
ಮಂಜಿಷ್ಠಾ ಮಂಜಿಸ್ಟ್,ಇಷ್ಟ ಮಧುಕ,ಮಂಜಿಷ್ಠಾ ಬಳ್ಳಿ,ಶಿರಗತ್ತಿ,ರಕ್ತಾoಗಿ, ರಕ್ತಯಷ್ಟಿ,ವಸ್ತ್ರರಂಜನಿ,ವಸ್ತ್ರ ಭೂಷಣ,ಜ್ವರಹಂತ್ರಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ಹಿಮಾಲಯದ ತಪ್ಪಲಿನ ಕಾಡುಗಳಲ್ಲಿ ಮಾತ್ರ ಕಾಣುವ,ಬಳ್ಳಿಯಂತೆ ಹಬ್ಬುವ ಅಪರೂಪದ ಔಷಧೀಯ ಸಸ್ಯವಿದು.ಇದರ ಬೇರನ್ನು ಮಾತ್ರ ಔಷಧಿಗಾಗಿ ಹೆಚ್ಚಿಗೆ ಉಪಯೋಗಿಸುತ್ತಾರೆ. ಕರ್ನಾಟಕದ ಮಲೆನಾಡಿನ ಕಾಡುಗಳಲ್ಲಿ, ಅಲ್ಲಲ್ಲಿ ಅಪರೂಪವಾಗಿ ಕಾಣಿಸುತ್ತೆ. ಮುಖದ ಮೇಲಿನ ಕಪ್ಪು ಹಾಗೂ ಬಿಳಿ ಮಚ್ಚೆಗಳು, ಮೊಡವೆಗಳು, ಮೊಡವೆಯಿಂದಾದ ಕಲೆಗಳಿಂದ ಮುಖದ ಅಂದವೇ ಕೆಡುತ್ತೆ.ಇದರಿಂದ ರಕ್ಷಿಸಿಕೊಳ್ಳಲು, 1.ಚಮಚ ಮಂಜಿಷ್ಠಾ ಬೇರಿನ ಚೂರ್ಣ 1 ಚಮಚ ಜೇನುತುಪ್ಪ ಕಲಸಿ ಪೇಸ್ಟ್ ಮಾಡಿಕೊಂಡು ಮಚ್ಚೆ,ಮೊಡವೆ,ಕಲೆಗಳ ಮೇಲೆ ಲೇಪನ ಮಾಡಿ 2 ಗಂಟೆ ನಂತರ ಉಗರು ಬೆಚ್ಚಗಿನ ನೀರಲ್ಲಿ ತೊಳೆಯಬೇಕು. 2.ಮಂಜಿಷ್ಠಾ ಚೂರ್ಣ 1 ಚಮಚ, ಕಸ್ತೂರಿ ಅರಸಿಣದ ಚೂರ್ಣ 1/2 ಚಮಚ, ಹಸುವಿನ ಹಾಲು 3 ರಿಂದ 4 ಚಮಚ ಹಾಕಿ ಕಲಸಿ, ಪೇಸ್ಟ್ ಮಾಡಿಕೊಂಡು,ಮುಖಕ್ಕೆ ಲೇಪನ ಮಾಡಿ 2 ಗಂಟೆಯ ನಂತರ, ಉಗರು ಬೆಚ್ಚಗಿನ ನೀರಲ್ಲಿ ಕಡಲೆ ಹಿಟ್ಟಿನಿಂದ ಮುಖವನ್ನು ತೊಳೆದುಕೊಳ್ಳಬೇಕು. ಮುಖದ ಚರ್ಮವು ಕಾಂತಿಯಿಂದ ಹೊಳೆಯುವುದಲ್ಲದೆ, ಸೌಂದರ್ಯವು ಹಿಮ್ಮಡಿಗೊಳ್ಳುತ್ತದೆ. 3.ಮಂಜಿಷ್ಠಾ ಚೂರ್ಣ 1ಚಮಚ, ಬೇವಿನ ಎಲೆಯ ಪೇಸ್ಟ್ 1/2 ಚಮಚ, ಕಸ್ತೂರಿ ಅರಸಿಣ 1/2 ಚಮಚ, ಈ ಮೂರನ್ನು ಒಂದು ತಟ್ಟೆಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ, ಅದಕ್ಕೆ ಒಂದರಿಂದ ಎರಡು
ಚಮಚ ಶುದ್ಧ ಮೊಸರು ಕಲಸಿ,ಮುಖ ತೊಳೆದು, ತಯಾರಿಸಿಕೊಂಡಿರುವ ಪೇಸ್ಟನ್ನು ಮುಖಕ್ಕೆ ಲೇಪನ ಮಾಡಿ, 2 ಗಂಟೆಯ ನಂತರ ಮುಖ ತೊಳೆಯಿರಿ.
ಈಗೆ ಮಾಡುವುದರಿಂದ ಮುಖದ ಮೇಲಿನ ಕಲೆಗಳು, ಮಚ್ಚೆಗಳು,ಮೊಡವೆಗಳು ದೂರವಾಗಿ, ಮುಖದ ಚರ್ಮ ಮೃದುವಾಗಿ, ಕಾಂತಿಯಿಂದ ಹೊಳೆಯುತ್ತೆ.ಮುಖದ ಸೌಂದರ್ಯ ಹಿಮ್ಮುಡಿಗೊಳ್ಳುತ್ತೆ.
ಮಂಜಿಷ್ಠಾ ಬೇರಿನ ಚೂರ್ಣ 25 ಗ್ರಾಂ, ಲಾವಂಚ ಬೇರಿನ ಚೂರ್ಣ 25 ಗ್ರಾಂ, ಸುಗಂಧ ಪಾಲ ಬೇರಿನ ಚೂರ್ಣ 25 ಗ್ರಾಂ,ಶ್ರೀಗಂಧದ ಚೂರ್ಣ 25 ಗ್ರಾಂ,ಕೆಂಪು ಕಲ್ಲು ಸಕ್ಕರೆ 50 ಗ್ರಾಂ, ಚೆನ್ನಾಗಿ ಕಲಸಿದ ಮಿಶ್ರಣವನ್ನು ಒಂದು ಗಾಜಿನ ಬಾಟ್ಲಿಯಲ್ಲಿ ಭದ್ರಪಡಿಸಿ 1ಲೋಟ ಉಗರು ಬೆಚ್ಚಗಿನ ನೀರಲ್ಲಿ ಬೆಳಿಗ್ಗೆ ಸಂಜೆ 1 ಚಮಚ ಕಲಸಿ ಸೇವಿಸುತ್ತಾ ಬಂದರೆ, ದೇಹದಲ್ಲಿನ ರಕ್ತಶುದ್ಧಿಯಾಗುತ್ತೆ.ಚರ್ಮ ವ್ಯಾಧಿಗಳು ನಿವಾರಣೆಯಾಗುತ್ತೆ.ಪಿತ್ತ ದೋಷಗಳು ದೂರವಾವುತ್ತೆ.
ಸ್ತ್ರೀಯರಲ್ಲಿ ಋತಸ್ರಾವ ಸಮಸ್ಯೆಇದ್ದಾಗ, ಒಂದು ಪಾತ್ರೆಯಲ್ಲಿ 200ml ನೀರಿಗೆ 1 ಚಮಚ ಮಂಜಿಷ್ಠಾ ಚೂರ್ಣ ಕಲಸಿ ಒಲೆಯ ಮೇಲಿಟ್ಟು ಮಂದದುರಿಯಲ್ಲಿ ಚೆನ್ನಾಗಿ ಕುದಿಸಿ, 100ml ಆದಾಗ ಕೆಳಗಿಳಿಸಿ,ಉಗರು ಬೆಚ್ಚಗಾದಾಗ ಸೋಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು (ಋತುಸ್ರಾವದ ಸಮಯದಲ್ಲಿ ಮಾತ್ರ ನಾಲ್ಕು ದಿನ ತೆಗೆದುಕೊಳ್ಳಬೇಕು) ಐದಾರು ತಿಂಗಳು ತೆಗೆದುಕೊಂಡರೆ ಋತುಸ್ರಾವ ಕ್ರಮಬದ್ದವಾಗುತ್ತೆ.
ಮಂಜಿಷ್ಠಾ ಚೂರ್ಣ 50 ಗ್ರಾಂ, ನೆಗ್ಗಿಲು ಗಿಡದ ಕಾಯಿಯ ಚೂರ್ಣ 50 ಗ್ರಾಂ ಚೆನ್ನಾಗಿ ಕಲಸಿ ಒಂದು ಗಾಜಿನ ಬಾಟ್ಲಿಯಲ್ಲಿ ಶೇಖರಿಸಿಟ್ಟುಕೊಂಡು, 200ml ನೀರಿಗೆ 1 ಚಮಚ ಚೂರ್ಣವನ್ನು ಹಾಕಿ ಚೆನ್ನಾಗಿ ಕುದಿಸಿ 100ml ಆದಾಗ ಕೆಳಗಿಳಿಸಿ, ಉಗರು ಬೆಚ್ಚಗಿದ್ದಾಗ ಸೋಸಿ ಅದ್ಕಕೆ ಹುರಳಿಕಾಳಿನ ಚೂರ್ಣ 1/2 ಚಮಚ ಕಲಸಿ ಬೆಳಿಗ್ಗೆ ಸಂಜೆ 50ml ನಂತೆ ಸೇವಿಸುತ್ತಾ ಬಂದರೆ ಮೂತ್ರಪಿಂಡದಲ್ಲಿನ ಕಲ್ಲು ಕರಗಿ ಮೂತ್ರದಲ್ಲಿ ಹೊರ ಬರುತ್ತೆ.
ಮಂಜಿಷ್ಠಾ ಚೂರ್ಣ 50 ಗ್ರಾಂ, ಕರಿ ಮೆಣಸಿನ ಪುಡಿ 50 ಗ್ರಾಂ, ಪುದಿನಾ ಚೂರ್ಣ 50 ಗ್ರಾಂ ಕಲಸಿಟ್ಟುಕೊಂಡು, ಸ್ವಲ್ಪ ನೀರಿಗೆ 1 ಚಮಚ ಚೂರ್ಣ ಹಾಕಿ ಚೆನ್ನಾಗಿ ಕುದಿಸಿ, ಸೋಸಿ 1ಲೋಟ ಹಾಲಿನಲ್ಲಿ ಕಷಾಯ ಹಾಗೂ ಕಲ್ಲು ಸಕ್ಕರೆ 1ಚಮಚ ಕಲಸಿ ಸೇವಿಸುತ್ತಾ ಬಂದರೆ ದೇಹದಲ್ಲಿ ರಕ್ತ ಶುದ್ಧಿಯಾಗಿ, ರೋಗನಿರೋಧಕ ಶಕ್ತಿ ಹೆಚ್ಚುತ್ತೆ.
ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ಗಿಡವನ್ನ ಪರಿಚಯ ಮಾಡಿಕೊಳ್ಳೋಣ. ವಂದನೆಗಳು