Design a site like this with WordPress.com
Get started

ಬ್ರಿಟನ್ ನಲ್ಲಿ ರೂಪಾಂತರಗೊಂಡ ಕೊರೊನಾ ವೈರಸ್…! ಇದರ ಪರಿಣಾಮ ಹೇಗಿರಲಿದೆ ಗೊತ್ತಿದೆಯೇ….?

ಬ್ರಿಟನ್​ನಲ್ಲಿ ಕೊರೊನಾ ಅಲೆ ಹೊಸ ರೂಪವನ್ನ ಪಡೆದುಕೊಂಡಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಭಾರತ ಬ್ರಿಟನ್​ನಿಂದ ಡಿಸೆಂಬರ್​ 31ರವರೆಗೆ ಎಲ್ಲಾ ವಿಮಾನಯಾನವನ್ನ ಸ್ಥಗಿತಗೊಳಿಸಿದೆ. ಕೊರೊನಾ ರೂಪಾಂತರದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿಶ್ವದ ಅನೇಕ ರಾಷ್ಟ್ರಗಳು ಬ್ರಿಟನ್​​ಗೆ ವಿಮಾನಯಾನವನ್ನ ಸ್ಥಗಿತಗೊಳಿಸಿವೆ.

ಕಳೆದ ವಾರದಲ್ಲಿ ಕೋವಿಡ್ ವೈರಸ್ ರೂಪಾಂತರಗೊಂಡಿದ್ದು ದಕ್ಷಿಣ ಹಾಗೂ ಪೂರ್ವ ಇಂಗ್ಲೆಂಡ್ನಲ್ಲಿ ಸೋಂಕು ಅತ್ಯಂತ ವೇಗವಾಗಿ ಏರಿಕೆ ಕಾಣಲು ಸಹಾಯಕವಾಗಿವೆ. ಹೊಸ ರೂಪಾಂತರ ಪಡೆದ ಸೋಂಕಿನ 1108 ಪ್ರಕರಣಗಳನ್ನ ಈಗಾಗಲೇ ಗುರುತಿಸಲಾಗಿದೆ. ಈ ಹೊಸ ಸೋಂಕಿನ ಬಗ್ಗೆ ಸಂಶೋಧನೆಗಳು ತೀವ್ರಗೊಂಡಿವೆ.

ಕೊರೊನಾ ವೈರಸ್​ ತನ್ನಲ್ಲಿ ಅನೇಕ ಬದಲಾವಣೆಯನ್ನ ಮಾಡಿಕೊಂಡು ಹೊಸ ರೂಪವನ್ನ ಪಡೆದುಕೊಂಡಿದೆ. ಕೊರೊನಾ ವೈರಸ್​ನ ಪ್ರೋಟೀನ್​ ಹಾಗೂ ಆರ್​ಎನ್​ಎಗಳಲ್ಲಿ ಕೆಲ ಬದಲಾವಣೆ ಉಂಟಾಗಿದ್ದು ಇದು ಮಾನವ ಜೀವಕೋಶದ ಎಸಿಇ 2 ಗ್ರಾಹಕದೊಂದಿಗೆ ಬಂಧಿಸುತ್ತದೆ. ಈ ಕಾರಣದಿಂದಾಗಿ ಈ ರೂಪಾಂತರಗೊಂಡ 70 ಪ್ರತಿಶತ ಹೆಚ್ಚಿನ ಪ್ರಮಾಣದಲ್ಲಿ ರೋಗವನ್ನ ಹರಡಬಲ್ಲುದು ಎಂದು ಅಂದಾಜಿಸಲಾಗಿದೆ.

ಆದರೆ ಈ ರೂಪಾಂತರಗೊಂಡ ವೈರಸ್​ ತೀವ್ರವಾದ ಕಾಯಿಲೆ ಅಥವಾ ಮರಣಕ್ಕೆ ಕಾರಣವಾಗುತ್ತಾ ಎಂಬುದರ ಬಗ್ಗೆ ಇನ್ನೂ ಯಾವುದೇ ಪುರಾವೆಗಳು ದೊರಕಿಲ್ಲ. ಈ ಹೊಸ ವೈರಸ್​ನ ಪರಿಣಾಮದ ಬಗ್ಗೆ ಸಂಶೋಧನೆಗಳು ಮುಂದುವರಿದಿದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ರೂಪಾಂತರಗೊಂಡ ವೈರಸ್​ ಬಗ್ಗೆ ಆತಂಕ ಬೇಡ ಎಂದು ಹೇಳಿದೆ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: