
ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
ಮಂಗಳವಾರ, ಶ್ರವಣ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:40 ರಿಂದ 5:16
ಗುಳಿಕಕಾಲ: ಮಧ್ಯಾಹ್ನ 12:28 ರಿಂದ 2:04
ಯಮಗಂಡಕಾಲ: ಬೆಳಗ್ಗೆ 9:16 ರಿಂದ 10:52
ಮೇಷ
ಗೃಹನಿರ್ಮಾಣ ಸಾಮಗ್ರಿಗಳ ವ್ಯಾಪಾರಿಗಳಿಗೆ ವಿಶೇಷ ಲಾಭ. ಮಕ್ಕಳ ವಿದ್ಯಾಭ್ಯಾಸ ಹಾಗೂ ನಡವಳಿಕೆ ವಿಚಾರದಲ್ಲಿ ವಿಶೇಷ ಗಮನ ಅಗತ್ಯ. ನಿರುದ್ಯೋಗಿಗಳಿಗೆ ಹೊಸ ಆದಾಯ ಮೂಲಗಳು ಕಂಡುಬರಲಿವೆ.
ವೃಷಭ
ಉದ್ಯೋಗದ ವಿಷಯದಲ್ಲಿ ಒದಗಿ ಬಂದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದರಿಂದ ಕಾರ್ಯಸಾಧನೆಯಾಗಲಿದೆ. ಪತ್ರಕರ್ತರು, ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಪ್ರಾಶಸ್ತ್ಯ.
ಮಿಥುನ
ಬಟ್ಟೆ ವ್ಯಾಪಾರದಲ್ಲಿ ಉತ್ತಮ ಲಾಭ. ಮಾನಸಿಕ ದುಗುಡಗಳು ಎದುರಾಗುವ ಸಾಧ್ಯತೆ. ಮನಶಾಂತಿಗಾಗಿ ದೇವಾಲಯ ಭೇಟಿ ನೀಡುವ ಸಾಧ್ಯತೆ. ವ್ಯವಹಾರ ಪರಿವರ್ತನೆಗೆ ಹೊಸ ಮಾರ್ಗ ಗೋಚರ.
ಕಟಕ
ಸಕ್ರಿಯ ರಾಜಕಾರಣಿಗಳಿಗೆ ಹೆಚ್ಚಿನ ಜವಾಬ್ದಾರಿ ಹೊರಬೇಕಾದ ಅವಕಾಶ. ಜೀವನದಲ್ಲಿನ ನಿರುತ್ಸಾಹ ದೂರವಾಗುವುದಲ್ಲದೇ ಒದಗಿ ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಿರಿ.
ಸಿಂಹ
ಬರಹಗಾರರು ಮತ್ತು ಮುದ್ರಣ ಕ್ಷೇತ್ರದಲ್ಲಿರುವವರಿಗೆ ಆದಾಯದಲ್ಲಿ ಹೆಚ್ಚಳ. ಹೊಸ ವ್ಯಕ್ತಿಗಳ ಪರಿಚಯದೊಂದಿಗೆ ಹೊಸ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದೀರಿ. ಕೆಲಸಕಾರ್ಯಗಳಲ್ಲಿ ಯಶಸ್ಸು.
ಕನ್ಯಾ
ವಿವಾಹಾಕಾಂಕ್ಷಿಗಳಿಗೆ ಶುಭದಿನ. ನಿಮ್ಮ ಅನಿಸಿಕೆಗಳ ಬಗ್ಗೆ ಗಮನ ವಹಿಸಿದಲ್ಲಿ ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಲಿದ್ದೀರಿ. ನಾರು, ಹತ್ತಿ, ಬಟ್ಟೆ ಮುಂತಾದ ವ್ಯಾಪಾರದಲ್ಲಿ ತೊಡಗಿದವರಿಗೆ ಉತ್ತಮ ಆದಾಯ.
ತುಲಾ
ಸಹೋದ್ಯೋಗಿಗಳೊಡನೆ ನೇರ ಮಾತುಕತೆಯಿಂದಾಗಿ ವೈಮನಸ್ಸು ದೂರವಾಗಿ ಮಾನಸಿಕ ನೆಮ್ಮದಿ. ಮಿತ್ರರ, ಹಿತೈಷಿಗಳ ಸಹಕಾರದಿಂದಾಗಿ ಆಸ್ತಿಗಳ ಬಗೆಗಿನ ವಿವಾದಗಳು ಭಿನ್ನಾಭಿಪ್ರಾಯಗಳು ಪರಿಹಾರವಾಗಲಿವೆ.
ವೃಶ್ಚಿಕ
ಬಂಧುಗಳ ಸಹಕಾರದಿಂದ ಎಲ್ಲಾ ಕೆಲಸಗಳು ಸರಾಗವಾಗಿ ಮುಂದುವರಿಯಲಿವೆ. ರಾಜಕೀಯ ವ್ಯಕ್ತಿಗಳ ಒತ್ತಡದ ತಂತ್ರಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ. ತೀರ್ಮಾನ ಕೈಗೊಳ್ಳುವಾಗ ಮತ್ತೊಮ್ಮೆ ಯೋಚಿಸಿ ನಿರ್ಣಯಿಸಿ.
ಧನು
ಕಾರ್ಯಕ್ಷೇತ್ರವನ್ನು ಬದಲಾಯಿಸುವ ಸಾಧ್ಯತೆ. ನೆರೆಹೊರೆಯವರೊಂದಿಗಿನ ಭಿನ್ನಾಭಿಪ್ರಾಯಗಳು ದೂರವಾಗಿ ನೆಮ್ಮದಿ ಮೂಡಲಿದೆ. ಕೆಲಸ–ಕಾರ್ಯಗಳಲ್ಲಿ ಯಶಸ್ಸನ್ನು ಕಾಣಲಿದ್ದೀರಿ.
ಮಕರ
ನೌಕರಸ್ಥರು ಕಾರ್ಯದಕ್ಷತೆಯನ್ನು ಪ್ರದರ್ಶಿಸಿ ಮೇಲಧಿಕಾರಿಗಳಿಂದ ಪ್ರಶಂಸೆಯ ಮಾತುಗಳನ್ನು ಕೇಳಲಿದ್ದೀರಿ. ದೈನಂದಿನ ಕೆಲಸಗಳಲ್ಲಿ ಬದಲಾವಣೆ ನಿರೀಕ್ಷಿಸಬಹುದು. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ.
ಕುಂಭ
ಗೃಹ ನಿರ್ಮಾಣದ ವಿಚಾರದಲ್ಲಿ ಚಿಂತನೆ ನಡೆಸಲಿದ್ದೀರಿ. ಗೃಹಾಲಂಕಾರ ವಸ್ತುಗಳು ಮತ್ತು ಚಿನ್ನಾಭರಣಗಳ ಖರೀದಿ ಮಾಡುವ ಸಾಧ್ಯತೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಬಹುದು.
ಮೀನ
ಹೊಸ ಯೋಜನೆಯೊಂದಕ್ಕೆ ಕೈ ಹಾಕಲಿದ್ದೀರಿ. ಗೃಹ ನಿರ್ಮಾಣ ಕಾರ್ಯಗಳು ಚುರುಕುಗೊಳ್ಳುವುದು. ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಆದಾಯದ ನಿರೀಕ್ಷೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಡಕು ಕಂಡು ಬರುವುದು.