
ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಡ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಗುರುವಾರ, ಕೃತ್ತಿಕಾ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 2:05 ರಿಂದ 3:41
ಗುಳಿಕಕಾಲ: ಬೆಳಗ್ಗೆ 9:17 ರಿಂದ 10:53
ಯಮಗಂಡಕಾಲ: ಬೆಳಗ್ಗೆ 6:06 ರಿಂದ 7:41
ದಕ್ಷಿಣಾಯಣ ಪುಣ್ಯಕಾಲ ತರ್ಪಣ ಸಮಯ 10:31
ಮೇಷ
ನಿಗದಿತ ಸಮಯದಲ್ಲಿ ಕೆಲಸ–ಕಾರ್ಯಗಳು ನೆರವೇರಿ ನೆಮ್ಮದಿ. ತ್ಯಾಗ ಮನೋಭಾವದಿಂದಾಗಿ ಅನೇಕರಿಗೆ ಸಾಂತ್ವನ, ನೆಮ್ಮದಿ ನೀಡುವಿರಿ. ಸಾರ್ವಜನಿಕ ಪುರಸ್ಕಾರಕ್ಕೆ ಪಾತ್ರರಾಗುವ ಸಾಧ್ಯತೆ.
ವೃಷಭ
ಒದಗಿ ಬಂದ ಭಯದಿಂದ ಮುಕ್ತಿ ಹೊಂದಿ ಮಾನಸಿಕ ನಿರಾಳತೆ. ವೈಯಕ್ತಿಕ ಸಂಬಂಧಗಳಲ್ಲಿ ಬದಲಾವಣೆ. ಪ್ರಯಾಣ ಸಾಧ್ಯತೆ. ಕುಟುಂಬ ವರ್ಗದವರಿಂದ ಶುಭ ಸಮಾಚಾರಗಳು ಕೇಳಿಬರಲಿವೆ. ದೇವರ ದರ್ಶನ ಭಾಗ್ಯ.
ಮಿಥುನ
ಕಾರ್ಯದಲ್ಲಿ ಹೆಚ್ಚಿನ ಉತ್ಸಾಹ ಹಾಗೂ ಯಶಸ್ಸು. ಇತರರ ಹಸ್ತಕ್ಷೇಪವನ್ನು ವಿರೋಧಿಸಿ ಕೆಂಗಣ್ಣಿಗೆ ತುತ್ತಾಗುವ ಸಾಧ್ಯತೆ. ಪರಿಸ್ಥಿತಿ ನಿಭಾಯಿಸಲು ಗಟ್ಟಿ ನಿರ್ಧಾರ ಅವಶ್ಯ. ಮೇಲಧಿಕಾರಿಗಳ ಸಹಕಾರ ದೊರಕಲಿದೆ.
ಕಟಕ
ಗೊಂದಲಗಳಿಗೆ ಸುಲಭ ಪರಿಹಾರ ದೊರಕಲಿದೆ. ಸಾಮಾಜಿಕ ಜೀವನದಲ್ಲಿ ಮನ್ನಣೆ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ತೊಡಕುಂಟಾಗುವ ಸಾಧ್ಯತೆ. ಸ್ನೇಹಿತರ ಸಕಾಲಿಕ ನೆರವಿನಿಂದಾಗಿ ಚಿಂತೆಗಳು ದೂರವಾಗಲಿವೆ.
ಸಿಂಹ
ಆತ್ಮೀಯರ ಸಲಹೆಗಳನ್ನು ತಿರಸ್ಕರಿಸಬೇಡಿ. ಮುಂದಿನ ಯೋಜನೆಗಳ ನಿರೂಪಣೆಯ ಸಾಧ್ಯತೆ. ಕಾರ್ಯಕಲಾಪಗಳಿಗೆ ಉತ್ತಮ ಸಹಕಾರ ದೊರಕುವುದು. ವಿದ್ಯಾರ್ಥಿಗಳಿಗೆ ಪ್ರಯತ್ನದಲ್ಲಿ ಯಶಸ್ಸು.
ಕನ್ಯಾ
ಬೇರೆಯವರಿಂದ ಮೋಸ ಹೋಗುವ ಸಾಧ್ಯತೆ ಇದೆ. ಎಚ್ಚರದಿಂದಿರಿ. ನಿಮ್ಮ ಔದಾರ್ಯದ ದುರುಪಯೋಗವಾಗದಂತೆ ನೋಡಿಕೊಳ್ಳಿ. ಕುಶಲಕರ್ಮಿಗಳಿಗೆ ಅವಕಾಶಗಳು ಹರಿದುಬರಲಿವೆ.
ತುಲಾ
ಅತ್ಯಾಕಾಂಕ್ಷೆಯ ಯೋಜನೆಯೊಂದನ್ನು ಕಾರ್ಯರೂಪಕ್ಕೆ ತರುವಲ್ಲಿ ಸ್ವತಂತ್ರ ನಿರ್ಧಾರ ಕೈಗೊಳ್ಳುವಿರಿ. ವೃತ್ತಿಯಲ್ಲಿ ಯಶಸ್ಸು ದೊರೆತು ಜೀವನಮಟ್ಟದಲ್ಲಿ ಸುಧಾರಣೆ. ನಿರುದ್ಯೋಗಿಗಳಿಗೆ ಶುಭ ಸಮಾಚಾರ.
ವೃಶ್ಚಿಕ
ಧೈರ್ಯದಿಂದ ಕೆಲಸ–ಕಾರ್ಯಗಳಲ್ಲಿ ಯಶಸ್ಸು. ಕುಟುಂಬ ಸಮೇತ ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ. ದಿಟ್ಟ ನಿಲುವಿನಿಂದಾಗಿ ಮನೆಯಲ್ಲಿ ಸಮಾಧಾನದ ವಾತಾವರಣ. ಬಂಧುಗಳ ಭೇಟಿ.
ಧನು
ಪರಸ್ಪರ ಸಂಶಯಗಳು ದೂರವಾಗಿ ಮನಸ್ಸು ಹಗುರವಾಗುವುದು. ಧೈರ್ಯದ ನಡೆಯಿಂದ ಅಗತ್ಯ ಕೆಲಸ–ಕಾರ್ಯಗಳು ಕೈಗೂಡುವವು. ಹಣಕಾಸಿನ ಮುಗ್ಗಟ್ಟಿನಿಂದಾಗಿ ಅಡ್ಡಿ ಆತಂಕ ಉಂಟಾಗಬಹುದು.
ಮಕರ
ಕೂಲಂಕಷ ಚರ್ಚೆಯ ನಂತರ ಯಾವುದೇ ನಿರ್ಧಾರ ಕೈಗೊಳ್ಳುವುದು ಉತ್ತಮ. ಕೆಲವು ಅನಿರೀಕ್ಷಿತ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಸ್ನಾಯು ಸಂಬಂಧಿ ನೋವುಗಳನ್ನು ಅನುಭವಿಸುವ ಸಾಧ್ಯತೆ.
ಕುಂಭ
ಉನ್ನತ ಭಾವನೆಯಿಂದಾಗಿ ಯೋಜನೆಗಳಲ್ಲಿ ಯಶಸ್ಸು. ಸಮಾಜದಲ್ಲಿ ಗೌರವ ಪ್ರಾಪ್ತಿಯಾಗಲಿದೆ. ಕುರುಡು ಅಭಿಮಾನಗಳು ದೂರವಾಗಿ ನಿಷ್ಕಲ್ಮಷ ಪ್ರೀತಿ ವಿಶ್ವಾಸ ಗಳಿಸುವಿರಿ. ಕುಲದೇವತಾ ದರ್ಶನದಿಂದ ನೆಮ್ಮದಿ.
ಮೀನ
ಮನಸ್ಸಿನ ನೋವುಗಳೆಲ್ಲವೂ ದೂರವಾಗಿ ನೆಮ್ಮದಿ. ಇತರರ ಕಷ್ಟ ಸುಖಗಳಲ್ಲಿ ಭಾಗಿಯಾಗುವಿರಿ. ಕಾರ್ಯ ಯೋಜನೆಗೆ ಪೂರಕವಾದ ವಿಷಯಗಳು ಸಂಗ್ರಹಗೊಂಡು ಯಶಸ್ಸಿನತ್ತ ಹೆಜ್ಜೆ ಹಾಕುವಿರಿ.