
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಹೇಮಂತ ಋತು,
ಮಾರ್ಗಶಿರ ಮಾಸ, ಕೃಷ್ಣ ಪಕ್ಷ.
ವಾರ: ಭಾನುವಾರ, ತಿಥಿ: ಚತುರ್ಥಿ,
ನಕ್ಷತ್ರ: ಮಖ,
ರಾಹುಕಾಲ: 4.45 ರಿಂದ 6.10
ಗುಳಿಕಕಾಲ: 3.19 ರಿಂದ 4.45
ಯಮಗಂಡಕಾಲ: 12.28 ರಿಂದ 1.53
ಮೇಷ
ಬದುಕಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಅತಿ ಮಹತ್ವದ ತೀರ್ಮಾನ ಕೈಗೊಳ್ಳುವಿರಿ. ಅಪೇಕ್ಷಿತರ ಭೇಟಿಯ ಸಾಧ್ಯತೆ. ಒಪ್ಪಂದ ವಿಚಾರಗಳಲ್ಲಿ ಯಶಸ್ಸನ್ನು ಸಾಧಿಸುವಿರಿ.
ವೃಷಭ
ಹೊಸ ಹೊಸ ಆದಾಯದ ದಾರಿಯಿಂದಾಗಿ ಮಾನಸಿಕ ನೆಮ್ಮದಿ. ರಾಜಕೀಯದಲ್ಲಿ ಹೊಸ ಮಾರ್ಗ ಗೋಚರವಾಗಲಿದೆ. ಹೊಸ ಹೊಸ ಯೋಜನೆಗಳ ರೂಪುರೇಷೆಗಳನ್ನು ರಚಿಸಲು ಉತ್ತಮ ಕಾಲ.
ಮಿಥುನ
ಗುರಿಸಾಧನೆಗಾಗಿ ತಾಳ್ಮೆ ವಹಿಸುವುದು ಉತ್ತಮ. ವೃತ್ತಿ ಜೀವನದಲ್ಲಿನ ತೊಡಕಿನ ನಿವಾರಣೆಗಾಗಿ ಸಹಾಯ ಪಡೆಯುವ ಸಾಧ್ಯತೆ. ತೊಡಕಿನ ನಿವಾರಣೆಗಾಗಿ ಯೋಗ್ಯ ನಿರ್ಣಯ ಕೈಗೊಳ್ಳುವ ಸಾಧ್ಯತೆ.
ಕಟಕ
ಹುಚ್ಚು ಓಟದಿಂದ ಕೂಡಿದ ವ್ಯಾಪಾರ ವ್ಯವಹಾರಗಳು ಒಂದು ಹಂತಕ್ಕೆ ಬರಲಿವೆ. ಜವಾಬ್ದಾರಿಯ ಸ್ಥಾನವೊಂದನ್ನು ಅಲಂಕರಿಸಬೇಕಾದೀತು. ಆತ್ಮವಿಶ್ವಾಸದಿಂದಾಗಿ ಜೀವನದ ದಿಕ್ಕು ಬದಲಾವಣೆ.
ಸಿಂಹ
ಕೈಗೊಂಡ ದೊಡ್ಡ ದೊಡ್ಡ ಯೋಜನೆಗಳಿಗೆ ವಿಘ್ನಗಳುಂಟಾಗದಂತೆ ಎಚ್ಚರಿಕೆ ಅಗತ್ಯ. ಗಂಭೀರ ನಡವಳಿಕೆಯಿಂದ ಉನ್ನತ ವ್ಯಕ್ತಿತ್ವದ ನಿರ್ಮಾಣ. ಅಧಿಕಾರ ಗೌರವ ಲಾಭವು ಉಂಟಾಗಲಿದೆ.
ಕನ್ಯಾ
ಇಚ್ಛಾಶಕ್ತಿಯ ಬಲದಿಂದಾಗಿ ಕೈಗೊಂಡ ಯೋಜನೆಗಳು ಉತ್ತಮ ಹಂತವನ್ನು ತಲುಪಿ ಹೆಚ್ಚಿನ ಸಮಾಧಾನ ದೊರೆಯಲಿದೆ. ನೆರೆಹೊರೆಯವರೊಡನೆ ಉತ್ತಮ ಬಾಂಧವ್ಯ ವೃದ್ಧಿ. ಸೂರ್ಯನ ಆರಾಧನೆಯಿಂದ ಹೆಚ್ಚಿನ ಯಶಸ್ಸು.
ತುಲಾ
ಚುರುಕಿನಿಂದ ಕಾರ್ಯಪ್ರವೃತ್ತರಾಗಿ ಯಶಸ್ಸನ್ನು ಗಳಿಸುವಿರಿ. ಉದಾಸೀನತೆ ಯಾವುದೇ ಕಾರಣಕ್ಕೂ ಸಲ್ಲದು. ಸಕಾಲದಲ್ಲಿ ಆದಾಯದಲ್ಲಿ ವೃದ್ಧಿಯಾಗಿ ತೃಪ್ತಿಯ ಹಿತಾನುಭವ ಅನುಭವಿಸುವಿರಿ.
ವೃಶ್ಚಿಕ
ಜಾಣ್ಮೆಯಿಂದ ಕಷ್ಟಸಾಧ್ಯವಾದುದರ ಸಾಧನೆ. ಅಧಿಕಾರ ಪ್ರಾಪ್ತಿಯ ಜೊತೆಗೆ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡಿ ತೃಪ್ತಿ ಹೊಂದುವಿರಿ. ಆಸೆ ಆಕಾಂಕ್ಷೆಗಳು ನೆರವೇರಿದ ಸಂಭ್ರಮ. ಮನೆಯಲ್ಲಿ ಸಂತೋಷದ ವಾತಾವರಣ.
ಧನು
ಅತ್ಯಂತ ಶುಭದಿನವಾಗಿದ್ದು, ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ಹಿಂಜರಿಕೆಯಿಲ್ಲದೆ ಮುನ್ನಡೆ ಅನುಭವಿಸುವಿರಿ. ಮೃದುವಾದ ಮಾತುಗಳ ಮೂಲಕ ಮುಕ್ತ ಚರ್ಚೆಗಳಲ್ಲಿ ಭಾಗವಹಿಸುವಿರಿ.
ಮಕರ
ವಿರೋಧಿಗಳ ಸಂಚು ಫಲಿಸದು. ಸಮಸ್ಯೆಗಳಿಂದ ಹೊರಬರುವುದಕ್ಕಾಗಿ ಇಮ್ಮಡಿ ಉತ್ಸಾಹದಿಂದ ಮುನ್ನುಗ್ಗಿ. ನಿರಾಶರಾಗದೆ ಆಶಾವಾದ ಬೆಳೆಸಿಕೊಳ್ಳುವುದು ಉತ್ತಮ. ಹಿರಿಯರ ಹಿತವಚನಗಳನ್ನು ಗೌರವಿಸಿ.
ಕುಂಭ
ವೃತ್ತಿಯಲ್ಲಿ ನಿರೀಕ್ಷಿತ ಬದಲಾವಣೆ ಕಂಡುಬರಬಹುದು. ಆಸೆಪಟ್ಟು ನಿರ್ವಹಿಸಿದ ಕೆಲಸಕಾರ್ಯಗಳು ಸುಗಮವಾಗಿ ನೆರವೇರುವುದು. ಅನಗತ್ಯ ಭಯದಿಂದ ಮುಕ್ತರಾಗಿ ನಿರಾಳತೆ ಕಂಡುಬರುವುದು.
ಮೀನ
ಸಹೋದ್ಯೋಗಿಗಳ ಇಚ್ಛೆ ಪೂರೈಕೆಗಾಗಿ ಶಕ್ತಿಮೀರಿ ಶ್ರಮ ವಹಿಸುವಿರಿ. ಕೆಲಸ ಕಾರ್ಯಗಳಲ್ಲಿ ಒತ್ತಡ ವಿಲ್ಲದ ನಿರಾಳತೆ. ದೂರಾಲೋಚನೆಯಿಂದಾಗಿ ಸಂಭವಿಸಬಹುದಾದ ಅವಘಡಗಳಿಂದ ಪಾರಾಗುವಿರಿ.