ರಾಶಿ, ಜನ್ಮ ದಿನಾಂಕ ಮಾತ್ರವಲ್ಲ ನಿಮ್ಮ ರಕ್ತದ ಗುಂಪು ಕೂಡ ನಿಮ್ಮ ಗುಣ, ಸ್ವಭಾವವನ್ನು ತಿಳಿಸುತ್ತೆ! ಎ, ಬಿ, ಎಬಿ, ಒ ರಕ್ತದ ಗುಂಪುಗಳ ವ್ಯಕ್ತಿಗಳ ಗುಣ, ಸ್ವಭಾವ ಹೇಗಿರುತ್ತೆ. ನೀವೇ ಓದಿ.

‘ಒ’ :
ಪ್ರಪಂಚದ ಜನಸಂಖ್ಯೆಯಲ್ಲಿ ಶೇ.38ರಷ್ಟು ಒ+ ಹಾಗೂ ಶೇ.6 ರಷ್ಟು ಒ- ರಕ್ತದ ಗುಂಪಿನವರಿದ್ದಾರೆ.
ಗುಣ ಲಕ್ಷಣಗಳು : ವಿಶ್ವಾಸರ್ಹರು, ಬಲವಾದ ಆತ್ಮಸ್ಥೈರ್ಯ ಉಳ್ಳವರು, ಹೆಮ್ಮೆ ಪಡುವಂತಹ ವ್ಯಕ್ತಿತ್ವದವರು, ಎಲ್ಲರ ಜೊತೆ ಬೆರೆಯುವವರು, ಶಕ್ತಿಶಾಲಿ, ವಾಸ್ತವದಲ್ಲಿ ಯೋಚಿಸುವವರು, ಸವಾಲುಗಳನ್ನು ಇಷ್ಟಪಡುವವರು, ರಿಸ್ಕ್ ತೆಗೆದುಕೊಳ್ಳುವವರು, ಸ್ವಾವಲಂಭಿಗಳು, ಮಹಾತ್ವಾಕಾಂಕ್ಷಿಗಳು, ಹಠಮಾರಿಗಳಾಗಿರುತ್ತಾರೆ.
ಈ ಗುಂಪಿನವರು ಬೇಗನೆ ಸ್ನೇಹವನ್ನು ಸಂಪಾದಿಸುತ್ತಾರೆ. ಅವರೊಡನೆ ಮುಂದುವರೆಯುತ್ತಾರೆ. ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ತಾರೆ. ಯೋಜನೆಯನ್ನು ಬೇಗನೆ ಆರಂಭಿಸುತ್ತಾರೆ. ಹೊಸ ಕಲ್ಪನೆಗಳನ್ನು ತಕ್ಷಣ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಾರೆ. ಸಂಘಟನಾ ಚಟುವಟಿಕೆಗಳನ್ನು ಸುಲಭದಲ್ಲಿ ಮಾಡುತ್ತಾರೆ. ಭಾವನೆಗಳಿಗೆ ಹೆಚ್ಚು ಬೆಲೆ ನೀಡುತ್ತಾರೆ, ಜೊತೆಗೆ ತಮ್ಮ ಭಾವನೆಗಳನ್ನು ಬೇಗನೆ ಹೊರ ಹಾಕುತ್ತಾರೆ. ಎಂತಹ ಸನ್ನಿವೇಶಗಳಿಗೂ ಹೊಂದಿಕೊಳ್ಳುತ್ತಾರೆ. ಆಕರ್ಷಕ ವ್ಯಕ್ತಿತ್ವ ಇವರದ್ದು.

`ಎ’
ಪ್ರಪಂಚದ ಜನಸಂಖ್ಯೆಯಲ್ಲಿ ಶೇ.34ರಷ್ಟು ಎ+ ಹಾಗೂ ಶೇ.6ರಷ್ಟು ಎ- ರಕ್ತದ ಗುಂಪಿನವರಿದ್ದಾರೆ.
ಗುಣ ಲಕ್ಷಣಗಳು
ವಿಧೇಯತೆ, ಸಹಾನುಭೂತಿ, ಸ್ವಯಂ ತ್ಯಾಗ ಮನೋಭಾವ, ಪ್ರಾಮಾಣಿಕತೆ, ನಿಷ್ಠಾವಂತ, ಭಾವನಾತ್ಮಕ, ಅಂತರ್ಮುಖಿಗಳು, ಶಾಂತ ಹಾಗೂ ಮೃದು ಸ್ವಭಾವದವರು. ಸಂಬಂಧಗಳಿಗೆ ಹೆಚ್ಚಿನ ಬೆಲೆ ನೀಡುವವರು. ಸಹಕಾರಿ ಮನೋಭಾವದವರು, ಸೂಕ್ಷ್ಮ ಮನಸ್ಸಿನವರು, ಬುದ್ಧಿವಂತರು, ಚಿಂತನಶೀಲರು. ಇವರಿಗೆ ಕೋಪ ಹೆಚ್ಚು, ತಾಳ್ಮೆ ಕಡಿಮೆ

`ಬಿ’
ಪ್ರಪಂಚದ ಜನಸಂಖ್ಯೆಯಲ್ಲಿ ಶೇ.9ರಷ್ಟು ಬಿ+ ಹಾಗೂ ಶೇ.2 ರಷ್ಟು ಬಿ- ರಕ್ತದ ಗುಂಪಿನವರಿದ್ದಾರೆ.
ಗುಣಲಕ್ಷಣಗಳು
ಈ ರಕ್ತದ ಗುಂಪಿನವರು ಚಿಂತನಶೀಲರು, ಮಹತ್ವಾಕಾಂಕ್ಷೆಯುಳ್ಳವರು, ಬಹುತೇಕ ಸಂದರ್ಭಗಳಲ್ಲಿ ಸವಾಲು ಎದುರಿಸಲು ಹಿಂಜರಿಯುವವರು ಆಗಿರುತ್ತಾರೆ. ಹರ್ಷಚಿತ್ತರು, ಆಶಾವಾದಿಗಳು, ಯಾವುದೇ ಕೆಲಸ, ಚಟುವಟಿಕೆಗಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವವರು, ಸಂವೇಧನಾಶೀಲರು ಆಗಿರುತ್ತಾರೆ. ಗುರಿ ತಲುಪುತ್ತಾರೆ. ಆ ನಿಟ್ಟಿನಲ್ಲಿ ಪ್ರಯತ್ನವನ್ನೂ ಮಾಡ್ತಾರೆ. ಆದರೆ ಇವರು ಒಳ್ಳೆಯ ಟೀಂ ಪ್ಲೇಯರ್ ಅಲ್ಲ. ವ್ಯಕ್ತಿಗತವಾಗಿರುವವರು. ತನ್ನ ದಾರಿಯೇ ಬೇರೆ ಎಂದು ಸಾಗುವವರಾಗಿರುತ್ತಾರೆ.

`ಎಬಿ’
ಪ್ರಪಂಚದ ಜನಸಂಖ್ಯೆಯಲ್ಲಿ ಶೇ.4ರಷ್ಟು ಎಬಿ+ ಹಾಗೂ ಶೇ.2 ರಷ್ಟು ಎಬಿ- ರಕ್ತದ ಗುಂಪಿನವರಿದ್ದಾರೆ.
ಗುಣಲಕ್ಷಣಗಳು
ಸಾಮಾಜಿಕ ವ್ಯಕ್ತಿತ್ವ ಇವರದ್ದು, ಬೆರೆಯುತ್ತಾರೆ. ಸಹಾನುಭೂತಿ ಉಳ್ಳವರು. ಸೃಜನಶೀಲರು, ಕಲಾತ್ಮಕರು, ಮೂಡಿ, ಒಂಥರಾ ಪ್ರವಾಹಕ್ಕೆ ವಿರುದ್ಧವಾಗಿ ಈಜುವವರು. ಕೆಲವೊಂದು ವಿಚಾರದಲ್ಲಿ ನಾಚಿಕೆ, ಮತ್ತೆ ಕೆಲವೊಂದಿಷ್ಟು ವಿಚಾರದಲ್ಲಿ ಬೋಲ್ಡ್ ಆಗಿರುವವರು. ಸಮಸ್ಯೆಗಳನ್ನು ಪತ್ತೆ ಹಚ್ಚಿ ಸುಲಭದಲ್ಲಿ ಅದನ್ನು ಬಗೆಹರಿಸುವ ಚಾಕಚಕ್ಯತೆ ಇರುವವರು. ಮಾಡಿದ್ರಾಯ್ತು, ಆದ್ರಾಯ್ತು, ಹೋದ್ರೋಯ್ತು ಎನ್ನುವವರಲ್ಲ. ಯಾವುದನ್ನೂ ಲಘುವಾಗಿ ಪರಿಗಣಿಸುವವರಲ್ಲ. ಸಮಾಜದ ಸಾಮಾರಸ್ಯ ಇಷ್ಟಪಡುವವರು ಹಾಗೂ ಅದನ್ನು ಸಾಧಿಸಲು ಪ್ರಯತ್ನಿಸುವವರು.
ಸದೃಢರು, ಗುರಿಯತ್ತ ಛಲದಿಂದ ಮುನ್ನುಗ್ಗುವವರು, ಶ್ರಮಜೀವಿಗಳು, ಸ್ನೇಹಶೀಲರು, ಉತ್ತಮ ಮನರಂಜನೆ ನೀಡುವವರು, ಪ್ರಕೃತಿ ಪ್ರಿಯರು ಆಗಿರುತ್ತಾರೆ. ತಮ್ಮದೇ ದಾರಿಯಲ್ಲಿ ಮುನ್ನುಗ್ಗಿ ಹೋಗುವ ವ್ಯಕ್ತಿ ಎ ಗುಂಪಿನವರದ್ದು.
ಹೀಗೆ ಒಂದೊಂದು ರಕ್ತದ ಗುಂಪಿನವರು ಒಂದೊಂದು ರೀತಿಯ ಗುಣ-ಸ್ವಭಾವ ಹೊಂದಿರ್ತಾರೆ.