Design a site like this with WordPress.com
Get started

ಶಾಕಿಂಗ್‌ ನ್ಯೂಸ್‌! ವಿಧಾನ ಪರಿಷತ್‌ ಉಪಸಭಾಪತಿ ಎಸ್‌ಎಲ್‌ ಧರ್ಮೇಗೌಡ ಆತ್ಮಹತ್ಯೆ..!

ಇತ್ತೀಚೆಗೆ ವಿಧಾನಪರಿಷತ್‌ನಲ್ಲಿ ನಡೆದ ಎಳೆದಾಟ, ನೂಕಾಟ ಪ್ರಕರಣದಿಂದ ಸಾಕಷ್ಟು ಮನನೊಂದಿದ್ದ ವಿಧಾನಪರಿಷತ್‌ ಉಪಸಭಾಪತಿ ಎಸ್‌ಎಲ್‌ ಧರ್ಮೇಗೌಡ(65) ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ.

ಎಸ್‌ಎಲ್‌ ಧರ್ಮೇಗೌಡ ಅವರು ಸೋಮವಾರ ಸಂಜೆ ಮನೆಯಿಂದ ತಮ್ಮ ಕಾರಿನಲ್ಲಿ ಒಬ್ಬರೇ ತೆರಳಿದ್ದರು. ರಾತ್ರಿಯಾದರೂ ಮನೆಗೆ ವಾಪಸ್‌ ಬಾರದ ಕಾರಣ ಗನ್‌ಮ್ಯಾನ್‌, ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ನಡೆಸಿದ್ದರು. ನಂತರ ಅವರ ಮೃತದೇಹ ಕಡೂರು ತಾಲೂಕಿನ ಗುಣಸಾಗರದ ಮಂಕೇನಹಳ್ಳಿ ರೈಲ್ವೇ ಟ್ರ್ಯಾಕ್‌ ಬಳಿ ಪತ್ತೆಯಾಗಿದೆ. ಸಂಜೆ ಸುಮಾರು 6.30ರ ಸುಮಾರಿಗೆ ಸಖರಾಯಪಟ್ಟಣದ ಮನೆಯಿಂದ ಡ್ರೈವರ್ ಜೊತೆ ಗುಣಸಾಗರಕ್ಕೆ ಬಂದಿದ್ದ ಧರ್ಮೇಗೌಡ, ರೈಲ್ವೆ ಟ್ರ್ಯಾಕ್‌ ಬಳಿ ಕಾರನ್ನು ನಿಲ್ಲಿಸಲು ಡ್ರೈವರ್‌ಗೆ ಸೂಚಿಸಿದ್ದಾರೆ. ಬಳಿಕ ನನಗೆ ಒಬ್ಬರ ಜೊತೆ ಖಾಸಗಿಯಾಗಿ ಮಾತನಾಡಬೇಕು. ನೀನು ಹೋಗು ಅಂತಾ ಡ್ರೈವರ್‌ನನ್ನು ಕಳುಹಿಸಿದ್ದಾರೆ. ಆ ಬಳಿಕ ಕಡೂರಿನ ವ್ಯಕ್ತಿಯೊಬ್ಬರಿಗೆ ಫೋನ್ ಮಾಡಿ ಜನಶತಾಬ್ದಿ ರೈಲು ಬರುವ ಸಮಯವನ್ನು ವಿಚಾರಿಸಿಕೊಂಡಿದ್ದಾರೆ. ಅಷ್ಟೊತ್ತಿಗಾಗಲೇ ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ತಮ್ಮ ಹಳೇ ಕಾರಿನಲ್ಲಿ ಒಬ್ಬರೇ ತೆರಳಿದ್ದ ಧರ್ಮೇಗೌಡ ಅವರು ರಾತ್ರಿ ಸುಮಾರು 11-12ಗಂಟೆ ಅವಧಿಯಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಅವರ ತಲೆ ದೇಹದಿಂದ ಛಿದ್ರಗೊಂಡಿದೆ. ದೇಹ ಸಿಕ್ಕ ಸ್ವಲ್ಪ ದೂರದಲ್ಲಿ ಅವರ ತಲೆ ಪತ್ತೆಯಾಗಿದೆ. ಸದ್ಯ ಸ್ಥಳಕ್ಕೆ ಸ್ಥಳಕ್ಕೆ ಶಾಸಕ ಸಿ.ಟಿ.ರವಿ, ಸೋದರ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮತ್ತಿತರರು ಭೇಟಿ ನೀಡಿದ್ದಾರೆ.

ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದ್ದು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: