Design a site like this with WordPress.com
Get started

ಡಿಸೆಂಬರ್ 31, ಗುರುವಾರ; 2020 : ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ದಕ್ಷಿಣಾಯಣ,
ಹಿಮಂತ ಋತು, ಮಾರ್ಗಶಿರಮಾಸ,
ಕೃಷ್ಣಪಕ್ಷ,ಪ್ರಥಮ / ದ್ವಿತೀಯ,
ಗುರುವಾರ, ಪುನರ್ವಸು ನಕ್ಷತ್ರ.
ರಾಹುಕಾಲ: 01:51 ರಿಂದ 03:17
ಗುಳಿಕಕಾಲ: 9:34 ರಿಂದ 11:00
ಯಮಗಂಡಕಾಲ: 06:43 ರಿಂದ 08 :08

ಮೇಷ

ನಿಮ್ಮ ಕಾರ್ಯಚಟುವಟಿಕೆಗಳನ್ನು ಇತರರು ಆಡಿಕೊಳ್ಳುವ ಸಾಧ್ಯತೆ ಇದ್ದು ಇದರಿಂದ ಧೃತಿಗೆಡುವ ಅವಶ್ಯಕತೆ ಇಲ್ಲ. ನಶೆಯ ಬೆನ್ನು ಹತ್ತದಂತೆ ಎಚ್ಚರಿಕೆ ವಹಿಸುವುದು ಉತ್ತಮ. ದೃಢಸಂಕಲ್ಪದಿಂದ ಯಶಸ್ಸು.

ವೃಷಭ

ಷೇರು ವ್ಯವಹಾರದಲ್ಲಿ ಹಾನಿಯ ಸಾಧ್ಯತೆ ಇದ್ದು ಸರಿಯಾದ ಮಾರ್ಗದರ್ಶನ ಪಡೆದು ವ್ಯವಹರಿಸಿ. ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಉತ್ತಮ ಮಾರ್ಗದರ್ಶನ ದೊರೆತು ಉತ್ತಮ ಫಲಿತಾಂಶ ಸಿಗಲಿದೆ.

ಮಿಥುನ

ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯವಿದ್ದು ಪ್ರಶಸ್ತಿ, ಪುರಸ್ಕಾರಗಳು ನಿಮ್ಮದಾಗಲಿವೆ. ಉತ್ತಮ ಅವಕಾಶಗಳು ಒದಗಿ ಬರಲಿವೆ. ಆಹಾರ ವ್ಯತ್ಯಯದಿಂದ ಉದರ ನೋವಿನ ಸಮಸ್ಯೆ ತಲೆದೋರಬಹುದು.

ಕಟಕ

ಸಾಮಾಜಿಕ ಕಾರ್ಯಗಳ ವಿಷಯದಲ್ಲಿ ಒರಟುತನದಿಂದಾಗಿ ಇತರರ ತಿರಸ್ಕಾರಕ್ಕೆ ಒಳಗಾಗುವ ಸಾಧ್ಯತೆ. ಕೌಟುಂಬಿಕ ವಿಷಯದಲ್ಲಿ ಜಾಗರೂಕರಾಗಿರಿ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.

ಸಿಂಹ

ರಾಜಕಾರಣಿಗಳಿಗೆ ಶ್ರೇಯಸ್ಸು. ಉತ್ತಮ ಹುದ್ದೆ ದೊರಕುವ ಸಾಧ್ಯತೆ. ಸ್ನೇಹಿತರ ನಡುವೆ ನಡೆನುಡಿಗಳ ಮೇಲೆ ಹಿಡಿತವಿರಲಿ. ಪತ್ರಿಕೋದ್ಯಮ ಮತ್ತು ಪ್ರಚಾರ ಮಾಧ್ಯಮಗಳ ವ್ಯವಹಾರಗಳಲ್ಲಿರುವವರಿಗೆ ಉತ್ತಮ ಪ್ರಗತಿ.

ಕನ್ಯಾ

ನಿಮ್ಮ ಯೋಜನೆಗಳಿಂದ ಇತರರಿಗೆ ಹೆಚ್ಚಿನ ಅನುಕೂಲತೆಯನ್ನು ತರುವುದರ ಜೊತೆಗೆ ಮನಸ್ಸಿಗೆ ನೆಮ್ಮದಿ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ. ಸಾಮಾಜಿಕ ಕಾರ್ಯಕರ್ತರಿಗೆ ಉತ್ತಮ ದಿನ.

ತುಲಾ

ದೂರಪ್ರಯಾಣ ಮಾಡದಿರುವುದು ಒಳ್ಳೆಯದು. ಗೃಹಿಣಿಯರ ಅಭಿಲಾಷೆಗಳನ್ನು ಪೂರೈಸುವುದು ಉತ್ತಮ. ಮನೆಯವರ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ. ಮಕ್ಕಳ ನಡವಳಿಕೆಯ ಬಗ್ಗೆ ಗಮನ ಅಗತ್ಯ.‌

ವೃಶ್ಚಿಕ

ನಿಮ್ಮ ಮಾತುಗಳಿಂದಾಗಿಯೇ ವೃಥಾ ಆರೋಪ ಎದುರಿಸುವ ಸಾಧ್ಯತೆ. ಮಾತಿನ ಮೇಲೆ ಹಿಡಿತವಿರಲಿ. ನಿಷ್ಕಲ್ಮಷ ಮನಸ್ಸಿನಿಂದ ವ್ಯವಹರಿಸಿ. ಅತಿಯಾದ ಸಂತೋಷ ಮೈಮರೆಸುವ ಸಾಧ್ಯತೆ.

ಧನು

ಸ್ವಯಂ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ. ನೌಕರರಿಗೆ ಮೇಲಧಿಕಾರಿಗಳ ಅವಕೃಪೆಗೆ ಪಾತ್ರರಾಗುವ ಸಾಧ್ಯತೆ. ಕೆಲಸ–ಕಾರ್ಯಗಳಲ್ಲಿ ಅಸಡ್ಡೆ ತೋರುವುದು ಸಲ್ಲ. ದಿನದ ಅಂತ್ಯದಲ್ಲಿ ವೆಚ್ಚ ಭರಿಸಲಾಗದೆ ಸಂಕಷ್ಟ.

ಮಕರ

ಉದ್ಯೋಗ ನಿಮಿತ್ತ ದೂರ ಪ್ರಯಾಣ ಸಾಧ್ಯತೆ. ಆಹಾರ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಉತ್ತಮಕಾರ್ಯವೊಂದನ್ನು ಹಮ್ಮಿಕೊಂಡಿದ್ದಲ್ಲಿ ಹಿರಿಯರ ಆಶೀರ್ವಾದದಿಂದ ಯಶಸ್ವಿಯಾಗುವಿರಿ. ಬಂಧುಗಳ ಆಗಮನ ಸಾಧ್ಯತೆ.

ಕುಂಭ

ನಿಮ್ಮ ಯೋಜನೆಗಳನ್ನು ಕೈಬಿಡದೇ ಮುನ್ನಡೆಸಲು ಸಕಾಲ. ಸಂತೋಷಕೂಟದಲ್ಲಿ ಭಾಗವಹಿಸುವ ಸಾಧ್ಯತೆ. ಅನುಕೂಲತೆಗಳು ಒದಗಿ ಬರಲಿವೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಪ್ರಗತಿ ದೊರೆತು ಆತ್ಮವಿಶ್ವಾಸಕ್ಕೆ ನಾಂದಿ.

ಮೀನ

ಎಂಜಿನಿಯರ್ ಮತ್ತು ಗೃಹ, ವಸ್ತ್ರವಿನ್ಯಾಸಕರಿಗೆ ವ್ಯವಹಾರದಲ್ಲಿ ಹೆಚ್ಚಿನ ಲಾಭ ನಿರೀಕ್ಷೆ. ಗೃಹಾಲಂಕಾರ ವಸ್ತುಗಳ ಖರೀದಿ ಸಾಧ್ಯತೆ. ಅನಗತ್ಯ ವೆಚ್ಚದ ಮೇಲೆ ಹಿಡಿತವಿರಲಿ. ಸಂಗಾತಿಯ ಮಾತಿಗೆ ಮನ್ನಣೆ ಇರಲಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: