
ಬೆಳವಳ,ದಧಿಫಲ,ಬಿಳಿನ್,ವಿಳಾಫಲಂ,ವಿಳಾಮರಂ, ಕಪೌಷ್ಟಿಕ ಪಿತ್ಥಮು, ಬೇಲದ ಮರ,ವುಡ್ ಆಪೆಲ್ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಈ ವೃಕ್ಷವು ಅರಣ್ಯಗಳಲ್ಲಿ ನೈಸರ್ಗಿಕವಾಗಿ ಬೆಳೆದರೆ, ರೈತರು ಹೊಲ,ತೋಟ,ಗದ್ದೆಗಳ ಬದಿಗಳ ಮೇಲೆ ಬೆಳೆಸುತ್ತಾರೆ.ಹಳ್ಳಿಗಳಲ್ಲಿ ಮನೆಯ ಹಿತ್ತಲಿನಲ್ಲಿ ಬೆಳೆಸಿರುತ್ತಾರೆ.ಇದನ್ನು ಅನೇಕ ಕಡೆ ಹಣ್ಣಿಗಾಗಿ ಸಹಾ ಬೆಳೆಸುತ್ತಿದ್ದಾರೆ.ಈ ವೃಕ್ಷವು ಸುಮಾರು 25 ರಿಂದ 50 ಅಡಿವರಿಗೂ ಬೆಳೆಯುತ್ತೆ.
ಬೇಲದ ಹಣ್ಣು ಗಣಪತಿಗೆ ತುಂಬಾ ಪ್ರಿಯವಾದ ಹಣ್ಣು ಎಂದು ಪುರಾಣ ಗ್ರಂಥಗಳಲ್ಲಿ ಉಲ್ಲೇಖವಾಗಿದೆ.
ಆನೆಗಳಂತೂ ತುಂಬಾ ಇಷ್ಟ ಪಟ್ಟು ಸೇವಿಸುತ್ತವೆ.ಈ ಹಣ್ಣಿನಲ್ಲಿ ಔಷಧಿಗಳ ಭಂಡಾರವೇ ಇದೆ ಎಂದು ಆಯುರ್ವೇದ ಗ್ರಂಥಗಳು ಹೇಳುತ್ತವೆ.
ಬೇಲದ ಹಣ್ಣಿನಲ್ಲಿ ಅನೇಕ ಪೌಷ್ಟಿಕಾಂಶಗಳ ಕಣಜ ತುಂಬಿವೆ.ಅಧಿಕವಾದ ಕ್ಯಾಲರಿ,ಪ್ರೊಟೀನ್,ಕೆರೋಟಿನ್
ಪಾಸ್ಪರಸ್,ಕ್ಯಾಲ್ಸಿಯಂ,ಕಬ್ಬಿಣಾಂಶ,ಸಿಟ್ರಿಕ್ ಆಮ್ಲ ಸಹಿತ ಅನೇಕ ರೀತಿಯ ಪೌಷ್ಟಿಕ ಪದಾರ್ಥಗಳು ಸಮೃದ್ಧಿಯಾಗಿ ತುಂಬಿವೆ.
ಬೇಲದ ಹಣ್ಣಿನ ಜ್ಯುಸ್ ಸೇವಿಸಿದರೆ ಜೀರ್ಣಕ್ರಿಯೆ ಸುಗುಮವಾಗಿ, ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು ಶಮನವಾಗುತ್ತೆ,ಹೊಟ್ಟೆಯಲ್ಲಿನ
ಜಂತು ಹುಳುಗಳು ಸತ್ತು ಹೊರ ಬರುತ್ತವೆ.
ಸ್ತ್ರೀಯರು ಬೇಲದ ಹಣ್ಣಿನ ತಿರಳು ಸೇವಿಸಿದರೆ ಗರ್ಭಾಶಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಕಾಪಾಡುತ್ತೆ.ಸ್ತ್ರೀಯರಲ್ಲಿ ಏರ್ಪಡುವ ಆರ್ಮೋನ್ ಸಮಸ್ಯೆಗಳು ಸಹ ದೂರವಾಗುತ್ತವೆ.
ಬೇಲದ ಹಣ್ಣನ್ನು ಜೇನುತುಪ್ಪ ಅಥವಾ ಬೆಲ್ಲ ಸೇರಿಸಿ ಸೇವಿಸಿದರೆ ಅಧಿಕ ದಾಹದ ಸಮಸ್ಯೆ ದೂರವಾಗುತ್ತೆ.ಬಾಯಿ ಹುಣ್ಣು, ಬಾಯಿ ದುರ್ವಾಸನೆಯಿಂದ ಮುಕ್ತಿ ಸಿಗುತ್ತೆ.ಗ್ಯಾಸ್ಟ್ರಿಕ್, ಅಸಿಡಿಟಿ ಸಮಸ್ಯೆಗಳು ತಗ್ಗಿಸಿ ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತೆ.
ಬೇಲದ ಹಣ್ಣಿನ ರಸಕ್ಕೆ ಬೆಲ್ಲ ಸೇರಿಸಿ ಸೇವಿಸಿದರೆ ಪುರುಷರಲ್ಲಿ ವೀರ್ಯಾಣುವೃದ್ಧಿಯಾಗುತ್ತೆ. ದೇಹದಲ್ಲಿನಲ್ಲಿನ ನಿಶಕ್ತಿ, ನರಗಳ ದೌರ್ಬಲ್ಯ ದೂರವಾಗಿ, ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ.
ಬೇಲದ ಹಣ್ಣಿನ ಸೇವನೆಯಿಂದ ಮೂತ್ರ ಪಿಂಡದಲ್ಲಿನ ಕಲ್ಲು ಕರಗಿ ಮೂತ್ರದಲ್ಲಿ ಹೊರ ಬರುತ್ತೆ.
ಬೇಲದ ಹಣ್ಣಲ್ಲದೇ, ಎಲೆ ಹೂ ಕಾಯಿ ತೊಗಟೆ ಬೇರು ಸಹಾ ಔಷಧೀಯ ಗುಣಗಳಿಂದ ಕೂಡಿದ್ದು, ಇವುಗಳ ಸೇವನೆಯಿಂದ ಮಹಿಳೆಯರಲ್ಲಿ ಉಂಟಾಗುವ ರಕ್ತ ಹೀನತೆ ಸಮಸ್ಯೆ ದೂರವಾಗುತ್ತೆ.
ಎಲೆಗಳ ರಸವನ್ನು ಹೊಟ್ಟೆಗೆ ತೆಗೆದುಕೊಂಡರೆ ಅತಿಸಾರ ಭೇದಿ ನಿಲ್ಲುತ್ತೆ.
ಗಂಡಸರಲ್ಲಿ ವೃಷಣದಲ್ಲಿ ಊತ(ಬಾಹು) ಬಂದಾಗ ಇದರ ಎಲೆಗಳನ್ನು ಹರಳೆಣ್ಣೆಯಲ್ಲಿ ಅರೆದು ಲೇಪನ ಮಾಡಿದರೆ ನೋವು ಕಡಿಮೆಯಾಗಿ ಊತ ತಗ್ಗುತ್ತೆ.
ಬೇಲದ ಹಣ್ಣು ನಿಯಮಿತ ಸೇವನೆಯಿಂದ ವೃದಾಪ್ಯವನ್ನು ಮುಂದೂಡಬಹುದು.
ಈ ಹಣ್ಣಿನಲ್ಲಿ ಫೈಬರ್ ಅಂಶ ಹೇರಳವಾಗಿರುವುದರಿಂದ, ಇದನ್ನು ಸೇವಿಸಿದರೆ ಮಲಬದ್ಧತೆ ಸಮಸ್ಯೆಗೆ ಮುಕ್ತಿ ಸಿಗುತ್ತೆ.
ಇದರ ತೊಗಟೆಯನ್ನು ತಂದು ನೆರಳಲ್ಲಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡು, ಬೆಳಿಗ್ಗೆ ಸಂಜೆ 1 ಚಮಚ ಚೂರ್ಣಕ್ಕೆ 1 ಚಮಚ ಜೇನುತುಪ್ಪದೊಡನೆ ರಂಗಳಿಸಿ ನೆಕ್ಕಿದರೆ ಪಿತ್ತ ಶಮನವಾಗುತ್ತೆ.
ಇದರ ಪಂಚಾಂಗವನ್ನು ತಂದು ಚೂರ್ಣ ಮಾಡಿ ದಿನವು 10 ಗ್ರಾಂ ಚೂರ್ಣವನ್ನು ಜೇನುತುಪ್ಪ ಅಥವಾ ಕಲ್ಲು ಸಕ್ಕರೆಯೊಂದಿಗೆ ಬೆಳಿಗ್ಗೆ ಸಂಜೆ ಸೇವಿಸಿದರೆ,ಪಿತ್ತ ಅತಿಸಾರ ಭೇದಿ,ಅಜೀರ್ಣ,ಬಾಯಲ್ಲಿ ಪಿತ್ತದ ನೀರು ಬರುತ್ತಿದ್ದರೆ,ಪಿತ್ತದ ನೀರಿನ ವಾಂತಿಯಾಗುತ್ತಿದ್ದರೆ, ಬಾಯಿ ಹುಣ್ಣು,ಹೊಟ್ಟೆಯಲ್ಲಿನ ಬಾದೆ ಗುಣವಾಗುತ್ತೆ.
ಶರಬತ್ತು ಮಾಡುವ ವಿಧಾನ:-
1.ಬೇಲದ ಹಣ್ಣಿನ ತಿರಳು
2.ಅರ್ಧ ತೆಂಗಿನಕಾಯಿಯ ಹಾಲು
3.ಚಿಟಿಕೆ ಉಪ್ಪು
4.ಚಿಟಿಕೆ ಕರಿ ಮೆಣಸಿನ ಪುಡಿ
5.ಸಕ್ಕರೆ ಅಥವಾ ಬೆಲ್ಲ 2-3 ಚಮಚ
6.1 ಏಲಕ್ಕಿ ಕಾಯಿ ಪುಡಿ
ಹಣ್ಣಿನ ತಿರಳು ತೆಂಗಿನ ಹಾಲು ಬೆಲ್ಲ ಹಾಕಿ ಚೆನ್ನಾಗಿ ಮಿಕ್ಸಿಯಲ್ಲಿ ಅರೆದು, ಅದಕ್ಕೆ ಏಲಕ್ಕಿ, ಮೆಣಸಿನ ಪುಡಿ ಉಪ್ಪು ಸೇರಿಸಿ, ಚೆನ್ನಾಗಿ ಕಲಸಿದರೆ ತುಂಬಾ ರುಚಿಯಾದ, ಆರೋಗ್ಯ ಕಾಪಾಡುವ ಬೇಲದ ಜ್ಯುಸ್ ರೆಡಿ. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷದ ಪರಿಚಯ ಮಾಡಿಕೊಳ್ಳೋಣ ವಂದನೆಗಳು