
ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಶುಕ್ರವಾರ, ರೋಹಿಣಿ ನಕ್ಷತ್ರ
ರಾಹುಕಾಲ: ಬೆಳಗ್ಗೆ 10:53 ರಿಂದ 12:29
ಗುಳಿಕಕಾಲ: ಬೆಳಗ್ಗೆ 7:41 ರಿಂದ 9:17
ಯಮಗಂಡಕಾಲ: ಮಧ್ಯಾಹ್ನ 3:41 ರಿಂದ 5:17
ಮೇಷ
ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಹಣಕಾಸಿನ ಅನುಕೂಲತೆಯಿಂದಾಗಿ ಉತ್ತಮ ಫಲ ಒದಗಿ ಬರಲಿದೆ. ಸಮಾಜದೊಂದಿಗೆ ಬಾಂಧವ್ಯ ವೃದ್ಧಿ. ಆತ್ಮವಿಶ್ವಾಸದಿಂದ ವ್ಯವಹರಿಸಿ ಜಯ ಸಾಧನೆ ನಿಮ್ಮದಾಗಲಿದೆ.
ವೃಷಭ
ಸುಸಂಸ್ಕೃತರ ಸಹವಾಸದಿಂದಾಗಿ ಮಾನಸಿಕ ನೆಮ್ಮದಿ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಮನೆಗೆ ಅನಿರೀಕ್ಷಿತರ ಆಗಮನ ಸಾಧ್ಯತೆ. ವಿವೇಚನೆಯ ನಡವಳಿಕೆಯಿಂದಾಗಿ ಎದುರಾದ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ.
ಮಿಥುನ
ಇತರರ ಕೆಲಸಗಳ ಯಶಸ್ಸಿಗಾಗಿ ಉತ್ತಮ ಸಲಹೆ ನೀಡುವ ಅವಕಾಶ. ವಹಿವಾಟಿನಲ್ಲಿ ಉತ್ತಮ ಫಲಿತಾಂಶ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಯ. ಕೃಷಿ ಕಾರ್ಯಗಳಲ್ಲಿ ಹಿನ್ನಡೆ ಉಂಟಾದೀತು.
ಕಟಕ
ಬಹುದಿನಗಳ ಸಮಸ್ಯೆಗಳು ಬಗೆಹರಿಯಲಿವೆ. ಉನ್ನತ ಸಂಸ್ಕಾರಯುತ ನಡೆ. ಗೆಳೆಯರಿಂದ ಪ್ರಶಂಸಾತ್ಮಕ ಮಾತುಗಳನ್ನು ಕೇಳಲಿದ್ದೀರಿ. ಸಂಗಾತಿಯಿಂದ ಉತ್ತಮ ಸಹಕಾರ ದೊರೆಯಲಿದೆ.
ಸಿಂಹ
ವೈಯಕ್ತಿಕ ವ್ಯವಹಾರಗಳ ಶೀಘ್ರ ಇತ್ಯರ್ಥಕ್ಕಾಗಿ ನಡೆಸುವ ಹೋರಾಟದಲ್ಲಿ ಪ್ರಗತಿ. ಪಟ್ಟು ಬಿಡದೆ ಇತರರಿಂದ ಕಾರ್ಯ ಸಾಧಿಸುವ ಛಲ. ಮನೆಯವರ ಆರೋಗ್ಯದ ಬಗ್ಗೆ ಗಮನವಿರಲಿ.
ಕನ್ಯಾ
ವಾಹನ ಖರೀದಿಯನ್ನು ದಿನದ ಮಟ್ಟಿಗೆ ಮುಂದೂಡುವುದೇ ಸೂಕ್ತ. ಬಂಧುಗಳಿಂದ ಕೆಲಸ–ಕಾರ್ಯಗಳಿಗೆ ಸಹಾಯ. ಕಾರ್ಯ ನಿರ್ವಹಣೆಯಿಂದಾಗಿ ಹಿರಿಯರ ಪ್ರಶಂಸೆಗೆ ಪಾತ್ರರಾಗುವಿರಿ. ನೌಕರಿಯಲ್ಲಿರುವವರಿಗೆ ಭಡ್ತಿ ಸಾಧ್ಯತೆ.
ತುಲಾ
ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ಆದಾಯ ದೊರೆತು ಆರ್ಥಿಕ ಸೌಖ್ಯ. ಪಾಲುಗಾರಿಕೆ ವ್ಯವಹಾರದಿಂದಾಗಿ ಅಧಿಕ ಲಾಭದ ನಿರೀಕ್ಷೆ. ಕುಟುಂಬದಲ್ಲಿ ಸಂತೋಷದ ವಾತಾವರಣ. ಹಿರಿಯರಿಂದ ಬಂದ ಸಲಹೆ ನಿರ್ಲಕ್ಷಿಸಬೇಡಿ.
ವೃಶ್ಚಿಕ
ಎದುರಾಳಿಗಳ ಕಾರ್ಯತಂತ್ರ ವಿಫಲವಾಗಿ ಸಂತಸ. ಶುಭಸಮಾರಂಭಗಳಿಗೆ ಆರ್ಥಿಕ ಸಹಾಯ ನೀಡಲಿದ್ದೀರಿ. ಘನತೆಗೆ ತಕ್ಕ ನಡೆಯಿಂದಾಗಿ ಸಾಮಾಜಿಕ ಮನ್ನಣೆ. ಉನ್ನತ ಶಿಕ್ಷಣದ ಕುರಿತು ದುಗುಡ.
ಧನು
ಹಣಕಾಸಿನ ಅನುಕೂಲ ವಿವಿಧ ಮೂಲಗಳಿಂದ ಹರಿದುಬರುವ ಸಾಧ್ಯತೆ. ಅತಿಯಾದ ಆಸೆಯಿಂದ ದೂರ ಉಳಿಯುವ ಸಂಕಲ್ಪ ಮಾಡಿ. ದೂರ ಪ್ರಯಾಣದಿಂದಾಗಿ ವಿಪರೀತ ಆಯಾಸ. ಆರೋಗ್ಯದಲ್ಲಿ ವ್ಯತ್ಯಯ.
ಮಕರ
ಹಮ್ಮಿಕೊಂಡ ಕೆಲಸ–ಕಾರ್ಯಗಳು ಸುರಕ್ಷಿತವಾಗಿ ನೆರವೇರುವವು. ದೃಢ ಸಂಕಲ್ಪದ ಸಾಮರಸ್ಯ. ಸಾಂಸಾರಿಕ ನೆಮ್ಮದಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಅಬಾಧಿತ ಮುನ್ನಡೆಯಿಂದಾಗಿ ನೆಮ್ಮದಿ.
ಕುಂಭ
ಉದ್ಯೋಗ ಕ್ಷೇತ್ರದಲ್ಲಿ ಸಾಮರಸ್ಯದಿಂದಾಗಿ ಉತ್ಸಾಹ. ಅನುಮಾನಕ್ಕೆಡೆ ಇಲ್ಲದ ಬದಲಾವಣೆಗಳು ಕಂಡುಬರುವವು. ನಿರುದ್ಯೋಗಿಗಳಿಗೆ ಉದ್ಯೋಗ ದೊರಕುವ ಸಾಧ್ಯತೆ. ಕೃಷಿಕಾರ್ಯಗಳಲ್ಲಿ ಉತ್ಸುಕತೆ.
ಮೀನ
ವಿದ್ಯುತ್ ಉಪಕರಣಗಳ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಕೊರತೆ. ವಂಚಕರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಜಾಣ್ಮೆಯ ನಡೆ. ದೂರಾಲೋಚನೆಯಿಂದಾಗಿ ಹಿತ ಮಿತದ ಮಾತುಗಾರಿಕೆ.