Design a site like this with WordPress.com
Get started

ಇಂದಿನ ಔಷಧೀಯ ವೃಕ್ಷದ ಪರಿಚಯ: ಅಶ್ವಥ ವೃಕ್ಷ

ಅಶ್ವತ್ಥ ವೃಕ್ಷ ,ಅರಳಿ ಮರ ರಾವಿ ಚೆಟ್ಟು ಅರಸ ಮರಂ ರಾಜ ವೃಕ್ಷ ರಾಜ ಮೂಲಿಕೆ ಬೋದಿ ವೃಕ್ಷ ಪೀಪಲ್ ಟ್ರೀ ಎಂಬ ಹೆಸರುಗಳಿಂದ ಕರೆಯುತ್ತಾರೆ. ಅರಣ್ಯಗಳಲ್ಲಿ,ಬೆಟ್ಟ ಗುಡ್ಡಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತವೆ,ರಸ್ತೆ ಪಕ್ಕಾ ಸಾಲು ಮರಗಳಾಗಿಯೂಬೆಳೆಸುತ್ತಾರೆ.ಹಳ್ಳಿ ಪಟ್ಟಣ್ಣಗಳೆನ್ನದೇ ಅಶ್ವತ್ಥ ಕಟ್ಟೆಗಳನ್ನು ನಿರ್ಮಿಸಿ,ನಾಗರ ಕಲ್ಲುಗಳನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸುವುದನ್ನು ನಾವು ಎಲ್ಲಾ
ಕಡೆ ಕಾಣಬಹುದು.ಸುಮಾರು 50 ರಿಂದ 100 ಅಡಿಗಿಂತಲೂ ಹೆಚ್ಚಿಗೆ ಬೃಹದ್ಧಕಾರದಲ್ಲಿ ಬೆಳೆದು
ಸಾವಿರಾರು ವರ್ಷಗಳ ಕಾಲ ದೀರ್ಘಾಯುಷಿಯಾಗಿ ಜೀವಿಸಿ….! ಅತಿ ಹೆಚ್ಚು ಪ್ರಾಣ ವಾಯು ಉತ್ಪಾದಕ ಮರ ಎಂದು ಕ್ಯಾತಿ ಪಡೆದಿರುವ ಈ ವೃಕ್ಷಗಳನ್ನು ಸಾಮ್ರಾಟ್ ಅಶೋಕನು ದೇಶದಲ್ಲೆಲ್ಲಾ ಬಹು ದೊಡ್ಡ
ಪ್ರಮಾಣದಲ್ಲಿ ಬೆಳಸಿದನೆಂಬ ಉಲ್ಲೇಖವಿದೆ.
ಈ ಮರದ ಕೆಳಗೆ ಕುಳಿತಾಗಲೇ ಗೌತಮ ಬುದ್ಧನಿಗೆ ಜ್ಞಾನೋದಯವಾದದ್ದು ಎಂದು ಬೌದ್ಧರು ಭೋದಿ ವೃಕ್ಷವನ್ನು ಬಹುಪೂಜ್ಯ ಭಾವನೆಯಿಂದ ಕಾಣುವರು.
“ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ ಅಗ್ರತೋ ಶಿವರೂಪಾಯ ವೃಕ್ಷ ರಾಜಾಯತೇ ನಮಃ”
ತ್ರಿಮೂರ್ತಿಗಳು ಈ ವೃಕ್ಷ ರಾಜನಲ್ಲಿ ನೆಲೆಸಿರುವರೆಂದು,ಪರಮ ಪವಿತ್ರವೆಂದು ಪೂಜಿಸುವ ಸಂಪ್ರದಾಯವಿದೆ.ಅಶ್ವತ್ಥ: ಸರ್ವ ವೃಕ್ಷಾಣಾಂ ಸಕಲ ವೃಕ್ಷಗಳೊಳಗೆ ಅಶ್ವತ್ಥ ವೃಕ್ಷವಾಗಿರುತ್ತೇನೆ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಅರ್ಜುನನಿಗೆ ಉಪದೇಶಿಸುವನು.
ಅಶ್ವತ್ಥದ ಕಡ್ಡಿಗಳಿಗೆ “ಸಮಿತ್ತು” ಎಂದು ಕರೆಯುತ್ತಾರೆ.ಋಷಿಗಳ ದೈನಂದಿನ ಕ್ರಿಯೆಗಳ ಪೈಕಿ ಬಹಳಷ್ಟು ಸಮಯ ಆಪೇಕ್ಷಿಸುತ್ತಿದ್ದ ಪವಿತ್ರ ಕಾರ್ಯವಾದ ಹೋಮವನ್ನು ಮಾಡಲು ಸಮಿತ್ತು ಇರಲೇಬೇಕಿತ್ತು.ಅಶ್ವತ್ಥ ವೃಕ್ಷದ ಯಾವುದಾದರೂ ಒಂದು ಭಾಗವನ್ನು ದಿನವೂ ಸ್ಪರ್ಶಿಸುವುದೇ ಆರೋಗ್ಯಕರ.
48 ದಿನಗಳ ಕಾಲ ” ಮಂಡಲ ಪೂಜೆ” ಎಂಬ ಹೆಸರಲ್ಲಿ ಅಶ್ವತ್ಥ ವೃಕ್ಷವನ್ನು ಮುಟ್ಟಿ, ಪ್ರದಕ್ಷಿಣೆ ಮಾಡಿ,ನಮಸ್ಕರಿಸುವ ಪದ್ಧತಿ ಇದ್ದು, ಇದರ ಆಚರಣೆಯಿಂದ ರಕ್ತದ ಏರೊತ್ತಡ, ಅಧಿಕ ಕೋಪ, ಉನ್ಮಾದ, ಇತ್ಯಾದಿಗಳು ದೂರವಾಗುತ್ತವೆ….! ಸಾಮಾನ್ಯವಾಗಿ
ಸಂತಾನ ಹೀನರಿಗೆ ಈ ಪೂಜೆಯನ್ನು ಮಾಡಲು ಹೇಳಲಾಗುತ್ತದೆ.ಸಕಲ ರೋಗ ನಿವಾರಣೆಯಾದ ಅಶ್ವತ್ಥ ವೃಕ್ಷವನ್ನು ಸತತವಾಗಿ 48 ದಿನಗಳ ಕಾಲ
ಸ್ಪರ್ಶಿಸುತ್ತಾ, ಪ್ರದಕ್ಷಿಣೆ ಹಾಕಿ ನಮಸ್ಕರಿಸುತ್ತಾ ಇದ್ದಲ್ಲಿಅವರಿಗರಿವಿಲ್ಲದಯೇ, ಅವರು ರೋಗಮುಕ್ತರಾಗುವರು….! ಆರೋಗ್ಯವಂತವಾದ ದೇಹದಲ್ಲಿ ಸಕ್ರಮವಾಗಿ ಅಂಡೋತ್ಪತ್ತಿ ಹಾಗೂ ವಿಶೇಷವಾದ ಗುಣಗಳುಳ್ಳ, ಶಕ್ತಿವಂತವಾದ ಉತ್ಪತ್ತಿಯಾಗುತ್ತದೆ. ಕ್ರಮೇಣ ಈ ಸತ್ಪರಿಣಾಮವೇ ಆರೋಗ್ಯವಂತವಾದ ಸಂತಾನದ ಪ್ರಾಪ್ತಿಗೆ ಕಾರಣವಾಗಬಲ್ಲದು.
ಮತ್ತೊಂದು ನಂಬಲೇ ಬೇಕಾದ ವಿಶೇಷವೆಂದರೆ
ಅಶ್ವತ್ಥ ವೃಕ್ಷವನ್ನು ಸ್ಪರ್ಶಿಸುವ, ಪೂಜಿಸುವ ಹಾಗೂ ನಮಸ್ಕರಿಸುವ ಆಪೇಕ್ಷೆ ಉಂಟಾಗುವುದು ಸಾತ್ವಿಕ ಮನೋಭಾವದ ಜನರಿಗೆ ಮಾತ್ರ….! ಮನಸ್ಸು ಶುದ್ಧವಾಗಿರದವರಿಗೆ ಈ ವೃಕ್ಷದ ಬಳಿಗೆ ಹೋಗುವ ಮನಸ್ಸೇ ಆಗದು….! ಕೇವಲ ಮಾನವರೇ ಅಲ್ಲದೆ ಪ್ರಾಣಿ, ಪಕ್ಷಿಗಳ ವಿಷಯದಲ್ಲೂ ಅಶ್ವತ್ಥದ ಆಯ್ಕೆ ವೈಶಿಷ್ಟ್ಯಪೂರ್ಣವಾದದ್ದು.ಗಿಳಿ, ಕೋಗಿಲೆ, ಮೈನಾದಂತಹ ಸುಮಧುರ ಕಂಠದ ಈ ವೃಕ್ಷವನ್ನು ಆಶ್ರಯಿಸುತ್ತವೆ.ಕಾಗೆಯಂತ ಪಕ್ಷಿಗಳು ಈ ಮರದಲ್ಲಿಗೂಡನ್ನು ಕಟ್ಟುವುದಿಲ್ಲ….!
ಅಶ್ವತ್ಥ ವೃಕ್ಷದ ಎಲೆಗಳನ್ನು ನಾಟಿ ಹಸುವಿನ ಹಾಲಿನಲ್ಲಿ ಹಾಕಿ ಕುದಿಸಿ ಕೆಂಪು ಕಲ್ಲು ಸಕ್ಕರೆ ಹಾಕಿಬೆಳಿಗ್ಗೆ ಸಂಜೆ ಕೆಲವು ದಿನ ಸೇವಿಸಿದರೆ ಶೀತ ಕೆಮ್ಮುಗುಣಾಗುತ್ತೇ.ಎಲೆಗಳ ರಸಕ್ಕೆ ಕಲ್ಲು ಸಕ್ಕರೆ ಹಾಕಿ ಸೇವಿಸಿದರೆ ಕಾಮಾಲೆ ರೋಗ ವಾಸಿಯಾಗುತ್ತೆ.ಅರಳಿ ಮರದ ತೊಗಟೆಯ ಚೂರ್ಣದಿಂದ ಹಲ್ಲುಜ್ಜುವುದರಿಂದ ದವಡೆಗಳು,ಹಲ್ಲುಗಳು ಗಟ್ಟಿಯಾಗಿ, ಹೊಳೆಯುತ್ತವೆ.ಹಲ್ಲು ನೋವು ಸಹಾ ನಿವಾರಣೆಯಾಗುತ್ತೆ.ಈ 1 ಚಮಚ ಚೂರ್ಣವನ್ನು 1 ಲೋಟ ಹಾಲಿನಲ್ಲಿ ಹಾಕಿ ಸೇವಿಸುತ್ತಾ ಬಂದರೆ ಅಸ್ತಮಾ ಸಹಾ ಗುಣವಾಗುತ್ತೆ.
ಅರಳಿ ಮರದ ಎಲೆಗಳನ್ನು 2 ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ 1 ಲೋಟ ನೀರಾದಾಗ ಕೆಳಗಿಳಿಸಿ, ಉಗರು ಬೆಚ್ಚಗಿದ್ದಾಗ ಬೆಳಿಗ್ಗೆ ಸಂಜೆ
ಸೇವಿಸುತ್ತಿದ್ದರೆ ಹೃದಯ ಸಂಬಂಧಿ ರೋಗಗಳು
ಗುಣವಾಗುತ್ತೆ.
ಅರಳಿ ಮರದ ಹಣ್ಣುಗಳನ್ನು ನೆರಳಲ್ಲಿ ಒಣಗಿಸಿ
ಚೂರ್ಣ ಮಾಡಿಟ್ಟುಕೊಂಡು ಬೆಳಿಗ್ಗೆ ಸಂಜೆ ಕಲ್ಲು ಸಕ್ಕರೆ ಅಥವಾ ಜೇನುತುಪ್ಪ ಸೇರಿಸಿ 1 ಚಮಚದಂತೆ ಸೇವಿಸಿದರೆ (ವಯಸ್ಸಿನ ಮಿತಿ ಇಲ್ಲದೆ ಯಾರಾದ್ರೂ ಸೇವಿಸಬಹುದು)ತುಂಬಾ ಆರೋಗ್ಯದಾಯಕ.ಇದು ತುಂಬಾ ಪೌಷ್ಠಿಕತೆಯಿಂದ ಕೂಡಿದ್ದು, ಶರೀರಿಕ ಕ್ಷಮತೆ ಜೊತೆಗೆ ವೀರ್ಯಾಣು ವೃದ್ಧಿಗೆ ಸಹಕಾರಿಯಾಗಿದೆ.
ಸಂತಾನ ಇಲ್ಲದ ಸ್ತ್ರೀಯರು ದಿನವು ಹಸುವಿನ ಹಾಲಿನಲ್ಲಿ 1 ಚಮಚದಂತೆ ಸೇವಿಸುತ್ತಿದ್ದರೆ ಸಂತಾನ ಪ್ರಾಪ್ತಿಯಾಗುತ್ತೆ ಎಂದು ಆಯುರ್ವೇದ ಗ್ರಂಥಗಳಲ್ಲಿ
ಹೇಳಲಾಗಿದೆ.
ತಿಂಗಳ ಮುಟ್ಟಿನ ಸಮಯದಲ್ಲಿ ಅತ್ಯಧಿಕ ರಕ್ತಸ್ರಾವದಿಂದ ನರಳುತ್ತಿರುವ ಸ್ತ್ರೀಯರು, ಅರಳಿ ಎಲೆಗಳನ್ನು ಜಜ್ಜಿ ಅದರಿಂದ ರಸ ತೆಗೆದು 4 ರಿಂದ 5 ಚಮಚ ಸೇವಿಸಿದರೆ ಅತೋಟಿಗೆ ಬರುತ್ತೆ.ಬೇಕಾದ್ರೆ ರಸಕ್ಕೆ 1 ಚಮಚ ಜೇನುತುಪ್ಪ ಸಹಾ ಸೇರಿಸಿ ಸೇವಿಸಬಹುದು.
ಅರಳಿ ಮರದ ಚಿಗುರಿನ ಕುಡಿಗಳು ತಂದು ನೆರಳಲ್ಲಿ ಒಣಗಿಸಿ, ಚೂರ್ಣ ಮಾಡಿಟ್ಟುಕೊಂಡು ಬೆಳಿಗ್ಗೆ ಸಂಜೆ 1 ಚಮಚ ಹಸುವಿನ ಹಾಲಿನಲ್ಲಿ ಅಥವಾ ಬಿಸಿನೀರಿನಲ್ಲಿ ಕಲಸಿ ಸೇವಿಸಿವುದರಿಂದ ದೈಹಿಕ ಸದೃಢತೆ ಜೊತೆಗೆ ಎಲ್ಲಾ ರೀತಿಯ ಧಾತು ವಿಕಾರಗಳು ಹಾಗೂ
ಲೈಂಗಿಕ ಸಮಸ್ಯೆಗಳಿಗೆ ಅದ್ಭುತವಾದ ಔಷಧಿಯಾಗಿಕೆಲಸ ಮಾಡುತ್ತೆ.ಇದೆ ಚೂರ್ಣ ಸೇವಿಸಿದರೆ ಕರುಳಿನ ವ್ಯಾಧಿಗಳು ಗುಣವಾಗುತ್ತೆ.ಇದರಲ್ಲಿ ಕಷಾಯ ಮಾಡಿ
ಸೇವಿಸುತ್ತಾ ಬಂದರೆ ಹೃದ್ರೋಗಗಳಿಗೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ.

ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷದ ಪರಿಚಯ ಮಾಡಿಕೊಳ್ಳೋಣ.ವಂದನೆಗಳು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: