
ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹಿಮಂತ ಋತು, ಮಾರ್ಗಶಿರಮಾಸ,
ಕೃಷ್ಣಪಕ್ಷ, ದ್ವಿತೀಯ (ಬೆಳಗ್ಗೆ 09:35)
ತೃತೀಯ”, ಶುಕ್ರವಾರ, “ಪುಷ್ಯ ನಕ್ಷತ್ರ”
ರಾಹುಕಾಲ: 11: 1ರಿಂದ 12: 27
ಗುಳಿಕಕಾಲ: 08 :09 ರಿಂದ 09:35
ಯಮಗಂಡಕಾಲ: 3:18 ರಿಂದ 04:44
ಮೇಷ
ಮನೆ ಮಂದಿ ಎಲ್ಲರೂ ಸಂಭ್ರಮ, ಸಡಗರದಲ್ಲಿದ್ದರೂ ನಿಮಗೆ ದಿನವಿಡೀ ಆಲಸ್ಯದ ದಿನವಾಗಿ ಪರಿಣಮಿಸಲಿದೆ. ಕೆಲಸ–ಕಾರ್ಯಗಳಲ್ಲಿ ನಿರಾಸಕ್ತಿ ಕಂಡುಬರುವುದು. ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯ.
ವೃಷಭ
ವ್ಯವಹಾರಗಳಲ್ಲಿ ಉತ್ತಮಫಲವನ್ನು ನಿರೀಕ್ಷಿಸಬಹುದು. ಹೋಟೆಲ್ ಮುಂತಾದ ಉದ್ಯಮಿಗಳಿಗೆ ಉತ್ತಮ ಆದಾಯ ಕಂಡುಬರುವುದು. ನವೋಲ್ಲಾಸದ ಅನುಭವ ನಿಮ್ಮದಾಗಲಿದೆ.
ಮಿಥುನ
ವ್ಯಾಪಾರಸ್ಥರಿಗೆ ಸ್ವಲ್ಪಮಟ್ಟಿನ ಹಿನ್ನಡೆ ಕಂಡುಬಂದರೂ ಆತಂಕಕ್ಕೆ ಕಾರಣವಿಲ್ಲ. ಹೊಸ ಉದ್ಯಮದ ಸ್ಥಾಪನೆಯ ಬಗ್ಗೆಯೂ ಚಿಂತನೆ ನಡೆಸಲಿದ್ದೀರಿ. ಹಣಕಾಸಿನ ಅನುಕೂಲತೆಗಳು ಕಂಡುಬರುವವು.
ಕಟಕ
ರಕ್ಷಣಾ ವಿಭಾಗದಲ್ಲಿ ಕಾರ್ಯನಿರ್ವಹಿಸುವವರಿಗೆ ಅತ್ಯಂತ ಆತಂಕದ ದಿನವಾಗಲಿದೆ. ಸರ್ಕಾರಿ ನೌಕರರಿಗೆ ಪ್ರಭುತ್ವದಿಂದ ಸಿಹಿ ಸುದ್ದಿಯ ನಿರೀಕ್ಷೆ. ಮಕ್ಕಳ ನಡವಳಿಕೆ ಬಗ್ಗೆ ವಿಶೇಷ ಗಮನ ಅಗತ್ಯ.
ಸಿಂಹಬಹುದಿನಗಳ ನಿಮ್ಮ ಬಯಕೆಗಳು ಈಡೇರುವ ಸಾಧ್ಯತೆ. ಬಂಧುಗಳ ಆಗಮನದಿಂದಾಗಿ ಸಂಭ್ರಮದ ದಿನವಾಗಲಿದೆ. ಗೃಹಿಣಿಯರಿಗೆ ಅತ್ಯಂತ ಹೆಚ್ಚಿನ ಕಾರ್ಯ ಬಾಹುಳ್ಯ ಉಂಟಾಗಲಿದೆ.
ಕನ್ಯಾ
ಆಹಾರದಲ್ಲಿನ ವ್ಯತ್ಯಾಸದಿಂದಾಗಿ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ಉದರ ಸಂಬಂಧಿ ತೊಂದರೆಗಳು ಕಂಡುಬರಲಿದೆ. ಮಕ್ಕಳ ವಿವಾಹ ಸಂಬಂಧಗಳು ಕೂಡಿಬರುವ ಸಾಧ್ಯತೆ ಕಂಡುಬರುತ್ತಿದೆ.
ತುಲಾ
ಅತಿಯಾದ ಆತ್ಮವಿಶ್ವಾಸದಿಂದಾಗಿ ಎಡವಿ ಬೀಳುವ ಸಾಧ್ಯತೆ. ಹಿತೈಷಿಗಳ ಸಲಹೆ ಅನುಕೂಲಕರವಾಗಲಿದೆ. ಪ್ರವಾಸ ಕೈಗೊಳ್ಳುವ ಸಾಧ್ಯತೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ.
ವೃಶ್ಚಿಕ
ಕೃಷಿ ಕೆಲಸ–ಕಾರ್ಯಗಳು ನಿಧಾನವಾಗಲಿವೆ. ಆತುರದ ನಿರ್ಧಾರದಿಂದಾಗಿ ತೊಂದರೆಗೆ ಸಿಕ್ಕಿಕೊಳ್ಳುವ ಸಾಧ್ಯತೆ ಕಂಡುಬರುತ್ತಿದೆ. ತಾಳ್ಮೆಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಉತ್ತಮ.
ಧನು
ಹೊಸ ಯೋಜನೆಯೊಂದರ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸಲಿದ್ದೀರಿ. ಸಂತೋಷಕೂಟದಲ್ಲಿ ಭಾಗವಹಿಸುವ ಸಾಧ್ಯತೆ ಕಂಡುಬರುತ್ತಿದೆ. ವ್ಯವಹಾರದಲ್ಲಿ ಎಚ್ಚರಿಕೆಯ ನಡೆ ಅಗತ್ಯವಾಗಿದೆ.
ಮಕರ
ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ವಿದೇಶೀ ವ್ಯವಹಾರ ನಡೆಸುವವರಿಗೆ ಉತ್ತಮ ಆದಾಯ ತರಲಿದೆ. ಕೃಷಿ ಕಾರ್ಯಗಳಲ್ಲಿ ಹಿನ್ನಡೆ ಕಂಡುಬರುತ್ತಿದೆ. ಹಣ್ಣು, ತರಕಾರಿ ವ್ಯಾಪಾರಸ್ಥರಿಗೆ ಉತ್ತಮ ಲಾಭ.
ಕುಂಭ
ವ್ಯವಹಾರದ ಬಗ್ಗೆ ವಿಶೇಷ ಗಮನ ಅಗತ್ಯ. ದೂರದ ಪ್ರಯಾಣ ದಿನದ ಮಟ್ಟಿಗೆ ಮಾಡದಿರುವುದೇ ಸೂಕ್ತ. ಕುಟುಂಬದೊಂದಿಗೆ ದೇವತಾ ದರ್ಶನ ಮಾಡುವ ಸಾಧ್ಯತೆ ಕಂಡುಬರುತ್ತಿದೆ.
ಮೀನ
ಲೋಹದ ವ್ಯಾಪಾರಿಗಳಿಗೆ ನಷ್ಟದ ಸಾಧ್ಯತೆ. ಹಣಕಾಸು ವ್ಯವಹಾರದಲ್ಲಿ ಹಿನ್ನಡೆ ಕಂಡುಬರುತ್ತಿದೆ. ಹಿರಿಯರ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯ ಕಂಡುಬರಲಿದೆ. ದಿನಾಂತ್ಯದಲ್ಲಿ ಶುಭ ಸಮಾಚಾರ ಕೇಳಲಿದ್ದೀರಿ.

ಮೇಷ ರಾಶಿ: ಸ್ವಂತ ಉದ್ಯಮ ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಸ್ಥಿರಾಸ್ತಿ ಇಂದ ಭಾದೆ ಮೋಸ, ಉದ್ಯೋಗದಲ್ಲಿ ಪ್ರಗತಿ ಆದರೆ ಒತ್ತಡಗಳು ಮೇಲಧಿಕಾರಿಗಳಿಂದ ಸಮಸ್ಯೆ, ಸಂಸಾರದಲ್ಲಿ ನಿರಾಸಕ್ತಿ, ಸಂಗಾತಿ ಆರೋಗ್ಯ ವ್ಯತ್ಯಾಸ, ಪಾಲುದಾರಿಕೆಯಲ್ಲಿ ನಷ್ಟ, ಉತ್ತಮ ಹೆಸರು ಗರ್ಭದೋಷ ಗುಪ್ತ ವ್ಯಾಧಿಗಳು
ಪರಿಹಾರ: ಸುಬ್ರಹ್ಮಣ್ಯ ಆರಾಧನೆ ಮಾಡಿ
ವೃಷಭ ರಾಶಿ: ಆರ್ಥಿಕ ಚೇತರಿಕೆ ಒತ್ತಡಗಳಿಂದ ನಿದ್ರಾಭಂಗ, ಸ್ವಯಂಕೃತ ಅಪರಾಧ, ಉಡಾಫೆ ಸೋಮಾರಿತನ ನಿರಾಸಕ್ತಿ, ಮೊಂಡತನ, ಉದ್ಯೋಗ ಬದಲಾವಣೆಯಿಂದ ಅನುಕೂಲ, ಮಾಟ ಮಂತ್ರ ತಂತ್ರ ಭಾದೆಗಳು ತಂದೆ-ತಾಯಿಯೊಂದಿಗೆ ಮನಸ್ಥಾಪ, ಸರ್ಕಾರಿ ಕೆಲಸಕಾರ್ಯಗಳಲ್ಲಿ ಹಿನ್ನಡೆ, ರಾಜಕೀಯ ವ್ಯಕ್ತಿಗಳಿಂದ ತೊಂದರೆ ಆರೋಗ್ಯದಲ್ಲಿ ಅಲ್ಪ ಚೇತರಿಕೆ, ಸುಸ್ತು ಬೆನ್ನು ಸೆಳೆತ ನರದೌರ್ಬಲ್ಯ
ಪರಿಹಾರ: ಪ್ರತಿ ಶುಕ್ರವಾರ ತುಪ್ಪದ ದೀಪವನ್ನು ಹಚ್ಚಿ
ಮಿಥುನ ರಾಶಿ: ಯಂತ್ರೋಪಕರಣ ಭೂಮಿ ವಾಹನಗಳಿಂದ ಅನುಕೂಲ, ವರ್ಷಾಂತ್ಯದಲ್ಲಿ ಆರ್ಥಿಕ ಚೇತರಿಕೆ, ಶುಭ ಕಾರ್ಯದಲ್ಲಿ ಹಿನ್ನಡೆ, ಪ್ರೀತಿ-ಪ್ರೇಮ ಭಾವನೆಗಳಿಗೆ ಪೆಟ್ಟು, ಅಹಂಭಾವ ಅಧಿಕ ಕೋಪ, ದುಃಸ್ವಪ್ನಗಳು, ಶತ್ರು ಕಾಟ, ಸಾಲಬಾಧೆಯಿಂದ ನಿದ್ರಾಭಂಗ, ಉದ್ಯೋಗ ನಷ,್ಟ ಉದ್ಯೋಗಕ್ಕಾಗಿ ಅಧಿಕ ತಿರುಗಾಟ, ಸ್ವಂತ ಉದ್ಯಮ ವ್ಯವಹಾರದಲ್ಲಿ ಅವಕಾಶ ತಪ್ಪುವುದು, ಅಧಿಕ ಉಷ್ಣ, ಹೊಟ್ಟೆ ನೋವು ಕಿಡ್ನಿ ಸಮಸ್ಯೆ, ಪಿತ್ತ ದೋಷ, ಮೊಣಕಾಲಿಗೆ ಪೆಟ್ಟು
ಪರಿಹಾರ: ಮೃತ್ಯುಂಜಯ ಜಪ ಮಾಡಿ
ಕಟಕ ರಾಶಿ: ಉತ್ತಮ ಹೆಸರು ಗಳಿಸುವ ಸಂದರ್ಭಗಳು, ಶತ್ರು ದಮನ, ಉದ್ಯೋಗದಲ್ಲಿ ಪ್ರಗತಿ, ಮಕ್ಕಳಿಂದ ಲಾಭ ಸಾಲಬಾಧೆಯಿಂದ ಮುಕ್ತಿ, ದಾಂಪತ್ಯದಲ್ಲಿ ಕಲಹ, ಅಸಮಾಧಾನ, ಮನೆ ಖರೀದಿಯಿಂದ ತೊಂದರೆಗಳು, ಹೆಣ್ಣುಮಕ್ಕಳಿಂದ ಅಪವಾದ, ತಾಯಿಯ ಆರೋಗ್ಯ ವ್ಯತ್ಯಾಸ, ಸ್ವಂತ ಉದ್ಯಮದಲ್ಲಿ ನಿಧಾನದ ಪ್ರಗತಿ
ಪರಿಹಾರ: ಪ್ರತಿ ಶನಿವಾರ ಹನುಮಂತನ ದರ್ಶನ
ಸಿಂಹ ರಾಶಿ: ಸೇವಾ ವೃತ್ತಿಯ ಉದ್ಯೋಗ ಪ್ರಾಪ್ತಿ, ಮಕ್ಕಳೊಂದಿಗೆ ಮನಸ್ತಾಪ, ಬಂಧುಗಳು ದೂರ ತಂದೆಯಿಂದ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಕೈಗಾರಿಕೆಯವರಿಗೆ ಅನುಕೂಲ, ಭಾವನಾತ್ಮಕ ತೀರ್ಮಾನಗಳು, ಮಿತ್ರರು ದೂರ, ಆರ್ಥಿಕ ನಷ್ಟಗಳು, ಸಾಲ ಮಾಡುವ ಪರಿಸ್ಥಿತಿ
ಪರಿಹಾರ: ಇಷ್ಟ ಗುರುವನ್ನ ಆರಾಧನೆ ಮಾಡಿ
ಕನ್ಯಾ ರಾಶಿ: ಸ್ಥಿರಾಸ್ತಿಯಲ್ಲಿ ಅನುಕೂಲ, ಖರ್ಚುಗಳು ಜಾಸ್ತಿ, ಮಕ್ಕಳಿಂದ ನಷ್ಟ, ಮಕ್ಕಳೊಂದಿಗೆ ಮನಸ್ತಾಪ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಸ್ವಂತ ವ್ಯವಹಾರದಲ್ಲಿ ಅನುಕೂಲ, ಆರ್ಥಿಕವಾಗಿ ಬೇಜವಾಬ್ದಾರಿತನ, ವಿಚ್ಛೇದನ ಕೇಸುಗಳಲ್ಲಿ ಜಯ, ಮಿತ್ರರಿಂದ ಅನುಕೂಲ, ಬಡ್ತಿಯಲ್ಲಿ ಪ್ರಗತಿ, ಅಪಘಾತಗಳು, ಭಾವನಾತ್ಮಕ ಸೋಲು, ಕೃಷಿಕರಿಗೆ ಅನುಕೂಲ, ಕುಟುಂಬದಲ್ಲಿ ಊಹೆಗೆ ನಿಲುಕದ ದುರ್ಘಟನೆಗಳು
ಪರಿಹಾರ: ಗಣಪತಿಯ ಆರಾಧನೆ ಮಾಡಿ
ತುಲಾ ರಾಶಿ: ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆಗಳು, ಸೋಮಾರಿತನ ನಿರಾಸಕ್ತಿಗಳು, ಕೆಲಸಕಾರ್ಯಗಳ ಮುಂದೂಡಿಕೆ, ಪಿತ್ರಾರ್ಜಿತ ಆಸ್ತಿ ಜಯ, ವಿಪರೀತ ಕೋಪ ತಾಪಗಳು, ಯಂತ್ರೋಪಕರಣಗಳಿಂದ ಬೆಂಕಿಯಿಂದ ವಾಹನಗಳಿಂದ ತೊಂದರೆ, ಉದ್ಯೋಗದಲ್ಲಿ ಶತ್ರು ಕಾಟಗಳು, ಬಂಧುಗಳಿಂದ ಭಾದೆ, ಸಂಗಾತಿಯಿಂದ ಧನಸಹಾಯ, ಸಾಲ ದೊರೆಯುವುದು, ಆಕಸ್ಮಿಕ ಭೂಮಿ ಯೋಗ
ಪರಿಹಾರ: ದುರ್ಗಾಸಪ್ತಶತಿ ಯನ್ನು ಪಾರಾಯಣ ಮಾಡಿ
ವೃಶ್ಚಿಕ ರಾಶಿ: ಉದ್ಯೋಗದಲ್ಲಿ ಪ್ರಗತಿ, ಅದೃಷ್ಟದ ವರ್ಷ, ಆರ್ಥಿಕ ಚೇತರಿಕೆ, ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಸಾಲ ದೊರೆಯುವುದು, ಆರೋಗ್ಯದಲ್ಲಿ ತೊಂದರೆಗಳು, ಶತ್ರು ದಮನ ಸಂಗಾತಿಯಿಂದ ಕುಟುಂಬದಲ್ಲಿ ತೊಂದರೆಗಳು, ದುಸ್ವಪ್ನಗಳು, ಮೋಜು ಮಸ್ತಿಯಿಂದ ಜೈಲುವಾಸ, ಮೇಲಾಧಿಕಾರಿಗಳಿಂದ ಪ್ರಶಂಸೆ
ಪರಿಹಾರ: ಶಿವನಿಗೆ 11 ಸೋಮವಾರ ರುದ್ರಾಭಿಷೇಕ ಮಾಡಿಸಿ
ಧನಸ್ಸು ರಾಶಿ: ಮಕ್ಕಳಿಂದ ಅನುಕೂಲ, ಸ್ವಯಂಕೃತ ಅಪರಾಧಗಳು, ಸಾಲಗಾರರಿಂದ ನಿದ್ರಾಭಂಗ, ಗುಪ್ತ ಶತ್ರು ಕಾಟ, ಆರ್ಥಿಕವಾಗಿ ನಿಧಾನದ ಪ್ರಗತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆಯುಷ್ಯದ ಭೀತಿ ನಿವಾರಣೆ, ಉದ್ಯೋಗದಲ್ಲಿ ತೊಂದರೆಗಳು, ಶುಭಕಾರ್ಯದಲ್ಲಿ ಮುಂದೂಡಿಕೆ, ಲಾಭದ ಪ್ರಮಾಣ ಕುಂಠಿತ, ಪಿತ್ರಾರ್ಜಿತ ಆಸ್ತಿ ಸಮಸ್ಯೆಗಳು
ಪರಿಹಾರ: ಕುಲದೇವತಾ ದರ್ಶನಮಾಡಿ ಅನ್ನದಾನ ಮಾಡಿ
ಮಕರ ರಾಶಿ: ಭೂಮಿ ವಾಹನ ಸ್ಥಿರಾಸ್ತಿ ಯಂತ್ರೋಪಕರಣಗಳಿಂದ ಅನುಕೂಲ, ಶುಭಕಾರ್ಯ, ಪ್ರಯತ್ನ ಪಾಲುದಾರಿಕೆಯಲ್ಲಿ ಅನುಕೂಲ, ಆಯುಷ್ಯದ, ಬೀದಿ ಅನಾರೋಗ್ಯ ಸಮಸ್ಯೆಗಳಿಂದ ನಿದ್ರಾಭಂಗ, ಪ್ರೀತಿ-ಪ್ರೇಮದಲ್ಲಿ ಬಿರುಕು, ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ತೊಂದರೆಗಳು, ಕೋರ್ಟ್ ಕೇಸ್ ಅಲೆದಾಟ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಆರ್ಥಿಕ ಎಡವಟ್ಟುಗಳು
ಪರಿಹಾರ: ಶ್ರೀರಾಮ ನಾಮಜಪ ಮಾಡಿ
ಕುಂಭ ರಾಶಿ: ಆರ್ಥಿಕ ಸಂಕಷ್ಟಗಳು ಹೆಚ್ಚಾಗುವುದು, ಸಂಗಾತಿಯಿಂದ ಸಹಕಾರ ಮತ್ತು ಅನುಕೂಲ, ಸರ್ಕಾರಿ ಕೆಲಸಕಾರ್ಯಗಳಲ್ಲಿ ಪ್ರಗತಿ, ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಮಂದಗತಿ, ದಾಯಾದಿ ಕಲಹಗಳು, ಆರ್ಥಿಕ ಹಿನ್ನಡೆ, ಪ್ರಗತಿ ಕುಂಠಿತ, ಆಹಾರ ವ್ಯತ್ಯಾಸದ ಅನಾರೋಗ್ಯ, ಮಿತ್ರರು ದೂರ, ತಂದೆಯಿಂದ ಬಾದೆ, ಸಹೋದರಿಯೊಂದಿಗೆ ಮನಸ್ತಾಪ, ಯಂತ್ರೋಪಕರಣಗಳಿಂದ ಅನುಕೂಲ, ಭೂಮಿ ವ್ಯವಹಾರಗಳು, ಅಭಿವೃದ್ಧಿ ಸಾಧಿಸುವ
ಪರಿಹಾರ: ಪ್ರತಿ ಸೋಮವಾರ ಓಂ ನಮಃ ಶಿವಾಯ ಮಂತ್ರ ಜಪಿಸಿ
ಮೀನ ರಾಶಿ: ಸಾಲ ಬಾಧೆಯಿಂದ ಮುಕ್ತಿ, ಉದ್ಯೋಗದಲ್ಲಿ ಪ್ರಗತಿ, ಉತ್ತಮ ಹೆಸರು ಆರ್ಥಿಕವಾಗಿ ಚೇತರಿಕೆ, ಬಂಧುಗಳಿಂದ ಭೂಮಿ ಒಲಿಯುವುದು ವಾಹನ ಸ್ಥಿರಾಸ್ತಿ ಯೋಗ ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಮಕ್ಕಳಿಂದ ಯೋಗ ಫಲಗಳು, ವಿದ್ಯಾಭ್ಯಾಸದಲ್ಲಿ ಪ್ರಗತಿ, ಹಾರ್ಮೋನ್ ವ್ಯತ್ಯಾಸ ಹೃದಯ ಸಂಬಂಧಿ ಕಾಯಿಲೆಗಳು, ಶತ್ರುಗಳಿಂದ ಹಿಂಸೆ ಮೇಲಧಿಕಾರಿಗಳಿಂದ ದಂಡನೆ, ದೃಷ್ಟಿ ದೋಷಗಳು ಅಹಂಭಾವ ಮತ್ತು ಸ್ವಯಂಕೃತ ಅಪರಾಧ
ಪರಿಹಾರ: ಶಿವನಿಗೆ ಬಿಲ್ವಾ ಅಷ್ಟೋತ್ತರ ಮಾಡಿಸಿ