Design a site like this with WordPress.com
Get started

ಜನವರಿ 02, ಶನಿವಾರ; 2021 : ಇಂದಿನ ರಾಶಿಭವಿಷ್ಯ

ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹಿಮಂತ ಋತು, ಕೃಷ್ಣಪಕ್ಷ,
ತೃತೀಯ / ಚತುರ್ಥಿ,
ಶನಿವಾರ “ಆಶ್ಲೇಷ ನಕ್ಷತ್ರ”

ರಾಹುಕಾಲ: 9:35 ರಿಂದ 11:01
ಗುಳಿಕಕಾಲ: 06:44 ರಿಂದ 08:09
ಯಮಗಂಡಕಾಲ: 01:52 ರಿಂದ 3:18

ಮೇಷ

ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಗುರಿಯನ್ನು ನಿರಾಯಾಸವಾಗಿ ತಲುಪುವಿರಿ. ಕಾರ್ಯತತ್ಪರತೆಯಿಂದ ಹಿಂಜರಿಯದಿರಿ. ಉನ್ನತಾಧಿಕಾರಿಗಳಿಂದ ಪ್ರಶಂಸೆ. ಸಹೋದ್ಯೋಗಿಗಳಿಂದ ಕೊಂಕು ಮಾತನ್ನು ಎದುರಿಸಬೇಕಾದೀತು.

ವೃಷಭ

ಧಾರ್ಮಿಕ, ಸಾಮಾಜಿಕ ಚಿಂತನೆಗಳತ್ತ ಮನಸ್ಸನ್ನು ಹರಿಯ ಬಿಡುವ ಸಾಧ್ಯತೆ. ಜೀವನದ ಅರ್ಥ, ಮರ್ಮಗಳಿಗಾಗಿ ಹುಡುಕಾಟ ಪ್ರಾರಂಭವಾಗುವುದು. ಅಧ್ಯಯನಶೀಲರಿಗೆ ಯಶಸ್ಸಿನ ಗರಿ.

ಮಿಥುನ

ಕೆಲಸದ ಒತ್ತಡಕ್ಕೆ ಹೆದರಿ ವಿಮುಖರಾಗದಿರಿ. ಸರ್ಕಾರಿ ಕೆಲಸದಲ್ಲಿರುವವರಿಗೆ ನೌಕರಿಗೆ ರಾಜೀನಾಮೆಯಂತಹ ಪರಿಸ್ಥಿತಿ ತಲೆದೋರಬಹುದು. ದುಡುಕದೇ ಧೈರ್ಯವಾಗಿ ಮುನ್ನುಗ್ಗಿ. ಯಶಸ್ಸು ನಿಮ್ಮದಾಗಲಿದೆ.

ಕಟಕ

ನೀವು ಯೋಜಿಸಿದ ಮಹತ್ತರ ಯೋಜನೆಗಳ ಬಗ್ಗೆ ಹಿತೈಷಿಗಳೆದುರು ಪ್ರಸ್ತಾಪಿಸಿ. ಉತ್ತಮ ಸಲಹೆ, ಸಹಕಾರಗಳು ದೊರೆತು ಯೋಜನೆಗಳಲ್ಲಿ ಯಶಸ್ಸನ್ನು ಕಾಣುವಿರಿ. ಗಣಪತಿಯ ಧ್ಯಾನ ಮಾಡಿ.

ಸಿಂಹ

ಪ್ರೀತಿ, ವಾತ್ಸಲ್ಯ ತುಂಬಿದ ಮಾತಿನಿಂದಾಗಿ ಸಂಗಾತಿಯಲ್ಲಿ ಹೆಚ್ಚಿನ ವಿಶ್ವಾಸ ಹೊಂದುವಿರಿ. ದಾಂಪತ್ಯದಲ್ಲಿ ಮಧುರ ಕ್ಷಣಗಳನ್ನು ಅನುಭವಿಸುವಿರಿ. ದೂರದ ಪ್ರಯಾಣದಿಂದಾಗಿ ಬೇಸರ ಉಂಟಾಗುವ ಸಾಧ್ಯತೆ.

ಕನ್ಯಾ

ಸಂಕೋಚ ಸ್ವಭಾವದಿಂದ ಹೊರಬಂದು ಕಾರ್ಯಮಗ್ನರಾಗಿ ಯಶಸ್ಸು ಸಾಧಿಸಿ. ಮುಲಾಜಿಗೆ ಒಳಗಾಗದೇ ಪಕ್ಕಾ ವ್ಯವಹಾರಸ್ಥರಾಗಿ. ವಿದ್ಯಾರ್ಥಿಗಳಿಗೆ ಸಹಪಾಠಿಗಳಿಂದ ತಗಾದೆಯ ಸಾಧ್ಯತೆ.

ತುಲಾ

ಕೌಟುಂಬಿಕ ಕಿರಿಕಿರಿಯ ಸಾಧ್ಯತೆ ಕಂಡುಬರುವುದು. ಸಂಗಾತಿಯೊಡನೆ ವಾದ ವಿವಾದ ಸಲ್ಲ. ಮಕ್ಕಳ ಸಹಕಾರದಿಂದ ನೆಮ್ಮದಿ ಕಂಡುಕೊಳ್ಳುವಿರಿ. ಗುರುವಿನ ಆರಾಧನೆಯಿಂದ ಉತ್ತಮ ಫಲ ದೊರೆಯುವುದು.

ವೃಶ್ಚಿಕ

ಒಂಟಿತನದಿಂದ ಬೇಸತ್ತ ನಿಮಗೆ ಹೊಸ ಜಗತ್ತಿನ ಅರಿವಿನಿಂದಾಗಿ ಮುದಗೊಳ್ಳುವ ಅವಕಾಶ. ಹೊಸ ಸಂಬಂಧ, ಗೆಳೆತನಗಳು ಕೂಡಿಬರುವ ಸಾಧ್ಯತೆ. ಜೀವನಕ್ಕೊಂದು ಹೊಸ ತಿರುವು ಬರುವ ನಿರೀಕ್ಷೆ.

ಧನು

ಅಪರಿಚಿತ ವ್ಯಕ್ತಿಗಳಿಂದ ಮೋಸ ಹೋಗುವ ಸಾಧ್ಯತೆ. ಹಣಕಾಸಿನ ವಿಷಯದಲ್ಲಿ ಅತ್ಯಂತ ಜಾಗರೂಕರಾಗಿರಿ. ಮನೆಯವರ ಸಲಹೆಗೆ ಮನ್ನಣೆ ನೀಡಿ. ಕುಲದೇವತಾ ಪ್ರಾರ್ಥನೆ ಒಳಿತನ್ನುಂಟು ಮಾಡುವುದು.

ಮಕರ

ನಿಮ್ಮ ಮಾತು ಮತ್ತು ಆಕರ್ಷಕ ವ್ಯಕ್ತಿತ್ವದಿಂದಾಗಿ ಇತರರನ್ನು ಮುದಗೊಳಿಸುವಿರಿ. ನಿಮ್ಮ ನಿರ್ಧಾರಗಳು ಸಮರ್ಪಕವಾಗಿದ್ದು ಬಹುಜನರ ಪ್ರಶಂಸೆಗೆ ಪಾತ್ರವಾಗುವುದು. ಯಶಸ್ಸಿನ ಅಮಲು ಉಚಿತವಲ್ಲ.

ಕುಂಭ

ನಿಮ್ಮ ಬಗೆಗೆ ಬೇರೆಯವರ ಮನದಾಳದ ಮಾತುಗಳನ್ನು ಆಲೈಸುವ ಆತುರ. ಉತ್ತಮ ಅಭಿಪ್ರಾಯಗಳಿಂದಾಗಿ ಮನಸ್ಸಿಗೆ ಹಿತಾನುಭವ. ಸ್ನೇಹಿತರ ಬಂಧುವರ್ಗದವರ ಅನಿರೀಕ್ಷಿತ ಭೇಟಿಯ ಸಾಧ್ಯತೆ. ಶುಭಾಷಯ ವಿನಿಮಯ.

ಮೀನ

ಮಹತ್ವದ ವಿಷಯಗಳಲ್ಲಿ ನಿಮ್ಮ ದೃಢ ನಿಲುವು ಅಮೂಲ್ಯವಾಗಿ ಪರಿಣಮಿಸುವುದು. ಎಲ್ಲರ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಬೆನ್ನು ನೋವು, ಮಂಡಿನೋವುಗಳು ಕಾಣಿಸಿಕೊಳ್ಳುವ ಸಾಧ್ಯತೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: