
ಬೆಂಗಳೂರು: ಧರಣಿ ನಿರತ ಸಾರಿಗೆ ನೌಕರರ ಜೊತೆಗೆ ಇಂದು ನಡೆದ ಸಭೆ ಯಶಸ್ಸು ಕಂಡಿದ್ದು, ಕಳೆದ ಮೂರು ದಿವಸದಿಂದ ನಡೆಸುತ್ತಿದ್ದ ರಾಜ್ಯ ವ್ಯಾಪ್ತಿ ಮುಷ್ಕರವನ್ನು ವಾಪಸ್ಸು ಪಡೆಯಲಾಗಿದೆ. ಈ ನಡುವೆ ಇಂದು ಸಂಜೆಯಿಂದಲೇ ಬಸ್ ಸಂಚಾರ ಶುರುವಾಗಲಿದೆ ಎನ್ನಲಾಗಿದೆ.
ಇಂದು ಸಾರಿಗೆ ಸಚಿವ ಸವದಿ, ಕಂದಾಯ ಸಚಿವ ಆಶೋಕ್, ಬಸವರಾಜ್ ಬೊಮ್ಮಾಯಿವರಿದ್ದ ಸಭೆಯಲ್ಲಿ ನೌಕರರ ಮುಖಂಡರು ಮುಷ್ಕರ ವಾಪಸ್ ಪಡೆಯಲು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನು ಮಾಡಬೇಕು ಎನ್ನುವ ಬೇಡಿಕೆಯನ್ನು ಹೊರತು ಪಡಿಸಿ ಉಳಿದ ಎಲ್ಲಾ ಬೇಡಿಕೆಯನ್ನು ಈಡೇರಿಸಲಾಗಿದೆ ಎನ್ನಲಾಗಿದೆ.ಇನ್ನೂ ನೌಕರರ ವೇತನದ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಬೇಡಿಕೆಯನ್ನು ಈಡೇರಿಸಲು ಮುಂದಾಗಿದ್ದು, ರಾಜ್ಯ ಸರ್ಕಾರದ ಅರ್ಥಿಕ ಪರಿಸ್ಥಿತಿ ಸುಧಾರಿಸಿದ ಬಳಿಕ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಅಂತ ಸಭೆಯಲ್ಲಿ ತಿಳಿಸಲಾಗಿದೆ