
ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಚತುರ್ದಶಿ ತಿಥಿ,
ಭಾನುವಾರ, ಆರಿದ್ರಾ ನಕ್ಷತ್ರ
ರಾಹುಕಾಲ: ಸಂಜೆ 5:17 ರಿಂದ 6:52
ಗುಳಿಕಕಾಲ: ಮಧ್ಯಾಹ್ನ 3:41 ರಿಂದ 5:17
ಯಮಗಂಡಕಾಲ: ಮಧ್ಯಾಹ್ನ 12:30 ರಿಂದ 2:05
ಮೇಷ
ಅಪೇಕ್ಷಿತ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುವಿರಿ. ನಿಮ್ಮ ಎಲ್ಲ ಪ್ರಯತ್ನಗಳಿಗೂ ಫಲ ದೊರಕಲಿದೆ. ಉದ್ಯೋಗದ ಅವಕಾಶಗಳು ತೆರೆಯಲಿವೆ. ಹಿರಿಯರಿಗೆ ಆರೋಗ್ಯ ಸಮಸ್ಯೆ ಎದುರಾಗಲಿದೆ.
ವೃಷಭ
ವಿನಾಕಾರಣ ವಾದ ವಿವಾದಗಳನ್ನು ನಡೆಸದಿರುವುದು ಒಳಿತು. ಹಿರಿಯರ ಸಲಹೆಗಳನ್ನು ಉಪೇಕ್ಷಿಸುವುದು ಸರಿಯಲ್ಲ. ವ್ಯವಹಾರದಲ್ಲಿ ಸಾಮಾನ್ಯ ಆದಾಯವನ್ನು ನಿರೀಕ್ಷಿಸಬಹುದು.
ಮಿಥುನ
ಅನೇಕ ದಿನಗಳಿಂದ ನನೆಗುದಿಗೆ ಬಿದ್ದಿರುವ ಕೆಲಸ ಕಾರ್ಯಗಳು ಶೀಘ್ರವಾಗಿ ನೆರವೇರಲಿದೆ. ಹಣಕಾಸಿನ ಅನುಕೂಲತೆಗಳು ಕೂಡಿಬರುವುದರಿಂದಾಗಿ ಹೊಸ ಯೋಜನೆಗಳಿಗೆ ಧೈರ್ಯವಾಗಿ ಮುನ್ನುಡಿ ಇಡುವಿರಿ.
ಕಟಕ
ನಿಮ್ಮ ವ್ಯವಹಾರದ ಬಗ್ಗೆ ಸಂಗಾತಿಯೊಂದಿಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದೀರಿ. ಹಿರಿಯರ ಯೋಗಕ್ಷೇಮ ನೋಡಲಿದ್ದೀರಿ. ವಿವಾದಿತ ವಿಷಯಗಳನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಿ.
ಸಿಂಹ
ಪಾಲುಗಾರಿಕೆ ವ್ಯವಹಾರ ಹೊಸ ತಿರುವು ಪಡೆಯಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಉತ್ತಮ ಅವಕಾಶ ನಿಮಗೆ ದೊರಕಲಿದೆ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಪ್ರಗತಿಯನ್ನು ಕಾಣಬಹುದು.
ಕನ್ಯಾ
ಬೇರೆಯವರ ಚಾಡಿ ಮಾತುಗಳಿಗೆ ಕಿವಿಗೊಡದಿರುವುದು ಒಳಿತು. ಮಾನಸಿಕ ಸಮತೋಲನಕ್ಕಾಗಿ ಸಮಾಧಾನದಿಂದ ವ್ಯವಹರಿಸಿ. ಹಣಕಾಸಿನ ವಿಚಾರದಲ್ಲಿ ಅನುಕೂಲವಾಗಲಿದೆ.
ತುಲಾ
ಅಪೇಕ್ಷಿತ ಕೆಲಸ ಕಾರ್ಯಗಳಿಗೆ ಉತ್ತಮ ಸಹಕಾರ ದೊರಕಲಿದೆ. ಹಿರಿಯರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದಾಗಿ ಬದುಕಿಗೊಂದು ಹೊಸ ಆಯಾಮ ಮೂಡಿಬರಲಿದೆ. ದೂರದ ಪ್ರಯಾಣ ಬೆಳೆಸಲಿದ್ದೀರಿ.
ವೃಶ್ಚಿಕ
ನಿಮ್ಮ ಕ್ರೀಡಾ – ಸಾಹಸಿ ಮನೋಭಾವದಿಂದಾಗಿ ಉತ್ತಮ ವರಮಾನ ಪಡೆಯಲಿದ್ದೀರಿ. ಯೋಗ್ಯ ವಿಚಾರಗಳಲ್ಲಿ ನಿಮ್ಮ ಬುದ್ಧಿ ಚಾತುರ್ಯದಿಂದಾಗಿ ಉತ್ತಮ ನಿರ್ಣಯ ಕೈಗೊಳ್ಳಲಿದ್ದೀರಿ. ಹೊಸ ಜವಾಬ್ದಾರಿ ವಹಿಸಬೇಕಾದೀತು.
ಧನು
ಸಮಾಜದ ಸಂಕಷ್ಟಗಳಿಗೆ ಸ್ಪಂದಿಸಿ ಸಹಕಾರ ಹಸ್ತ ನೀಡಲಿದ್ದೀರಿ. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಬಗೆಹರಿಯದ ಸಮಸ್ಯೆಗಳ ವಿಚಾರದಲ್ಲಿ ಸಂಗಾತಿಯೊಂದಿಗೆ ವಿಚಾರ ವಿನಿಮಯ ನಡೆಸಲಿದ್ದೀರಿ.
ಮಕರ
ನಿಮ್ಮ ವಿಶ್ವಾಸವನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಕಂಡುಬರುತ್ತಿದೆ. ಮಹತ್ವದ ವಿಷಯದ ಕುರಿತು ಚಿಂತನ ಮಂಥನ ನಡೆಸಲಿದ್ದೀರಿ. ಆರ್ಥಿಕ ಅನುಕೂಲ ದೊರಕಲಿದೆ.
ಕುಂಭ
ಸಮಾಜದ ನಾಯಕತ್ವವನ್ನು ವಹಿಸುವ ಅಪೂರ್ವ ಅವಕಾಶ ನಿಮಗೆ ದೊರಕಲಿದೆ. ಅತಿಯಾದ ಆತ್ಮ ವಿಶ್ವಾಸವು ನಿಮ್ಮನ್ನು ನಗೆಪಾಟಲಿಗೆ ದೂಡುವ ಸಾಧ್ಯತೆ ಕಂಡುಬರುತ್ತಿದೆ. ವ್ಯವಹಾರದಲ್ಲಿ ಅನುಕೂಲಕರ ವಾತಾವರಣ.
ಮೀನ
ವೃತ್ತಿಯಲ್ಲಿ ಭಿನ್ನವಾಗಿ ಯೋಚಿಸುವ ಮೂಲಕ ಮುನ್ನಡೆಯನ್ನು ಸಾಧಿಸಲಿದ್ದೀರಿ. ಸಂಗಾತಿಯ ಸಹಕಾರದಿಂದ ಸಂತಸ ಹಾಗೂ ವಿಶ್ವಾಸ ಮೂಡಿಬರಲಿದೆ. ಹೊಸ ಯೋಜನೆಗೆ ಚಾಲನೆ ನೀಡಲಿದ್ದೀರಿ.