
ಅನಂತಮೂಲ್(ಸುಗಂಧಿನಿ) ಅನಂತಮೂಲ ಸುಗಂಧಿಬೇರು(ಬಳ್ಳಿ) ಸೊಗದೇ ಬೇರು ನಾಮದಬೇರು ಸುಗಂಧಿಪಾಲ್ ನರುನೀಡಿ ನರುನಿಂಡಿ ಕೃಷ್ಣವಳ್ಳಿ ನನ್ನಾರಿ ನರ್ಕಲಮೂಲಂ ನೆರುನೆಟ್ಟಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ಅನಂತಮೂಲ ಎಂಬ ಹೆಸರಿನ ಬೇರು ಹೆಸರಿಗೆ ತಕ್ಕಂತೆ ಅಗಣಿತ ಔಷಧೀಯ ಗುಣಗಳನ್ನು ತನ್ನ ಒಡಲೆಲ್ಲ ತುಂಬಿಕೊಂಡಿದೆ.ಇದರ ಔಷಧೀಯ ಗುಣಗಳಿಂದಲೇ ಇದನ್ನು ತಮಿಳ್ ನಲ್ಲಿ"ಮೂಲಿಕೈ ಅರಸನ್" ಎಂದು ಕರೆಯುತ್ತಾರೆ. ಈ ಬೇರು ಔಷಧೀಯ ಗುಣಗಳಲ್ಲದೆ, ತುಂಬಾ ಸುವಾಸನೆಯಿಂದ ಕೂಡಿದ್ದು ಸುಗಂಧಿನಿ ಎಂತಲೂ ಕರೆಯುತ್ತಾರೆ.ಇದರಲ್ಲಿ ಎರಡು ಪ್ರಭೇದಗಳಿವೆ. ಸೊಗದೇ ಬೇರಿನ ಕಷಾಯ(ಷರಬತ್ತು) ಅನೇಕ ವ್ಯಾಧಿಗಳನ್ನು ಗುಣಪಡಿಸಲು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ.ಈ ಬೇರಿನ ಕಷಾಯ ತುಂಬಾ ಸುವಾಸನೆಯಿಂದ ಕೂಡಿದ್ದು, ಶಕ್ತಿದಾಯಕ ಹಾಗೂ ಆರೋಗ್ಯದಾಯಕ ಪಾನೀಯ.ಬೇಸಿಗೆ ಕಾಲಕಂತು ಹೇಳಿ ಮಾಡಿಸಿದಂತಹ ಪಾನೀಯ. ಈ ಕಷಾಯ ಸೇವನೆಯಿಂದ ಮೈಯಲ್ಲಿನ ಉಷ್ಣತೆಯನ್ನು ಕಡಿಮೆ ಮಾಡುವುದಲ್ಲದೆ, ಹಸಿವನ್ನು ವೃದ್ಧಿಸುತ್ತೆ.ಮೈಯಲ್ಲಿನ ರಕ್ತವೆಲ್ಲ ಶುದ್ಧಿಯಾಗುತ್ತೆ. ಈ ಕಷಾಯ ಸೇವಿಸುವುದರಿಂದ ಕೀಲುನೋವು, ಜ್ವರ, ಚರ್ಮ ವ್ಯಾಧಿಗಳು, ಕೆಮ್ಮು, ಕಫ, ಪಿತ್ತ, ಮೂರ್ಛೆ,ಜಠರಕ್ಕೆ ಸಂಬಂಧಿಸಿದ ರೋಗಗಳು, ಶಮನವಾಗುತ್ತೆ.ಇದೇ ಕಷಾಯ ಹಲ್ಲು ನೋವಿದ್ದಾಗ ಬಾಯಗೆ ಹಾಕಿಕೊಂಡು ಕುಪ್ಪಿಳಿಸುತ್ತಿದ್ದರೆ ಎಂತಹ ಹಲ್ಲುನೋವು ಗುಣವಾಗುತ್ತೆ. ಗರ್ಭಿಣಿಯರು ಪ್ರಸವ ವೇಳೆ ಈ ಕಷಾಯ ಕುಡಿದರೆ ಯಾವುದೇ ತೊಂದರೆಗಳಿಲ್ಲದೆ ಸುಖ ಪ್ರಸವವಾಗುತ್ತೆ, ಮಗುವು ಆರೋಗ್ಯವಾಗಿರುತ್ತೆ. ಅಂತಾ ಬಲ್ಲವರು ಹಳ್ಳಿಗಳಲ್ಲಿ ಹೇಳುತ್ತಾರೆ. ಇದರ ಬೇರು ನಾಟಿ ಹಸುವಿನ ಗಂಜಲದಲ್ಲಿ ಅರೆದು ಲೇಪನ ಮಾಡಿದರೆ ದದ್ದು ನವೆ ಗಜ್ಜಿ ತಾಮರ ಶೀಘ್ರವಾಗಿ ಗುಣವಾಗುತ್ತೆ. ಈ ಕಷಾಯ ಸೇವಿಸುತ್ತಾ ಬಂದರೆ ಗಂಡಸರಲ್ಲಿ ವೀರ್ಯಾಣು ವೃದ್ಧಿಯಾಗಿ ನಪುಂಷಕತ್ವ ದೂರವಾಗುತ್ತೆ.ಇದೇ ಕಷಾಯ ಸೇವನೆಯಿಂದ ಹೆಂಗಸರಲ್ಲಿನ ಅತಿಯಾದ ಋತಶ್ರಾವ ನಿಯಂತ್ರಿಸುತ್ತದೆ. ಪೂರ್ವಿಕರು ಹಾವು ಚೇಳು ಹೆಜ್ಜೇನು ವಿಷ ನಿವಾರಣೆ ಮಾಡಲು ಉಪಯೋಗಿಸುತ್ತಿದ್ದರು. ಕಷಾಯ ಮಾಡುವ ವಿಧಾನ:- ಒಂದು ಮಡಿಕೆಯಲ್ಲಿ 50 ಗ್ರಾಂ ಬೇರನ್ನು ಹಾಕಿ, 1/2 ಲೀಟರ್ ನೀರನ್ನು ಹಾಕಿ, ಒಲೆಯ ಮೇಲಿಟ್ಟು ಮಂದ ಹುರಿಯಲ್ಲಿ ಚೆನ್ನಾಗಿ ಕುದಿಸಿ, ಉಗರು ಬೆಚ್ಚಗಾದಾಗ 30ml ಕಷಾಯಕ್ಕೆ 1 ಚಮಚ ಕೆಂಪು ಕಲ್ಲು ಸಕ್ಕರೆ ಅಥವಾ1ಚಮಚ ಜೇನುತುಪ್ಪ ನಾಲ್ಕೈದು ತೊಟ್ಟು ನಿಂಬೆಹಣ್ಣಿನ ಸೇರಿಸಿ ಸೇವಿಸಬೇಕು.ಬೇಕಾದ್ರೆ 1/4 ಚಮಚ ಕಾಮಕಸ್ತೂರಿ ಬೀಜ ಅಥವಾ ಹೊಲ ತುಳಸಿ ಬೀಜವನ್ನು ಸಹಾ ಸೇರಿಸಿ ಸೇವಿಸಬಹುದು. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ಸಸ್ಯದೊಡನೆ ಭೇಟಿಯಾಗೋಣ.ಧನ್ಯವಾದಗಳು