
ಜಂಬೂ ನೇರಳೆ,ನಾಯಿ ನೇರಳೆ, ಅಲ್ಲ ನೇರಡು,
ಕಾಕಿನೇರಡು,ನಾವಲ್ಫಳಂ,ಜಂಬುಲ್,ಜಂಬುಲೊನ್,ಜಂಬೂ,ಬ್ಲಾಕ್ ಪ್ಲಮ್,ಎಂಬ ಹೆಸರುಗಳಿಂದ ಕರೆಯುತ್ತಾರೆ.
ಅರಣ್ಯ,ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತವೆ.ನಾಯಿ ನೇರಳೆ ವೃಕ್ಷಗಳನ್ನು ರಸ್ತೆ ಪಕ್ಕಾ ಸಾಲು ಮಾರಗಳಂತೆ ಬೆಳೆಸಿರುತ್ತಾರೆ.ಹೊಲ ಗದ್ದೆಗಳ ಬದಿಗಳ ಮೇಲೆ
ರೈತರು ಬಹು ಉಪಯೋಗಿ ನೇರಳೆ ವೃಕ್ಷಗಳನ್ನು
ಬೆಳೆಸಿರುತ್ತಾರೆ.ಸುಮಾರು 20 ರಿಂದ 40 ಅಡಿವರಿಗೂ ನಾಯಿ ನೇರಳೆ ವೃಕ್ಷಗಳು ಬೆಳೆಯುತ್ತವೆ.ಇದರ ಎಲೆ ಹೂ ತೊಗಟೆ ಕಾಯಿ ಹಣ್ಣು,ಎಲ್ಲವೂ ಔಷಧಿಯಾಗಿ ಸಾವಿರಾರು ವರ್ಷಗಳಿಂದಲೂ ಪೂರ್ವಿಕರು ಆಯುರ್ವೇದ, ಹಿಂದೂ ಯುನಾನಿ,ಪಾರಂಪರಿಕ ವೈದ್ಯ ಪದ್ದತಿಯಲ್ಲಿ ಉಪಯೋಗಿಸುತ್ತಾ ಬಂದಿದ್ದಾರೆ.
ನೇರಳೆಯಲ್ಲಿ ಅನೇಕ ಪ್ರಭೇದಗಳಿದ್ದು,ಜಂಬೂ ನೇರಳೆ ಹಾಗೂ ನಾಯಿ ನೇರಳೆ ಹೆಚ್ಚಾಗಿ ಕಾಣತ್ತವೆ.
II ಗಜಾನನಂ ಭೂತ ಗಣಾದಿ ಸೇವಿತಂ ಕಪಿತ್ಥ ಜಂಬೂಫಲ ಸಾರ ಭಕ್ಷಿತಂ ಉಮಾಸುತಂ ಶೋಕ ವಿನಾಶ ಕಾರಣಂ ನಮಾಮಿ ವಿಘ್ನೇಶ್ವರ ಪಾದ ಪಂಕಜಂ II
ನೇರಳೆ ಹಣ್ಣಿನ ಆಕಾರ ಕಪ್ಪು ಮತ್ತು ಕೆಂಪು ಮಿಶ್ರಿತ ಬಣ್ಣದಲ್ಲಿ,ನೋಡಲು ತುಂಬಾ ಆಕರ್ಷಕವಾಗಿ ಇರುತ್ತದೆ.ಇದರ ಬೆಲೆಯೂ ಬಹಳ ಕಡಿಮೆ,ಹಳ್ಳಿಗಳಲ್ಲಿ ಪುಕ್ಕಟೆಯಾಗಿಯೇ ದೊರೆಯುತ್ತದೆ. ಆದ್ದರಿಂದ ಬಡವರಿಗೆ ಸುಲಭವಾಗಿ ದೊರೆಯುತ್ತದೆ.ಇದರ ಪೌಷ್ಟಿಕತೆಯ ದೃಷ್ಟಿಯಿಂದ ಹಾಗೂ ಔಷಧೀಯ ಗುಣಗಳಿಂದ ಇದು ಅತ್ಯುತ್ತಮವಾದ ಹಣ್ಣು.ನೇರಳೆ ಹಣ್ಣು ಒಗರು,ಸಿಹಿ ಮಿಶ್ರಿತವಾಗಿದ್ದು, ಮಕ್ಕಳು,ಹಿರಿಯರೆನ್ನದೆ ಇಷ್ಟಪಟ್ಟು ತಿನ್ನುತ್ತಾರೆ.ಪಕ್ಷಿಗಳಿಗಂತೂ ಈ ಹಣ್ಣು ತುಂಬಾನೆ ಇಷ್ಟ,ಅಳಿಲು ಇನ್ನು ಮುಂತಾದ ಪ್ರಾಣಿಗಳು ಸಹ ಬಹಳ ಖುಷಿಯಿಂದ ಸೇವಿಸುತ್ತವೆ.ಭಾರತದಲ್ಲಿ ಸಾವಿರಾರು ವರ್ಷಗಳಿಂದ ಇದನ್ನು ತಿನ್ನುವುದಕ್ಕಾಗಿಯೂ,ಔಷಧಕ್ಕಾಗಿಯೂ ಉಪಯೋಗಿಸುತ್ತಾ ಬಂದಿದ್ದಾರೆ.ಆಂಗ್ಲ ಭಾಷೆಯಲ್ಲಿ ಇದನ್ನು ಭಾರತೀಯ ತೋಟಗಳ “ಗುಲಾಬಿಯ ಸೇಬು”(Rose apple) ಎನ್ನುತ್ತಾರೆ.ಇದು ಮಧುಮೇಹಕ್ಕೆ ದಿವ್ಯ ಔಷಧಿಯಂತೆ ಕೆಲಸ ಮಾಡುವುದರಿಂದ, ಬೇಡಿಕೆ ಹೆಚ್ಚಾಗಿದ್ದು,ರೈತರು ವಾಣಿಜ್ಯ ಬೆಳೆಯಾಗಿ ಬೆಳೆದು,ವ್ಯಾಪಾರಿಗಳು ಮಾರಾಟ ಮಾಡಿ,ಅತಿ ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ.
ಆಯುರ್ವೇದ,ಯುನಾನಿ,ಪಾರಂಪರಿಕ ಔಷಧಿ ತಯಾರಿಕೆಯಲ್ಲೇ ಅಲ್ಲದೆ, ವೈನ್,ವೆನಿಗರ್,ಜಾಮ್ ತಯಾರಿಕೆಯಲ್ಲೂ ಹೆಚ್ಚಾಗಿ ಬಳಸುತ್ತಿದ್ದಾರೆ.
ಇದರಲ್ಲಿ ಕ್ಯಾಲ್ಸಿಯಂ,ಪೊಟಾಸಿಯಂ,ಕಬ್ಬಿಣ,ಹಾಗೂ ವಿಟಮಿನ್ “C” ಸಮೃದ್ಧವಾಗಿದ್ದು,ಇದನ್ನು ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ.ಮೂಳೆಗಳು ಬಲಿಷ್ಠಗೊಳ್ಳುತ್ತವೆ.ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಾಮಾಣ ಹೆಚ್ಚುತ್ತೆ.
ನೇರಳೆ ಹಣ್ಣು ಸೇವನೆಯಿಂದ ಮಧುಮೇಹ ಅತೋಟಿಗೆ ಬರುತ್ತೆ,ಇದು ಸಕ್ಕರೆ ಕಾಯಿಲೆಗೆ ರಾಮಬಾಣದಂತೆ ಕೆಲಸ ಮಾಡುತ್ತೆ.
ನೇರಳೆ ಹಣ್ಣಿನ ಬೀಜಗಳನ್ನು ನೆರಳಲ್ಲಿ ಒಣಗಿಸಿ, ಚೂರ್ಣ ಮಾಡಿಟ್ಟುಕೊಂಡು, ಸಕ್ಕರೆ ಕಾಯಿಲೆ ಇದ್ದವರು,ದಿನವು 1 ಚಮಚ 1 ಲೋಟ ಬಿಸಿನೀರಿನಲ್ಲಿ
ಕಲಸಿ, ಬೆಳಿಗ್ಗೆ ಸಂಜೆ ಊಟಕ್ಕೆ 1/2 ಗಂಟೆ ಮೊದಲು ಸೇವಿಸುತ್ತಿದ್ದರೆ ಅತೋಟಿಗೆ ಬರುತ್ತೆ.ಇದು ಮಧುಮೇಹಕ್ಕೆ ಸಂಜೀವಿನಿಯಂತೆ ಕೆಲಸ ಮಾಡುತ್ತೆ.
ಇದರಲ್ಲಿ ಪೊಟ್ಯಾಸಿಯಂ ಅಧಿಕ ಪ್ರಾಮಾಣದಲ್ಲಿ ಇರುವುದರಿಂದ,ಹೃದ್ರೋಗ ದೂರ ಮಾಡಿ,ಹೃದಯಕ್ಕೆ ಹೆಚ್ಚಿನ ಬಲ ನೀಡುತ್ತೆ.
ನೇರಳೆ ಹಣ್ಣು ಸೇವಿಸುವುದರಿಂದ, ಆಕಸ್ಮಿಕವಾಗಿ ಹೊಟ್ಟೆಗೆ ಸೇರಿರುವ ಕೂದಲು,ಉಗರು,ಲೋಹದ ಚೂರು,ಕಲ್ಲು ಕರಗಿ ಮಲ ಮೂತ್ರದಲ್ಲಿ ಹೊರಗಡೆ ಬರುತ್ತೆ.
ತೊಗಟೆಯ ಕಷಾಯ ಮಾಡಿ ಬಾಯಿ ಮುಕ್ಕಳಿಸುತ್ತಿದ್ದರೆ,ಬಾಯಿ ಹುಣ್ಣು, ಬಾಯಿ ದುರ್ವಾಸನೆ,ಹಲ್ಲು ನೋವು ದೂರವಾಗುತ್ತೆ.
ದ್ವಾರಕಾಯಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡು ಬೆಳಿಗ್ಗೆ ಸಂಜೆ 5 ರಿಂದ 10 ಗ್ರಾಂ ಬಿಸಿ ನೀರಿನಲ್ಲಿ ಸೇವಿಸಿದರೆ,ಅತಿಸಾರ ಭೇದಿ,ಆಮಶಂಕೆ ಭೇದಿ ಗುಣವಾಗುತ್ತೆ.
ದಿನವು 2 ಚಮಚ ದಂತೆ ಬೆಳಿಗ್ಗೆ ಸಂಜೆ ಇದರ ಎಲೆಯ ರಸ ಸೇವಿಸುತ್ತಿದ್ದರೆ,ಪೈಲ್ಸ್ ವಾಸಿಯಾಗುತ್ತೆ.
ಚಿಗುರಿನ ಕಷಾಯ ಮಾಡಿ,ಮಜ್ಜಿಗೆಯಲ್ಲಿ ಬೆರಸಿ ಸೇವಿಸುತ್ತಾ ಬಂದರೆ,ಅಕಾಲ ಗರ್ಭಸ್ರಾವ ನಿಲ್ಲುತ್ತೆ, ರಕ್ತ ಪ್ರದರ,ಶ್ವೇತ ಪ್ರದರ ಸಹಾ ವಾಸಿಯಾಗುತ್ತೆ.
ಇದು ಬಹು ಉಪಯೋಗಿ ವೃಕ್ಷ.ಇದರ ಬಗ್ಗೆ ಸಂಪೂರ್ಣವಾಗಿ ತಿಳಿಸಲು ಸ್ಥಳ,ಕಾಲಾವಕಾಶದ ಕೊರತೆಯಿಂದ ಎಲ್ಲವನ್ನು ಇಲ್ಲಿ ಪರಿಚಯಿಸಲು ಆಗಲಿಲ್ಲ. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷವನ್ನು ಪರಿಚಯ ಮಾಡಿಕೊಳ್ಳೋಣ. ವಂದನೆಗಳು