
ಕುಷ್ಮಾಂಡ ಕರಕಾರಕ, ಪುಷ್ಪಫಲ, ಬಿಳಿಕುಂಬಳ, ಬೂದುಗುಂಬಳ, ಬೂದುಕುಂಬಳ, ವೆಳ್ ಪುಸನಿಕಾಯಿ, ಕಲ್ಯಾಣಿ ಪೂಸನಿ, ಬೂದಡಿ ಗುಮ್ಮಡಿಕಾಯಿ ಎಂಬ ಹೆಸರುಗಳಿಂದ ಕರೆಯುತ್ತಾರೆ
ಬೂದುಕುಂಬಳಕಾಯಿಯನ್ನು ಅನೇಕ ದೇಶಗಳಲ್ಲಿ ಬೆಳೆಯುತ್ತಾರೆ.ಅದರಲ್ಲೂ ನಮ್ಮ ದೇಶದಲ್ಲಿ ವಿಶೇಷವಾಗಿ ಹೊಲ ಗದ್ದೆಗಳಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ.ಇದರ ಮತ್ತೊಂದು ವಿಶೇಷವೆಂದರೆ ಬೀಜ ಬಿದ್ದಕಡೆ ಮೊಳಕೆಯೊಡೆದು ಗಿಡವಾಗಿ ಕಾಯಿ ಬಿಡುತ್ತೆ.
ನಮ್ಮ ಹಿಂದೂ ಸಂಪ್ರದಾಯದಲ್ಲಿ ಬೂದುಗುಂಬಳಕ್ಕೆ ಬಹಳ ಪೂಜನೀಯಸ್ಥಾನ ನೀಡಲಾಗಿದ್ದು, ಹೋಮ, ನೂತನ ಗೃಹಪ್ರವೇಶ, ಶಂಕುಸ್ಥಾಪನೆ, ಯಂತ್ರೋಪಕರಣ ಕಾರ್ಯಾರಂಭದಲ್ಲಿ ಇದು ಇರಲೇಬೇಕು.ಇದನ್ನು ಆಹಾರದಲ್ಲಿ ತರಕಾರಿಯಾಗಿ ಬಳಸುವುದಲ್ಲದೇ, ಇದರಲ್ಲಿ ಅತ್ಯದ್ಭುತವಾದ ಔಷಧೀಯ ಗುಣಗಳು ತುಂಬಿದೆ.ಇದರಲ್ಲಿ ಅನೇಕ ರೀತಿಯ ಪೋಷಕಾಂಶಗಳು, ವಿಟಮಿನ್ಗಳು, ಖನಿಜಾಂಶ ಪದಾರ್ಥಗಳಿದ್ದು, ಇದರ ಸೇವನೆಯಿಂದ ಅನೇಕ ವ್ಯಾಧಿಗಳು ಗುಣವಾಗುತ್ತೆ.
ಬೂದುಗುಂಬಳವನ್ನು ಪುರಾತನ ಕಾಲದಿಂದಲೂ ಆಯುರ್ವೇದದಲ್ಲಿ ಔಷಧೀಯವಾಗಿ ಬಳಸುತ್ತಾ ಬಂದಿದ್ದಾರೆ.
ಬೂದುಗುಂಬಳದ ಜ್ಯುಸ್, ನಿಯಮಿತವಾಗಿ ದಿನವು ಬೆಳಿಗ್ಗೆ ಸಂಜೆ ಊಟಕ್ಕೆ ಮುಂಚೆ 50ml ನಂತೆ ಕುಡಿಯುವುದರಿಂದ ಅನೇಕ ರೀತಿಯ ಹೃದಯ ಸಮಸ್ಯೆಗಳು ದೂರವಾಗಿ, ಹೃದಯ ಬಲಗೊಂಡು, ಸುಗುಮವಾಗಿ ಕಾರ್ಯ ನಿರ್ವಹಿಸುತ್ತದೆ.ಎಂತಹ ಹೃದಯ ಸಮಸ್ಯೆಗಳಿದ್ದರೂ ದೂರವಾಗುತ್ತೆ ರಕ್ತಹೀನತೆಯಿಂದ ದೇಹವನ್ನು ಕಾಪಾಡುತ್ತೆ.
ಬೂದುಗುಂಬಳದಲ್ಲಿ ನಾರಿನಾಂಶ ಅಧಿಕವಾಗಿದ್ಫು, ಪಲ್ಯ, ಸಾಂಬಾರ್, ಕೋಸಂಬರಿ, ಜ್ಯೂಸ್ ಮಾಡಿ ಸೇವಿಸುತ್ತಿದ್ದರೆ, ಮಲಬದ್ಧತೆಯಿಂದ ಮುಕ್ತಿ ಸಿಗುತ್ತೆ. ಕಣ್ಣಿನ ಸಮಸ್ಯೆಗಳು ದೂರವಾಗುತ್ತೆ.
ಸ್ತ್ರೀಯರ ಅನೇಕ ಸಮಸ್ಯೆಗಳಿಗೆ ಬೂದುಗುಂಬಳ ರಾಮಬಾಣದಂತೆ ಕೆಲಸಮಾಡುತ್ತೆ. ಶ್ವೇತ ಪ್ರದರ, ಋತಸ್ರಾವ ಸಮಸ್ಯೆಗಳಿಗೆ ಇದು ದಿವೌಷಧಿ. ಸೌತೆಕಾಯಿಯಂತೆ ಹಸಿಯಾಗಿ ಅಥವಾ ಕೋಸಂಬರಿ ಮಾಡಿಕೊಂಡ ಸವಿಸಬಹುದು.
ಬೂದುಗುಂಬಳ ದಿನವು ನಿಯಮಿತವಾಗಿ ಸೇವಿಸುವುದರಿಂದ ಮೆದಳು ಆರೋಗ್ಯದಿಂದಕೂಡಿ, ಸುಗುಮವಾಗಿ ಕಾರ್ಯನಿರ್ವಹಿಸುತ್ತದೆ.
ಮಕ್ಕಳಿಗೆ ಇದನ್ನು ಪಲ್ಯ ಅಥವಾ ಜ್ಯುಸ್ ಮಾಡಿ ಆಹಾರದ ಜೊತೆಗೆ ಕೊಡುವುದರಿಂದ, ಬುದ್ಧಿ ಚುರುಕಾಗಿ, ದೇಹ ಬೆಳವಣಿಗೆಗೆ ಸಹಕಾರಿಯಾಗಿ ಆರೋಗ್ಯ ಕಾಪಾಡುತ್ತೆ.
ವಾಂತಿ ಹಾಗು ತಲೆ ಸುತ್ತುವಿಕೆ ಇದ್ದಾಗ, ಬೂದುಗುಂಬಳದ ಜ್ಯುಸ್ ಕುಡಿದರೆ, ಶೀಘ್ರ ಶಮನವಾಗುತ್ತೆ.
ಬೂದುಗುಂಬಳ ಬೀಜದ ಚೂರ್ಣವನ್ನು ಕೊಬ್ಬರಿ ನೀರಿನಲ್ಲಿ ಕಲಸಿ ಕುಡಿದರೆ, ಹೊಟ್ಟೆಯಲ್ಲಿನ ಜಂತುಹುಳು, ಇತರೆ ಸೂಕ್ಷ್ಮ ವಿಷಕ್ರಿಮಿಗಳು ಸತ್ತು ಮಲ ಮೂತ್ರದಲ್ಲಿ ಹೊರಬರುತ್ತವೆ.
ಬೀಜಗಳನ್ನು ನೆರಳಲ್ಲಿ ಒಣಗಿಸಿ,ಕುಟ್ಟಿ ಪುಡಿಮಾಡಿ, ವಸ್ತ್ರಾಗಾಲಿತ ಚೂರ್ಣ ಮಾಡಿಟ್ಟುಕೊಂಡು, ಹಾಲು ಅಥವಾ ಮಜ್ಜಿಗೆಯಲ್ಲಿ ಕಲಸಿ ಕುಡಿಯುವುದರಿಂದ ದೇಹಕ್ಕೆ ಅಪಾರ ಶಕ್ತಿಬಂದು, ನರಮಂಡಲ, ಮಾಂಸಖಂಡಗಳು ಬಲಗೊಳ್ಳುತ್ತವೆ.
ಬೂದುಗುಂಬಳ ನಿಯಮಿತ ಸೇವನೆಯಿಂದ ಮೈಯಲ್ಲಿನ ಉಷ್ಣತೆ ಕಡಿಮೆಯಾಗಿ, ಅಸಿಡಿಟಿ, ಗ್ಯಾಸ್ಟ್ರಿಕ್, ಅಲ್ಸರ್ ಸಮಸ್ಯೆಗಳು ದೂರವಾಗುತ್ತೆ.
ಬೂದುಗುಂಬಳದ ರಸವನ್ನು ಮಜ್ಜಿಗೆಯಲ್ಲಿ ಕಲಸಿ ಕುಡಿಯುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತೆ.
ಸಿಪ್ಪೆಯನ್ನು ನುಣ್ಣಗೆ ಅರೆದು, ಮೊಸರು ಅಥವಾ ಹಾಲಿನಲ್ಲಿ ಕಲಸಿ ಮುಖಕ್ಕೆ ಲೇಪನ ಮಾಡಿ 1/2 ಗಂಟೆಯ ನಂತರ ಉಗರು ಬೆಚ್ಚಗಿನ ನೀರಲ್ಲಿ ತೊಳೆದರೆ, ಮುಖದ ಚರ್ಮವು ಕಾಂತಿಯಿಂದ ಹೊಳೆಯುತ್ತೆ.
ಬೂದುಗುಂಬಳ ಸೇವಿಸುವುದರಿಂದ, ಮಲದಲ್ಲಿ ರಕ್ತ ಸುರಿಯುವುದು, ಮೂತ್ರಪಿಂಡ ಸಮಸ್ಯೆಗಳು ಗುಣವಾಗುತ್ತೆ.ದೇಹದಲ್ಲಿನ ರಕ್ತನಾಳಗಳು ಶುದ್ಧಿಯಾಗಿ,ರಕ್ತಸಂಚಾರ ಸುಗುಮಗೊಳ್ಳುತ್ತೆ. ದೇಹದಲ್ಲಿನ ಕಲ್ಮಶಗಳು ಹೊರಬರುತ್ತವೆ.ಅನೇಕ ಚರ್ಮ ಸಮಸ್ಯೆಗಳು ದೂರವಾಗುತ್ತವೆ.ದೇಹದಲ್ಲಿನ ಮೂಳೆಗಳು ಬಲಿಷ್ಠಗೊಳ್ಳುತ್ತವೆ.ಜೀರ್ಣಕ್ರಿಯೆ ಸಮಸ್ಯೆಗಳು ದೂರವಾಗುತ್ತವೆ.
ದಿನವು ಬೂದುಗುಂಬಳದ ರಸವನ್ನು ಬೆಳಿಗ್ಗೆ ಸಂಜೆ ಊಟಕ್ಕೆ ಮೊದಲು ಕುಡಿಯುವುದರಿಂದ ಮಧುಮೇಹ ಅತೋಟಿಗೆ ಬರುತ್ತೆ. ಬೂದುಗುಂಬಳ ಅತ್ಯದ್ಭುತ ಆಹಾರ ಗೆಳೆಯರೆ ವಂದನೆಗಳು