
ಪಂಚಾಂಗ :
ವಾರ: ಸೋಮವಾರ, ತಿಥಿ : ಸಪ್ತಮಿ, ನಕ್ಷತ್ರ : ಪೂರ್ವಭಾದ್ರ,
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತ,
ಮಾರ್ಗಶಿರ ಮಾಸ, ಶುಕ್ಲ ಪಕ್ಷ.
ರಾಹುಕಾಲ: 8.04 ರಿಂದ 9.30
ಗುಳಿಕಕಾಲ: 1.47 ರಿಂದ 3.13
ಯಮಗಂಡಕಾಲ: 10.56 ರಿಂದ 12.22
ಮೇಷ
ವಿರೋಧಿಗಳ ವಿಷಯದಲ್ಲಿ ಎಚ್ಚರದಿಂದಿರಿ. ಪ್ರತಿಸ್ಪರ್ಧಿಗಳ ಸವಾಲು ಎದುರಿಸಬೇಕಾದೀತು. ಮನೆಯವರ ಸಹಕಾರದಿಂದಾಗಿ ಎಲ್ಲವೂ ಸುಗಮವಾಗಿ ನಡೆಯಲಿದೆ.
ವೃಷಭ
ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಮುಖ ದಿನವಾಗಲಿದೆ. ನಿರುದ್ಯೋಗಿಗಳ ಜೀವನದಲ್ಲಿ ತಿರುವು ಸಾಧ್ಯತೆ. ಕುಲದೇವತಾ ಆರಾಧನೆಯಿಂದ ಯಶಸ್ಸನ್ನು ಗಳಿಸಲಿದ್ದೀರಿ.
ಮಿಥುನ
ಭೂ ವ್ಯವಹಾರಕ್ಕೆ ಅಷ್ಟೊಂದು ಪ್ರಶಸ್ತವಲ್ಲದ ದಿನ. ಅದರಿಂದ ದೂರವಿರುವುದೇ ಒಳ್ಳೆಯದು. ದಿನಾಂತ್ಯದಲ್ಲಿ ಮನೆಯಲ್ಲಿ ಸಂತೋಷಕರ ವಾತಾವರಣ ಮೂಡಲಿದೆ.
ಕಟಕ
ಕುಲದೇವತಾರಾಧನೆಯಿಂದ ಮಾನಸಿಕ ನೆಮ್ಮದಿ. ಸಾಮಾಜಿಕ ಸ್ಥಾನಮಾನ ದೊರಕುವ ಸಾಧ್ಯತೆ. ಕಲಾವಿದರಿಗೆ ಅನುಕೂಲಕರ ದಿನ. ಧಾನ್ಯ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ.
ಸಿಂಹ
ಈ ದಿನದ ಪ್ರಗತಿ ಅಷ್ಟೊಂದು ಉತ್ತಮ ಅಲ್ಲದಿದ್ದರೂ ಕುಲದೇವತಾ ಆರಾಧನೆಯಿಂದ ವಿಘ್ನಗಳು ದೂರವಾಗಲಿವೆ. ಪತ್ನಿ ಬಂಧುವರ್ಗದವರಿಂದ ಬಂದ ಸಲಹೆಗಳನ್ನು ನಿರಾಕರಿಸದಿರಿ. ಆರೋಗ್ಯ ಭಾಗ್ಯಕ್ಕೆ ಚ್ಯುತಿಯಿಲ್ಲ.
ಕನ್ಯಾ
ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಶೀಘ್ರಗತಿಯಲ್ಲಿ ಲಾಭ ದೊರಕಲಿದೆ. ತೈಲ ವಸ್ತುಗಳ ವ್ಯವಹಾರದಲ್ಲಿ ಉತ್ತಮ ಪ್ರಗತಿ. ಗುರು ಆರಾಧನೆಯಿಂದ ಹೆಚ್ಚಿನ ಯಶಸ್ಸು ಗಳಿಸಲಿದ್ದೀರಿ.
ತುಲಾ
ವಿದ್ಯಾರ್ಥಿಗಳಿಗೆ ಉತ್ತಮ ಫಲ ದೊರಕಿ ಸಂಭ್ರಮಿಸುವಿರಿ. ವಾಸ್ತು – ವಸ್ತ್ರ ವಿನ್ಯಾಸಕಾರರಿಗೆ ಅಧಿಕ ಮನ್ನಣೆ. ನೇಕಾರರಿಗೆ ಉತ್ತಮ ಲಾಭ. ಆರೋಗ್ಯದ ಮೇಲೆ ನಿಗಾ ಇರಲಿ.
ವೃಶ್ಚಿಕ
ಹಿರಿಯರೊಂದಿಗೆ ಮನಃಸ್ತಾಪ. ಇಷ್ಟ ಮಿತ್ರರ ಆಗಮನದಿಂದ ಪರಿಸ್ಥಿತಿ ತಿಳಿಯಾಗಲಿದೆ. ದಿನದಂತ್ಯದಲ್ಲಿ ಯಶಸ್ಸನ್ನು ಕಾಣುವಿರಿ. ದೇವತಾರಾಧನೆಯಿಂದ ಮನಸ್ಸಿಗೆ ಉಲ್ಲಾಸ.
ಧನು
ಉದ್ಯೋಗ ಕ್ಷೇತ್ರದಲ್ಲಿ ಲವಲವಿಕೆಯ ದಿನ. ಮೇಲಧಿಕಾರಿಗಳಿಂದ ಪ್ರಶಂಸೆ. ವಾಹನಗಳಿಂದ ಸ್ವಲ್ಪಮಟ್ಟಿನ ತೊಂದರೆಯ ಸಾಧ್ಯತೆ. ಹೆಚ್ಚಿನ ಅಪಾಯವಿಲ್ಲ.
ಮಕರ
ವೆಚ್ಚದ ಮೇಲೆ ಹಿಡಿತವಿರಲಿ. ಅನಾವಶ್ಯಕ ವಿಷಯಗಳಿಂದ ಮನಸ್ಸಿಗೆ ಕಿರಿಕಿರಿಯುಂಟಾಗಿ ವ್ಯತಿರಿಕ್ತ ಪರಿಣಾಮ ಎದುರಿಸುವಿರಿ. ಪತ್ನಿಯ ಸಕಾಲ ನೆರವಿನಿಂದ ಹಿತಾನುಭವ.
ಕುಂಭ
ವಾಹನ ಖರೀದಿ ಯೋಗ ಕಂಡುಬರುತ್ತಿದೆ. ಆರೋಗ್ಯದಲ್ಲಿ ಸುಧಾರಣೆ. ಕೃಷಿ ಕೆಲಸ–ಕಾರ್ಯಗಳಲ್ಲಿ ಪ್ರಗತಿ. ಶಿವನ ಆರಾಧನೆಯಿಂದ ಹೆಚ್ಚಿನ ಅನುಕೂಲ ದೊರೆಯಲಿದೆ.
ಮೀನ
ಗುರುಹಿರಿಯರಿಂದ ಪ್ರಶಂಸೆ. ಆಕಸ್ಮಿಕ ಧನ ಲಾಭ. ಪ್ರೀತಿಪಾತ್ರದವರಿಂದ ಸ್ವಲ್ಪಮಟ್ಟಿನ ಕಿರಿಕಿರಿ. ಶಿವನ ಅನುಗ್ರಹದಿಂದ ಅನುಕೂಲ.