
ತಗರ (ನಂದಿ ಬಟ್ಲು) ನಂದಿ ವರ್ಧನ, ನಂದಿವಾಳ, ನಂದಿಯ ವಟೈ, ನಂದಿಯ ವಟ್ಟಂ ನಂದಿಯ ಪೂ ಎಂಬ ಹೆಸರುಗಳಿಂದ ಕರೆಯುತ್ತಾರೆ. ನಂದಿ ಬಟ್ಲು ಗಿಡವನ್ನು ಹಳ್ಳಿಗಳಲ್ಲಿ ಮನೆಯ ಹಿತ್ತಲಲ್ಲಿ, ತೋಟಗಳಲ್ಲಿ, ದೇವಾಲಯಗಳಲ್ಲಿ, ಉದ್ಯಾನ ವನಗಳಲ್ಲಿ ಅಂದಕ್ಕಾಗಿ ಬೆಳೆಸಿರುತ್ತಾರೆ. ಸುಮಾರು 6 ರಿಂದ 10 ಅಡಿ ಎತ್ತರ ಬೆಳೆದು,ಸುವಾಸನೆಭರಿತವಾದ ಗೊಂಚಲು
ಗೊಂಚಲು ಬಿಳಿಯ ಹೂವುಗಳನ್ನು ಬಿಡುತ್ತದೆ.
ಶಿವನ ಆರಾಧನೆಗೆ ನಂದಿವಾಳ ಹೂವುಗಳು ಬಹಳ ಶ್ರೇಷ್ಠವೆಂದು ಹಿಂದೂಗಳು ಭಾವಿಸುತ್ತಾರೆ.
ಈ ಹೂವುಗಳನ್ನು ಸೋಮವಾರ ಅಥವಾ ಕಾರ್ತಿಕ ಸೋಮವಾರದಂದು, ಮನೆಯಲ್ಲಿ ಶಿವನ ಪೋಟೋಗೆ ಅಥವಾ ಶಿವಾಲಯಗಳಲ್ಲಿ ಶಿವನಿಗೆ ಸಮರ್ಪಿಸಿದರೆ ಮನದಲ್ಲಿನ ಎಲ್ಲಾ ಕೋರಿಕೆಗಳು ನೆರವೇರುತ್ತೆ ಎಂಬ ಅಚಲ ನಂಬಿಕೆ ಭಕ್ತರಲ್ಲಿದೆ.ಮನದಲ್ಲಿನ ಎಲ್ಲಾ ಆತಂಕಗಳು ದೂರವಾಗಿ, ಐಶ್ವರ್ಯ ಪ್ರಾಪ್ತಿಯಾಗುತ್ತೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಿದೆ. ಕಾರ್ತಿಕ ಮಾಸದಲ್ಲಿ ತುಂಬಾ ಹೂವುಗಳು ಸಿಗುವುದರಿಂದ, ಈ ಹೂವುಗಳನ್ನು ಶಿವಾರಾಧನೆಗೆ ಉಪಯೋಗಿಸುತ್ತಾರೆ.
ನಂದಿವರ್ಧನ, ಗರುಡವರ್ಧನ, ಗೋವರ್ಧನ ಎಂಬ ಮೂರು ಪ್ರಭೇದಗಳಿದ್ದು,ಮೂರು ಪ್ರಭೇದಗಳಲ್ಲೂ ಅಸಾಧಾರಣ ಔಷಧೀಯ ಗುಣಗಳು ತುಂಬಿವೆ.
ಪುರಾತನ ಕಾಲದಿಂದಲೂ ನಂದಿಬಟ್ಲು ಗಿಡವನ್ನು ಭಾರತೀಯ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಔಷಧಿಯಾಗಿ ಉಪಯೋಗಿಸುತ್ತಾ ಬಂದಿದ್ದಾರೆ.
ಹಿಂದಿನ ಕಾಲದಲ್ಲಿ ಸ್ತ್ರೀಯರು ಕಣ್ಣಿನ ಅಂದ ಹೆಚ್ಚಲು ಇದರ ಹೂವುಗಳಲ್ಲಿ ಕಾಡಿಗೆ ತಯಾರಿಸಿ ಕಣ್ಣಿಗೆ ಅಚ್ಚಿಕೊಳುತ್ತಿದ್ದರು.ಕಣ್ಣಿಗೆ ಇದರ ಕಾಡಿಗೆ ಲೇಪಿಸುವುದರಿಂದ, ಕಣ್ಣಿನ ಆರೋಗ್ಯ ಕಾಪಾಡಿ, ಕಣ್ಣಿಗೆ ರಕ್ಷಾಕವಚವಾಗಿ, ಅನೇಕ ವ್ಯಾಧಿಗಳಿಂದ ಕಾಪಾಡುತ್ತೆ.
ನಂದಿಬಟ್ಲು ಹೂವುಗಳು ಕಣ್ಣಿನ ವ್ಯಾಧಿಗಳಿಗೆ ತುಂಬಾ ಪರಿಣಾಮಕಾರಿ ಔಷಧಿಯಾಗಿ ಕೆಲಸ ಮಾಡುವುದಲ್ಲದೆ,ಕಣ್ಣನ್ನು ರಕ್ಷಿಸಿ, ಕಣ್ಣಿಗೆ ತಂಪನ್ನು ನೀಡುತ್ತವೆ.
ನಂದಿಬಟ್ಲು ಹೂವಿನ ರಸ ತೆಗೆದು ಹರಳೆಣ್ಣೆ ಅಥವಾ ಮೊಲೆ ಹಾಲಿನಲ್ಲಿ ರಂಗಳಿಸಿ ಕಣ್ಣಿಗೆ ಲೇಪನ ಮಾಡಿದರೆ,ದೇಹದಲ್ಲಿನ ಉಷ್ಣತೆಯಿಂದ ಬರುವ ಕಣ್ಣಿನ ನೋವು, ನವೆ, ಉರಿ,ಕಣ್ಣು ಕೆಂಪಾಗಿ ನೀರು ಸುರಿಯುವುದೆಲ್ಲ ನಿವಾರಣೆಯಾಗುತ್ತೆ.
ನಂದಿಬಟ್ಲು ಗಿಡದ ಎಲೆಗಳಿಗೆ ಚಿಟಿಕೆ ಅರಸಿನ ಸೇರಿಸಿ ಅರೆದು ಗಾಯಗಳಿಗೆ ಲೇಪಿಸಿದರೆ,ಗಾಯಗಳು ಬೇಗನೆ ಗುಣವಾಗುತ್ತೆ.
ಈ ಗಿಡದ ಎಲೆಗಳ ಕಷಾಯವನ್ನು ಬಾಯಲ್ಲಿ ಹಾಕಿ ಮುಕ್ಕಳಿಸುವುದರಿಂದ, ಬಾಯಿ ದುರ್ವಾಸನೆ ದೂರವಾಗಿ, ವಸಡುಗಳು ದೃಢವಾಗಿ, ದಂತಪಂಕ್ತಿ ಗಟ್ಟಿಯಾಗುತ್ತೆ.
ನಂದಿಬಟ್ಲು ಹೂವುಗಳನ್ನು ರಾತ್ರಿ ನೀರಿನಲ್ಲಿ ನೆನಸಿಟ್ಟು, ಬೆಳಿಗ್ಗೆ ಆ ನೀರಿನಿಂದ ಕಣ್ಣುಗಳನ್ನು ಶುಭ್ರವಾಗಿ ತೊಳೆದುಕೊಂಡರೆ, ಕಣ್ಣಿನ ಅನೇಕ ದೋಷಗಳು ದೂರವಾಗುತ್ತೆ.ಹೂವುಗಳು ನೆನಸಿಟ್ಟ ನೀರನ್ನು ಹೊಟ್ಟೆಗೆ ಕುಡಿದರೆ, ಮೂತ್ರದಲ್ಲಿನ ಉರಿ, ಮೂತ್ರದ ಸಮಸ್ಯೆಗಳು ಶಮನವಾಗುತ್ತೆ.
ಒಂದು ಲೋಟ ಬಿಸಿನೀರಿನಲ್ಲಿ 3 ಚಮಚ ಎಲೆಗಳ ರಸವನ್ನು ಕಲಸಿ ಬೆಳಿಗ್ಗೆ ಸಂಜೆ ಕುಡಿಯುತ್ತಾ ಬಂದಲ್ಲಿ ಸ್ತ್ರೀಯರಲ್ಲಿನ ಶ್ವೇತ ಪ್ರದರ ರೋಗ ಗುಣವಾಗುತ್ತೆ.
ಹಲ್ಲು ನೋವಿದ್ದಾಗ ಬೇರಿನ ಒಂದು ಚ್ಚಿಕ್ಕ ತುಂಡನ್ನು ಜಗೆದು ಸ್ವಲ್ಪ ಸಮಯದ ನಂತರ ಉಗಳಿದರೆ ಹಲ್ಲು ನೋವು ವಾಸಿಯಾಗುತ್ತೆ.
ಈ ಗಿಡದ ಹಾಲನ್ನು ಬಾವು, ಹುಣ್ಣು, ಗಾಯಕ್ಕೆ ಲೇಪಿಸುವುದರಿಂದ ಬೇಗ ಗುಣವಾಗುತ್ತೆ.
ನಂದಿಬಟ್ಲು ಹೂವು ಅಥವಾ ಎಲೆಗಳ ಕಷಾಯ ಮಾಡಿ ನಿಯಮಿತವಾಗಿ ಸೇವಿಸುತ್ತಾ ಬಂದಲ್ಲಿ ಅಧಿಕ ರಕ್ತದೊತ್ತಡ ಅತೋಟಿಗೆ ಬರುತ್ತೆ.
ಹೂವು ಅಥವಾ ಎಲೆಗಳ ರಸವನ್ನು ತೆಗೆದು, ಕೊಬ್ಬರಿ ಎಣ್ಣೆಯಲ್ಲಿ ಕಲಸಿ, ಚೆನ್ನಾಗಿ ಕುದಿಸಿ, ಉಗರು ಬೆಚ್ಚಗಿದ್ದಾಗ ತಲೆಗೆ ಮಸಾಜ್ ಮಾಡಿಕೊಂಡರೆ ಶಿರೋ ವ್ಯಾಧಿಗಳು ದೂರವಾಗುತ್ತೆ. ಗೆಳೆಯರೆ ವಂದನೆಗಳು