
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹಿಮಂತ ಋತು, ಮಾರ್ಗಶಿರಮಾಸ,
ಶುಕ್ಲಪಕ್ಷ, ದಶಮಿ, ಗುರವಾರ, ”ಅಶ್ವಿನಿ ನಕ್ಷತ್ರ”,
ರಾಹುಕಾಲ 01:48 ರಿಂದ 03:14
ಗುಳಿಕಕಾಲ 09:31 ರಿಂದ 10:57
ಯಮಗಂಡಕಾಲ 6:40 ರಿಂದ 08:05
ಮೇಷ
ಆರ್ಥಿಕಸ್ಥಿತಿಯಲ್ಲಿ ಸುಧಾರಣೆ ಕಂಡುಬಂದರೂ ದುಡುಕುತನದಿಂದ ನಷ್ಟವಾಗಬಹುದು. ಯಾವುದೇ ವಿಚಾರಕ್ಕೂ ಮತ್ತೊಮ್ಮೆ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ. ಗಣಪತಿ ಆರಾಧನೆಯಿಂದ ಕಾರ್ಯದಲ್ಲಿ ಯಶಸ್ಸು.
ವೃಷಭ
ವೈದ್ಯವೃತ್ತಿಯವರಿಗೆ ಅಧಿಕ ಶ್ರಮವಾಗಿ ವಿಪರೀತ ಆಯಾಸ. ಸ್ತ್ರೀಯರಿಗೆ ಅನುಕೂಲಕರ ರಾಜಕೀಯ ಪರಿಸ್ಥಿತಿ ನಿರ್ಮಾಣವಾಗಿ ದಾಳವನ್ನಾಡಿಸುವ ಸಾಧ್ಯತೆ. ಮನೋವ್ಯಾಧಿಗಳು ದೂರವಾಗಲಿವೆ.
ಮಿಥುನ
ನಿಮ್ಮ ಮೇಲಿನ ಹೆಚ್ಚಿನ ಜವಾಬ್ದಾರಿ ನಿಭಾಯಿಸಿಕೊಳ್ಳುವಲ್ಲಿ ಯಶಸ್ಸು. ಆತ್ಮೀಯರಲ್ಲಿ ಸಂತೋಷ ಹಂಚಿಕೊಳ್ಳಲಿದ್ದೀರಿ. ವಿನ್ಯಾಸಕಾರರಿಗೆ ಉತ್ತಮ ಆರ್ಥಿಕ ಲಾಭ. ರಾಜಕೀಯ ಬದುಕು ಮಸುಕಾಗುವ ಸಾಧ್ಯತೆ.
ಕಟಕ
ದೂರಪ್ರಯಾಣದಿಂದ ಉಂಟಾದ ಆಯಾಸದಿಂದಾಗಿ ಚೇತರಿಸಿಕೊಳ್ಳಲಿದ್ದೀರಿ. ವಿವಾಹಾಪೇಕ್ಷಿಗಳಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ದೇವತಾ ದರ್ಶನದಿಂದ ನೆಮ್ಮದಿ. ಉದ್ಯೋಗದಲ್ಲಿ ಆಸಕ್ತಿ. ಆರೋಗ್ಯದಲ್ಲಿ ಸ್ಥಿರತೆ.
ಸಿಂಹ
ಒಳ್ಳೆಯ ಕೆಲಸದ ನಿರೀಕ್ಷೆಯಲ್ಲಿರುವಿರಿ. ಗ್ರಹಬಲಗಳು ಕೂಡಿಬರಲಿವೆ. ಹಿರಿಯರಿಗೆ ತೀರ್ಥಕ್ಷೇತ್ರ ದರ್ಶನ ಭಾಗ್ಯ. ಮಕ್ಕಳ ಪ್ರಗತಿ ಕಂಡು ಸಂತಸ. ಉನ್ನತ ಹುದ್ದೆಯೊಂದನ್ನು ಅಲಂಕರಿಸುವ ಸಾಧ್ಯತೆ.
ಕನ್ಯಾ
ಸರ್ಕಾರಿ ನೌಕರರಿಗೆ ಮೇಲಧಿಕಾರಿಗಳಿಂದ ಕಿರಿಕಿರಿ. ಅನಿರೀಕ್ಷಿತವಾದ ತಲೆನೋವಿನ ಸಂಗತಿ ಎದುರಾಗಲಿದೆ. ನಿಗದಿತ ಕಾರ್ಯಗಳಲ್ಲಿ ಯಶಸ್ಸು. ಧನಾಗಮನದ ಸಾಧ್ಯತೆ.
ತುಲಾ
ಸಂತೋಷ ನೀಡುವ ವಿಚಾರದಲ್ಲಿ ಕುಟುಂಬದಿಂದ ಸಹಕಾರ. ಅನಿರೀಕ್ಷಿತ ಬೆಳವಣಿಗೆಯಿಂದ ಸಾಮಾಜಿಕ ಗೌರವ ಹೊಂದುವಿರಿ. ಸಮಾಜ ಸೇವಕರಿಗೆ ಸಾಫಲ್ಯತೆಯ ನೆಮ್ಮದಿ.
ವೃಶ್ಚಿಕ
ಮನೆಯಲ್ಲಿ ದೇವತಾಯಾಗ ನಿರ್ಧಾರವಾಗಲಿದೆ. ಸತ್ಪುರುಷರ ದರ್ಶನ ಮಾಡಲಿದ್ದೀರಿ. ವ್ಯವಹಾರದಲ್ಲಿ ಉನ್ನತಿಯಾಗಿ ಮನ್ನಣೆ ಪಡೆಯುವಿರಿ. ದಾಂಪತ್ಯದಲ್ಲಿ ಸರಸ. ಚಿನ್ನಾಭರಣ ಖರೀದಿ ಸಾಧ್ಯತೆ.
ಧನು
ನೀವು ಮಾಡುವ ಯಾವುದೇ ಕಾರ್ಯದಲ್ಲೂ ಬದಲಾವಣೆಯಾದರೂ ಸಕಾರಾತ್ಮಕವಾಗಲಿದೆ. ಯಶಸ್ಸು ನಿಮ್ಮ ಪಾಲಿಗೆ ಬರಲಿದ್ದು ಸಂತೋಷ ತರಲಿದೆ. ವನಪಾಲಕರಿಗೆ ನೆಮ್ಮದಿ.
ಮಕರ
ಕಠಿಣ ಪರಿಶ್ರಮದಿಂದಾಗಿ ಕಾರ್ಯದಲ್ಲಿ ಯಶಸ್ಸು. ಎದುರಾಳಿಗಳ ದಾಳಿಯಿಂದಾಗಿ ತತ್ತರಿಸುವ ಸಾಧ್ಯತೆ. ಚಿಂತೆಗೆ ಅವಕಾಶವಿಲ್ಲ. ಶನೀಶ್ವರ ದೇವರಿಗೆ ಎಳ್ಳೆಣ್ಣೆ ಸಮರ್ಪಿಸಿ. ತೈಲ ವ್ಯಾಪಾರದಲ್ಲಿ ಅಭಿವೃದ್ಧಿ.
ಕುಂಭ
ವಿದೇಶಗಳಿಂದ ಬಂಧುಗಳ ಆಗಮನದ ಸಾಧ್ಯತೆ. ನಿಮ್ಮನ್ನು ಅತಿಯಾಗಿ ಪ್ರೀತಿಸುವವರಿಂದ ಸಾಂತ್ವನದ ಮಾತುಗಳನ್ನು ಕೇಳಲಿದ್ದೀರಿ. ಅತಿಯಾದ ಉಲ್ಲಾಸದಿಂದ ಮೈ ಮರೆಯುವ ಸಾಧ್ಯತೆ ಉದ್ಯೋಗರಂಗದಲ್ಲಿ ಚೇತರಿಕೆ.
ಮೀನ
ಬಂಧುಮಿತ್ರರ ಆಗಮನದಿಂದ ಮನಸ್ಸಿಗೆ ನೆಮ್ಮದಿ. ಆರೋಗ್ಯದಲ್ಲಿ ಸುಧಾರಣೆ. ಯೋಗಾಭ್ಯಾಸದ ಮೊರೆ ಹೋಗಬೇಕಾದೀತು. ದೀನರಿಗೆ ಸಹಾಯ ನೀಡಿ. ಪಶು ಪಕ್ಷಿಗಳಿಗೆ ಆಹಾರ ನೀಡಿ.