
ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ತೃತೀಯಾ ತಿಥಿ,
ಬುಧವಾರ, ಧನಿಷ್ಠ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:28 ರಿಂದ 2:04
ಗುಳಿಕಕಾಲ: ಬೆಳಗ್ಗೆ 10:52 ರಿಂದ 12:28
ಯಮಗಂಡಕಾಲ: ಬೆಳಗ್ಗೆ 7:40 ರಿಂದ 9:16
ಮೇಷ
ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಯಶಸ್ಸು. ಸಹೋದರರಿಂದ ಸಹಾಯ, ಸಹಕಾರಗಳು ದೊರೆತು ಗೃಹ ನಿರ್ಮಾಣ ಕಾರ್ಯದಲ್ಲಿ ತೊಡಗುವಿರಿ. ಸಾಲ ಮರುಪಾವತಿಯಿಂದ ನೆಮ್ಮದಿ.
ವೃಷಭ
ಗೃಹನಿರ್ಮಾಣ ಕಾರ್ಯ ವಿಳಂಬವಾಗುವ ಸಾಧ್ಯತೆ. ಮಿತ್ರರಿಂದ ಆರ್ಥಿಕ ಸಹಾಯ ದೊರೆಯುವ ಲಕ್ಷಣಗಳು ಕಂಡು ಬರುತ್ತಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಉದ್ಯೋಗ ಕ್ಷೇತ್ರದಲ್ಲಿ ಕಿರಿಕಿರಿ ಸಂಭವ.
ಮಿಥುನ
ವೃತ್ತಿ ಸಮಸ್ಯೆಗಳಿಂದ ಮುಕ್ತರಾಗುವಿರಿ. ಪ್ರಯತ್ನಿಸುತ್ತಿರುವ ಕಾರ್ಯಗಳಿಂದ ಶುಭಫಲ ದೊರೆಯಲಿದೆ. ವಿಶೇಷ ವಸ್ತುಗಳನ್ನು ಖರೀದಿಸುವ ಸಾಧ್ಯತೆ. ಹೊಸ ವ್ಯಾಪಾರದಲ್ಲಿ ಯಶಸ್ಸು.
ಕಟಕ
ಬಂಧುಗಳಲ್ಲಿನ ಭಿನ್ನಾಭಿಪ್ರಾಯ ಪರಿಹಾರವಾಗುವ ಸಾಧ್ಯತೆ. ವಿವೇಚನೆಯಿಂದ ಕಷ್ಟಗಳು ಪರಿಹಾರವಾಗಲಿವೆ. ಸಾಮಾಜಿಕ ಗೌರವಾದರಗಳು ಲಭಿಸಲಿವೆ. ವಸ್ತ್ರಾಭರಣಗಳನ್ನು ಖರೀದಿಸಲಿದ್ದೀರಿ.
ಸಿಂಹ
ಹೊಸ ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ರಾಜಕೀಯದಲ್ಲಿರುವವರಿಗೆ ಯಶಸ್ಸು. ಮಹಿಳೆಯರ ಇಷ್ಟಾರ್ಥ ಸಿದ್ಧಿಯಾಗಿ ಸಂತಸ. ನ್ಯಾಯಾಲಯದಲ್ಲಿನ ಕಟ್ಟಳೆಗಳಲ್ಲಿ ಯಶಸ್ಸನ್ನು ಗಳಿಸುವ ಸಾಧ್ಯತೆ.
ಕನ್ಯಾ
ದೈನಂದಿನ ಕಾರ್ಯಗಳಲ್ಲಿ ಹೆಚ್ಚಿನ ಉತ್ಸಾಹ ಮೂಡಿಬರಲಿದೆ. ಆರೋಗ್ಯದ ಬಗ್ಗೆ ವೈದ್ಯರ ಸಲಹೆ ಪಡೆಯುವುದು ಉತ್ತಮ. ವಿವಿಧ ಮೂಲಗಳಿಂದ ಹಣಕಾಸಿನ ಅನುಕೂಲವಾಗಲಿದೆ.
ತುಲಾ
ವ್ಯವಹಾರ ಕುಶಲತೆಯಿಂದ ಧನ ಲಾಭವಾಗಲಿದೆ. ಯಂತ್ರೋಪಕರಣಗಳ ಖರೀದಿಗಾಗಿ ಹೆಚ್ಚಿನ ವಿನಿಯೋಗ ಮಾಡಬೇಕಾದೀತು. ಆತ್ಮೀಯ ವ್ಯಕ್ತಿಯೊಬ್ಬರ ಭೇಟಿಯ ಸಾಧ್ಯತೆ.
ವೃಶ್ಚಿಕ
ವ್ಯಾಪಾರ, ವ್ಯಹಾರದಲ್ಲಿ ಹಿರಿಯರ ಸಹಕಾರದಿಂದಾಗಿ ಯಶಸ್ಸು. ಸಾಮಾಜಿಕ ಕೆಲಸ–ಕಾರ್ಯಗಳಲ್ಲಿ ಯಶಸ್ಸು. ಬಹುಕಾಲದ ಆಶೋತ್ತರಗಳು ಈಡೇರಿ ಮಾನಸಿಕ ನೆಮ್ಮದಿಯನ್ನು ನೀಡಲಿವೆ.
ಧನು
ನಿಮ್ಮ ಆಸ್ತಿ ವಿವಾದಗಳು ಪರಿಹಾರವಾಗಲಿವೆ. ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುವುದು. ಮಾತಿನಿಂದ ಗೌರವಾದರಗಳನ್ನು ಪಡೆಯಲಿದ್ದೀರಿ. ಬರವಣಿಗೆಯಿಂದ ಕೀರ್ತಿಯನ್ನು ಪಡೆಯುವಿರಿ.
ಮಕರ
ಹಿರಿಯರ ಮಾತುಗಳನ್ನು ತಿರಸ್ಕರಿಸದೆ ಗೌರವಿಸುವುದರಿಂದ ಉತ್ತಮ ಫಲ ದೊರೆಯಲಿದೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ. ನಿರೀಕ್ಷಿತ ವಲಯಗಳಿಂದ ಧನಾಗಮನ ಆಸ್ತಿಯ ಉನ್ನತೀಕರಣವಾಗಲಿದೆ.
ಕುಂಭ
ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆಯನ್ನು ಕಂಡುಕೊಳ್ಳುವಿರಿ. ಆಧ್ಯಾತ್ಮಿಕ ವಿಷಯದಲ್ಲಿ ಪ್ರಗತಿ. ಪಿತ್ರಾರ್ಜಿತ ಆಸ್ತಿಯು ನಿಮ್ಮ ಕೈ ಸೇರುವ ಸಾಧ್ಯತೆ ಕಂಡುಬರುತ್ತಿದೆ. ಸಂಸಾರದಲ್ಲಿ ನೆಮ್ಮದಿ ಮೂಡಿಬರಲಿದೆ.
ಮೀನ
ತಾಳ್ಮೆಯಿಂದ ವ್ಯವಹರಿಸುವುದು ಉತ್ತಮ. ವಿದ್ಯಾಭ್ಯಾಸದಲ್ಲಿ ಮುನ್ನಡೆ. ಗೆಳೆಯರ ಸಕಾಲಿಕ ನೆರವಿನಿಂದಾಗಿ ಎದುರಾಗಲಿದ್ದ ನಷ್ಟದಿಂದ ಪಾರಾಗಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಬಿಡುವಿಲ್ಲದ ಕೆಲಸ.