Design a site like this with WordPress.com
Get started

ಇಂದಿನ ಔಷಧೀಯ ಸಸ್ಯ ಪರಿಚಯ : ನೆಗ್ಗಿಲುಮುಳ್ಳಿನ ಗಿಡ

ತ್ರಿಕಂಟಕ ಗೊಕ್ಷುರ, ಸಣ್ಣ ನೆಗ್ಗಿಲು, ಆನೆ ನೆಗ್ಗಿಲು, ನೆರಂಜಿಮುಳ್ಳು, ಶದಂಷ್ಠ, ಸ್ವಾದಕಂಟಕ, ಗೋಕಂಟಕ, ಕಂಠತಿಕ್ತಕ, ಪಲ್ಲೇರು ಮುಕ್ಕ ಎಂಬ ಹೆಸರುಗಳಿಂದ ಕರೆಯುತ್ತಾರೆ. ಹೊಲ, ತೋಟಗಳ ಬದಿಗಳ ಮೇಲೆ, ಪಾಳು ಭೂಮಿ, ಬೀಳು ಭೂಮಿ, ಹಾದಿಬೀದಿಗಳ ಪಕ್ಕ ಕಳೆಯಂತೆ, ನೆಲದ ಮೇಲೆ ಹಬ್ಬಿ ಬೆಳೆಯುತ್ತೆ.ಸಣ್ಣ ನೆಗ್ಗಿಳಿನ ಎಲೆಗಳು ಕಡಲೆ ಗಿಡದ ಎಲೆಗಳನ್ನು ಹೋಲುತ್ತೆ, ಆನೆ ನೆಗ್ಗಿಲು ದೊಡ್ಡದಾದ ಕಾಯಿ, ಉದ್ದ ಹಾಗು ಕಠೋರ ಮುಳ್ಳಿನಿಂದ ಕೂಡಿದ್ದು, ಎಲೆಗಳು ಅಗಲವಾಗಿದ್ದು, ಪಾಲಕ್ ಸೊಪ್ಪಿನ ಎಲೆಗಳನ್ನು ಹೋಲುತ್ತೆ.ಸಣ್ಣ ನೆಗ್ಗಿಲಿನ ಹೂವುಗಳು ಹಳದಿ ಬಣ್ಣದಿಂದ ಕೂಡಿರುತ್ತವೆ.ಎರಡೂ ಗಿಡದ ಕಾಯಿಗಳು ವಕ್ರಾಕಾರವಾಗಿ, ಚೂಪಾದ ಮುಳ್ಳುಗಳಿಂದ ಕೂಡಿದ್ದು, ಕಾಯಿ ಬಲಿತ ಮೇಲೆ ಮುಳ್ಳುಗಳು ಕಠಿಣವಾಗಿರುತ್ತವೆ. ನೆಗ್ಗಿಲು ಗಿಡವು ಏಕವಾರ್ಷಿಕ ಸಸ್ಯವಾಗಿದ್ದು, ಮಳೆಗಾಲದಲ್ಲಿ ಮಾತ್ರ ಕಾಣಸಿಗುವ ಸಸ್ಯವಾಗಿದ್ದು, ಜನರ ದೃಷ್ಟಿಯಲ್ಲಿ ಸಾಧಾರಣ ಮುಳ್ಳಿನ ಗಿಡವಾಗಿರುವ ನೆಗ್ಗಿಲು ಗಿಡವನ್ನು ಆಯುರ್ವೇದ ಪಂಡಿತರು, ವೈದ್ಯರು, ಪೂರ್ವಿಕರು, ಇದನ್ನು ಅಪಾರ ಶಕ್ತಿಯುಳ್ಳ ದಿವೌಷಧ ಸಸ್ಯವೆಂದು ಪರಿಗಣಿಸಿದ್ದಾರೆ.ಮೂತ್ರಪಿಂಡ ರೋಗಿಗಳಿಗೆ ಇದನ್ನು ಸಂಜೀವಿನಿ ಎಂದು ಪರಿಗಣಿಸಿದ್ದಾರೆ. ಆನೆ ನೆಗ್ಗಿಲು, ಸಣ್ಣ ನೆಗ್ಗಿಲು ಎಂಬ ಎರಡು ಪ್ರಭೇದಗಳಿದ್ದು, ಎರಡೂ ಔಷಧೀಯ ಗುಣಗಳಿಂದ ಕೂಡಿದ್ದು, ಪುರಾತನ ಕಾಲದಿಂದಲೂ, ಆಯುರ್ವೇದ, ಸಿದ್ಧ, ಹಿಂದೂ ಯುನಾನಿ, ಪಾರಂಪರಿಕ ಔಷಧಿ ಪದ್ಧತಿಯಲ್ಲಿ ಬಳಸುತ್ತಾ ಬಂದಿದ್ದಾರೆ. ಯಾವುದಕ್ಕೂ ಹೆದರದ ಆನೆ, ನೆಗ್ಗಿಲು ಮುಳ್ಳಿಗೆ ಹೆದರುತ್ತೆ ಎಂದು ಬಲ್ಲವರು ಹೇಳುತ್ತಾರೆ. ಕಿಡ್ನಿಯಲ್ಲಿನ ಕಲ್ಲು ಕರಗಿಸಲು, ಹೃದ್ರೋಗಕ್ಕೆ ದಿವೌಷಧ ಹಾಗು ವೀರ್ಯವರ್ಧಕವು ಹೌದು.ಮೂತ್ರಾಶಯ, ಮೂತ್ರಪಿಂಡ ಶುದ್ಧಿ ಮಾಡುವ ಗುಣವುಳ್ಳುದಾಗಿದ್ದು, ಎಲ್ಲಾ ರೀತಿಯ ಮೂತ್ರಪಿಂಡ, ಮೂತ್ರ ರೋಗಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಸಣ್ಣನೆಗ್ಗಿಲು ಗಿಡದ ಪಂಚಾಂಗ ಕಷಾಯವನ್ನು, ದಿನವು ಬೆಳಿಗ್ಗೆ-ಸಂಜೆ 50ml ನಂತೆ ಕ್ರಮಬದ್ಧವಾಗಿ ಸೇವಿಸುತ್ತಿದ್ದರೆ, ಮೂತ್ರ ವಿಸರ್ಜನೆ ಹೆಚ್ಚಾಗಿ, ಮೂತ್ರಪಿಂಡದಲ್ಲಿನ ಕಲ್ಲು ಕರಗಿ, ಮೂತ್ರದಲ್ಲಿ ಹೊರ ಬರುವುದಲ್ಲದೆ, ಬಾವು, ನೋವು ಕಡಿಮೆಯಾಗುತ್ತದೆ. ಹಸಿ ಶುಂಠಿ ನೆಗ್ಗಿಲು ಮುಳ್ಳಿನಿಂದ ತಯಾರಿಸಿದ ಕಷಾಯ ಸೇವಿಸಿದರೆ ಮಂಡಿ ಹಾಗು ಕೀಲುಗಳಲ್ಲಿ ಉಂಟಾಗುವ ಬಾವು, ನೋವು ಶೀಘ್ರ ಶಮನವಾಗುತ್ತೆ. ನೆಗ್ಗಿಲು ಗಿಡದ ಪಂಚಾಂಗ ಚೂರ್ಣವನ್ನು ಜೇನುತುಪ್ಪದಲ್ಲಿ ಕಲಸಿ ನಿಯಮಿತವಾಗಿ ಸೇವಿಸುತ್ತಿದ್ದರೆ ಲೈಂಗಿಕ ಸಮಸ್ಯೆಗಳು ನಿವಾರಣೆಯಾಗಿ, ಕಾಮ ವಾಂಛೆ (ಸಾಮರ್ಥ್ಯ) ಹೆಚ್ಚಿಸುತ್ತೆ. ಜೊತೆಗೆ ಶರೀರಿಕ ಬಲವನ್ನು ಹೆಚ್ಚಿಸುತ್ತೆ.ಲೈಂಗಿಕ ಅಂಗಗಳನ್ನು ಉತ್ತೇಜಿಸುತ್ತೆ. ಜನನೇಂದ್ರಿಯವನ್ನು ಶಕ್ತಿವಂತಗೆ ಮಾಡುತ್ತೆ.ದೇಹದ ನರಮಂಡಲಕ್ಕೆ ಶಕ್ತಿ ತುಂಬುತ್ತೆ.ಅಂತರಗತ ನೋವನ್ನು ನಿವಾರಣೆ ಮಾಡುತ್ತೆ. ಇದು ವಯಾಗ್ರಗಿಂತ ಪರಿಣಾಮಕಾರಿ ಔಷಧ ಹಾಗು ಇದರ ಸೇವನೆಯಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಚಿಟಿಕೆ ನೆಗ್ಗಿಲುಕಾಯಿ ಚೂರ್ಣ, ಚಿಟಿಕೆ ಕಾಮಕಸ್ತೂರಿ ಬೀಜದ ಚೂರ್ಣ, 1 ಚಮಚ ಅಶ್ವಗಂಧ ಚೂರ್ಣ ಒಂದು ಲೋಟ ಹಸುವಿನ ಹಾಲಿಗೆ ಹಾಕಿ ಚೆನ್ನಾಗಿ ಕುದಿಸಿ, ಸೋಸಿಕೊಂಡು, ಮಲಗುವ ಸಮಯದಲ್ಲಿ ಕುಡಿದರೆ ಗಂಡಸರಲ್ಲಿ ಲೈಂಗಿಕ ಬಲಹೀನತೆ ದೂರವಾಗುತ್ತೆ (15-20 ದಿನ ಸೇವಿಸಬೇಕು) ನೆಗ್ಗಿಲು ಗಿಡದ ಕಾಂಡದಲ್ಲಿನ ತೊಗಟೆಯಿಂದ ಕಷಾಯ ಮಾಡಿಕೊಂಡು 30ml ನಂತೆ ಬೆಳಿಗ್ಗೆ ಸಂಜೆ ಕುಡಿದರೆ, ಪಿತ್ತದಿಂದ ಬರುವ ತಲೆನೋವು ಶಮನವಾಗುತ್ತೆ. ಸಣ್ಣ ನೆಗ್ಗಿಲು ಗಿಡದ ಹೂವುಗಳನ್ನು ನೆರಳಲ್ಲಿ ಒಣಗಿಸಿ, ವಸ್ತ್ರಾಗಾಲಿತ ಚೂರ್ಣ ಮಾಡಿಟ್ಟುಕೊಂಡು, 3-4 ಒಣ ದ್ರಾಕ್ಷಿಯ ಜೊತೆಗೆ 2-3 ಗ್ರಾಂ ಚೂರ್ಣವನ್ನು ಕಲಸಿ ದಿನಕ್ಕೆ ಎರಡು ಬಾರಿ ಕ್ರಮಬದ್ಧವಾಗಿ 10-15 ದಿನಗಳ ಕಾಲ ಸೇವಿಸಿದರೆ, ದೇಹದಲ್ಲಿನ ಆಯಾಸ ತಗ್ಗುತ್ತೆ. ಸಣ್ಣ ನೆಗ್ಗಿಲು ಸಮೂಲ ಸಹಿತ ತಂದು ಚೆನ್ನಾಗಿ ಜಜ್ಜಿ, ರಸವನ್ನು ತೆಗೆದು,1 ಲೋಟ ಮೇಕೆ ಹಾಲಿನಲ್ಲಿ ಕಲಸಿಟ್ಟು, ಮೂರು ಗಂಟೆಯ ನಂತರ ಅದಕ್ಕೆ ಸ್ವಲ್ಪ ನೀರು ಕಲಸಿ, ಬಟ್ಟೆಯಲ್ಲಿ ಸೋಸಿಕೊಂಡು ಅದಕ್ಕೆ 1 ಚಮಚ ಜೇನುತುಪ್ಪ ಕಲಸಿ ಕುಡಿದರೆ, ಪುರುಷರಲ್ಲಿ ವೀರ್ಯಾಣು ವೃದ್ಧಿಯಾಗಿ, ನಪುಂಷಕತ್ವ ದೂರವಾಗುತ್ತೆ. 2 ಲೋಟ ನೀರಿಗೆ 2 ಚಮಚ ನೆಗ್ಗಿಲು ಸಮೂಲದ ರಸವನ್ನು ಕಲಸಿ, ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ, 1ಲೋಟ ನೀರಾದಾಗ ಕೆಳಗಿಳಿಸಿ, ಉಗರು ಬೆಚ್ಚಗಾದಾಗ ಸೋಸಿಕೊಂಡು 50ml ಗೆ 1 ಚಮಚ ಕೆಂಪು ಕಲ್ಲುಸಕ್ಕರೆ ಕಲಸಿ ಬೆಳಿಗ್ಗೆ ಸಂಜೆ ಕುಡಿದರೆ, ಆಯಾಸ, ಹೃದ್ರೋಗ ನಿವಾರಣೆಯಾಗುತ್ತೆ. ಕಲ್ಲುಸಕ್ಕರೆ ಕಲಸದೆ ಹಾಗೆ ಕುಡಿದರೆ ಮಧುಮೇಹ ಅತೋಟಿಗೆ ಬರುತ್ತೆ.ಹೃದಯದಲ್ಲಿ ನೀರು ಸೇರುವುದು, ಕೊಬ್ಬು ಶೇಖರಣೆ, ಇನ್ನು ಮುಂತಾದ ಸಮಸ್ಯೆಗಳು ದೂರವಾಗಿ ಹೃದಯಕ್ಕೆ ಶಕ್ತಿ ಬರುತ್ತೆ. ಒಣ ಶುಂಠಿ ಹಾಗು ನೆಗ್ಗಿಲು ಕಾಯಿಗಳನ್ನು ಬೇರೆಬೇರೆ ಕುಟ್ಟಿ, ವಸ್ತ್ರಾಗಾಲಿತ ಚೂರ್ಣ ಮಾಡಿಟ್ಟುಕೊಂಡು, ಎರಡೂ ಚೂರ್ಣಗಳನ್ನು 20 ಗ್ರಾಂ ನಂತೆಕಲಸಿಟ್ಟುಕೊಂಡು, 200ml ನೀರಿಗೆ 1 ಚಮಚ ಚೂರ್ಣ ಕಲಸಿ, ಒಲೆಯಮೇಲಿಟ್ಟು, ಮಂದದ ಉರಿಯಲ್ಲಿ ಚೆನ್ನಾಗಿ ಕುದಿಸಿ, 50ml ನೀರಾದಾಗ ಕೆಳಗಿಳಿಸಿ, ಉಗರು ಬೆಚ್ಚಗಾದಾಗ ಸೋಸಿಕೊಂಡು ಬೆಳಿಗ್ಗೆ ಸಂಜೆ ಕುಡಿಯುತ್ತಾ ಬಂದರೆ, ಮೂತ್ರತಡೆ, ಮೂತ್ರಪಿಂಡದ ನೋವು, ಬಾವು, ಮೂತ್ರಪಿಂಡದಲ್ಲಿನ ಕಲ್ಲು ಕರಗಿ, ಮೂತ್ರ ಸರಾಗವಾಗಿ ಹೋಗುತ್ತೆ.ಇದಕ್ಕೆಲ್ಲ ರಾಮಬಾಣದಂತೆ ಕೆಲಸ ಮಾಡುತ್ತೆ. ಎರಡು ಲೋಟ ನೀರಿಗೆ 1 ಚಮಚ ನೆಗ್ಗಿಲುಕಾಯಿ ಚೂರ್ಣ, 1 ಚಮಚ ಧನಿಯಾ ಚೂರ್ಣ ಹಾಕಿ, ಒಲೆಯ ಮೇಲಿಟ್ಟು, ಚೆನ್ನಾಗಿ ಕುದಿಸಿ 50ml ಆದಾಗ ಕೆಳಗಿಳಿಸಿ, ಉಗರು ಬೆಚ್ಚಗಾದಾಗ ಸೋಸಿಕೊಂಡು, 1 ಚಮಚ ಕಲ್ಲುಸಕ್ಕರೆ ಅಥವಾ ಜೇನುತುಪ್ಪ ಕಲಸಿ ಸೇವಿಸಿದರೆ, ಹೃದ್ರೋಗ, ಅಧಿಕ ರಕ್ತದೊತ್ತಡ, ಪಿತ್ತ, ತಲೆನೋವು ನಿವಾರಣೆಯಾಗುತ್ತೆ.

ನೆಗ್ಗಿಲಿನ ಉಪಯೋಗಗಳು ಅಪಾರವಾದದ್ದು. ಗೆಳೆಯರೆ ವಂದನೆಗಳು ಪಾರ್ಥಸಾರಥಿ ಕ್ಷತ್ರಿಯ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: