Design a site like this with WordPress.com
Get started

ವಾಹನ ಸವಾರರಿಗೆ ಗುಡ್ ನ್ಯೂಸ್ : ಕೊರೋನಾ ಕಾಲದಲ್ಲಿ ‘ಬಳಕೆಗೆ ತಕ್ಕಂತೆ ವಾಹನ ವಿಮೆ ಪಾವತಿ’ ಸೌಲಭ್ಯ

ಸ್ಪೆಷಲ್ ಡೆಸ್ಕ್ : ಕೋವಿಡ್‍-19 ಸಂಕಷ್ಟದ ಈ ಕಾಲಘಟ್ಟದಲ್ಲಿ ಬಹುತೇಕ ಕಂಪನಿಗಳು ವರ್ಕ್‍ ಫ್ರಂ ಹೋಮ್ ನೀತಿಯನ್ನು ಅಳವಡಿಸಿಕೊಂಡಿರುವ ಕಾರಣ, ರಾಷ್ಟ್ರವ್ಯಾಪಿ ನಾವೆಲ್ಲ ವಾಹನ ಚಲಾಯಿಸುವ ಪ್ರಮಾಣ ಕಿಲೋಮೀಟರ್‍ ಲೆಕ್ಕದಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ಮಾರ್ಚ್ ಮಧ್ಯಭಾಗದಿಂದ ಜೂನ್‍ ಮೊದಲ ವಾರದ ತನಕದ ಅವಧಿಯಲ್ಲಿ ದೇಶಾದ್ಯಂತ ವಾಹನ ಸಂಚಾರ ಬಹುತೇಕ ಶೇಕಡ 50 ಕಡಿಮೆಯಾಗಿದೆ. ಇದು ನಿಜವಾಗಿಯೂ ಸ್ವಲ್ಪ ವಿಚಿತ್ರವಾದ ಕಾಲಘಟ್ಟವಾಗಿದ್ದು, ನಮ್ಮ ಬದುಕಿನ ಎಲ್ಲ ಆಯಾಮಗಳಲ್ಲಿ ಅಸಾಧಾರಣ ಬದಲಾವಣೆಗಳು ಸಾಮಾನ್ಯವಾಗತೊಡಗಿವೆ. ರಾಷ್ಟ್ರವ್ಯಾಪಿ ಉದ್ಯೋಗಿಗಳನ್ನು (ವರ್ಕ್‍ ಫ್ರಂ ಹೋಮ್) ಮನೆಯಿಂದಲೇ ಕೆಲಸ ಮಾಡುವಂತೆ ಉತ್ತೇಜಿಸಲಾಗುತ್ತಿದೆ. ಬಹುತೇಕ ಶಾಪಿಂಗ್‍ ಈಗ ಆನ್‍ಲೈನ್‍ ಮೂಲಕವೇ ಆಗುತ್ತಿದೆ. ಅಲ್ಲದೆ, ನಾವು ಇದಕ್ಕೂ ಮೊದಲು ಬಳಸುತ್ತಿದ್ದ ಅನೇಕ ಸಂಗತಿಗಳ ಬಳಕೆಯ ವಿಧಾನವೂ ಬದಲಾಗಲಿವೆ. ಪ್ರತಿಯೊಂದು ಕಡೆಯೂ ಬದಲಾವಣೆಯಾಗುತ್ತಿರಬೇಕಾದರೆ ವಿಮೆಯೂ ಯಾಕೆ ಅದರಿಂದ ಹೊರಗೆ ಉಳಿಯುತ್ತದೆ?

ಹಾಗಾಗಿ, ನಾವು ಈಗ ಕೊನೆಗೂ ಭಾರತದಲ್ಲಿ ಬಳಕೆ ಆಧಾರಿತ ಮೋಟಾರು ವಿಮೆಯನ್ನು ಹೊಂದಿದ್ದೇವೆ. ಇದರಂತೆ, ಹೊಸ ಮಾದರಿಯ ಕಾರು ವಿಮಾ ಪಾಲಿಸಿಗಳನ್ನು ವಿವಿಧ ವಿಮಾ ಕಂಪನಿಗಳು ಬಿಡುಗಡೆ ಮಾಡಿದೆ. ಇದರಲ್ಲಿ, ಒಂದು ಪೂರ್ಣ ವರ್ಷಕ್ಕೆ ವಿಮೆಯ ಪ್ರೀಮಿಯಂ ಪಾವತಿಸುವ ಬದಲು ಇನ್ನು ಕಾರು ಮಾಲೀಕರು ಅವರ ವಾಹನವನ್ನು ಎಷ್ಟು ಕಿಲೋಮೀಟರ್ ಚಲಾಯಿಸಲು ಬಯಸುತ್ತಾರೋ ಅಷ್ಟಕ್ಕೆ ವಿಮೆಯ ಪ್ರೀಮಿಯಂ ಪಾವತಿಸಿದರೆ ಸಾಕು.  ನಿಜವಾಗಿ ಎಷ್ಟು ಡ್ರೈವ್ ಮಾಡುತ್ತೀರೋ ಅಷ್ಟನ್ನು ಆಧರಿಸಿದ ಬೆಲೆಯ ಕಾರು ವಿಮೆಯ ಹುಡುಕಾಟದಲ್ಲಿ ಇರುವವರಿಗೆ ಬಹುಶಃ “ನಿಮ್ಮ ಬಳಕೆಗೆ ತಕ್ಕಂತೆ ವಿಮೆ(pay-as-you-use insurance)” ಉತ್ತರವಾಗಿರಲಿದೆ. ಕಳೆದ ಕೆಲವು ವಾರಗಳಲ್ಲಿ, ಬಹಳಷ್ಟು ವಿಮಾ ಕಂಪನಿಗಳು ನಿಮ್ಮ ಬಳಕೆಗೆ ತಕ್ಕಂತೆ ವಿಮೆಯನ್ನು ಶುರುಮಾಡಿವೆ.  ಹೆಚ್ಚಾಗಿ ಸಂಚಾರದಲ್ಲೇ ಇರುವ ಚಾಲಕರಿಗೆ ಈ ವಿಮಾ ಯೋಜನೆಗಳು ಅವರ ಕಾರು ವಿಮೆಯ ವೆಚ್ಚವನ್ನು ತಗ್ಗಿಸುವ ಅವಕಾಶವನ್ನು ನೀಡಲಿವೆ.

ಎಡೆಲ್‍ವೈಸ್‍ ಜನರಲ್ ಇನ್ಶೂರೆನ್ಸ್‍ (ಇಜಿಐ)- ಎಡೆಲ್‍ವೈಸ್‍ ಸ್ವಿಚ್‍

ದ ಎಡೆಲ್‍ವೈಸ್ ಜನರಲ್ ಇನ್ಶೂರೆನ್ಸ್‍ (ಇಜಿಐ)- ಎಡೆಲ್‍ವೈಸ್ ಸ್ವಿಚ್‍ ಎಂಬುದು ಚಾಲಕ ಆಧಾರಿತ ಮೋಟಾರು ವಿಮಾ ಪಾಲಿಸಿಯಾಗಿದ್ದು, ವಾಹನ ಮಾಲೀಕರು ಅವರ ವಾಹನ ವಿಮೆಯನ್ನು ಬಳಕೆಗೆ ಅನುಗುಣವಾಗಿ ಆನ್ ಮತ್ತು ಆಫ್ ಮಾಡಿಕೊಳ್ಳುವುದಕ್ಕೆ ಅನುವು ಮಾಡಿಕೊಟ್ಟಿದೆ. ಅಲ್ಲದೆ, ಫ್ಲೋಟರ್ ಪಾಲಿಸಿಯಂತೆ ಇದು ಒಂದೇ ಪಾಲಿಸಿಯಲ್ಲಿ ಅನೇಕ ವಾಹನಗಳ ವಿಮೆಯನ್ನು ಕೂಡ ಕವರ್ ಮಾಡುತ್ತದೆ.  ಸಾಮಾನ್ಯ ಮೋಟಾರ್‍ ವೋನ್ ಡ್ಯಾಮೇಜ್ ಪಾಲಿಸಿಗಿಂತ ಭಿನ್ನವಾಗಿ ಎಡೆಲ್‍ವೈಸ್ ಸ್ವಿಚ್‍ ವಿಮೆಯ ಪ್ರೀಮಿಯಂ ಅನ್ನು ಚಾಲಕನ ವಯಸ್ಸು ಮತ್ತು ಚಾಲನಾ ಅನುಭವದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಈ ಪಾಲಿಸಿಯು ಗ್ರಾಹಕರಿಗೆ ಗಣನೀಯವಾಗಿ ವೆಚ್ಚವನ್ನು ಕಡಿಮೆ ಮಾಡುವುದಲ್ಲದೆ, ಅನುಕೂಲಕರವಾಗಿಯೂ ಇದೆ. ಯಾಕೆಂದರೆ, ಎಡೆಲ್‍ವೈಸ್‍ ಸ್ವಿಚ್‍ ಮಾದರಿಯ ಬಳಕೆಗೆ ತಕ್ಕಂತೆ ಪಾವತಿಯ ವಿಮೆಯು ಗ್ರಾಹಕರಿಗೆ ಅವರು ವಾಹನ ಬಳಸಿದಾಗಷ್ಟೆ ವಿಮೆಯ ಪ್ರೀಮಿಯಂ ಪಾವತಿಸಿದರೆ ಸಾಕು. ಆದಾಗ್ಯೂ, ಅಪಘಾತದಿಂದ ಆಗಿರುವ ಹಾನಿಯ ಕ್ಲೇಮ್‍ ಅನ್ನು ಈ ಪಾಲಿಸಿಯಲ್ಲಿ ಮಾಡಬೇಕೆಂದರೆ ಆ ಸಂದರ್ಭದಲ್ಲಿ ವಿಮೆಯ ಸ್ವಿಚ್ ಆನ್ ಆಗಿರಬೇಕು. ಇನ್ನು ಕಳವು, ಅಗ್ನಿ ಅವಘಡದ ವಿರುದ್ಧದ ವಿಮಾ ರಕ್ಷಣೆ ವಾಹನ ಚಲಾವಣೆಯಲ್ಲಿ ಇಲ್ಲದೇ ಇದ್ದಾಗಲೂ 24/7/365 ದಿನವೂ ಲಭ್ಯವಿರಲಿದೆ. ನಿಮ್ಮ ಬಳಕೆಗೆ ತಕ್ಕಂತೆ ವಿಮೆ ಮಾದರಿಯು ಮೋಟಾರು ವಿಮೆಯ ಪ್ರೀಮಿಯಂ ಅನ್ನು ನಿರ್ಧರಿಸುವ ಮಾನದಂಡದಲ್ಲಿ ಬದಲಾವಣೆಯನ್ನು ತರುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ವಾಹನ ಮಾಲೀಕರ ಬಳಕೆ ಮತ್ತು ಚಾಲನಾ ಅನುಭವವೂ ಪರಿಗಣಿಸಲ್ಪಡಲಿದೆ.

ಭಾರ್ತಿ ಎಎಕ್‍ಎ ಜನರಲ್ ಇನ್ಶೂರೆನ್ಸ್ – ಪೇ-ಆ್ಯಸ್-ಯೂ-ಡ್ರೈವ್null

ಐಆರ್‍ಡಿಎಯ ಸ್ಯಾಂಡ್‍ಬಾಕ್ಸ್ ಪ್ರಾಜೆಕ್ಟ್ ಪ್ರಕಾರ, ಖಾಸಗಿ ವಾಹನ ಮಾಲೀಕರಿಗೆ ಭಾರ್ತಿ ಎಎಕ್ಸ್‍ಎ ಜನರಲ್ ಇನ್ಶೂರೆನ್ಸ್ ಈಗ ಬಳಕೆ ಆಧಾರಿತ ಮೋಟಾರು ವಿಮೆ ಪಾಲಿಸಿಗಳನ್ನು ಈಗ ಕೊಡತೊಡಗಿದೆ. “ಪೇ-ಆ್ಯಸ್‍-ಯೂ-ಡ್ರೈವ್‍” ಇನ್ಶೂರೆನ್ಸ್ ಪ್ರಾಡಕ್ಟ್‍ ವೋನ್ ಡ್ಯಾಮೇಜ್ ಮತ್ತು ಥರ್ಡ್‍ ಪಾರ್ಟಿ ಡ್ಯಾಮೇಜ್‍ ಪಾಲಿಸಿಗಳ ಕಾಂಬಿನೇಷನ್ ಆಗಿದೆ. ಇದರಲ್ಲಿ ಥರ್ಡ್‍ ಪಾರ್ಟಿ ಪ್ರೀಮಿಯಂ ಅನ್ನು ಐಆರ್‍ಡಿಎ ನಿಯಮ ಪ್ರಕಾರ ನಿರ್ಧಾರವಾಗಲಿದೆ. ಅದೇ ರೀತಿ, ಸಮಗ್ರ ವೋನ್ ಡ್ಯಾಮೇಜ್ ಪ್ರೀಮಿಯಂ ಅನ್ನು ನಿಗದಿತ ಕಾಲಾವಧಿಯಲ್ಲಿ ನಿಮ್ಮ ಕಾರನ್ನು ನೀವು ಎಷ್ಟು ಕಿಲೋಮೀಟರ್ ಚಲಾಯಿಸಲಿದ್ದೀರಿ ಎಂಬ ಲೆಕ್ಕಾಚಾರವನ್ನು ಆಧರಿಸಿ ನಿರ್ಧಾರವಾಗಲಿದೆ. ಪ್ರಸ್ತುತ, 2,500 ಕಿ.ಮೀ., 5,000 ಕಿ.ಮೀ. ಮತ್ತು 7,500 ಕಿ.ಮೀ. ಒಳಗಿನ ಸಂಚಾರ ಎಂಬ ಮೂರು ಸ್ಲ್ಯಾಬ್‍ಗಳಲ್ಲಿ. “ಪೇ-ಆ್ಯಸ್‍-ಯೂ-ಡ್ರೈವ್‍” ಮೋಟಾರು ವಿಮಾ ಪಾಲಿಸಿಯನ್ನು ಕಂಪನಿ ನೀಡುತ್ತಿದೆ. ಆದಾಗ್ಯೂ, ವಿಮಾ ಅವಧಿಯ ನಡುವೆ ಗ್ರಾಹಕರಿಗೆ ತಮ್ಮ ಕಾರು 2,500 ಕಿ.ಮೀ. ಅಥವಾ 5,000 ಕಿ.ಮೀ. ಗಿಂತಲೂ ಹೆಚ್ಚು ಸಂಚರಿಸುತ್ತದೆ ಎಂಬ ಅರಿವು ಆದರೆ ಅವರು ಹೆಚ್ಚಿನ ಸ್ಲ್ಯಾಬ್‍ಗೆ ವಿಮೆಯನ್ನು ವಿಸ್ತರಿಸಬಹುದು. ಅಥವಾ ಸಾಮಾನ್ಯ ವಿಮಾ ಪಾಲಿಸಿಗೆ ವರ್ಗವಾಗಿ ಅನಿಯಮಿತ ಕಿಲೋಮೀಟರ್‍ ಗಳ ಸಂಚಾರಕ್ಕೆ ವಿಮೆಯ ಕವರೇಜ್ ಪಡೆದುಕೊಳ್ಳಬಹುದು. ಎರಡೂ ಸನ್ನಿವೇಶಗಳಲ್ಲಿ ಗ್ರಾಹಕರು ಹೆಚ್ಚುವರಿ ಪ್ರೀಮಿಯಂ ಏನಿರಲಿದೆಯೋ ಅದನ್ನು ಪಾವತಿಸಬೇಕಾಗುತ್ತದೆ. ಒಂದೊಮ್ಮೆ ಗ್ರಾಹಕರು ಖರೀದಿಸಿದ. “ಪೇ-ಆ್ಯಸ್‍-ಯೂ-ಡ್ರೈವ್‍” ವಿಮೆಯಲ್ಲಿ ನಿಗದಿಪಡಿಸಿದ ಕಿ.ಮೀ.ಗೂ ಮೀರಿ ಕಾರು ಚಲಾಯಿಸಿದರೆ ಅಂತಹ ಸಂದರ್ಭದಲ್ಲಿ ಥರ್ಡ್‍ ಪಾರ್ಟಿ ವಿಮಾ ರಕ್ಷಣೆ ಚಾಲ್ತಿಯಲ್ಲಿ ಇರುತ್ತದೆ. ಆದರೆ, ವೋನ್ ಡ್ಯಾಮೇಜ್‍ ವಿಮಾ ರಕ್ಷಣೆ ಇಲ್ಲದಿರುವ ಕಾರಣ ಇದನ್ನು ಕ್ಲೇಮು ಮಾಡಲಾಗದು. ಪಾಲಿಸಿ ಅವಧಿಯನ್ನು ಪರಿಗಣಿಸಿ ಸದ್ಯ ಚಾಲ್ತಿಯಲ್ಲಿರುವ ಲೈಯಬಿಲಿಟಿ ಕ್ಲೇಮ್ಸ್ ಅಭ್ಯಾಸಗಳ ಪ್ರಕಾರ ಥರ್ಡ್‍ ಪಾರ್ಟಿ ಕ್ಲೇಮು ಮಾತ್ರ ಅಂಗೀಕರಿಸಲ್ಪಡುತ್ತದೆ.

ಟಾಟಾ ಎಐಜಿ ಜನರಲ್ ಇನ್ಶೂರೆನ್ಸ್ – ಆಟೋಸೇಫ್

ಖಾಸಗಿ ಕಾರು ಮಾಲೀಕರಿಗೆ ಅವರ ವಾಹನದ ಒಟ್ಟಾರೆ ವಿಮಾ ವೆಚ್ಚವನ್ನು ತಗ್ಗಿಸುವ ಬಳಕೆ ಆಧಾರಿತ ವಿಮಾ ರಕ್ಷಣೆ ಒದಗಿಸುವ ಕೆಲವೇ ಕೆಲವು ಇನ್ಶೂರೆನ್ಸ್ ಕಂಪನಿಗಳ ಪಟ್ಟಿಯಲ್ಲಿ ಟಾಟಾ ಎಐಜಿ ಜನರಲ್ ಇನ್ಶೂರೆನ್ಸ್ ಎಂಬುದು ಇನ್ನೊಂದು ಪ್ರಮುಖ ವಿಮಾ ಕಂಪನಿಯಾಗಿದೆ. ಈ ಕಂಪನಿ ಪರಿಚಯಿಸಿರುವ ಪಾಲಿಸಿ ಹೆಸರು “ಆಟೋ ಸೇಫ್‍”. ಇದು ಪ್ರೀಮಿಯಂ ನಿರ್ಧರಿಸುವುದಕ್ಕೆ ಮತ್ತು ಕಾರಿನ ಬಳಕೆಯನ್ನು ಟ್ರ್ಯಾಕ್ ಮಾಡುವುದಕ್ಕೆ ಟೆಲಿಮ್ಯಾಟಿಕ್ಸ್ ಆಧಾರಿತ ನೆಕ್ಸ್ಟ್‍- ಜೆನ್ ಅಪ್ಲಿಕೇಶನ್ ಇರುವ ಉಪಕರಣವನ್ನು ಬಳಸುತ್ತಿದೆ. ಈ ಆ್ಯಪ್‍ ಕಾರು ಸಂಚರಿಸಿದ ಕಿಲೋ ಮೀಟರ್ ಆಯ್ಕೆ ಮಾಡಿಕೊಂಡು ಪಾಲಿಸಿದಾರರಿಗೆ ಪ್ರೀಮಿಯಂನಲ್ಲಿ ಉಳಿತಾಯಮಾಡಿಕೊಡಲು ನೆರವಾಗುತ್ತದೆ. ಅಷ್ಟೇ ಅಲ್ಲ, ಅದರಲ್ಲಿ ಜಿಪಿಎಸ್‍ ಟ್ರ್ಯಾಕಿಂಗ್ ಸೌಲಭ್ಯ ಇರುವ ಕಾರಣ ಕಳವು ನಿರೋಧಕ ಉಪಕರಣವಾಗಿಯೂ ಬಳಕೆಯಾಗುತ್ತದೆ. ವಿಮಾ ಪಾಲಿಸಿ ಚಾಲ್ತಿಗೆ ಬರುತ್ತಿದ್ದಂತೆ ಈ ಟೆಲಿಮ್ಯಾಟಿಕ್ಸ್ ಉಪಕರಣವನ್ನು ಕಾರಿಗೆ ಫಿಟ್ ಮಾಡಲಾಗುತ್ತದೆ ಅಥವಾ ಕಾರಿಗೆ ಲಿಂಕ್ ಮಾಡಲಾಗುತ್ತದೆ. ಇದನ್ನು ಪಾಲಿಸಿ ಚಾಲ್ತಿಯಲ್ಲಿ ಇರುವಷ್ಟು ಕಾಲವೂ ಸಕ್ರಿಯವಾಗಿ ಇರಿಸಬೇಕಾದ್ದು ಪಾಲಿಸಿದಾರರ ಹೊಣೆಗಾರಿಕೆಯಾಗಿರುತ್ತದೆ. ಈ ಪಾಲಿಸಿಯಲ್ಲೂ ಗ್ರಾಹಕರಿಗೆ 2,500 ಕಿ.ಮೀ., 5,000 ಕಿ.ಮೀ. 7,500 ಕಿ.ಮೀ, 10,000 ಕಿ.ಮೀ., 15,000 ಕಿ.ಮೀ. ಮತ್ತು 20,000 ಕಿ.ಮೀ.ಗಳ ಆಯ್ಕೆಯ ಅವಕಾಶವನ್ನು ನೀಡಲಾಗಿದೆ. ಪಾಲಿಸಿಯ ಅವಧಿಯಲ್ಲಿ ಅವರ ಆಯ್ಕೆಯ ಕಿಲೋಮೀಟರ್‍ ಪೂರ್ಣಗೊಂಡರೆ ಟಾಪ್ – ಅಪ್ ಕಿ.ಮೀ. ಆಯ್ಕೆ ಮಾಡುವ ಅವಕಾಶವೂ ಇದೆ. ಎಲ್ಲದಕ್ಕೂ ಮಿಗಿಲಾಗಿ, ಸುರಕ್ಷಿತ ಚಾಲನೆಯನ್ನು ಉತ್ತೇಜಿಸಲು ಪಾಲಿಸಿ ರಿನೀವಲ್ ಮಾಡುವ ವೇಳೆ ಉತ್ತಮ ಚಾಲನಾ ನಡವಳಿಕೆಗೆ ಬೋನಸ್ ಕಿ.ಮೀ. ಕೂಡ ಪಾಲಿಸಿದಾರರಿಗೆ ಸಿಗಲಿದೆ. ಟೆಲಿಮ್ಯಾಟಿಕ್ ಉಪಕರಣವು ಮೊಬೈಲ್ ಆ್ಯಪ್‍ಗೆ ಲಿಂಕ್ ಆಗಿದ್ದು, ಎಷ್ಟು ದೂರು ಸಂಚರಿಸಿದೆ, ವಾಹನದ ಆರೋಗ್ಯ ಸ್ಥಿತಿ ಅಥವಾ ಪಾಲಿಸಿದಾರ ವಾಹನ ಚಲಾಯಿಸುವ ರೀತಿ ಸೇರಿ  ಎಲ್ಲ ಮಾಹಿತಿಗಳನ್ನೂ ಅದು ದಾಖಲಿಸುತ್ತ ಹೋಗುತ್ತದೆ. ಆದ್ದರಿಂದ ನೀವು ಕಡಿಮೆ ವಾಹನ ಚಲಾಯಿಸಿದರೆ, ಕಡಿಮೆ ಪ್ರೀಮಿಯಂ ಪಾವತಿಸಿದರೆ ಸಾಕು.

ಗಮನಿಸಿ

ಬಳಕೆಗೆ ತಕ್ಕಂತೆ ಪಾವತಿಸುವ ವಿಮೆಯನ್ನು ಪರಿಚಯಿಸುವುದರೊಂದಿಗೆ ಮೋಟಾರು ವಿಮೆ ಬಹಳ ವಿಕಸನಗೊಳ್ಳಲಿದ್ದು, ಗ್ರಾಹಕರ ಅಗತ್ಯಗಳಿಗೆ ಹೆಚ್ಚಿನ ರೀತಿಯಲ್ಲಿ ಸ್ಪಂದಿಸಲಿದೆ. ಈ ಅನಿಶ್ಚಿತ ಕಾಲಘಟ್ಟದಲ್ಲಿ ಸರ್ಕಾರ ಮತ್ತು ಸಂಸ್ಥೆಗಳು ಅನಗತ್ಯ ಪ್ರಯಾಣಗಳನ್ನು ತಳ್ಳಿಹಾಕುತ್ತಿರುವಾಗ ಮತ್ತು ಉದ್ಯೋಗಿಗಳೂ ವರ್ಕ್ ಫ್ರಂ ಹೋಮ್‍ನ ಪ್ರಯೋಜನಗಳನ್ನು ಅನ್ವೇಷಿಸುತ್ತಿರಬೇಖಾದರೆ ವಿಮಾ ಕ್ಷೇತ್ರದ ಈ ಬದಲಾವಣೆ ಅರ್ಥಪೂರ್ಣವಾಗಿದೆ. ಯಾರು ಹೆಚ್ಚು ವಾಹನ ಚಲಾಯಿಸುವುದಿಲ್ಲವೋ ಅವರು ಪೇ-ಆ್ಯಸ್-ಯೂ-ಯೂಸ್‍ ಕಾರು ಇನ್ಶೂರೆನ್ಸ್‍ ಪಾಲಿಸಿ ಆಯ್ಕೆ ಮಾಡಿಕೊಂಡು ಹಣ ಉಳಿತಾಯ ಮಾಡಬಹುದು. ಆದಾಗ್ಯೂ, ನೀವು ನಿಮ್ಮ ಪ್ರಯಾಣದ ದೂರವನ್ನು ಅಂದಾಜಿಸುವಾಗ ಟ್ರಾಫಿಕ್‍ನಲ್ಲಿ ಕಳೆಯುವ ಕಾಲವನ್ನು ತಪ್ಪಾಗಿ ಪರಿಗಣಿಸಬೇಡಿ. ಇದು ಬಹಳ ಮುಖ್ಯವಾದುದು. ಈ ಪಾಲಿಸಿಯಲ್ಲಿ ನೀವು ಎಷ್ಟು ಹೊತ್ತು ಕಾರಿನಲ್ಲಿ ಕುಳಿತಿರುತ್ತೀರಿ ಎಂಬುದನ್ನು ಪರಿಗಣಿಸಲಾಗುವುದಿಲ್ಲ. ನೀವು ಎಷ್ಟು ದೂರ ಸಂಚರಿಸುತ್ತೀರಿ ಎಂಬುದನ್ನು ಇಲ್ಲಿ ಪರಿಗಣಿಸುತ್ತಾರೆ. ಮೋಟಾರು ವಾಹನ ವಿಮಾ ಕ್ಷೇತ್ರದಲ್ಲಿ “ಪೇ ಆಸ್ಯ ಯೂ ಡ್ರೈವ್ ಮೋಡೆಲ್‍” ಹೆಚ್ಚು ಹೆಚ್ಚು ವಾಹನಗಳನ್ನು ವಿಮಾ ರಕ್ಷಣೆಯ ವ್ಯಾಪ್ತಿಗೆ ಸೇರಿಸುತ್ತ ನಿಸ್ಸಂದೇಹವಾಗಿ ಇನ್ಶೂರೆನ್ಸ್ ಖರೀದಿಸುವವರ ಸಂಖ್ಯೆಯನ್ನು ಹೆಚ್ಚಿಸಲಿದೆ.

ಲೇಖಕರು – ಸಜ್ಜನ್ ಪ್ರವೀಣ್, ಮೋಟಾರ್ ಇನ್ಸೂರೆನ್ಸ್ ಹೆಡ್Policybazaar.com

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: