
ಹೊಟ್ಟೆಯೊಳಗೆ ವಿಷ ಸೇರಿದರೆ ಆಡುಮುಟ್ಟದ ಬಳ್ಳಿ ( ಅಜದ್ವೇಷಿ ) ಸೇವಿಸಿ ಮೇಕೆ ಭೂಮಿಯಲ್ಲಿ ಬೆಳೆಯುವ ಎಲ್ಲಾ ರೀತಿಯ ಗಿಡದ ಸೊಪ್ಪನ್ನು ಮೇಯುತ್ತೆ, ಆದರೆ ಈ ಗಿಡದ ಸೊಪ್ಪನ್ನು ಮಾತ್ರ ತಿನ್ನೋದಿಲ್ಲ. ಅದಕ್ಕೆ ಇದನ್ನು ಆಡು ಮುಟ್ಟದ ಬಳ್ಳಿ ಎಂದು ಕರೆಯುತ್ತಾರೆ. ಇದರ ಸಮೂಲದ ಯಾವುದೇ ಭಾಗವನ್ನು ಮಾನವರಾಗಲಿ, ಪ್ರಾಣಿಗಳಾಗಲಿ ಸೇವಿಸಿದರೆ ತಕ್ಷಣ ವಾಂತಿಯಾಗುತ್ತೆ.
ಲತಾಕ್ಷೀರಿ, ಅಂತಮೂಲ್, ಅನಂತಮೂಲ, ವಳ್ಳಿಪಾರಿ, ಜಂಗ್ಲಿ ಪಿಕ್ವಮ್, ಪಿತ್ಕಾರಿ, ಕಿರಮಂಜಿ, ವೆರ್ರಿಪಾಲ, ಕುಕ್ಕಪಾಲ, ವೆಟ್ಟಿಪಾಲ,ಮೇಕ ಮೇಯಿನಿ ಆಕು, ಶ್ವಾಸಘ್ನಿ, ನಂಜರೊಪ್ಪನ್, ನೇಪಾಳದಬೇರು, ನಾಯಿಹಾಲೆ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಆಡು ಮುಟ್ಟದ ಬಳ್ಳಿ ತನ್ನೊಳಗೆ ಅದ್ಭುತವಾದ ಔಷಧೀಯ ಗುಣಗಳನ್ನು ತುಂಬಿಕೊಂಡಿದ್ದು, ಅನೇಕ ವ್ಯಾಧಿಗಳನ್ನು ಗುಣಪಡಿಸಲು ‘ರಾಮಬಾಣ’ದಂತೆ ಕೆಲಸ ಮಾಡುತ್ತೆ. ಪುರಾತನ ಕಾಲದಿಂದಲೂ ಭಾರತೀಯ ಆಯುರ್ವೇದ, ಸಿದ್ಧ, ಯುನಾನಿ, ಪಾರಂಪರಿಕ ವೈದ್ಯ ಪದ್ಧತಿಗಳಲ್ಲಿ ಬಳಸುತ್ತಾ ಬಂದಿದ್ದಾರೆ.ವಿಷಪೂರಿತ ಆಹಾರ ಅಥವಾ ವಿಷ ಪದಾರ್ಥಗಳು ಹೊಟ್ಟೆಗೆ ಸೇರಿದಾಗ ಅದನ್ನು ಹೊರಹಾಕಲು, ಆಡು ಮುಟ್ಟದ ಬಳ್ಳಿಯ ಬೇರಿನ ಕಷಾಯ ಅಥವಾ ಎಲೆಗಳನ್ನು ಜಜ್ಜಿ ರಸವನ್ನು ತೆಗೆದು ಕುಡಿಸುವ ರೂಢಿ ಈಗಲೂ ಗ್ರಾಮಾಂತರ ಪ್ರದೇಶಗಳಲ್ಲಿದೆ. ಇದನ್ನು ಕುಡಿದ ತಕ್ಷಣ ವಾಂತಿ ಆಗಲೇಬೇಕು. ಅಂತಹ ತೀಕ್ಷ್ಣವಾದ ವಾಕರಿಕೆ ಗುಣ ಈ ಗಿಡದಲ್ಲಿದೆ.
- ಅನೇಕ ಕಡೆ ಚೇಳು, ವಿಷಕ್ರಿಮಿಗಳು, ವಿಷಪೂರಿತ ಹಾವುಗಳು ಕಡಿದು ನಂಜೇರಿದಾಗ, ವಾಂತಿ ಮಾಡಿಸಲು ನಾಟಿವೈದ್ಯರು ಈಗಲು ಬಳಸುತ್ತಾರೆ.
- ದೇಹದಲ್ಲಿ ರಕ್ತಕೆಟ್ಟು ಕೀವು ತುಂಬಿದ ವ್ರಣಗಳು, ಗಾಯ, ಬೊಬ್ಬೆಗಳು, ನಂಜಾಗದಂತೆ, ಒಡೆಯಲು ಆಡು ಮುಟ್ಟದ ಬಳ್ಳಿಯ ಎಲೆಗಳನ್ನು ಕೆಂಡದಮೇಲೆ ಹಾಕಿ ಬಿಸಿಮಾಡಿ, ಮೇಲೆ ಹಾಕಿ ಕಟ್ಟು ಕಟ್ಟುತ್ತಾರೆ. ಇದರಲ್ಲಿ ಪ್ರಬಲ ವಿಷನಿವಾರಕ ಗುಣವಿದೆ ಎಂದು ಸಂಶೋಧನೆಗಳಿಂದ ರುಜುವತ್ತಾಗಿದೆ.
- ಶ್ವಾಸಕೋಶ, ಶ್ವಾಸನಾಳದಲ್ಲಿನ ಕಲ್ಮಶಗಳನ್ನು ಹೊರಹಾಕಿ, ಉಸಿರಾಟ ಸರಾಗವಾಗಲು ಸಹ ಇದನ್ನು ಬಳಸುತ್ತಾರೆ.
- ಅಸ್ತಮಾವ್ಯಾಧಿ ಇರುವವರು ವಿಧವಿಧವಾದ ತೊಂದರೆಗಳಿಂದ ಬಳಲುತ್ತಿರುತ್ತಾರೆ. ಅಂತವರು ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದೊಂದು ಎಲೆಯನ್ನು ಜಗಿದು ತಿನ್ನುವುದರಿಂದ ಹೊಟ್ಟೆಯಲ್ಲಿ ಇರುವುದೆಲ್ಲ ವಾಂತಿಯಾಗುವುದಲ್ಲದೇ, ಶ್ವಾಸಕೋಶ, ಶ್ವಾಸನಾಳದಲ್ಲಿನ ಕಫವು ಕರಗಿ, ವಾಂತಿಯಾಗಿ ಹೊರಬಂದು ಶ್ವಾಸಕೋಶ ಶುದ್ಧಿಯಾಗುತ್ತೆ