Design a site like this with WordPress.com
Get started

ಡಿಸೆಂಬರ್ 28,ಸೋಮವಾರ ; 2020 : ಇಂದಿನ ರಾಶಿಭವಿಷ್ಯ

27-12-2020 ಭಾನುವಾರ ಶಾರ್ವರಿ ಸಂ|ರದ ಧನುರ್ಮಾಸ ದಿನ 12 ಸಲುವ ಮಾರ್ಗಶಿರ ಶುದ್ಧ ತ್ರಯೋದಶಿ 58||| ಗಳಿಗೆ

ದಿನ ವಿಶೇಷ :ಪ್ರದೋಷ, ಹನೂಮದ್ವ್ರತನಿತ್ಯ ನಕ್ಷತ್ರ :ಕೃತ್ತಿಕಾ 16 ಗಳಿಗೆಮಹಾ ನಕ್ಷತ್ರ :ಮೂಲಾಋತು :ಹೇಮಂತರಾಹುಕಾಲ :4.30-6.00 ಗಂಟೆಗುಳಿಕ ಕಾಲ :3.00-4.30 ಗಂಟೆ

ಸೂರ್ಯಾಸ್ತ :6.10 ಗಂಟೆ ಸೂರ್ಯೋದಯ :6.53 ಗಂಟೆ

ಮೇಷ

ಅನಾರೋಗ್ಯದ ಬಗ್ಗೆ ಎಚ್ಚರದಿಂದಿರಿ. ಪ್ರತಿಸ್ಪರ್ಧಿಗಳ ಸವಾಲು. ಯೋಚಿಸಿ ಕಾರ್ಯಪ್ರವೃತ್ತರಾಗುವುದು ನಿಮ್ಮ ಯಶಸ್ಸಿನ ಗುಟ್ಟಾಗಲಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಅನ್ಯರಲ್ಲಿ ಚರ್ಚೆ. ಚಾಲನೆಯಲ್ಲಿ ಎಚ್ಚರವಿರಲಿ.

ವೃಷಭ

ನಿಮ್ಮ ಗೌರವ ಹೆಚ್ಚಾಗಲಿದೆ. ಇಷ್ಟಮಿತ್ರರ ಆಗಮನದ ಜೊತೆಗೆ ಮನೆಯಲ್ಲಿ ಹಬ್ಬದ ವಾತಾವರಣ. ವಾಹನ ಚಲಾವಣೆಯಲ್ಲಿ ನಿಗಾ ಇರಲಿ. ಚಿಲ್ಲರೆ ವ್ಯಾಪಾರಿಗಳಿಗೆ ಶುಭದಿನ.

ಮಿಥುನ

ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಶೀಘ್ರಗತಿಯಲ್ಲಿ ಲಾಭ ದೊರಕಲಿದೆ. ರತ್ನ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ. ಹೆಣ್ಣುಮಕ್ಕಳ ಆರೋಗ್ಯದಲ್ಲಿ ಚೇತರಿಕೆ. ಆತ್ಮೀಯರಿಂದ ಸಿಹಿ ಸುದ್ದಿ.

ಕಟಕ

ಕುಟುಂಬದೊಂದಿಗೆ ದೂರ ಪ್ರಯಾಣ. ನಿಶ್ಚಿತ ಕಾರ್ಯದಲ್ಲಿ ಗೆಲುವು. ಗೌರವಾನ್ವಿತರ ದರ್ಶನವಾಗುವ ಸಾಧ್ಯತೆ. ಹಿಂದಿನ ಸಾಲ ವಸೂಲಾತಿ. ದಿನದ ಕೊನೆಯಲ್ಲಿ ನೆಮ್ಮದಿ.

ಸಿಂಹ

ಈ ದಿನದ ಪ್ರಗತಿ ಉತ್ತಮವಾಗಿದೆ. ದೂರ ಪ್ರದೇಶಗಳಿಗೆ ಪ್ರಯಾಣ ಮಾಡಲಿದ್ದೀರಿ. ದಾಂಪತ್ಯದಲ್ಲಿ ಅತ್ಯಂತ ಸರಸದ ದಿನ. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ. ಸಂತೋಷಮಯ ಬದುಕು.

ಕನ್ಯಾ

ಉದ್ಯೋಗದಲ್ಲಿ ಪದೋನ್ನತಿಯನ್ನು ಹೊಂದಲಿದ್ದೀರಿ. ಸಹೋದರಿಯರ ಆಗಮನ ನಿರೀಕ್ಷೆ. ಬಂಗಾರಕ್ಕೆ ಸಂಬಂಧಿಸಿದಂತೆ ಕಲಹ. ತಾಳ್ಮೆಯಿಂದ ನೆಮ್ಮದಿ. ವಾಹನ ಖರೀದಿಗೆ ಸುಸಂದರ್ಭ.

ತುಲಾ

ಮಕ್ಕಳ ಬಗ್ಗೆ ಚಿಂತೆ ಇದೆ. ಗುರುಗಳ ಪ್ರಶಂಸೆಯ ಬಲದಿಂದ ಕಾರ್ಯದಲ್ಲಿ ಉನ್ನತಿ. ಆರೋಗ್ಯದಲ್ಲಿ ಚೇತರಿಕೆ. ಹಿರಿಯರ ಮಾರ್ಗದರ್ಶನದಿಂದ ಸಂತೋಷ. ಇಷ್ಟದೇವರ ಆರಾಧನೆ ಮಾಡಿ.

ವೃಶ್ಚಿಕ

ಈಶ್ವರಾರಾಧನೆಯನ್ನು ಮಾಡುವುದರಿಂದ ಆರ್ಥಿಕವಾಗಿ ಚೇತರಿಸಿಕೊಳ್ಳುವಿರಿ. ಮನಸ್ಸಿನ ನೋವು ನಿವಾರಣೆಯಾಗಲಿದೆ. ಪತ್ರಿಕಾ ವರದಿಗಾರರು ಎಚ್ಚರಿಕೆಯಿಂದಿರಿ. ಅತಿಯಾದ ಸಂತಸ ದುಃಖವನ್ನೂ ತಂದೀತು ಎಚ್ಚರಿಕೆ.

ಧನು

ತುಂಬಾ ಶ್ರಮವಹಿಸಿದ ನಿಮ್ಮ ಕಾರ್ಯಗಳಲ್ಲಿ ಶೀಘ್ರಗತಿಯಲ್ಲಿ ಯಶಸ್ಸು ಕಾಣುವಿರಿ. ಮನಸ್ಸಿಗೆ ಸಂಬಂಧಿಸಿದ ವ್ಯವಹಾರಗಳು ನೆರವೇರಲಿವೆ. ಮರು ಪ್ರಯತ್ನದಿಂದ ಕಾರ್ಯ ಸಾಧನೆ.

ಮಕರ

ಧನಾಗಮನಕ್ಕಿಂತ ವ್ಯಯವೇ ಹೆಚ್ಚಾಗುವ ಸಾಧ್ಯತೆ ಕಂಡುಬರುತ್ತಿದೆ. ದೇವತಾಕಾರ್ಯಗಳಿಗೆ ಆದ್ಯತೆ ನೀಡಲಿದ್ದೀರಿ. ಯಶಸ್ಸಿಗಾಗಿ ಗೋ ಸೇವೆ ಮಾಡಿ. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ.

ಕುಂಭ

ಆರ್ಥಿಕ ಸಂಕಷ್ಟ ದೂರವಾಗಿ ಮನಸ್ಸಿಗೆ ನೆಮ್ಮದಿ. ಅನೇಕ ಅವಕಾಶಗಳು ಅರಸಿ ಬರಲಿವೆ. ಶುಭ ಸಮಾರಂಭಗಳಲ್ಲಿ ಭಾಗಿಯಾಗುವ ಸಾಧ್ಯತೆ ಕಂಡುಬರುತ್ತಿದೆ. ಹಿರಿಯರನ್ನು ಗೌರವಿಸಿ.

ಮೀನ

ಕುಲದೇವತಾ ದರ್ಶನ ಭಾಗ್ಯ ಸಿಗಲಿದೆ. ಬೆನ್ನುನೋವು ಜಾಸ್ತಿಯಾಗುವ ಸಾಧ್ಯತೆ. ಅನಿವಾರ್ಯ ಕಾರಣಗಳಿಂದಾಗಿ ನಡೆಯಬೇಕಾದ ಕಾರ್ಯ ಮುಂದೂಡುವಿರಿ. ಸಂತೋಷ ಇಮ್ಮಡಿಗೊಳ್ಳಲಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: