
ಬದರೀ ಕೊಲ,ಬೇರ್, ಇಲ್ಲಂದೈ,ಗಂಗರೇಣುಬಾದರಂ,ಬೋರೆ,ಎಲಚಿ,
,ಇಲಂಜಿ,ಕುರ್ಕುoದ,ಪರಿಕಕಾಯಿ,ರೇಗಿ ಪೊಂಡಲು,ಕುವರಿ,ಅಜಪ್ರಿಯ,ಗುಡಫಲ,ಸೌಬೀರ,
ಬಾಲಿಷ್ಠ ಎಂಬ ಹೆಸರುಗಳಿಂದ ಕರೆಯುತ್ತಾರೆ
ಬೋರೆ ವೃಕ್ಷಗಳು ಅರಣ್ಯ ಪ್ರದೇಶಗಳಲ್ಲಿ,ಬೆಟ್ಟ ಗುಡ್ಡಗಳಲ್ಲಿ,ಕೆರೆ ಕಟ್ಟೆಗಳ ಮೇಲೆ, ರಸ್ತೆಗಳ ಪಕ್ಕ ನೈಸರ್ಗಿಕವಾಗಿ ಬೆಳೆಯುತ್ತವೆ.ಇದರ ಹಣ್ಣಿಗಾಗಿ ಅನೇಕ ಕಡೆ ತೋಟ,ಹೊಲಗಳಲ್ಲಿಯೂ ಸಹ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ.ಈ ವೃಕ್ಷ ಸುಮಾರು 25 ರಿಂದ 45 ಅಡಿಗಳ ಎತ್ತರ ಬೆಳೆಯುತ್ತದೆ.ಇದು ಬಹು ಉಪಯೋಗಿ ಹಾಗೂ ಗಟ್ಟಿಯಾದ ವೃಕ್ಷವಾಗಿದ್ದು,ರೈತರು ತಮ್ಮ ಕೃಷಿ ಚಟುವಟಿಕೆಗೆ ಬೇಕಾಗಿರುವ ನಾನಾ ವಿಧವಾದ ಉಪಕರಣಗಳನ್ನು ಇದರಲ್ಲಿ ತಯಾರಿಸಿಕೊಳ್ಳುತ್ತಾರೆ.
ಬೋರೆ ಗಿಡದಲ್ಲಿ ಅನೇಕ ಪ್ರಭೇದಗಳಿದ್ದು,ಕೃಷಿ ಇಲಾಖೆಯವರು,ಇದರಲ್ಲಿ ಹೆಚ್ಚು ಸ್ವಾದಿಷ್ಟ ಹಾಗೂ ದೊಡ್ಡ ದೊಡ್ಡ ಹಣ್ಣು ಬಿಡುವ ಅನೇಕ ಹೊಸ ಹೊಸ ತಳಿಗಳನ್ನು ಪರಿಚಯಿಸಿದ್ದಾರೆ.
ಸಂಕ್ರಾಂತಿಯ ಬೋಗಿ ಹಬ್ಬದಂದು,ಬೋರೆ ಹಣ್ಣುಗಳನ್ನು ದೇವರಿಗೆ ಸಮರ್ಪಿಸಿ,ಬೋಗ ಭಾಗ್ಯಗಳು ದೊರೆಯಲಿ ಎಂದು ಪೂಜಿಸುತ್ತಾರೆ.
ಬೋರೆ ಹಣ್ಣುಗಳನ್ನು ಮಕ್ಕಳು ಹಿರಿಯರೆನ್ನದೆ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ.ಈ ಹಣ್ಣುಗಳು ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತೆ.ಇದರಲ್ಲಿ ವಿಟಮಿನ್ A ಹಾಗೂ C ಅಧಿಕವಾಗಿದ್ದು ಅನೇಕ ವ್ಯಾಧಿಗಿಂದ ರಕ್ಷಣೆ ದೊರೆಯುತ್ತದೆ.
ದೇಹದಲ್ಲಿ ಆಲಸ್ಯ ಇದ್ದಾಗ (ಕೆಲಸದ ಒತ್ತಡದಿಂದ) ಬೋರೆ ಹಣ್ಣುಗಳನ್ನು ತಿನ್ನುವುದರಿಂದ ತಕ್ಷಣ ದೇಹಕ್ಕೆ ಶಕ್ತಿಯನ್ನು ದೊರಕಿಸಿ,ಆಲಸ್ಯವನ್ನು ದೂರ ಮಾಡುವ ಏಕೈಕ ಹಣ್ಣು “ಬೋರೆ ಹಣ್ಣು” ಜೀರ್ಣಕ್ರಿಯೆ ಹೆಚ್ಚಿಸುವುದರಲ್ಲಿ ಬೋರೆ ಹಣ್ಣನ್ನು ಮಿಂಚಿದ್ದು ಮತ್ತೊಂದಿಲ್ಲ.ದೇಹದ ತೂಕವನ್ನು ಇಳಿಸಲು ಸಹಾ ಈ ಹಣ್ಣು ಸಹಾಯ ಮಾಡುತ್ತೆ.
ದಿನವು ಐದಾರು ಬೋರೆ ಹಣ್ಣುಗಳನ್ನು ತಿನ್ನುವುದರಿಂದ ದೇಹದ ತೂಕ ಏರುಪೇರು
ಆಗದಂತೆ ಕಾಪಾಡುತ್ತೆ.ವಸಡುಗಳು ದೃಢವಾಗಿ, ದಂತಪಂಕ್ತಿ ಗಟ್ಟಿಯಾಗುತ್ತೆ.ಮಾಂಸ ಖಂಡಗಳಿಗೆ
ಬಲ ಬರುತ್ತೆ.
ಬೋರೆ ಹಣ್ಣು ದಿನವು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿನ ಚರ್ಮ ಸುಕ್ಕು ಗಟ್ಟುವುದಿಲ್ಲ.ಚರ್ಮವು ನವ ಯೌವನದಂತೆ ಕಾಣಲು ಸಹಾಯ ಮಾಡುತ್ತೆ.ಚರ್ಮದ ಸೌಂದರ್ಯ ಕಾಪಾಡುವುದರಲ್ಲಿ ತುಂಬಾ ಸಹಾಯ ಮಾಡುತ್ತೆ.
ಬೋರೆ ಹಣ್ಣುಗಳನ್ನು ಸೇವಿಸುವುದರಿಂದ ದೇಹದಲ್ಲಿ ರಕ್ತ ಶುದ್ಧಿಯಾಗುವುದಲ್ಲದೆ, ಅಧಿಕ ರಕ್ತದೊತ್ತಡವನ್ನು ಅತೋಟಿಯಲ್ಲಿಡುತ್ತೆ.
ಬೋರೆ ಹಣ್ಣುಗಳನ್ನು ತಿಂದರೆ, ಚಳಿಗಾಲದಲ್ಲಿ ಬರುವ ಕೆಮ್ಮು, ಗಂಟಲು ನೋವು, ಶ್ವಾಸಕೋಶ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ.
ಬೋರೆ ಹಣ್ಣುಗಳಲ್ಲಿ ನಾರಿನಾಂಶ ಅಧಿಕವಿದ್ದು ಮಲಬದ್ಧತೆ ದೂರವಾಗುತ್ತೆ. ಇದರಲ್ಲಿರುವ ಕ್ಯಾಲ್ಸಿಯಂ ದೇಹದಲ್ಲಿನ ಮೂಳೆಗಳನ್ನು ಗಟ್ಟಿಗೊಳಿಸುತ್ತೆ.
ಬೋರೆ ಹಣ್ಣುಗಳನ್ನು ಸೇವಿಸುವುದರಿಂದ ಸ್ತ್ರೀಯರಲ್ಲಿ ಋತಸ್ರಾವ ಸಮಸ್ಯೆಗಳು ದೂರವಾವುತ್ತೆ.
ಬೋರೆ ಹಣ್ಣಿನ ಜ್ಯುಸ್ ಸೇವಿಸುವುದರಿಂದ ಹೃದ್ರೋಗ ಸಮಸ್ಯೆಗಳು ದೂರವಾಗುತ್ತೆ.ದಡೂತಿ ದೇಹದವರಲ್ಲಿ ಕೆಟ್ಟ ಕೊಬ್ಬನ್ನು ಕರಗಿಸಿ ತೂಕ ಕಡಿಮೆಯಾಗಲು ಸಹಾಯ ಮಾಡುತ್ತೆ.ಚರ್ಮಕ್ಕೆ
ರಕ್ಷಣೆ ದೊರೆಯುತ್ತದೆ.ಮಾನಸಿಕ ಒತ್ತಡ ಕಡಿಮೆಯಾಗುತ್ತೆ.ದೇಹದಲ್ಲಿ ರಕ್ತ ಕಣಗಳ ಸಂಖ್ಯೆ ಬೆಳೆಯುತ್ತೆ.
ದಿನವು ಮಕ್ಕಳಿಗೆ 2-3 ಬೋರೆ ಎಲೆಗಳನ್ನು ತಿನ್ನಿಸುವುದರಿಂದ ಅನಾರೋಗ್ಯ ದೂರವಾಗುತ್ತೆ.
ಎಲೆಗಳ ಕಷಾಯ ಸೇವಿಸಿದರೆ ಕೆಮ್ಮು ದಮ್ಮು, ಅಸ್ತಮಾ,ಗಂಟಲು ನೋವು,ಹೊಟ್ಟೆಯಲ್ಲಿ ಉರಿ, ಶಮನವಾಗುತ್ತೆ.
ಬೀಜದ ಚೂರ್ಣವನ್ನು ಎಳ್ಳೆಣ್ಣೆಯಲ್ಲಿ ಕಲಸಿ ಲೇಪನ ಮಾಡಿದರೆ ಕೀಲುನೋವು ಗುಣವಾಗುತ್ತೆ.
ಬೋರೆ ಮರದ ತೊಗಟೆ ಕಷಾಯ ಮಾಡಿ ಬೆಳಿಗ್ಗೆ ಸಂಜೆ ಸೇವಿಸಿದರೆ ಅತಿಸಾರ ಭೇದಿ ನಿಲ್ಲುತ್ತೆ.
ಮಲಬದ್ಧತೆಯನ್ನು ದೂರ ಮಾಡುತ್ತೆ.
ಒಂದು ಹಿಡಿಯಷ್ಟು ಬೋರೆ ಹಣ್ಣುಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಸೋಸಿ ಅದಕ್ಕೆ ಕಲ್ಲು ಸಕ್ಕರೆ ಅಥವಾ ಜೇನುತುಪ್ಪ ಕಲಸಿ ಸೇವಿಸಿದರೆ, ದೇಹದ ಆರೋಗ್ಯ ಕಾಪಾಡಿ, ಮೆದಳು ಕ್ರಿಯಾಶೀಲವಾಗಿ ಕೆಲಸ ಮಾಡಲು ಸಹಾಯ ಮಾಡುತ್ತೆ.
ಬೋರೆ ವೃಕ್ಷದಲ್ಲಿ ಅಪಾರವಾದ ಔಷಧೀಯ ಗುಣಗಳಿದ್ದು,ಈ ವೃಕ್ಷ ಮನೆಯ ಪಕ್ಕ ಇದ್ದರೆ ಒಬ್ಬ ವೈದ್ಯ ಮನೆಯಲ್ಲಿ ಇದ್ದಂತೆ. ಗೆಳೆಯರೆ ವಂದನೆಗಳು