Design a site like this with WordPress.com
Get started

ಡಿಸೆಂಬರ್15, ಮಂಗಳವಾರ;2020 :ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ. ವಾರ : ಮಂಗಳವಾರ,
ತಿಥಿ : ಪಾಡ್ಯ, ನಕ್ಷತ್ರ : ಮೂಲ,
ರಾಹುಕಾಲ: 3.09 ರಿಂದ 4.34
ಗುಳಿಕಕಾಲ: 12.18 ರಿಂದ 1.43
ಯಮಗಂಡಕಾಲ: 9.26 ರಿಂದ 10.52

ಮೇಷ

ಕೋರ್ಟ್‌ ಸಂಬಂಧಿ ವ್ಯವಹಾರಗಳಲ್ಲಿ ಜಯ. ವ್ಯವಹಾರದಲ್ಲಿ ಅಧಿಕ ಲಾಭ ಹೊಂದುವಿರಿ. ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯ ಆಗಬಹುದು. ಶಿವನ ಆರಾಧನೆಯಿಂದ ಯಶಸ್ಸು.

ವೃಷಭ

ಸಾಂಸಾರಿಕ ಬದುಕು ಸಂತೋಷ ಕೊಡುವ ದಿನ. ಮಕ್ಕಳಿಂದ ಸಂತೋಷ ಪ್ರಾಪ್ತಿ. ತಂದೆ ತಾಯಿಗಳಿಂದ ಮಕ್ಕಳಿಗೆ ಸಂತೋಷ. ದೇವಿ ಆರಾಧನೆಯಿಂದ ಉತ್ತಮ ಫಲ.

ಮಿಥುನ

ಕಾರ್ಯದಲ್ಲಿ ಕೀರ್ತಿ, ಯಶಸ್ಸು ಲಾಭಗಳು ನಿಮ್ಮದಾಗಲಿವೆ. ಒಟ್ಟಾರೆ ಇಂದು ಉತ್ತಮ ಫಲವನ್ನು ನಿರೀಕ್ಷಿಸುವ ದಿನ. ಸಂಸಾರದಲ್ಲಿ ಸಂತೋಷದ ದಿನ. ಗುರುವಿನ ಆರಾಧನೆ ಮಾಡಿ.

ಕಟಕ

ಸರ್ಕಾರಿ ಕೆಲಸಗಳಲ್ಲಿ ಯಶಸ್ಸು ಕಾಣುವಿರಿ. ಉದ್ಯೋಗದಲ್ಲಿ ಸಮಾಧಾನಕರ ವಾತಾವರಣ. ಹಿರಿಯ ಅಧಿಕಾರಿಗಳಿಂದ ಕೆಲಸದ ಒತ್ತಡ. ದೇವಿ ಆರಾಧನೆಯಿಂದ ಕಾರ್ಯಗಳು ಸುಗಮ.

ಸಿಂಹ

ವಸ್ತ್ರ ವಿನ್ಯಾಸಕಾರರಿಗೆ ಉತ್ತಮ ಲಾಭ. ವಾಸ್ತುತಜ್ಞರು ಒಳಾಂಗಣ ವಿನ್ಯಾಸಕಾರರಿಗೆ ಅತ್ಯುತ್ತಮ ಬೇಡಿಕೆ ಬರಲಿದೆ. ಗೃಹನಿರ್ಮಾಣ ಆರಂಭ. ವಿದ್ಯಾರ್ಥಿಗಳಿಗೆ ಉತ್ತಮ ಫಲ.

ಕನ್ಯಾ

ಉದ್ಯೋಗದಲ್ಲಿರುವ ಒತ್ತಡಗಳು ಕಮ್ಮಿಯಾಗಿ ಮನಸ್ಸಿಗೆ ಸಂತೋಷ ಪ್ರಾಪ್ತಿ. ಭೂ ವ್ಯವಹಾರಗಳಲ್ಲಿ ಅಪಜಯ ಕಂಡುಬರುವುದು. ಆರೋಗ್ಯದಲ್ಲಿ ಸಮಾಧಾನ. ದೇವಿ ಆರಾಧನೆಯಿಂದ ಉತ್ತಮ ಫಲ.

ತುಲಾ

ವಿದ್ಯಾರ್ಥಿಗಳಿಗೆ ಆಲಸ್ಯ ಕಂಡುಬರುವುದು. ಅತಿಯಾದ ಶ್ರಮದಿಂದ ಉತ್ತಮ ಫಲಪ್ರಾಪ್ತಿ. ಗುರುಗಳಿಂದ ಪ್ರಶಂಸೆಗಳು ದೊರೆತು ಮನಸ್ಸಿಗೆ ಸಂತೋಷ – ವಿಷ್ಣು ಆರಾಧನೆ ಮಾಡಿ.

ವೃಶ್ಚಿಕ

ರಾಜಕೀಯ ವಿಷಯಗಳ ಬಗ್ಗೆ ಗಂಭೀರ ಚಿಂತನೆ. ಚಿಲ್ಲರೆ ವ್ಯಾಪಾರಿಗಳಿಗೆ ಉತ್ತಮ ಲಾಭಾದಿಗಳು. ಸಾಮಾಜಿಕ ಕೆಲಸಗಳಲ್ಲಿ ಆಸಕ್ತಿ. ಸುಬ್ರಹ್ಮಣ್ಯ ಆರಾಧನೆ ಶ್ರೇಯಸ್ಕರ.

ಧನು

ಬಹಳ ಕಾಲದಿಂದ ಯೋಚಿಸಿದ್ದ ಕಾರ್ಯಗಳಲ್ಲಿ ಯಶಸ್ಸು. ಆರೋಗ್ಯದಲ್ಲಿ ವ್ಯತ್ಯಯವಾಗಬಹುದು. ನಿಮ್ಮ ಉತ್ತಮ ಗುಣಗಳನ್ನು ದುರ್ಬಳಕೆ ಮಾಡಿಕೊಳ್ಳದೇ ಮುನ್ನಡೆಯಿರಿ. ವಿಷ್ಣು ಆರಾಧನೆ ಮಾಡಿ.

ಮಕರ

ವಾಹನಾದಿಗಳಿಂದ ಸಂತೋಷ ಪಡುವ ದಿನ. ಸಮಾಜದಲ್ಲಿ ಪುರಸ್ಕಾರ. ಆರೋಗ್ಯದಲ್ಲಿ ಉತ್ತಮ ಫಲ. ಕಬ್ಬಿಣ ವಸ್ತುಗಳ ವಿಚಾರದಲ್ಲಿ ಜಾಗೃತೆ ಅಗತ್ಯ. ಗುರುವಿನ ಆರಾಧನೆಯಿಂದ ಉತ್ತಮ ಫಲ.

ಕುಂಭ

ಸಂಕಲ್ಪಿತ ಕೆಲಸಗಳಲ್ಲಿ ಯಶಸ್ಸು ಸಾಧ್ಯತೆ. ಹಿರಿಯರ ಮತ್ತು ಸ್ನೇಹಿತರ ಸೂಕ್ತ ಸಲಹೆಯಿಂದ ಕಾರ್ಯಗಳಲ್ಲಿ ಯಶಸ್ಸು. ಉತ್ತಮ ಆರೋಗ್ಯ ಪಡೆಯುವಿರಿ. ಶಿವನ ಆರಾಧನೆ ಉತ್ತಮ.

ಮೀನ

ವ್ಯವಹಾರದಲ್ಲಿ ಒತ್ತಡಗಳು ಅಧಿಕವಾಗಿರುವುದು. ಆದರೂ ಆರ್ಥಿಕವಾಗಿ ಲಾಭ ಸಿಗಲಿದೆ. ಮನಸ್ಸಿಗೆ ಸಂತೋಷಕರವಾದ ವಾತಾವರಣ ಇರುವುದು. ಸುಬ್ರಹ್ಮಣ್ಯ ಆರಾಧನೆ ಶ್ರೇಯಸ್ಕರ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: