
ಕೋಕಿಲಾಕ್ಷ ಕೋಕಿಲಾಕ್ಷಿ, ಕೊಳವಳಿಕೆ, ಗೊರ್ಮಿಟಿ,
ನೀರ್ ಗುಬ್ಲಿ, ಕೊಳವಂಕ, ನೀರ್ ಮುಳ್ಳಿ, ವನಶೃಂಗಾರಮು,ನೀಟಿ ಗೊಬ್ಬಿ, ಕುಲಿಖಾರ, ತಲ್ಮಖಾನ, ಉಂಡಗಮ್ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಈ ಗಿಡವು ತೇವಾಂಶ ಇರುವ ಕಡೆ ಹೆಚ್ಚಾಗಿ ಬೆಳೆಯುತ್ತೆ.ಕೆರೆ ಕುಂಟೆಗಳ ಸುತ್ತಲೂ, ನೀರು ಹರಿಯುವ ಕಾಲುವೆಗಳ ಪಕ್ಕ, ಗದ್ದೆಗಳ ಬದಿಗಳ ಮೇಲೆ 2 ರಿಂದ 3 ಅಡಿ ಬೆಳೆಯುವ ಮುಳ್ಳಿನ ಗಿಡವಾಗಿದ್ದು, ಸಮೂಲ ಸಹಿತ ಅಪಾರ ಔಷಧಿ ಗುಣಗಳನ್ನು ಹೊಂದಿದೆ.
ಅನೇಕ ಪ್ರಾಂತ್ಯಗಳಲ್ಲಿ ಕೊಳವಳಿಕೆ ಗಿಡದ ಸೊಪ್ಪಿನಿಂದ ಪಲ್ಯ, ಸಾಂಬಾರ್ ಮಾಡಿ ತಿನ್ನುತ್ತಾರೆ.
ಇದು ಸೇವಿಸಲು ತುಂಬಾ ರುಚಿಕರವಾಗಿದ್ದು,ದೇಹದ ಆರೋಗ್ಯವನ್ನು ಕಾಪಾಡುತ್ತೆ
ಕೊಳವಳಿಕೆ ಗಿಡದ ಒಂದು ಹಿಡಿ ಸೊಪ್ಪನ್ನು, ಒಂದು ಮಣ್ಣಿನ ಮಡಿಕೆಯಲ್ಲಿ ಹಾಕಿ, ಅದಕ್ಕೆ 250ml ನೀರನ್ನು ಹಾಕಿ, ಒಳೆಯ ಮೇಲಿಟ್ಟು ಚೆನ್ನಾಗಿ ಕುದಿಸಿ 100ml ಆದಾಗ ಕೆಳಗಿಳಿಸಿ, ಉಗರು ಬೆಚ್ಚಗಿದ್ದಾಗ ಸೋಸಿ, ಎರಡು ಭಾಗ ಮಾಡಿ, ಬೆಳಿಗ್ಗೆ ಸಂಜೆ 50ml ಗೆ 1 ಚಮಚ ಜೇನುತುಪ್ಪ ಕಲಸಿ ಕುಡಿದರೆ, ಜ್ವರ, ಕೆಮ್ಮು, ಕಫ,ವಾತ, ಪಿತ್ತ ಇನ್ನು ಮುಂತಾದ ವ್ಯಾಧಿಗಳು ಗುಣವಾಗುತ್ತೆ.
ಕೊಳವಳಿಕೆ ಬೀಜ 50ಗ್ರಾಂ, 50 ಗ್ರಾಂ ಸಿಪ್ಪೆ ಸುಲಿದ ಬಾದಾಮಿ ಬೀಜ, 50 ಗ್ರಾಂ ಗಸಿಗಸೆ,ಚೆನ್ನಾಗಿ ನುಣ್ಣಿಗೆ ಚೂರ್ಣ ಮಾಡಿಟ್ಟುಕೊಂಡು, ದಿನವು ಬೆಳಿಗ್ಗೆ ಸಂಜೆ 1 ಲೋಟ ಹಸುವಿನ ಹಾಲಿಗೆ 1ಚಮಚ ಚೂರ್ಣ 1ಚಮಚ ಜೇನುತುಪ್ಪ ಅಥವಾ ಕೆಂಪು ಕಲ್ಲು ಸಕ್ಕರೆ ಕಲಸಿ ಕುಡಿಯುತ್ತಿದ್ದರೆ, ಗಂಡಸರಲ್ಲಿ ವೀರ್ಯಾಣು ವೃದ್ಧಿಯಾಗುತ್ತೆ.ನಪುಂಷಕತ್ವ ದೂರವಾಗಿ ಕಾಮವಾಂಛೆ ಹೆಚ್ಚುತ್ತೆ.
10 ಗ್ರಾಂ ಕೊಳವಳಿಕೆ ಬೀಜ, 10 ಗ್ರಾಂ ಬಾದಾಮಿ, 10 ಗ್ರಾಂ ಗಸಗಸೆ ನೀರಿನಲ್ಲಿ ನೆನೆಸಿಟ್ಟು ( ಬಾದಾಮಿ ಸಿಪ್ಪೆ ಸುಲಿದು) ಚೆನ್ನಾಗಿ ನುಣ್ಣಗೆ ಅರೆದು,ಒಂದು ಲೋಟ ಹಸುವಿನ ಹಾಲಿನಲ್ಲಿ ಚೆನ್ನಾಗಿ ಕುದಿಸಿ,ಉಗರು
ಬೆಚ್ಚಗಾದಾಗ ಕುಡಿಯುತ್ತಾ ಬಂದರೆ,ನರದೌರ್ಬಲ್ಯ ದೂರವಾಗಿ, ದೇಹಕ್ಕೆ ಪುಷ್ಠಿ ದೊರೆಯುತ್ತದೆ, ಧಾತು ವೃದ್ಧಿಯಾಗುತ್ತೆ.(ಬೇಕಾದ್ರೆ ಜೇನುತುಪ್ಪ ಕಲಸಿಕೊಳ್ಳಿ)
ಬೇರನ್ನು ತಂದು ನೆರಳಲ್ಲಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡು 1/2 ಚಮಚ ಚೂರ್ಣವನ್ನು ಉಗರು ಬೆಚ್ಚಗಿನ ನೀರಿನಲ್ಲಿ ದಿನವು ಕಲಸಿ ಸೇವಿಸುತ್ತಾ ಬಂದರೆ ಶ್ವಾಸಕೋಶ ವ್ಯಾಧಿಗಳು ಗುಣವಾಗುತ್ತೆ.ಹಳದಿ ಕಾಮಾಲೆ (ಜಾಂಡಿಸ್ )
ಸಹಾ ವಾಸಿಯಾಗುತ್ತೆ.
ಈ ಗಿಡವನ್ನು ಸಮೂಲ ಸಹಿತ ತಂದು ಕಷಾಯ ಮಾಡಿ ದಿನವು ಬೆಳಿಗ್ಗೆ ಸಂಜೆ 30ml ನಂತೆ ಸೇವಿಸಿದರೆ
ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗಿ, ಮಧುಮೇಹ ಅತೋಟಿಗೆ ಬರುತ್ತೆ.
ಆಮಶಂಕೆ ಬೇಧಿಗೆ 1/2 ಚಮಚ ಕೊಳವಳಿಕೆ ಬೀಜದ ಚೂರ್ಣ 1 ಲೋಟ ಮಜ್ಜಿಗೆಯಲ್ಲಿ ಕಲಸಿ ಬೆಳಿಗ್ಗೆ ಸಂಜೆ ಮೂರ್ನಾಲ್ಕು ದಿನ ಕುಡಿದರೆ ವಾಸಿಯಾಗುತ್ತೆ.
ಈ ಗಿಡದಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಎಂದು ನಿಪುಣರು ಹೇಳಿದ್ದಾರೆ.
ಆದರೂ….! ಆಯುರ್ವೇದ ವೈದ್ಯರ ಸಲಹೆ ಪಡೆದು ತೆಗೆದುಕೊಳ್ಳಿ. ಗೆಳೆಯರೆ ವಂದನೆಗಳು
.