Design a site like this with WordPress.com
Get started

ಡಿಸೆಂಬರ್ 22, ಮಂಗಳವಾರ, 2020 : ಇಂದಿನ ರಾಶಿಭವಿಷ್ಯ

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ವಾರ : ಮಂಗಳವಾರ,
ತಿಥಿ : ಅಷ್ಠಮಿ, ನಕ್ಷತ್ರ : ಉತ್ತರಭದ್ರ,

ರಾಹುಕಾಲ: 3.13 ರಿಂದ 4.39
ಗುಳಿಕಕಾಲ: 12.22 ರಿಂದ 1.47
ಯಮಗಂಡಕಾಲ: 9.30 ರಿಂದ 10.56

ಮೇಷ

ಕಠಿಣ ಪರಿಶ್ರಮದ ಫಲದಿಂದ ಉತ್ತಮ ಸಫಲತೆಯನ್ನು ಪಡೆಯಲಿದ್ದೀರಿ. ಯೋಜನೆಯನ್ನು ರೂಪಿಸುವ ಮುನ್ನ ಪುನಃ ಅವಲೋಕನ ಅಗತ್ಯ. ಸಾಮಾಜಿಕ ಕ್ಷೇತ್ರದಲ್ಲಿ ಹಿನ್ನಡೆಯ ಸಾಧ್ಯತೆ ಕಂಡುಬರುತ್ತಿದೆ.

ವೃಷಭ

ನಿಮ್ಮ ಕೆಲಸವನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದು ಉತ್ತಮ. ಆರ್ಥಿಕ ಪ್ರಗತಿಯತ್ತ ದಾಪುಗಾಲು. ಬೇರೆಯವರ ಮಾತುಗಳ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳದಿರಿ. ಉನ್ನತ ವಿಚಾರಗಳತ್ತ ಒಲವು ತೋರಲಿದ್ದೀರಿ.

ಮಿಥುನ

ಪರಿಶ್ರಮಕ್ಕೆ ಯೋಗ್ಯವಾದ ಪ್ರತಿಫಲ ದೊರೆತು ಉತ್ತಮ ಅವಕಾಶ ನಿಮ್ಮದಾಗಲಿದೆ. ರಾಜಕೀಯ ಮುಖಂಡರು ಮುಖಭಂಗ ಅನುಭವಿಸುವ ಸಾಧ್ಯ. ಪತ್ರಿಕೋದ್ಯಮದವರಿಗೆ ವಿಫಲತೆ ಕಂಡುಬರುತ್ತಿದೆ.

ಕಟಕ

ಹಣಕಾಸಿನ ಅನುಕೂಲದ ನಿರೀಕ್ಷೆಯಲ್ಲಿರುವ ನಿಮಗೆ ಶೀಘ್ರಗತಿಯಲ್ಲಿ ಕೈಗೂಡಲಿದೆ. ಬಂಧುಗಳಿಂದ ಸಹಕಾರ. ಮಕ್ಕಳ ಪ್ರಗತಿಯಿಂದ ನೆಮ್ಮದಿ. ಸಂಗಾತಿಗೆ ಅನಾರೋಗ್ಯದ ಸಾಧ್ಯತೆ ಕಂಡುಬರುತ್ತಿದೆ.

ಸಿಂಹ

ಆದಾಯದ ಹೊಸ ದಾರಿ ಗೋಚರಿಸಲಿದೆ. ಹಾಗಂತ ಅತಿಯಾದ ಖರ್ಚನ್ನು ನಿಯಂತ್ರಣದಲ್ಲಿಡುವುದು ಒಳ್ಳೆಯದು. ಯಂತ್ರಾಗಾರದಲ್ಲಿ ಅಗ್ನಿಭಯ ಸಾಧ್ಯತೆ. ದೇವತಾ ಆರಾಧನೆಯಿಂದ ನೆಮ್ಮದಿ ಮೂಡಿಬರಲಿದೆ.

ಕನ್ಯಾ

ಶೀಘ್ರದಲ್ಲಿ ಉದ್ಯೋಗದಲ್ಲಿ ಉನ್ನತಿಯನ್ನು ಸಾಧಿಸುವಿರಿ. ನಿಮ್ಮ ಪ್ರಾಮಾಣಿಕತೆಯ ಫಲವು ನಿಮ್ಮನ್ನು ಅರಸಿ ಬರಲಿದೆ. ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲಿದ್ದೀರಿ. ವೃಥಾ ಆರೋಪಗಳ ಬಗ್ಗೆ ಗಮನ ಬೇಡ.

ತುಲಾ

ಕುಲಕಸುಬುದಾರರಿಗೆ ಉತ್ತಮ ವ್ಯವಹಾರದಿಂದಾಗಿ ಲಾಭ ಪ್ರಾಪ್ತಿ. ಪಾರಂಪರಿಕವಾಗಿ ನಡೆದುಬಂದ ವ್ಯವಹಾರವನ್ನು ಕೈ ಬಿಡುವುದು ಬೇಡ. ಚಲನಚಿತ್ರರಂಗದವರಿಗೆ ಉತ್ತಮ ಅವಕಾಶ ಲಭಿಸಲಿದೆ.

ವೃಶ್ಚಿಕ

ಕೈಗಾರಿಕೋದ್ಯಮಿಗಳಿಗೆ ಪ್ರಗತಿ ಸಾಧ್ಯತೆ. ಹೊಸ ಉದ್ಯಮದಲ್ಲಿ ಯಶಸ್ಸನ್ನು ಕಾಣುವಿರಿ. ಮನೆಯಲ್ಲಿ ಬಹಳ ದಿನಗಳ ನಂತರ ನಗುವನ್ನು ಕಾಣಲಿದ್ದೀರಿ.

ಧನು

ಉದ್ಯೋಗಕ್ಷೇತ್ರದಲ್ಲಿ ಅತಿಯಾದ ಒತ್ತಡ ಕಾಣಿಸಿದರೂ ಸ್ನೇಹಿತರ ಸಹಕಾರದಿಂದ ನಿರಾಳ. ಮಕ್ಕಳ ಯೋಗಕ್ಷೇಮದ ಬಗ್ಗೆ ನಿಗಾ ಇರಲಿ. ವಿದ್ಯಾರ್ಥಿಗಳಿಗೆ ಎದುರಾಗುವ ಸಂಕಷ್ಟಗಳು ಗೆಲುವಿನ ಸೋಪಾನವಾಗಲಿದೆ.

ಮಕರ

ಬಹುದಿನಗಳ ದುಡಿಮೆಯ ನಡುವೆ ವಿಶ್ರಾಂತಿಯ ಅಗತ್ಯತೆ. ಒತ್ತಡದಿಂದ ಹೊರಬರುವ ಸಾಧ್ಯತೆ. ನೌಕಾಯಾನಿಗಳಿಗೆ ಒಳ್ಳೆಯ ಸಮಯ. ದೇವತಾ ದರ್ಶನ ಭಾಗ್ಯದಿಂದಾಗಿ ನೆಮ್ಮದಿ ಮೂಡಿಬರಲಿದೆ.

ಕುಂಭ

ಆರ್ಥಿಕ ಸಮಸ್ಯೆ ಪರಿಹಾರವಾಗಲಿದೆ. ಮಾನಸಿಕ ನೋವನ್ನು ಇತರರಲ್ಲಿ ಹಂಚಿಕೊಳ್ಳಿ. ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಅನ್ಯ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗುವ ಯೋಗ ದೊರಕಲಿದೆ.

ಮೀನ

ನಿರೀಕ್ಷೆಯಲ್ಲಿದ್ದ ಮೂಲದಿಂದ ಹಣಕಾಸಿನ ಅನುಕೂಲ ದೊರೆಯುವ ಸಾಧ್ಯತೆ ಕಂಡುಬರುತ್ತಿದೆ. ಆತಂಕದ ಕ್ಷಣಗಳು ದೂರವಾಗುವ ಸಾಧ್ಯತೆ ಗೋಚರವಾಗುತ್ತಿದೆ. ಬಂಧುಗಳ ಸಹಾಯ ನಿಮಗಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: