
ದುಃಸ್ಫರ್ಶ (ಕಂಟಕಾರಿ) ಬಹುಕಂಟಿ,ಹಿರಣ್ಯಪುಷ್ಠಿ, ಲಘು ಪಂಚಮೂಲ,ನಿಧಿಗಧಿಕಾ, ಕ್ಷುದ್ರಕಂಟಿ,ಕಾಟೀರಿಂಗಣಿ, ಮುಳ್ಳುಸುಂಡೆ, ಕಾಡು ಬದನೆ,ಮುಲ್ಲು ವಂಕಾಯಿ, ಕಾಟು ಕತ್ತರಿ ಎಂಬ ನಾನಾ ಹೆಸರುಗಳಿಂದ ಕರೆಯುತ್ತಾರೆ. ಹೊಲಗಳ ಬದಿಗಳ ಮೇಲೆ, ಪಾಳು ಭೂಮಿ, ರಸ್ತೆಗಳ ಪಕ್ಕ, ಬಯಲು ಪ್ರದೇಶಗಳಲ್ಲಿ, ಮುಳ್ಳುಕಂಟಿ ಕಾಡುಗಳಲ್ಲಿ, ಬೇಲಿಸಾಲುಗಳಲ್ಲಿ ಸ್ವಾಭಾವಿಕವಾಗಿ 3 ರಿಂದ 6 ಅಡಿ ಎತ್ತರ, ಪೊದೆಯಂತೆ ಬೆಳೆಯುವ ಕಂಟಕಾರಿ, ಗಿಡಪೂರ್ತಿ ಮುಳ್ಳುಗಳಿಂದ ಕೂಡಿದ್ದು, ಬದನೆ ಹೂಗಳನ್ನು ಹೋಲುವ ಐದು ದಳಗಳ ತಿಳಿ ನೇರಳೆ ಬಣ್ಣದ ಹೂವುಗಳು, ಹಳದಿ, ಕೇಸರಿ ಬಣ್ಣದ ಗೊಂಚಲು ಗೊಂಚಲು ಹಣ್ಣುಗಳಿಂದ ಕೂಡಿರುವ ಅಸಾಧಾರಣ ಔಷಧೀಯ ಗುಣಗಳನ್ನು ಒಡಲಲ್ಲಿ ತುಂಬಿಕೊಂಡಿರುವ ಗಿಡ.ಇದರಲ್ಲಿ ಅನೇಕ ಪ್ರಭೇದಗಳಿದ್ದು, ಸಮಾನ ಔಷಧೀಯ ಗುಣಗಳಿರುವುದಾಗಿ, ಆಯುರ್ವೇದದಲ್ಲಿ ಗುರ್ತಿಸುತ್ತಾರೆ. ಕಂಟಕಾರಿಯಲ್ಲಿ ತಯಾರಿಸಿರುವ ಕಂಟಕಾರಿ ಘ್ರುತ, ಕಂಟಕಾರಿ ಲೇಹ, ಕಂಟಕಾರಿ ಕಲ್ಪ, ಈಗೆ ಅನೇಕ ರೀತಿಯ ಕಷಾಯಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ.ಕೆಮ್ಮು, ದಮ್ಮು, ಅಸ್ತಮಾ, ಗಂಟಲು ಊತಗಳ ಚಿಕಿತ್ಸೆಗೆ ಪರಿಣಾಮಕಾರಿಯಾದ ಔಷಧೀಯವಾಗಿ ಕಂಟಕಾರಿ ಬಳಕೆಯಾಗುತ್ತದೆ. ಆಡುಸೋಗೆ ಚಿಗರು, ತುಳಸಿ, ಹಿಪ್ಪಲಿ, ಶುಂಠಿ, ಕಾಳು ಮೆಣಸು,ಚಿಟಿಕೆ ಅರಸಿಣ, ಕಂಟಕಾರಿ ಬೇರನ್ನು, ಒಂದು ತಾಮ್ರ ಅಥವಾ ಮಣ್ಣಿನ ಮಡಿಕೆಯಲ್ಲಿ ಹಾಕಿ, ಅದಕ್ಕೆ 250ml ನೀರು ಹಾಕಿ, ಒಲೆಯ ಮೇಲಿಟ್ಟು, ಮಂದದುರಿಯಲ್ಲಿ ಚೆನ್ನಾಗಿ ಕುದಿಸಿ, 100ml ಆದಾಗ ಕೆಳಗಿಳಿಸಿ, ಸೋಸಿಕೊಂಡ ಕಷಾಯ ಕೆಮ್ಮು, ದಮ್ಮು, ಕಫ ನಿವಾರಣೆಗೆ ಪರಿಣಾಮಕಾರಿ ದಿವೌಷಧಿ.ಈ ಕಷಾಯ ಜೇನುತುಪ್ಪದೊಡನೆ ಸೇವಿಸುವುದು ತುಂಬಾ ಪ್ರಯೋಜನಕಾರಿ. ಕಂಟಕಾರಿ ಹಣ್ಣುಗಳನ್ನು ತಂದು ನೆರಳಲ್ಲಿ ಒಣಗಿಸಿ, ಕುಟ್ಟಿ ಪುಡಿ ಮಾಡಿಟ್ಟುಕೊಂಡು, ಪುಡಿಯನ್ನು ಕೆಂಡದ ಮೇಲೆ ಹಾಕಿದಾಗ ಬರುವ ಹೊಗೆಯನ್ನು ಸ್ವಲ್ಪ ಹೊತ್ತು ಬಾಯಿ ತುಂಬಿಕೊಳ್ಳುವುದರಿಂದ ಹುಳಕು ಹಲ್ಲು ಗುಣವಾಗುತ್ತೆ.ಇದು ಹುಳುಕು ಹಲ್ಲಿನ ಚಿಕಿತ್ಸೆಗೆ ಇರುವ ಜನಪ್ರಿಯ ಔಷಧೀಯ ಪದ್ಧತಿ. ಕಂಟಕಾರಿ ಹಣ್ಣುಗಳನ್ನು ತಂದು ನೆರಳಲ್ಲಿ ಒಣಗಿಸಿ, ಕುಟ್ಟಿ ಪುಡಿಮಾಡಿ, ವಸ್ತ್ರಾಗಾಲಿತ ಚೂರ್ಣ ಮಾಡಿಟ್ಟುಕೊಂಡು, 1 ಲೋಟ ಹಾಲಿಗೆ, 1 ಚಮಚ ಚೂರ್ಣ, 1 ಚಮಚ ಜೇನುತುಪ್ಪ ಅಥವಾ ಕೆಂಪು ಕಲ್ಲುಸಕ್ಕರೆ ಕಲಸಿ ಕ್ರಮ ತಪ್ಪದೆ,ಊಟಕ್ಕೆ ಅರ್ಧಗಂಟೆ ಮೊದಲು ಸೇವಿಸುತ್ತಿದ್ದರೆ ಕಾಮೋತ್ತೇಜಕವಾಗಿಯೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ. ಬಿಳಿ ಹೂವುಗಳು ಬಿಡುವ ಕಂಟಕಾರಿ ಗಿಡದ ಹೂವುಗಳನ್ನು ನೆರಳಲ್ಲಿ ಒಣಗಿಸಿ, ಚೂರ್ಣ ಮಾಡಿಟ್ಟುಕೊಂಡು, ವಿಶೇಷವಾಗಿ ಸ್ತ್ರೀಯರ ಗರ್ಭಾಶಯಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಔಷಧಿಯಾಗಿ ಆಯುರ್ವೇದದಲ್ಲಿ ವೈದ್ಯರು ಉಪಯೋಗಿಸುತ್ತಾರೆ.
ಸಾಮಾನ್ಯವಾಗಿ ವಯಸ್ಸಾದವರಲ್ಲಿ ಮೊಣಕಾಲು ನೋವು,ಬಾವು ಇದ್ದಾಗ,ಕಂಟಕಾರಿ ತಾಜಾ ಹಣ್ಣುಗಳನ್ನು ತಂದು, ತಿರಳನ್ನು ಹಿಚುಕಿ, ಲೇಪನ ಮಾಡುತ್ತಿದ್ದರೆ ಶೀಘ್ರ ಬಾವು, ನೋವು ಶಮನವಾಗುತ್ತೆ.
ಮಕ್ಕಳಿಗೆ ಕೆಮ್ಮು ಇದ್ದಾಗ, ಇದರ ಚೂರ್ಣವನ್ನು ಜೇನುತುಪ್ಪದಲ್ಲಿ ರಂಗಳಿಸಿ ನೆಕ್ಕಿಸುವುದರಿಂದ ಬೇಗ ಗುಣವಾವುತ್ತೆ.
ಗಂಟಲು ನೋವಿದ್ದಾಗ, ಕಂಟಕಾರಿ ಎಲೆಗಳ ರಸವನ್ನು ಹೊರ ಲೇಪನ ಮಾಡುವುದರಿಂದ ಶೀಘ್ರ ನೋವು ನಿವಾರಣೆಯಾಗುತ್ತೆ.
ಕಂಟಕಾರಿ ಸಮೂಲದ ಕಷಾಯ 30ml ನಂತೆ, ಬೆಳಿಗ್ಗೆ ಸಂಜೆ ಸೇವಿಸುತ್ತಿದ್ದರೆ, ಮಂಡಿನೋವು, ಕೀಲು ನೋವು, ಬೆನ್ನುನೋವು ಶೀಘ್ರ ಗುಣವಾಗುತ್ತೆ. ಅಸ್ತಮಾ ಸಹ ಅತೋಟಿಗೆ ಬರುತ್ತೆ.ಜೀರ್ಣಕ್ರಿಯೆ ಸುಗುಮವಾಗಿ, ಕರುಳಿನ ಸಮಸ್ಯೆಗಳು ದೂರವಾಗುತ್ತೆ.
250ml ಕಂಟಕಾರಿ ಎಲೆಯ ರಸಕ್ಕೆ, 250ml ಎಳ್ಳೆಣ್ಣೆ ಸೇರಿಸಿ, ಒಂದು ತಾಮ್ರದ ಪಾತ್ರೆಯಲ್ಲಿ ಹಾಕಿ, ಒಲೆಯಮೇಲಿಟ್ಟು, ಮಂದದುರಿಯಲ್ಲಿ ಚೆನ್ನಾಗಿ ಕುದಿಸಿ, ನೀರಿನಾಂಶ ಹಿಂಗಿ, ಎಣ್ಣೆ ಮಾತ್ರ ಉಳಿದಾಗ ಕೆಳಗಿಳಿಸಿ, ಉಗರು ಬೆಚ್ಚಗಾದಾಗ ಸೋಸಿಕೊಂಡು, ಒಂದು ಗಾಜಿನ ಸೀಸೆಯಲ್ಲಿ ಭದ್ರಪಡಿಸಿಟ್ಟುಕೊಂಡು, ಕೀಲುನೋವು, ಮಂಡಿನೋವು, ಮೈಕೈನೋವು, ತಲೆನೋವು ಇದ್ದಾಗ ಲೇಪನ ಮಾಡುತ್ತಿದ್ದರೆ, ನೋವು, ಊತ ಬೇಗನೆ ಗುಣವಾಗುತ್ತೆ.
ಮಳೆಗಾಲ ಹಾಗು ಚಳಿಗಾಲಕ್ಕೆ ಶೀತ, ಕೆಮ್ಮು, ದಮ್ಮು, ಜ್ವರ, ಗಂಟಲು ನಸನಸ, ಗಂಟಲು ಊತ ನಿವಾರಣೆಗೆ ಕಂಟಕಾರಿ ಕಷಾಯ ಹೇಳಿ ಮಾಡಿಸಿದಂತಹ ದಿವೌಷಧಿ.
ಮೊದಲೇ ಬಿಸಿಬಿಸಿ ಕಂಟಕಾರಿ ಕಷಾಯವನ್ನು ಕ್ರಮಬದ್ಧವಾಗಿ ಸೇವಿಸುವುದರಿಂದ, ಜನರನ್ನು ಬೆಂಬಿಡದೆ ಕಾಡುತ್ತಿರುವ ಕೊರೋನಾ ಮಹಾಮಾರಿಯಿಂದಲೂ ರಕ್ಷಣೆ ಪಡೆಯಬಹುದಾಗಿದೆ.
ಕಂಟಕಾರಿಯ ಔಷಧೀಯ ಗುಣಗಳು ಅಪಾರ. ಗೆಳೆಯರೆ ವಂದನೆಗಳು ನಾಳೆ ಇನ್ನೊಂದು ಗಿಡಮೂಲಿಕೆಯ ಬಗ್ಗೆ ತಿಳಿಯೋಣ