
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹಿಮಂತ ಋತು,ಮಾರ್ಗಶಿರ ಮಾಸ,
ಶುಕ್ಲ ಪಕ್ಷ,ಪಂಚಮಿ,
ಶನಿವಾರ, ಧನಿಷ್ಠಾ ನಕ್ಷತ್ರ,
ರಾಹುಕಾಲ 9:28 ರಿಂದ 10:54
ಗುಳಿಕಕಾಲ 6: 37 ರಿಂದ 08:02
ಯಮಗಂಡಕಾಲ 01:45 ರಿಂದ 03:11
ಮೇಷ
ಹೊಸ ವಸ್ತ್ರ ಖರೀದಿ ಸಾಧ್ಯತೆ. ಶುಭಸಮಾರಂಭಗಳಲ್ಲಿ ಭಾಗಿಯಾಗುವ ಸಾಧ್ಯತೆ. ದೂರದಿಂದ ಸಹೋದರಿಯ ಆಗಮನ. ಅನಿರೀಕ್ಷಿತ ಧನಾಗಮನ. ಆರೋಗ್ಯದಲ್ಲಿ ಚೇತರಿಕೆ. ಈ ದಿನ ಮನಸ್ಸಿಗೆ ನೆಮ್ಮದಿ.
ವೃಷಭ
ಆರಂಭಶೂರತ್ವ ಬೇಡ. ಮಾಡುವ ಕೆಲಸದಲ್ಲಿ ಜಾಗೃತೆ ಇರಲಿ. ನಿಧಾನವಾದರೂ ಕಾರ್ಯಸಾಧನೆಯಾಗಲಿದೆ. ಸಾಲಗಾರರ ಕಾಟ ಸಾಧ್ಯತೆ. ಜಿಗುಪ್ಸಾ ಮನೋಭಾವ ಬೇಡ. ಯಾವುದೇ ಕಾರಣಕ್ಕೂ ಧೈರ್ಯಗೆಡಬೇಡಿ.
ಮಿಥುನ
ಸಂಗಾತಿಯ ಸಹಕಾರದಿಂದ ಕಾರ್ಯದಲ್ಲಿ ಪ್ರಗತಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಚರ್ಚೆ ನಡೆಯುವ ಸಾಧ್ಯತೆ. ಸಾಯಂಕಾಲ ಸಂತೋಷ ಕೂಟದಲ್ಲಿ ಭಾಗಿಯಾಗಲಿದ್ದೀರಿ. ದೇವತಾ ದರ್ಶನ ಭಾಗ್ಯ ಕಂಡುಬರುವುದು.
ಕಟಕ
ನಿಮಗೆ ಬೇಕಾದ ಸೌಲತ್ತುಗಳು ಶೀಘ್ರದಲ್ಲಿ ದೊರೆಯಲಿವೆ. ಪ್ರೇಮಿಗಳಿಗೆ ಆಶೋತ್ತರಗಳು ಕೈಗೂಡುವ ಶುಭದಿನ. ಮನೆಯಲ್ಲಿ ಶುಭ ಸಮಾಚಾರ ನಿರೀಕ್ಷಣೆ. ಕೆಲಸ–ಕಾರ್ಯಗಳಲ್ಲಿ ಪ್ರಗತಿ ನಿಮ್ಮದಾಗಲಿದೆ.
ಸಿಂಹ
ರಾಜಕೀಯದಲ್ಲಿ ಉನ್ನತ ಸ್ಥಾನ ಲಭ್ಯವಾಗಲಿದೆ. ಗ್ರಹಬಲಗಳು ನಿಮ್ಮ ವ್ಯಕ್ತಿತ್ವವನ್ನು ಔಚಿತ್ಯಪೂರ್ಣ ಸ್ಥಾನಕ್ಕೆ ಕೊಂಡೊಯ್ಯಲಿವೆ. ಸಿಡುಕುತನದ ಸ್ವಭಾವ ಬೇಡ. ಸಮಾಜ ಸುಧಾರಕರಿಗೆ ನೆಮ್ಮದಿ.
ಕನ್ಯಾ
ಸ್ನೇಹಿತರ ಕಠಿಣ ಪರಿಶ್ರಮ ನಿಮಗೆ ಅನುಕೂಲವನ್ನು ತರಲಿದೆ. ಕಲಾವಿದರು, ಸಿನಿಮಾರಂಗದವರಿಗೆ ಹೊಸ ಹೊಸ ಅವಕಾಶ ಸಿಗಲಿದೆ. ಆತ್ಮವಿಶ್ವಾಸದ ನಡೆ ಸಹಕಾರಿಯಾಗಲಿದೆ.
ತುಲಾ
ಕುಗ್ಗಿಹೋದ ಮನಸ್ಥೈಯ ದೃಢತೆಯನ್ನು ಪಡೆಯಲಿದೆ. ಧೈರ್ಯದಿಂದಾಗಿ ಯಶಸ್ಸು. ಹಳೆಯ ಸಾಲವನ್ನು ತೀರಿಸಲು ಸಕಾಲ. ಉದ್ಯೋಗದ ಬದಲಾವಣೆ ಬೇಡವೇ ಬೇಡ
ವೃಶ್ಚಿಕ
ಸಿಮೆಂಟ್ ಮತ್ತು ಕಬ್ಬಿಣ ಮುಂತಾದ ಗೃಹನಿರ್ಮಾಣ ವಸ್ತುಗಳ ವ್ಯಾಪಾರದಲ್ಲಿ ಪ್ರಗತಿ. ಹಿರಿಯರ ಆಗಮನ ಮತ್ತು ಮಾರ್ಗದರ್ಶನಕ್ಕಾಗಿ ಕಾಯುತ್ತಿರುವ ನಿಮಗೆ ಶುಭ ಸುದ್ದಿ ಸಿಗಲಿದೆ. ಕುಲದೇವರ ಆರಾಧನೆ ಅಗತ್ಯ.
ಧನು
ನಿತ್ಯ ಕೆಲಸಗಳನ್ನು ಮುಂದೂಡಿ ಸಂಸಾರದ ಬಗ್ಗೆ ಗಮನ ಕೊಡುವುದು ಲೇಸು. ಅನಿರೀಕ್ಷಿತ ಪ್ರಯಾಣ ಸಾಧ್ಯತೆ. ಸಂಗಾತಿಯ ಆರೋಗ್ಯದ ಕಡೆ ಗಮನವಿರಲಿ. ಮನಸ್ಸಿನ ನಿಯಂತ್ರಣಕ್ಕೆ ದೇವಿಯ ಆರಾಧನೆ ಮಾಡಿ.
ಮಕರ
ಚಿಲ್ಲರೆ ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ನೆಮ್ಮದಿ. ಮುಂಚೂಣಿಯಲ್ಲಿರುವ ನಿರ್ಧಾರವನ್ನು ಸರಿದೂಗಿಸಿಕೊಂಡು ನಡೆಯುವುದು ಉತ್ತಮ. ಆರೋಗ್ಯದ ಬಗ್ಗೆ ಜಾಗೃತೆ ವಹಿಸಿ.
ಕುಂಭ
ಪತ್ರಿಕಾರಂಗ ಮುದ್ರಣ ಉದ್ಯಮದವರಿಗೆ ಸಂಚಲನ ಮೂಡುವ ದಿನ. ಸಕಾರಾತ್ಮಕ ಮನೋಭಾವವನ್ನು ರೂಢಿಸಿಕೊಳ್ಳುವುದು ಉನ್ನತ ಸ್ಥಾನಕ್ಕೇರಲು ನಿಮಗೆ ದಾರಿಯಾಗಲಿದೆ.
ಮೀನ
ಕೆಲಸದಲ್ಲಿ ಭಿನ್ನಾಭಿಪ್ರಾಯಗಳು ಒದಗಿ ಬಂದರೂ ಚಿಂತಿಸುವ ಅವಶ್ಯಕತೆ ಇಲ್ಲ. ಹಾಗೆಂದು ಎಲ್ಲಾ ವಿಷಯಗಳಲ್ಲೂ ಮೂಗು ತೂರಿಸಬೇಡಿ. ಸ್ನೇಹಿತರ ಅನಿರೀಕ್ಷಿತ ಆಗಮನದಿಂದ ಸಂತೋಷ ಪ್ರಾಪ್ತಿಯಾಗಲಿದೆ.