
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಹಿಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ,
ತೃತೀಯ, ಗುರುವಾರ, ಉತ್ತರಾಷಾಡ ನಕ್ಷತ್ರ
ರಾಹುಕಾಲ: 01:45 ರಿಂದ 03:11
ಗುಳಿಕಕಾಲ: 09:28 ರಿಂದ 10:54
ಯಮಗಂಡಕಾಲ: 06:37 ರಿಂದ 08:02
ಮೇಷ
ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ. ಮನೆಗೆ ಅತ್ಯಂತ ಪ್ರಿಯವ್ಯಕ್ತಿಗಳ ಆಗಮನ ಸಾಧ್ಯತೆ. ತೂಕದ ಮಾತುಗಳಿಂದಾಗಿ ಗೌರವ ಲಭ್ಯವಾಗಲಿದೆ. ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆಯ ವ್ಯವಹಾರ ಮಾಡುವುದು ಉತ್ತಮ.
ವೃಷಭ
ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಕಿರಿಕಿರಿ ಸಾಧ್ಯತೆ. ವಾಹನ ಚಲಾನೆಯಲ್ಲಿ ಅತ್ಯಂತ ಎಚ್ಚರಿಕೆ ವಹಿಸಿ. ಮಹಿಳೆಯರಿಗೆ ಶಸ್ತ್ರಗಳಿಂದ ನೋವುಂಟಾಗುವ ಸಾಧ್ಯತೆ.
ಮಿಥುನ
ಕುಟುಂಬದಲ್ಲಿ ಸಮಸ್ಯೆಗಳು ನಿರಾಯಾಸವಾಗಿ ಪರಿಹಾರವಾಗಲಿವೆ. ನ್ಯಾಯಾಲಯಗಳಲ್ಲಿನ ತೀರ್ಪು ವಿಳಂಬವಾಗುವ ಸಾಧ್ಯತೆ. ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು.
ಕಟಕ
ಆರ್ಥಿಕ ಸ್ಥಿತಿ ಉತ್ತಮಗೊಳ್ಳುವ ಸಾಧ್ಯತೆ. ಸೌಂದರ್ಯವರ್ಧಕ, ಅಲಂಕಾರಿಕ ವಸ್ತುಗಳ ವ್ಯವಹಾರಸ್ಥರಿಗೆ ಉತ್ತಮ ವ್ಯವಹಾರ. ಮಾತು ಹಿತಮಿತವಾಗಿರುವುದು ಒಳ್ಳೆಯದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ಸಿಂಹ
ಮಹಿಳೆಯರಿಗೆ ಸಾಮಾಜಿಕ ಗೌರವ ದೊರಕಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅನುಕೂಲಕರ ವಾತಾವರಣ. ಹಿರಿಯರ ಮಾತುಗಳನ್ನು ನಿರ್ಲಕ್ಷ್ಯ ಮಾಡದಿರಿ.
ಕನ್ಯಾ
ವ್ಯಾಪಾರಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ವಸ್ತ್ರಾಭರಣ ಖರೀದಿ ಮಾಡುವ ಸಾಧ್ಯತೆ ಇದೆ. ನೂತನ ಕಾರ್ಯಯೋಜನೆಯನ್ನು ನಿರೂಪಿಸಲು ಸಕಾಲ.
ತುಲಾ
ನಿವೇಶನ ಅಥವಾ ಗ್ರಹಖರೀದಿ ಸಾಧ್ಯತೆ. ದಾಂಪತ್ಯ ಸುಖ ಸಿಗಲಿದೆ. ನಿತ್ಯದ ವ್ಯವಹಾರಗಳು ಎಂದಿನಂತೆ ನಡೆಯಲಿದೆ. ಹಿತಶತ್ರುಗಳ ಬಾಧೆ ಎದುರಾಗುವ ಸಾಧ್ಯತೆ ಕಂಡುಬರುವುದು.
ವೃಶ್ಚಿಕ
ಉದ್ಯಮದಲ್ಲಿ ಯಶಸ್ಸು. ಹೊಸ ಯಂತ್ರೋಪಕರಣ, ವಾಹನಗಳನ್ನು ಖರೀದಿಸುವ ಯೋಗ. ಮಕ್ಕಳ ಪ್ರಗತಿಯ ವಿಚಾರದಲ್ಲಿ ಸಂತಸದ ಸುದ್ದಿ ಕೇಳಲಿದ್ದೀರಿ. ವ್ಯವಹಾರ ಕುಶಲತೆಯಿಂದಾಗಿ ಧನಪ್ರಾಪ್ತಿ.
ಧನು
ಆರೋಗ್ಯದಲ್ಲಿ ಸುಧಾರಣೆ. ಕಳೆದ ವಸ್ತುಗಳು ಅಥವಾ ಬರಬೇಕಾದ ಬಾಕಿ ಹಣವನ್ನು ಪಡೆದುಕೊಳ್ಳುವ ಸಾಧ್ಯತೆ. ವೃತ್ತಿಯಲ್ಲಿ ದಿನದಮಟ್ಟಿಗೆ ಹೊಂದಾಣಿಕೆಯಿಂದಿರುವುದು ಉತ್ತಮ.
ಮಕರ
ಮಕ್ಕಳ ಪ್ರಗತಿಯಿಂದಾಗಿ ಮನೆಯಲ್ಲಿ ಹಬ್ಬದ ವಾತಾವರಣ. ದೂರಪ್ರಯಾಣ ಯೋಗ ಕಂಡುಬರುತ್ತಿದೆ. ಮಹಿಳೆಯರು ಸ್ವಲ್ಪಮಟ್ಟಿನ ನೋವನ್ನು ಅನುಭವಿಸಬೇಕಾದೀತು. ಬಂಧುಗಳಿಂದ ಸಕಾಲಿಕ ನೆರವು.
ಕುಂಭ
ಉದ್ಯೋಗದಲ್ಲಿರುವವರಿಗೆ ಮೇಲಧಿಕಾರಿಗಳಿಂದ ಪ್ರಶಂಸೆಯ ಮಾತುಗಳು. ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗದ ಅವಕಾಶ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅನುಕೂಲ.
ಮೀನ
ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ಸು. ಸೋಲು–ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವುದು ಒಳಿತು. ವ್ಯವಹಾರದಲ್ಲಿ ಹೆಚ್ಚಿನ ಲಾಭದ ನಿರೀಕ್ಷೆ. ಉತ್ತಮ ಆರೋಗ್ಯವನ್ನು ಪಡೆಯಲಿದ್ದೀರಿ.