ ಬಂಧು ಬಾಂಧವರೊಂದಿಗೆ ಭೋಜನಕೂಟಗಳಲ್ಲಿ ಭಾಗವಹಿಸುವಿರಿ. ಸಂಜೆಯ ವೇಳೆಗೆ ಸ್ವಲ್ಪಮಟ್ಟಿನ ಆಯಾಸ. ಸಂಗಾತಿಯ ಸಕಾಲಿಕ ನೆರವು.

ಕನ್ಯಾ

ಅವಿವಾಹಿತರಿಗೆ ವಿವಾಹ ಕಾಲ ಕೂಡಿಬರುವ ಸಾಧ್ಯತೆ. ನೆನೆಗುದಿಗೆ ಬಿದ್ದ ಅನೇಕ ಕೆಲಸಗಳು ಕೈಗೂಡುವ ಲಕ್ಷಣಗಳು ಗೋಚರಿಸುತ್ತಿದೆ. ಹೊಸ ವ್ಯವಹಾರದಲ್ಲಿ ತೊಡಗುವುದಕ್ಕೂ ಸಕಾಲವಾಗಿ.

ತುಲಾ

ಆಸ್ತಿ ಖರೀದಿಯ ಬಗ್ಗೆ ಅಥವಾ ಹೊಸ ಉದ್ಯಮವೊಂದನ್ನು ಆರಂಭಿಸುವ ಬಗ್ಗೆ ಉತ್ಸಾಹದಿಂದ ತೊಡಗಿಕೊಳ್ಳುವಿರಿ. ದೇವತಾರಾಧನೆಯನ್ನು ನೆರವೇರಿಸುವ ಸಾಧ್ಯತೆ. ಹಿರಿಯರಿಗೆ ಆರೋಗ್ಯ ಸಮಸ್ಯೆ ಕಾಡಲಿದೆ.

ವೃಶ್ಚಿಕ

ಇಂದು ನಿಮಗೆ ಶುಭಶಕುನಗಳೇ ಹೆಚ್ಚಾಗಿ ಕಂಡುಬರುತ್ತಿವೆ. ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು. ಅಪಕೀರ್ತಿ ತರುವ ಘಟನೆಗಳು ನಡೆಯುವ ಸಾಧ್ಯತೆ. ಎಚ್ಚರಿಕೆಯ ನಡೆ ಅವಶ್ಯ.

ಧನು

ರಾಜಕಾರಣಿಗಳಿಗೆ ಇಬ್ಬಂದಿತನ ಕಾಡುತ್ತದೆ. ನಿರ್ಧಾರಕ್ಕೆ ಬರುವಲ್ಲಿ ಆತುರತೆ ಬೇಡ. ತಾಳ್ಮೆಯ ನಡೆ ಉತ್ತಮ ನಡೆಯಾಗಲಿದೆ. ಹೊಸ ವಸ್ತ್ರ, ಒಡವೆಗಳ ಖರೀದಿ ಯೋಗ. ಆರ್ಥಿಕ ಅನುಕೂಲತೆಗಳು ಒದಗಿಬರಲಿವೆ.

ಮಕರ

ವ್ಯಾಪಾರ, ವ್ಯವಹಾರಗಳಲ್ಲಿ ತೊಡಗಿದವರಿಗೆ ಸ್ವಲ್ಪಮಟ್ಟಿನ ಹಿನ್ನಡೆ. ಮನೆಯಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳುವ ಸಾಧ್ಯತೆ ಕಂಡುಬರುತ್ತಿದೆ. ಅಪರೂಪದ ಸ್ನೇಹಿತರೊಂದಿಗೆ ಸಂಭ್ರಮಿಸಲಿದ್ದೀರಿ.

ಕುಂಭ

ಬಿಡುವಿಲ್ಲದ ಕಾರ್ಯಬಾಹುಳ್ಯವನ್ನು ನಿರ್ವಹಿಸಬೇಕಾದೀತು. ದೂರದ ಪ್ರಯಾಣ ಯೋಜನೆಯು ಮುಂದಕ್ಕೆ ಹಾಕಲ್ಪಡಬಹುದು. ಅನಿರೀಕ್ಷಿತ ಆದಾಯವನ್ನು ಪಡೆದುಕೊಳ್ಳುವಿರಿ.

ಮೀನ

ಇಂದು ವಾಹನ, ಯಂತ್ರೋಪಕರಣ ಮುಂತಾದ ಚಲನಶೀಲ ಆಸ್ತಿಯನ್ನು ಖರೀದಿಸುವ ಸಾಧ್ಯತೆ. ರೈತಾಪಿ ವರ್ಗದವರಿಗೆ ಸ್ವಲ್ಪಮಟ್ಟಿನ ಆತಂಕದ ದಿನ. ಇಷ್ಟದೇವತಾ ದರ್ಶನಕ್ಕೆ ಮನ ಮಾಡಲಿದ್ದೀರಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: