Design a site like this with WordPress.com
Get started

ಜನವರಿ 04,ಸೋಮವಾರ,2021; ಇಂದಿನ ರಾಶಿಭವಿಷ್ಯ

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ. ವಾರ : ಸೋಮವಾರ,
ತಿಥಿ : ಪಂಚಮಿ, ನಕ್ಷತ್ರ : ಪುಬ್ಬ,

ರಾಹುಕಾಲ: 8.10 ರಿಂದ 9.36
ಗುಳಿಕಕಾಲ: 1.54 ರಿಂದ 3.20
ಯಮಗಂಡಕಾಲ: 11.02 ರಿಂದ 12.28

ಮೇಷ

ವಿವಾದ, ತಗಾದೆಗಳಿಂದ ಮುಕ್ತರಾಗಿ ನಿರಾಳರಾಗುವಿರಿ. ಹಿರಿಯರಿಗೆ ಆರೋಗ್ಯದಲ್ಲಿ ಕಿರಿಕಿರಿ ಸಂಭವ. ವೈದ್ಯರ ಸಲಹೆಯಂತೆ ನಡೆಯುವುದು ಉತ್ತಮ. ನೆಮ್ಮದಿಗಾಗಿ ಕುಲದೇವತಾ ಆರಾಧನೆ ಮಾಡಿ.

ವೃಷಭ

ಕುಟುಂಬದಲ್ಲಿ ಸಾಮರಸ್ಯ. ವೃತ್ತಿಯಲ್ಲಿ ಬದಲಾವಣೆ ಸಾಧ್ಯತೆ. ಮಕ್ಕಳು ತರುವ ಸಿಹಿಸುದ್ದಿಯಿಂದಾಗಿ ನೆಮ್ಮದಿ ನೆಲೆಸುವುದು. ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ತೊಂದರೆ, ತೊಡಕುಗಳು ಎದುರಾಗುವ ಸಾಧ್ಯತೆ.

ಮಿಥುನ

ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಮುಖ ದಿನವಾಗಿದ್ದು, ಅಧ್ಯಯನದಲ್ಲಿ ಆಸಕ್ತಿ ಉಂಟಾಗುವುದು. ಸಹೋದರರಿಂದ ಸಹಕಾರದ ನಿರೀಕ್ಷೆ. ಹೊಸ ಮನೆಯನ್ನು ಕಟ್ಟಲು ಪ್ರಾರಂಭಿಸುವ ಸಾಧ್ಯತೆ.

ಕಟಕ

ಸ್ವಜನರಿಂದಲೇ ಮೋಸ ಹೋಗುವ ಸಾಧ್ಯತೆಗಳು ಕಂಡುಬರುತ್ತಿದೆ ಎಚ್ಚರಿಕೆ ಅಗತ್ಯ. ಸಹೋದರ–ಸಹೋದರಿಯರ ಸಹಕಾರ ದೊರೆತು ಬಾಂಧವ್ಯ ವೃದ್ಧಿಯಾಗಲಿದೆ. ಸಂತೃಪ್ತ ದಾಂಪತ್ಯ ಜೀವನ ನಿಮ್ಮದಾಗಲಿದೆ.

ಸಿಂಹ

ಆತ್ಮೀಯರ ಭೇಟಿಯಾಗುವ ಯೋಗವಿದೆ. ದಿನವಿಡೀ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉತ್ಸಾಹ, ಲವಲವಿಕೆಗಳಿಂದ ಕಳೆಯುವಿರಿ. ಒತ್ತಡದ ನಿವಾರಣೆಗೆ ಗುರು ಆರಾಧನೆ ಮಾಡುವುದು ಸೂಕ್ತ.

ಕನ್ಯಾ

ನಿಮ್ಮ ಬೇಜವಾಬ್ದಾರಿತನದಿಂದಾಗಿ ನಷ್ಟ ಅನುಭವಿಸುವ ಸಾಧ್ಯತೆಯಿದ್ದು ಆಲಸ್ಯ ಸಲ್ಲ. ಅಹಂಭಾವವನ್ನು ತೊಡೆದು ಎಲ್ಲರೊಂದಿಗೆ ಬೆರೆತು ಸಂತಸದ ದಿನವನ್ನಾಗಿಸಿಕೊಳ್ಳಿ. ಉತ್ತಮ ನಡತೆಯಿಂದಾಗಿ ಗೌರವ.

ತುಲಾ

ನೆರೆಹೊರೆಯವರೊಂದಿಗೆ ಹೊಂದಾಣಿಕೆಯಿಂದಿರುವುದು ಉತ್ತಮ. ತಾಳ್ಮೆಯಿಂದಾಗಿ ವಿನಾಕಾರಣ ಎದುರಾಗುವ ವೈಷಮ್ಯ ನಿವಾರಣೆ. ಪ್ರಯಾಣದಲ್ಲಿ ತೊಂದರೆ. ಉದ್ಯೋಗದಲ್ಲಿನ ತೊಡಕುಗಳು ನಿವಾರಣೆ. ‌

ವೃಶ್ಚಿಕ

ನಿಮ್ಮವರೇ ನಿಮಗೆ ದ್ರೋಹ ಮಾಡುವ ಸಾಧ್ಯತೆ ಇದೆ. ಕುಟುಂಬದವರ ಸಹಕಾರ ದೊರೆಯಲಿದೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ಇಷ್ಟದೇವರ ಆರಾಧನೆ ಮಾಡಿ.

ಧನು

ಅನ್ಯರ ಸಮಸ್ಯೆಗಳಿಗೆ ಸ್ಪಂದಿಸುವಿರಿ. ಸಂಕಷ್ಟಗಳ ಉತ್ತಮ ನಿರ್ವಹಣೆಯಿಂದಾಗಿ ಪ್ರಶಂಸೆಗೆ ಪಾತ್ರರಾಗುವಿರಿ. ಹೊಸ ಹೊಸ ವಿಚಾರಗಳನ್ನು ಕಲೆ ಹಾಕುವುದರಿಂದ ಸಂತೃಪ್ತಿ.

ಮಕರ

ಸಮಾಧಾನದ ವರ್ತನೆಯಿಂದಾಗಿ ಒದಗಬಹುದಾದ ಕೌಟುಂಬಿಕ ಹಾಗೂ ಕಾರ್ಯಕ್ಷೇತ್ರಗಳಲ್ಲಿನ ತೊಂದರೆಗಳಿಂದ ಮುಕ್ತರಾಗುವಿರಿ. ವಿಶೇಷ ಮನ್ನಣೆಗೆ ಪಾತ್ರರಾಗುವಿರಿ.

ಕುಂಭ

ಅನ್ಯಮಾರ್ಗದ ದುಡಿಮೆಯ ಕಡೆಗೆ ಮುಖ ಮಾಡಬೇಡಿ. ನ್ಯಾಯಮಾರ್ಗದ ದುಡಿಮೆ ಶ್ರೇಯಸ್ಸನ್ನು ತರಲಿದೆ. ನ್ಯಾಯಾಲಯದ ಕಾಗದ, ಪತ್ರಗಳು ಇತ್ಯಾದಿ ಅಮೂಲ್ಯ ಆಸ್ತಿಯ ಬಗ್ಗೆ ಕಾಳಜಿ ಅಗತ್ಯ.

ಮೀನ

ಸ್ವಯಂ ಉದ್ಯೋಗಿಗಳಿಗೆ ಶುಭ ದಿನ. ಉತ್ತಮ ಆದಾಯದಿಂದಾಗಿ ಭದ್ರತೆ, ನೆಮ್ಮದಿಯು ನಿಮ್ಮ ಪಾಲಿಗೆ ದೊರಕಲಿದೆ. ಹೊಸ ಸಂಬಂಧಗಳು ನಿಮ್ಮನ್ನರಸಿ ಬರಬಹುದು. ಹೊಸ ಯೋಜನೆ ಕೈಗೊಳ್ಳಲು ಸೂಕ್ತ ಕಾಲ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: